ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/94 ಪು. 1
  • ಎಡೆಬಿಡದೆ ಮನೆಯಿಂದ ಮನೆಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಡೆಬಿಡದೆ ಮನೆಯಿಂದ ಮನೆಗೆ
  • 1994 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮನೆಮನೆಯ ಶುಶ್ರೂಷೆ ಈಗಲೂ ಪ್ರಾಮುಖ್ಯವೇಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಮನೆಯಿಂದ ಮನೆಗೆ ಸಾಕ್ಷಿನೀಡುವುದು
    2006 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ಪ್ರಕಟಿಸುವುದರಲ್ಲಿ ನಿಲುಗಡೆಯಿಲ್ಲ
    1996 ನಮ್ಮ ರಾಜ್ಯದ ಸೇವೆ
  • ಮನೆಯಿಂದ ಮನೆಯ ಶುಶ್ರೂಷೆಯ ಪಂಥಾಹ್ವಾನವನ್ನು ಎದುರಿಸುವುದು
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1994 ನಮ್ಮ ರಾಜ್ಯದ ಸೇವೆ
km 7/94 ಪು. 1

ಎಡೆಬಿಡದೆ ಮನೆಯಿಂದ ಮನೆಗೆ

1 ಪ್ರಾಚೀನ ಇಸ್ರಾಯೇಲಿನಲ್ಲಿ, ಬಲಿಗಳು ದಿನನಿತ್ಯ ಅರ್ಪಿಸಲ್ಪಡುತ್ತಿದ್ದವು. (ವಿಮೋ. 29:38-42) ವೇದಿಕೆಯ ಬೆಂಕಿಯು ಸದಾ ಉರಿಯಲ್ಪಡುತ್ತಿತ್ತು; ಮೇಲೇರುತ್ತಿದ್ದ ಹೊಗೆಯು ಯೆಹೋವನನ್ನು ಮೆಚ್ಚಿಸಿದ “ಸುಗಂಧಹೋಮ” ವಾಗಿತ್ತು. (ವಿಮೋ. 29:18) ಇಂದು, ನಾವು ಪ್ರಚೋದಿಸಲ್ಪಟ್ಟಿರುವುದು: “ದೇವರಿಗೆ ಸ್ತೊತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿ. 13:15) ನಿಯಮದ ಮೂಲಕ ವಿಧಿಸಿದ ಬಲಿಗಳನ್ನು ಉಪಯೋಗಿಸುವ ಬದಲು, ಎಡೆಬಿಡದೆ ಆತನ ಸ್ತುತಿಗಳನ್ನು ವಿಸ್ತಾರವಾಗಿ ವರ್ಣಿಸುವ ಮೂಲಕ ನಾವು ಯೆಹೋವನನ್ನು ಆರಾಧಿಸುತ್ತೇವೆ.—ಯೆಶಾ. 43:21; ಅ. ಕೃ. 5:42.

2 ಈ ಭೂಮಿಯ ಮೇಲೆ ಜೀವಿಸಿದ ಅತ್ಯಂತ ಮಹಾ ಸಾಕ್ಷಿಯಾದ ಯೇಸು ಕ್ರಿಸ್ತನು, ಸ್ತುತಿಯ ಯಜ್ಞಗಳನ್ನು ಅರ್ಪಿಸುವ ಮೂಲಕ ನಾವು ಹೇಗೆ ಶುದ್ಧ ಆರಾಧನೆಯನ್ನು ಸಲ್ಲಿಸಬೇಕೆಂದು ನಮಗೆ ಕಲಿಸಿಕೊಟ್ಟನು. ತಾವು ಸಾರಿದ ಸಂದೇಶಕ್ಕೆ ಜರೂರಿಯ ಗುಣವಿತ್ತೆಂದು ಅವನು ತನ್ನ ಶಿಷ್ಯರಿಗೆ ಕಲಿಸಿದನು. ಜನರನ್ನು ಸುವಾರ್ತೆಯಿಂದ ತಲಪುವ ಅತ್ಯಂತ ಪರಿಣಾಮಕಾರಿ ವಿಧವು ಅವರ ಮನೆಗಳಲ್ಲಿ ಅವರೊಂದಿಗೆ ವೈಯಕ್ತಿಕವಾಗಿ ಮಾತಾಡುವುದಾಗಿತ್ತು ಎಂದು ಅವನಿಗೆ ತಿಳಿದಿತ್ತು. (ಮತ್ತಾ. 10:7, 12) ಆದುದರಿಂದ ಮನೆಯಿಂದ ಮನೆಗೆ ಸಾರುವ ಅವನ ದೈವಪ್ರೇರಿತ ಮಾರ್ಗದರ್ಶನವನ್ನು ಅಪೊಸ್ತಲರು ಅನುಸರಿಸಿದರೆಂದು ನಾವು ಕಾಣುತ್ತೇವೆ.—ಅ. ಕೃ. 20:20.

3 ವಿಷಯವು ಇಂದು ಭಿನ್ನವಾಗಿಲ್ಲ. ಯೇಸುವಿನ ಶಿಷ್ಯರೋಪಾದಿ, ನಿಜ ಕ್ರೈಸ್ತರು ಮನೆಯಿಂದ ಮನೆಗೆ ಸುವಾರ್ತೆಯನ್ನು ಸಾರುವ ಮೂಲಕ ಅವನ ಮಾದರಿಯನ್ನು ಅನುಸರಿಸುತ್ತಾರೆ. ಅದಕ್ಕಾಗಿ ನಾವು ಟೀಕಿಸಲ್ಪಡಬಹುದು ಮತ್ತು ಹಿಂಸಿಸಲ್ಪಡಬಹುದಾದರೂ, ಮಿಲ್ಯಾಂತರ ಜನರು ಸತ್ಯವನ್ನು ಕಲಿತಿದ್ದಾರೆ ಮತ್ತು ಪ್ರತಿ ವರ್ಷ ನೂರಾರು ಸಾವಿರ ಹೊಸ ಶಿಷ್ಯರು, ತನ್ನ ಚಿತ್ತವನ್ನು ಪೂರ್ಣಗೊಳಿಸುವ ಯೆಹೋವನ ವಿಧಾನವು ಇದಾಗಿದೆ ಎಂದು ರುಜುವಾತನ್ನು ಕೊಡುತ್ತಾ, ಮಹಾ ಸಮೂಹದ ಪಂಕ್ತಿಗಳಲ್ಲಿ ಸೇರುತ್ತಿದ್ದಾರೆ. ಈ ಕಾರಣದಿಂದಲೇ ನಾವು ನಮ್ಮ ಶುಶ್ರೂಷೆಯಲ್ಲಿ ಬಿಡದೆ ಮುಂದುವರಿಯುತ್ತೇವೆ.

4 ಮನೆಯಿಂದ ಮನೆಗೆ ಸಾರುವುದರ ಪ್ರಯೋಜನಗಳು: “ದೇವರು ಪಕ್ಷಪಾತಿಯಲ್ಲ . . . ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಕೆಯಾಗಿದ್ದಾರೆ.” (ಅ. ಕೃ. 10:34, 35) ನಮ್ಮ ಟೆರಿಟೊರಿಯಲ್ಲಿನ ಪ್ರತಿಯೊಂದು ಮನೆಗೆ ನೇರವಾಗಿ ಹೋಗುವುದು, ರಾಜ್ಯದ ಸಂದೇಶವನ್ನು ಕ್ರಮವಾಗಿ ಕೇಳುವಂತೆ ಪ್ರತಿಯೊಬ್ಬರಿಗೂ ಸಂದರ್ಭವನ್ನು ಕೊಡುತ್ತಾ, ಸ್ಪಷ್ಟವಾಗಿಗಿ ನಿಷ್ಪಕ್ಷಪಾತವನ್ನು ಪ್ರದರ್ಶಿಸುತ್ತದೆ. ಪ್ರತಿಯಾಗಿ ಕಿವಿಗೊಡುವವರು ಅವರ ವೈಯಕ್ತಿಕ ಅಗತ್ಯಗಳಿಗನುಸಾರ ವ್ಯಕ್ತಿಗತವಾದ ಸಹಾಯವನ್ನು ಪಡೆಯುತ್ತಾರೆ.

5 ಯೌವನಸ್ಥರನ್ನು, ವೃದ್ಧರನ್ನು, ಮತ್ತು ಹೊಸಬರಾಗಿರುವವರನ್ನೂ ಸೇರಿಸಿ ಹೆಚ್ಚಿನಾಂಶ ಎಲ್ಲಾ ಪ್ರಚಾರಕರು, ಮನೆ ಮನೆಯ ಸಾರುವಿಕೆಯ ಕೆಲಸದಲ್ಲಿ ಭಾಗವಹಿಸ ಸಾಧ್ಯವಿದೆ. ಈ ರೀತಿಯಲ್ಲಿ ಒಬ್ಬನು ‘ರಕ್ಷಣೆಗಾಗಿ ಬಹಿರಂಗ ಘೋಷಣೆಯನ್ನು’ ಮಾಡಬಲ್ಲನು. (ರೋಮಾ. 10:10, NW) ಇತರರೊಂದಿಗೆ ಮನೆ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವುದು ಪ್ರೀತಿ ಮತ್ತು ಏಕತೆಯ ಬಂಧನಗಳಲ್ಲಿ ನಮ್ಮನ್ನು ಒಟ್ಟಾಗಿ ಸೆಳೆಯುತ್ತದೆ. ಅದೇ ಸಮಯದಲ್ಲಿ, ನಾವು ಉಪೇಕ್ಷೆ ಯಾ ವಿರೋಧವನ್ನು ಎದುರಿಸುವಾಗ ನಮ್ಮ ತಾಳ್ಮೆಯನ್ನು ಪ್ರದರ್ಶಿಸಲು ಒಂದು ಸಂದರ್ಭವು ನಮಗೆ ಕೊಡಲ್ಪಡುತ್ತದೆ. ನಂಬಿಕೆಯ ಈ ಸಾರ್ವಜನಿಕ ಪ್ರದರ್ಶನವು, ನಮ್ಮನ್ನು “ನೋಟವಾಗಿ” ಮಾಡುತ್ತದೆ. ಇದು ಬೈಬಲನ್ನು ಕಲಿಸುವುದಕ್ಕಾಗಿ ಒಂದು ಸಂಘಟಿತ ಏರ್ಪಾಡು ನಮಗಿದೆ ಮತ್ತು ಅವರು ಇದರಿಂದ ಪ್ರಯೋಜನ ಹೊಂದಬಲ್ಲರು ಎಂದು ಪ್ರಾಮಾಣಿಕರಾಗಿರುವವರು ಅರಿಯುವಂತೆ ಸಹಾಯಿಸುತ್ತದೆ. (1 ಕೊರಿಂ. 4:9) ಯೆಹೋವನು ಮನೆಯಿಂದ ಮನೆಯ ಕಾರ್ಯವನ್ನು ಆಶೀರ್ವದಿಸುತ್ತಿದ್ದಾನೆ ಮತ್ತು ಆತನ ಶುದ್ಧಾರಾಧನೆಯ “ಮಂದಿರ”ದೊಳಗೆ ಮಹಾ ಸಮೂಹವನ್ನು ಒಟ್ಟುಗೂಡಿಸಲು ಅದನ್ನು ಉಪಯೋಗಿಸುತ್ತಿದ್ದಾನೆ ಎಂದು ಎಲ್ಲವೂ ಸ್ಪಷ್ಟವಾಗಿಗಿ ತೋರಿಸುತ್ತದೆ.—ಯೆಶಾ. 2:2-4.

6 ಈಗ ಇತಿಹಾಸದಲ್ಲಿ ಯಾವುದೇ ಸಮಯಕ್ಕಿಂತ ಹೆಚ್ಚಾಗಿ, ಜನರು ರಾಜ್ಯ ಸಂದೇಶವನ್ನು ಕೇಳುವ ಅಗತ್ಯವಿದೆ. ಯೆಹೋವನು ಸಾಕೆಂದು ಹೇಳುವ ತನಕ ನಾವು ಎಡೆಬಿಡದೆ ಮನೆಯಿಂದ ಮನೆಗೆ ಸಾರುತ್ತಾ ಇರೋಣ. (ಯೆಶಾ. 6:11) ಹಾಗೆ ಮಾಡುವುದರಿಂದ, ಈ ಅಂತ್ಯದ ಸಮಯದಲ್ಲಿ ಪ್ರಾಮುಖ್ಯವಾದ ಮತ್ತು ಪ್ರಯೋಜನಕಾರಿಯಾದ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವುದರ ಮೂಲಕ ಬರುವ ಸಂತೋಷದಿಂದ ಬಹುಮಾನಿತರಾಗುವೆವು.—1 ಕೊರಿಂ. 15:58.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ