ಪರಿಣಾಮಕಾರಿಯಾದ ರಸ್ತೆಯ ಸಾಕ್ಷಿಕಾರ್ಯದ ಮೂಲಕ ಆಸಕ್ತರನ್ನು ಕಂಡುಕೊಳ್ಳುವುದು
1 ರಾಜ್ಯದ ಸುವಾರ್ತೆಯನ್ನು ಕೇಳಲು ಅರ್ಹರಾದವರನ್ನು ಹುಡುಕುವಂತೆ ತನ್ನ ಶಿಷ್ಯರಿಗೆ ಯೇಸುವು ಬೋಧಿಸಿದನು. (ಮತ್ತಾ. 10:11) ಆದರೂ, ಇಂದು ಅನೇಕ ಕ್ಷೇತ್ರಗಳಲ್ಲಿ, ಜನರನ್ನು ಅವರ ಮನೆಗಳಲ್ಲಿ ಸಂಪರ್ಕಿಸುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಾ ಇದೆ. ಹೀಗಿರುವಲ್ಲಿ, ತಪ್ಪಿಸಿಕೊಳ್ಳಬಹುದಾದ ಅರ್ಹರಾದವರನ್ನು ತಲುಪಲು ಏನನ್ನು ಮಾಡಸಾಧ್ಯವಿದೆ?
2 ಮನೆಯಿಂದ ಮನೆಯ ಕಾರ್ಯದಲ್ಲಿ ತಪ್ಪಿದ ಜನರನ್ನು ಕಂಡುಕೊಳ್ಳಲು ರಸ್ತೆಯ ಸಾಕ್ಷಿಕಾರ್ಯವು ಒಂದು ಪರಿಣಾಮಕಾರಿಯಾದ ಮಾರ್ಗವಾಗಿರಬಲ್ಲದು. ಬಸ್ ಸ್ಟಾಪ್ಗಳಲ್ಲಿ, ಬಿಗಿ ಭದ್ರತೆಯ ಮನೆಯ ಕಟ್ಟಡಗಳ ಬಳಿ, ಸಾರ್ವಜನಿಕ ಪಾರ್ಕ್ಗಳಲ್ಲಿ, ಮತ್ತು ಜನರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ತೊಡಗಲು ಹೋಗುವ ಇತರ ಸ್ಥಳಗಳಲ್ಲಿ ನಾವು ರಸ್ತೆಯ ಸಾಕ್ಷಿಕಾರ್ಯವನ್ನು ಮಾಡಸಾಧ್ಯವಿದೆ.
3 ರಸ್ತೆಯ ಸಾಕ್ಷಿಕಾರ್ಯವು ತಿಳಿಸಲ್ಪಡುವಾಗ, ಕೆಲವರಿಗೆ ಭಯದ ಭಾವನೆಗಳಾಗುತ್ತವೆ. ಅವರು ನಾಚಿಕೆಯ ಪ್ರವೃತ್ತಿಯವರಾಗಿರುವುದರಿಂದ ಯಾ ಅವರು ರಾಜ್ಯದ ಸಂದೇಶಕ್ಕೆ ಕೋಪಿಸಿಕೊಳ್ಳುವ ಜನರಿಂದ ತಿರಸ್ಕಾರವನ್ನು ಮುಂಭಾವಿಸುವವರಾಗಿರುವ ಕಾರಣ ಆ ಕಾರ್ಯದಲ್ಲಿ ಭಾಗವಹಿಸಲು ಅವರು ಹಿಂಜರಿಯಬಹುದು. ಈ ಚಿಂತೆಗಳು ಸಾಮಾನ್ಯವಾಗಿ ನಿರಾಧಾರವಿರುವವುಗಳಾಗಿವೆ. ಅದು ಮನೆಯಿಂದ ಮನೆಯ ಸಾಕ್ಷಿಕಾರ್ಯಕ್ಕಿಂತ ಹೆಚ್ಚೇನು ಕಷ್ಟಕರವಾದುದಲವ್ಲೆಂದು ಈ ಕಾರ್ಯದಲ್ಲಿ ಅನುಭವವುಳ್ಳವರು ವರದಿಸುತ್ತಾರೆ. ನಿಜತ್ವದಲ್ಲಿ, ಹೆಚ್ಚಿನ ಜನರು ಅನೇಕ ಕಾರಣಗಳಿಗಾಗಿ ರಸ್ತೆಯಲ್ಲಿ ಮಾತಾಡಿಸಲ್ಪಡುವುದಕ್ಕೆ ರೂಢಿಗೆ ಬಂದಿರುವುದನ್ನು ಅವರು ಕಾಣುತ್ತಾರೆ, ಮತ್ತು ಕೆಲವರು ನಾವು ಅವರ ಮನೆ ಬಾಗಲುಗಳನ್ನು ತಟ್ಟುವಲ್ಲಿ ಸಂಭಾಷಿಸುವುದಕ್ಕಿಂತ ಯಾ ಆಲಿಸುವುದಕ್ಕಿಂತ ಹೆಚ್ಚು ಒಲವುಳ್ಳವರಾಗಿರುವರು. ಹೀಗಿರುವುದರಿಂದ ನಾವು ‘ಧೈರ್ಯವನ್ನು ತಂದುಕೊಳ್ಳುವಲ್ಲಿ,’ ಹಿತಕರ ಫಲಿತಾಂಶಗಳಿಂದಾಗಿ ನಾವು ಚಕಿತರಾಗಬಹುದು.—1 ಥೆಸ. 2:2.
4 ಹೆಚ್ಚು ಪರಿಣಾಮಕಾರಿಯಾಗಿ ರಸ್ತೆಯ ಕಾರ್ಯವನ್ನು ಹೇಗೆ ಮಾಡಸಾಧ್ಯವಿದೆ? ಉತ್ತಮವಾಗಿ ತಯಾರಿಸುವುದು ಪ್ರಾಮುಖ್ಯವಾಗಿದೆ. ಸಮಯಕ್ಕೆ ಮುಂಚೆಯೆ ಪತ್ರಿಕೆಗಳನ್ನು ಓದಿರಿ, ಮತ್ತು ನೀವು ಭೇಟಿಯಾಗುವ ಜನರಿಗೆ ಹಿಡಿಸುತ್ತದೆ ಎಂದು ನೀವು ಭಾವಿಸುವ ಒಂದೆರಡು ಮಾತಾಡುವ ವಿಷಯಗಳನ್ನು ಆರಿಸಿರಿ. ಒಂದು 30 ಸೆಕೆಂಡುಗಳ ಸಾದರಪಡಿಸುವಿಕೆಯು ತಕ್ಕುದಾಗಿದೆ. ಇತರರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಮಾಡುವುದು ನಮ್ಮ ಗುರಿಯಾಗಿರುವುದರಿಂದ, ಜನರ ಗಣನೀಯ ಸಂಖ್ಯೆಯು ಕ್ರಮವಾಗಿ ಹಾದುಹೋಗುವ ಸ್ಥಳವನ್ನು ಆರಿಸಿರಿ. ಇನ್ನೊಬ್ಬ ಪ್ರಚಾರಕನು ಹತ್ತಿರವಿರುವುದು ಸೂಕ್ತವಾದುದಾಗಿರಬಹುದಾದರೂ, ವಿಂಗಡವಾಗಿ ಕಾರ್ಯ ನಡೆಸುವುದು ಸಾಮಾನ್ಯವಾಗಿ ಅತ್ಯುತ್ತಮವಾಗಿದೆ. ಒಟ್ಟಿಗೆ ನಿಂತಿರುವ ಪ್ರಚಾರಕರು ಒಬ್ಬರೊಂದಿಗೊಬ್ಬರು ಸಂಭಾಷಿಸುತ್ತಾ ಸಮಯ ಕಳೆಯುವ ಪ್ರವೃತ್ತಿಯವರಾಗಬಹುದು ಮತ್ತು ರಾಜ್ಯ ಸಂದೇಶವನ್ನು ಆಲಿಸಲು ಇಷ್ಟಪಡಬಹುದಾದ ಸಾರ್ವಾಜನಿಕರ ಕಡೆಗೆ ಗಮನ ಕೊಡದಿರಬಹುದು.
5 ಒಂದೇ ಜಾಗದಲ್ಲಿ ನಿಲ್ಲುವುದು ಮತ್ತು ಕೇವಲ ಪತ್ರಿಕೆಗಳನ್ನು ಪ್ರದರ್ಶಿಸುವುದು, ವ್ಯಕ್ತಿಗಳನ್ನು ಸಮೀಪಿಸಲು ಮುಂತೊಡಗುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ನೇತ್ರ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸಿರಿ. ಒಂದು ಸಂಭಾಷಣೆಯನ್ನು ಆರಂಭಿಸಲು ನೀವು ಪ್ರಯತ್ನಿಸುವಾಗ, ಆದರಣೆಯುಳ್ಳವರೂ ಸ್ನೇಹಪರರೂ ಮತ್ತು ನೇರವಾಗಿ ಮಾತಾಡುವವರೂ ಆಗಿರಿ. ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯೊಂದಿಗೆ ಮಾತಾಡುತ್ತಿರುವಾಗ ಕೆಲವು ಹೆಜ್ಜೆ ಅವನೊಂದಿಗೆ ನಡೆಯಬೇಕಾಗಬಹುದು. ಅವನು ಪ್ರತಿಕ್ರಿಯಿಸುವಲ್ಲಿ, ಪತ್ರಿಕೆಗಳ ನೀಡುವಿಕೆಯನ್ನು ಮಾಡಿರಿ. ಪತ್ರಿಕೆಗಳು ನಿರಾಕರಿಸಲ್ಪಟ್ಟಲ್ಲಿ, ನೀವು ಒಂದು ಕರಪತ್ರವನ್ನು ನೀಡಬೇಕಾಗಬಹುದು.
6 ಸಾಮಾನ್ಯವಾಗಿ ಅಭಿರುಚಿಯನ್ನುಂಟುಮಾಡುವ ಒಂದು ಪ್ರಶ್ನೆಯನ್ನು ಎಬ್ಬಿಸುವ ಯಾ ಹೇಳಿಕೆಯನ್ನು ಮಾಡುವ ಒಂದು ಚುಟುಕಾದ ನೀಡುವಿಕೆಯನ್ನು ತಯಾರಿಸುವುದು ಉತ್ತಮವಾಗಿದೆ. ತಕ್ಕುದಾದ ಪ್ರತಿಕ್ರಿಯೆ ಇರುವಲ್ಲಿ, ನೀವು ಅಭಿರುಚಿಯನ್ನು ಬೆನ್ನಟಲ್ಟು ಸಾಧ್ಯವಾಗುವಂತೆ ವ್ಯಕ್ತಿಯ ಹೆಸರು, ವಿಳಾಸ, ಮತ್ತು ಪ್ರಾಯಶಃ ಅವನ ಟೆಲಿಫೋನ್ ನಂಬರನ್ನು ಸಹ ಪಡೆದುಕೊಳ್ಳಲು ಪ್ರಯತ್ನಿಸಿರಿ. ನೀವು ಹೀಗನ್ನಬಹುದು: “ನೀವು ಹೆಚ್ಚನ್ನು ತಿಳಿಯಬಯಸುವಲ್ಲಿ, ನಾನು ನಿಮ್ಮ ಮನೆಯಲ್ಲಿ ನಿಮನ್ನು ಭೇಟಿಯಾಗಲು ಸಂತೋಷಿಸುವೆನು ಅಥವಾ ಹಾಗೆ ಮಾಡುವಂತೆ ಇನೊಬ್ಬ ಸಾಕ್ಷಿಯನ್ನು ಏರ್ಪಡಿಸುವೆನು.”
7 ರಸ್ತೆಯ ಸಾಕ್ಷಿಕಾರ್ಯದಲ್ಲಿ ತೊಡಗಿದ್ದ ಒಬ್ಬ ಹಿರಿಯನು ಒಬ್ಬಳು ಸ್ತ್ರೀಯನ್ನು ಸಮೀಪಿಸಿದನು ಮತ್ತು ಅವಳ ಮನೆಯಲ್ಲಿ ಸಾಕ್ಷಿಗಳೊಂದಿಗೆ ಮಾತಾಡಲು ಅವಳಿಗೆ ಎಂದಿಗೂ ಸಂದರ್ಭವಿದ್ದಿರಲಿಲ್ಲವೆಂದು ತಿಳಿದುಕೊಂಡನು. ಅವಳೊಂದು ಪುಸ್ತಕವನ್ನು ಸ್ವೀಕರಿಸಿದಳು ಮತ್ತು ಒಂದು ಅನುಕೂಲವಾದ ಸಮಯದಲ್ಲಿ ಅವಳ ಮನೆಯಲ್ಲಿ ಸಹೋದರಿಯೊಬ್ಬಳು ಅವಳನ್ನು ಭೇಟಿಯಾಗುವಂತೆ ಒಪ್ಪಿಕೊಂಡಳು. ನಾವು ರಸ್ತೆಯ ಸಾಕ್ಷಿಕಾರ್ಯದಲ್ಲಿ ಪರಿಣಾಮಕಾರಿಯಾಗಿರುವಲ್ಲಿ, ಅನೇಕ ಹೆಚ್ಚಿನ ಅರ್ಹರಾದ ಜನರನ್ನು ನಿಶ್ಚಯವಾಗಿಯೂ ಕಂಡುಕೊಳ್ಳಲು ಮತ್ತು ಸಹಾಯ ನೀಡಲು ಸಾಧ್ಯವಿದೆ.—ಅ. ಕೃ. 17:17.