ಯಾವಾಗಲೂ ಮಾಡಲು ಬೇಕಾದಷ್ಟಿರುವುದು
1 ಯೆಹೋವನ ಜನರು ಕಾರ್ಯಮಗ್ನ ಜನರಾಗಿದ್ದಾರೆ. ನಮ್ಮ ಕುಟುಂಬ, ಉದ್ಯೋಗ, ಮತ್ತು ಶಾಲೆ ಇವುಗಳ ಸಂಬಂಧದಲ್ಲಿ ನಮಗೆ ಅನೇಕ ಹಂಗುಗಳಿವೆ. ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ, ಯಾವಾಗಲೂ “ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟು” ಇದೆ. (1 ಕೊರಿಂ. 15:58, NW) ನಾವು ಸಾಪ್ತಾಹಿಕ ಸಭಾ ಕೂಟಗಳಿಗಾಗಿ ತಯಾರಿಸಬೇಕು ಮತ್ತು ಹಾಜರಾಗಬೇಕು. ಪ್ರತಿ ವಾರ ಕ್ಷೇತ್ರ ಸೇವೆಯಲ್ಲಿ ಸ್ವಲ್ಪವಾದರೂ ಪಾಲು ಇರುವಂತೆ ನಮ್ಮನ್ನು ಉತ್ತೇಜಿಸಲಾಗುತ್ತದೆ. ವೈಯಕ್ತಿಕ ಮತ್ತು ಕುಟುಂಬ ಬೈಬಲಭ್ಯಾಸಕ್ಕಾಗಿ ಸಾಕಷ್ಟು ಸಮಯವನ್ನು ಕ್ರಮವಾಗಿ ಬದಿಗಿರಿಸಬೇಕಾಗಿದೆ. ಹಿರಿಯರಿಗೆ ಮತ್ತು ಶೂಶ್ರೂಷಾ ಸೇವಕರಿಗೆ ಅನೇಕ ಸಭಾ ನೇಮಕಗಳಿರುತ್ತವೆ. ಕೆಲವೊಮ್ಮೆ ಬಡವರಿಗೆ, ಯಾರು ಸಹಾಯಕ್ಕೆ ಅರ್ಹರಾಗಿದ್ದಾರೋ ಅಂಥವರಿಗೆ ಸಹಾಯ ಮಾಡಲು ನಾವು ಕೇಳಿಕೊಳ್ಳಲ್ಪಡುತ್ತೇವೆ.
2 ಆಗಾಗ್ಗೆ, ನಮಲ್ಲಿ ಕೆಲವರಿಗೆ ನಮಗೆ ಮಾಡಲಿಕ್ಕಿರುವ ಎಲ್ಲ ವಿಷಯಗಳ ಕಾರಣ ಮುಳುಗಿಸಲ್ಪಟ್ಟಂತೆ ಅನಿಸಬಹುದು. ಆದರೂ, ಸಮತೋಲನ ಮತ್ತು ಸರಿಯಾದ ಯಥಾದೃಷ್ಟಿ ಕಾಪಾಡಲ್ಪಟ್ಟರೆ, ಕಾರ್ಯಮಗ್ನ ಜನರಲ್ಲಿ ಅತಿ ಕಾರ್ಯಮಗ್ನರಾಗಿರುವವರು ಅತಿ ಸಂತೋಷಿತರಾಗಿರುವವರಲ್ಲಿ ಒಬ್ಬರಾಗಿರಬಲ್ಲರು.—ಪ್ರಸಂ. 3:12, 13.
3 ಅಪೊಸ್ತಲ ಪೌಲನು ಮಾಡಲು ಬೇಕಾದಷ್ಟಿದವನ್ದು ಆಗಿದ್ದನು. ತನ್ನ ಸ್ವಂತ ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳಲು ಆತನು ಡೇರೆ ಮಾಡುವವನಾಗಿ ಐಹಿಕವಾಗಿ ಕೆಲಸಮಾಡುತ್ತಿದ್ದಾಗ, ಆತನು ಇತರ ಅಪೊಸ್ತಲರಿಗಿಂತ ಹೆಚ್ಚಾಗಿ ದುಡಿದನು. ಮಂದೆಯ ಕುರಿಪಾಲಕನಾಗಿ ತನ್ನ ಜವಾಬ್ದಾರಿಗಳನ್ನು ಅಲಕ್ಷಿಸದಿರುವಾಗ, ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ ಸಾರುತ್ತಾ ಅವನು ಒಬ್ಬ ಸೌವಾರ್ತಿಕನಾಗಿ ದಣಿಯದೆ ಕೆಲಸಮಾಡಿದನು. (ಅ. ಕೃ. 20:20, 21, 31, 34, 35) ತನ್ನ ಕಾರ್ಯಮಗ್ನ ಕಾಲತಖ್ತೆಯ ಹೊರತಾಗಿಯೂ, ಪೌಲನು ಯಾವಾಗಲೂ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಆತುರನಾಗಿದ್ದನು.—ಹೋಲಿಸಿರಿ ರೋಮಾಪುರ 1:13-15.
4 ಬಲಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವ ಮೂಲಕ ಪೌಲನು ತನ್ನ ಸಮತೋಲನ ಮತ್ತು ಒಂದು ಸಂತೋಷದ ಹೃದಯವನ್ನು ಕಾಪಾಡಿಕೊಂಡನು. ಆತನು ತನ್ನ ಶೂಶ್ರೂಷೆಯನ್ನು ಫಲದಾಯಕವೂ ತೃಪ್ತಿಕರವಾಗಿಯೂ ಇರುವುದಾಗಿ ಕಂಡುಕೊಂಡನು. (ಫಿಲಿ. 4:13) ದೇವರು ತನ್ನ ಕೆಲಸವನ್ನು ಮರೆಯುವದಿಲ್ಲವೆಂದು ಅವನಿಗೆ ತಿಳಿದಿತ್ತು. (ಇಬ್ರಿ. 6:10) ಇತರರಿಗೆ ಯೆಹೋವನ ಕುರಿತಾಗಿ ತಿಳಿಯಲು ಸಹಾಯಮಾಡುವ ಆನಂದವು ಅವನಲ್ಲಿ ಶಕ್ತಿಯನ್ನು ತುಂಬಿಸಿತು. (1 ಥೆಸ. 2:19, 20) ತನ್ನ ಬೈಬಲಾಧಾರಿತ ನಿರೀಕ್ಷೆಯ ಕೈಗೂಡುವಿಕೆಯ ಆಶ್ವಾಸನೆಯು ಅವನನ್ನು ಉದ್ಯೋಗಶೀಲನಾಗಿ ಉಳಿಯಲು ಪ್ರಚೋದಿಸಿತು.—ಇಬ್ರಿ. 6:11.
5 ನಮ್ಮ ಪರಿಶ್ರಮದಿಂದ ಫಲಿಸುವ ಒಳಿತನ್ನೂ ನಾವು ಪರಿಗಣಿಸಬೇಕು. ಸಾಪ್ತಾಹಿಕ ಕೂಟಗಳಲ್ಲಿ ನಮ್ಮ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯು ಇತರರನ್ನು ಬಲಪಡಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. (ಇಬ್ರಿ. 10:24, 25) ಎಲ್ಲರಿಗೆ ಸುವಾರ್ತೆಯನ್ನು ತಲುಪಿಸಲು ನಮ್ಮ ಶ್ರದ್ಧೆಯ ಪ್ರಯತ್ನಗಳು, ಆಸಕ್ತಿಯು ಬೆಳಸಲ್ಪಡುವಾಗ ಮತ್ತು ಹೊಸಬರು ನಮ್ಮೊಂದಿಗೆ ಸಹವಸಿಸುವಾಗ, ಸಭೆಯ ಏಳಿಗೆಗೆ ನೆರವು ನೀಡುವುವು. (ಯೋಹಾನ 15:8) ಅಗತ್ಯದಲ್ಲಿರುವ ಇತರರಿಗೆ ನೆರವು ನೀಡುವುದು, ಸಭೆಯಲ್ಲಿ ಒಂದು ಆಪ್ತ ಸಂಬಂಧದ, ಕುಟುಂಬದಂತಹ ಆತ್ಮವನ್ನು ಪ್ರವರ್ಧಿಸುತ್ತದೆ. (ಯಾಕೊ. 1:27) ಇನ್ನೂ ಹೆಚ್ಚಾಗಿ ಪೌಲನಂತೆ, ಲಾಭಕರ ಕೆಲಸಗಳಲ್ಲಿ ಕಾರ್ಯಮಗ್ನರಾಗಿರುವುದು ಯೆಹೋವ ದೇವರಿಗೆ ಮೆಚ್ಚಿಕೆಯಾಗುತ್ತದೆಂಬದನ್ನು ನಾವು ಎಂದೂ ಮರೆಯಬಾರದು. ಆತನನ್ನು ಸೇವಿಸುವುದನ್ನು ನಾವು ಒಂದು ಮಹಾ ಸುಯೋಗವಾಗಿ ಎಣಿಸುತ್ತೇವೆ. ಜೀವಿಸಲು ಇದಕ್ಕಿಂತ ಉತ್ತಮವಾದ ಬೇರೆ ಯಾವುದೇ ವಿಧ ನಮಗಿಲ್ಲ!
6 ಮಾಡಲು ಬೇಕಾದಷ್ಟಿರುವದರಲ್ಲಿ ಕೂಡಿಸಬಹುದಾದ ಇನ್ನೊಂದು ಲಾಭವಿದೆ. ಒಂದು ಆರೋಗ್ಯಕರ ಆತ್ಮಿಕ ನಿಯತಕ್ರಮವನ್ನು ನಾವು ಬೆನ್ನಟ್ಟುವುದರಲ್ಲಿ ಕಾರ್ಯಮಗ್ನರಾಗಿರುವಾಗ, ಸಮಯವು ಹೆಚ್ಚು ವೇಗವಾಗಿ ಕಳೆಯುತ್ತಿರುವಂತೆ ತೋರುತ್ತದೆ. ಗತಿಸುವ ಪ್ರತಿಯೊಂದು ದಿವಸವು ನಮ್ಮನ್ನು ಹೊಸ ಲೋಕಕ್ಕೆ ಹೆಚ್ಚು ಸಮೀಪ ತರುತ್ತಿದೆಯೆಂಬದನ್ನು ಗ್ರಹಿಸುತ್ತಾ, ನಾವು ಈಗ ಆನಂದಿಸುತ್ತಿರುವ ಕಾರ್ಯಮಗ್ನ ಮತ್ತು ಉದ್ದೇಶಯುಕ್ತ ಜೀವಿತವನ್ನು ಸಂತೋಷದಿಂದ ಸ್ವೀಕರಿಸುತ್ತೇವೆ. ಕಾರ್ಯಮಗ್ನರಾಗಿ ಉಳಿಯುವ ವಿವೇಕವನ್ನು ಕೂಡ ನಾವು ಗ್ರಹಿಸುತ್ತೇವೆ, ಹಾಗಿರುವದರಿಂದ ನಿಷ್ಪಯ್ರೋಜಕ ಲೌಕಿಕ ಬೆನ್ನಟ್ಟುವಿಕೆಗಳಲ್ಲಿ ಒಳಗೂಡಲು ನಮಗೆ ಕಡಿಮೆ ಸಮಯವಿರುತ್ತದೆ.—ಎಫೆ. 5:15, 16.
7 ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿದೆ, ನಿಶ್ಚಯ. ಆದರೆ ನಮ್ಮ ಸೇವೆಯನ್ನು ಉಲ್ಲಾಸಕರವಾಗಿ ಮತ್ತು ಪ್ರತಿಫಲದಾಯಕವನ್ನಾಗಿ ಮಾಡುವ, ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಮೇಲೆ ಆತುಕೊಳ್ಳುವದನ್ನು ನಾವು ಮುಂದುವರಿಸಿದರೆ ನಾವು ಸಂತೋಷಿತರಾಗಿ ಉಳಿಯಬಲ್ಲೆವು.—ಮತ್ತಾ. 11:28-30; 1 ಯೋಹಾನ 5:3.