ವೈಯಕ್ತಿಕ ಅಧ್ಯಯನ—ಚಿಂತೆಯ ಒಂದು ವಿಷಯ
1 ಯಾವ ವಿಷಯಗಳು ನಮಗೆ ಗಂಭೀರವಾದ ಚಿಂತೆಯನ್ನು ಉಂಟುಮಾಡುತ್ತವೆ? ಯೆಹೋವನೊಂದಿಗೆ ಒಂದು ನಿಕಟವಾದ ಸಂಬಂಧವನ್ನು ಕಟ್ಟುವುದರ ಮತ್ತು ಕಾಪಾಡುವುದರ ಕುರಿತು ನಾವು ಗಾಢವಾಗಿ ಚಿಂತಿತರಾಗಿರಬೇಕು. ವೈಯಕ್ತಿಕ ಅಧ್ಯಯನವು ಅಂಥ ಆತ್ಮೀಯತೆಯನ್ನು ವಿಕಸಿಸುವದರಲ್ಲಿ ಒಂದು ಪ್ರಧಾನ ಪಾತ್ರವನ್ನಾಡುತ್ತದೆ. ಇಂದು, ಮನನ ಮತ್ತು ವೈಯಕ್ತಿಕ ಅಧ್ಯಯನಕ್ಕಾಗಿ ಸಮಯದ ದೀರ್ಘಾವಧಿಗಳನ್ನು ಕಳೆಯಲು ಅನುಮತಿಸುವ ಪರಿಸ್ಥಿತಿಗಳು ನಮ್ಮಲ್ಲಿ ಕೆಲವರಿಗೆಯೇ ಇದೆ. ಅದರೂ, ನಾವು ದೇವರ ವಾಕ್ಯವನ್ನು ಕ್ರಮವಾಗಿ ಓದದಿದ್ದರೆ, ಲೋಕದ ಆತ್ಮವನ್ನು ಮತ್ತು ಅದರ ಶಾರೀರಿಕ ಆಶೆಗಳನ್ನು ತಡೆಗಟ್ಟುವ ಶಕ್ತಿಯಿರಲಾರದಷ್ಟರ ಮಟ್ಟಿಗೆ ದುರ್ಬಲರಾಗಬಲ್ಲೆವು.
2 ವಾಕ್ಯಕ್ಕಾಗಿ ಹಂಬಲಿಸುವಿಕೆಯನ್ನು ಬೆಳೆಸಿರಿ: ದೇವರ ಉದ್ದೇಶಗಳ ಕುರಿತಾಗಿ ನಾವು ಮೊದಲು ಕಲಿತಾಗ, ಹೆಚ್ಚಿನ ಜಾನವ್ಞನ್ನು ಸಂಪಾದಿಸಲು ನಾವು ಆತುರವುಳ್ಳವರಾಗಿದ್ದರಬಹುದು. ಆದಾಗಲೂ, ಸ್ವಲ್ಪ ಸಮಯಾವಧಿಯ ನಂತರ, ಆತ್ಮಿಕ ಆಹಾರಕ್ಕಾಗಿರುವ ನಮ್ಮ ಹಸಿವು ಕುಗ್ಗಿರಬಹುದು. ಆತ್ಮಿಕ ಆಹಾರಕ್ಕಾಗಿ “ಹಂಬಲಿಸುವಿಕೆಯನ್ನು ಬೆಳೆಸು”ವ ಒಂದು ಅಗತ್ಯವಿರಬಹುದು. (1 ಪೇತ್ರ 2:2, NW) ಅಂಥ ಒಂದು ಹಂಬಲಿಸುವಿಕೆಯನ್ನು ನಾವು ಹೇಗೆ ಬೆಳೆಸಬಲ್ಲೆವು?
3 ಹಿತವಾದ ನೆನಪುಗಳ ಕಾರಣ, ಒಂದು ಅಚ್ಚುಮೆಚ್ಚಿನ ಆಹಾರದ ಸುವಾಸನೆಯು ಹಸಿವಿನ ಶೂಲೆಗಳನ್ನು ಕಲಕಿಸುವುದು. ವೈಯಕ್ತಿಕ ಅಧ್ಯಯನದ ಸಂಕ್ಷಿಪ್ತ ಅವಧಿಗಳು ನಮ್ಮನ್ನು ತದ್ರೀತಿಯಲ್ಲಿ ಆತ್ಮಿಕವಾಗಿ ಪ್ರಭಾವಿಸಬಲ್ಲವು. ರುಚಿಕರವಾದ ಕೆಲವು ಆತ್ಮಿಕ ತುತ್ತುಗಳನ್ನು ಆನಂದಿಸುವುದು, ಹೆಚ್ಚು ಆಳವಾದ ಸತ್ಯಗಳಿಗಾಗಿರುವ ನಮ್ಮ ಹಸಿವನ್ನು ಚುರುಕುಗೊಳಿಸಬಲ್ಲದು. ಕಲಿಯುವದರಿಂದ ಬರುವ ಸಂತೃಪ್ತಿಯು ಯೆಹೋವನ ವಾಕ್ಯದೊಳಗೆ ಹೆಚ್ಚು ಆಳವಾಗಿ ಅಗೆಯುವಂತೆ ನಮ್ಮನ್ನು ಉತ್ತೇಜಿಸಬಹುದು.
4 ನಿಮಗೆ ಅತ್ಯುತಮವ್ತಾಗಿರುವ ಒಂದು ನಿಯತಕ್ರಮವನ್ನು ಬೆಳೆಸಿರಿ: ಕೆಲವರು ಒಂದು ಇಡೀ ಸಾಯಂಕಾಲವನ್ನು ವೈಯಕ್ತಿಕ ಅಧ್ಯಯನಕ್ಕಾಗಿ ಬದಿಗಿರಿಸುತ್ತಾರೆ, ಆದರೆ ಇನ್ನಿತರರು ಹೆಚ್ಚು ಚಿಕ್ಕದಾದ ಮತ್ತು ಹೆಚ್ಚು ಅಡಿಗಡಿಗೆ ಬರುವ ಅಧ್ಯಯನ ಅವಧಿಗಳನ್ನು ಇಷ್ಟಪಡುತ್ತಾರೆ. ಬೆಳಗ್ಗಿನ ಆರಂಭದ ತಾಸುಗಳಲ್ಲಿ ನೀವು ಹೆಚ್ಚು ಉತ್ತಮವಾಗಿ ಗಮನವನ್ನು ಕೇಂದ್ರೀಕರಿಸಬಲ್ಲಿರೆಂದು ನೀವು ಕಂಡುಕೊಳ್ಳುವದಾದರೆ, ಹೊತ್ತರೂಟದ ಮುಂಚೆ ಸ್ವಲ್ಪ ಅಧ್ಯಯನವನ್ನು ಮಾಡಲು ನೀವು ನಿರ್ಣಯಿಸಬಹುದು. ನೀವು ಸಾಯಂಕಾಲದಲ್ಲಿ ಹೆಚ್ಚು ಚುರುಕಾಗಿರುವದಾದರೆ, ರಾತ್ರಿ ಮಲಗುವ ಮುಂಚೆ ನಿಮ್ಮ ಅಧ್ಯಯನವನ್ನು ಮಾಡಲು ನೀವು ಆರಿಸಬಹುದು. ಪರಿಸ್ಥಿತಿಯು ಏನೇ ಆಗಿರಲಿ, ನಿಮ್ಮ ಅಗತ್ಯಗಳಿಗೆ ಚೆನ್ನಾಗಿ ಹೊಂದುವ ನಿಯತಕ್ರಮಕ್ಕೆ ಅಂಟಿಕೊಂಡಿರುವುದು ಮತ್ತು ಕ್ರಮವಾಗಿರುವುದು ಪ್ರಾಮುಖ್ಯ ಸಂಗತಿಯಾಗಿದೆ.
5 ನಾವು ಹೆಚ್ಚು ವೈಯಕ್ತಿಕ ಅಧ್ಯಯನ ಮಾಡುವಂತೆ ಉತ್ತೇಜಿಸಲ್ಪಡುವಾಗ, ನಮಗೆ ಈಗಾಗಲೇ ಪೂರ್ತಿಯಾಗಿ ತುಂಬಿರುವ ಒಂದು ಕಾಲತಖ್ತೆಯಿದೆ ಎಂದು ತಿಳಿಸುತ್ತಾ ನಾವು ತತ್ಕ್ಷಣ ಪ್ರತಿಕ್ರಿಯಿಸಬಹುದು. ಆದಾಗಲೂ, ನಾವು ನಮ್ಮ ಸಮಯವನ್ನು ಹೇಗೆ ಕಳೆಯುತ್ತೇವೆಂದು ಅಳೆಯುವುದರಲ್ಲಿ ನಾವೆಲ್ಲರೂ ಪ್ರಾಮಾಣಿಕರಾಗಿರಬೇಕು. ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸುವದರಲ್ಲಿ ಪ್ರತಿ ದಿನ ಹಲವಾರು ತಾಸುಗಳನ್ನು ವ್ಯಯಮಾಡಲಾಗುತ್ತಿದೆಯೋ? ಕೆಲವು ವೈಯಕ್ತಿಕ ಅಭಿರುಚಿಗಳನ್ನು ತ್ಯಾಗ ಮಾಡಲು ನಾವು ಸಿದ್ಧರಾಗಿದ್ದೇವೋ? ನಾವು ನಮ್ಮ ಸಮಯವನ್ನು ಉಪಯೋಗಿಸುತ್ತಿರುವ ವಿಧದ ಒಂದು ವಾಸ್ತವಿಕ ಪರೀಕ್ಷಣೆಯು, ವೈಯಕ್ತಿಕ ಅಧ್ಯಯನದಲ್ಲಿ ಹೆಚ್ಚು ಲಾಭಕರವಾಗಿ ಉಪಯೋಗಿಸಬಹುದಾದ ಪ್ರತಿದಿನದ ಅವಧಿಗಳನ್ನು ಪ್ರಕಟಪಡಿಸಬಹುದು.—ಎಫೆ. 5:15, 16.
6 ದೇವರ ವಾಕ್ಯದ ಅಧ್ಯಯನವು ನಮ್ಮ ಪೂರ್ಣ ಗಮನಕ್ಕೆ ಅರ್ಹವಾಗಿದೆ. ಅಭ್ಯಾಸಿಸುತ್ತಿರುವ ಸಮಯದಲ್ಲೇ ಬೇರೆ ಏನನ್ನಾದರೂ ಮಾಡಲು ಪ್ರಯತ್ನಿಸುವುದು ಪ್ರಯೋಜನಗಳನ್ನು ಕನಿಷಗೊಳ್ಠಿಸುತ್ತದೆ. ನಾವು ತಿನ್ನುತ್ತಿರುವಾಗ, ರೇಡಿಯೋವನ್ನು ಆಲಿಸುತ್ತಿರುವಾಗ, ಅಥವಾ ಟಿಲಿವಿಷನ್ನನ್ನು ವೀಕ್ಷಿಸುತ್ತಿರುವಾಗ ಅಧ್ಯಯನಿಸುವ ಒಲವಿರುವವರಾಗಿರುವದಾದರೆ, ನಾವೇನನ್ನು ಕಲಿಯಲು ಪ್ರಯತ್ನಿಸುತ್ತಿದ್ದೇವೋ ಅದರಲ್ಲಿ ನಾವು ತಲ್ಲೀನರಾಗಿರಲು ಸಾಧ್ಯವಿಲ್ಲ. (1 ತಿಮೊ. 4:15) ಆದುದರಿಂದ ಅಪಕರ್ಷಣೆಗಳನ್ನು ಹೋಗಲಾಡಿಸುವ ಒಂದು ಅಗತ್ಯವಿದೆ.—ಸ್ಕೂಲ್ ಗೈಡ್ಬುಕ್, ಪುಟಗಳು 33-4 ನ್ನು ನೋಡಿರಿ.
7 ಪ್ರತಿದಿನದ ಅಧ್ಯಯನ ಮತ್ತು ಬೈಬಲ್ ಸಲಹೆಯ ಅನ್ವಯಿಸುವಿಕೆ ಪ್ರಾಮುಖ್ಯವಾಗಿದೆ ಯಾಕಂದರೆ ಆ ರೀತಿಯಲ್ಲಿ ನಾವು ಯೆಹೋವನಿಂದ ಮಾರ್ಗದರ್ಶನವನ್ನು ಪಡೆಯುತ್ತೇವೆ. ಸತ್ಯವನ್ನು ಮುದ್ರಿತ ಪುಟದಿಂದ ತೆಗೆದು ನಿಮ್ಮ ಹೃದಯದೊಳಗೆ ಹೋಗುವಂತೆ ಮಾಡುವದನ್ನು ನಿಮ್ಮ ಧ್ಯೇಯವನ್ನಾಗಿ ಮಾಡಿರಿ. ಅದು ಎಷ್ಟೇ ಅಲ್ಪಾವಧಿಯಾಗಿರಲಿ, ಪ್ರತಿಯೊಂದು ಅವಕಾಶವನ್ನು ಆತ್ಮಿಕ ಸಂಗತಿಗಳನ್ನು ಓದಲು, ಪುನರ್ವಿಮರ್ಶಿಸಲು ಅಥವಾ ಮನನ ಮಾಡಲು ಉಪಯೋಗಿಸಿರಿ.—ಧರ್ಮೋ. 6:6-8; ಕೊಲೊ. 1:9, 10.