ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/95 ಪು. 2
  • ಜನವರಿಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿಗಾಗಿ ಸೇವಾ ಕೂಟಗಳು
  • 1995 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 2ರ ವಾರ
  • ಜನವರಿ 9ರ ವಾರ
  • ಜನವರಿ 16ರ ವಾರ
  • ಜನವರಿ 23ರ ವಾರ
  • ಜನವರಿ 30ರ ವಾರ
1995 ನಮ್ಮ ರಾಜ್ಯದ ಸೇವೆ
km 1/95 ಪು. 2

ಜನವರಿಗಾಗಿ ಸೇವಾ ಕೂಟಗಳು

ಜನವರಿ 2ರ ವಾರ

ಸಂಗೀತ 83 (86)

10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ತಕ್ಕದಾದ ಪ್ರಕಟನೆಗಳು.

17 ನಿ: “ಯಾವಾಗಲೂ ಮಾಡಲು ಬೇಕಾದಷ್ಟಿರುವುದು.” ಪ್ರಶ್ನೋತ್ತರಗಳು. ಒಬ್ಬ ಹಿರಿಯ, ಒಬ್ಬ ಗೃಹಿಣಿ, ಅಥವಾ ಒಬ್ಬ ಪಯನೀಯರ್‌ರಂತಹ ಕಾರ್ಯಮಗ್ನ ಪ್ರಚಾರಕರೊಂದಿಗೆ ಎರಡು ಯಾ ಮೂರು ಸಂಕ್ಷಿಪ್ತ ಇಂಟರ್‌ವ್ಯೂಗಳನ್ನು ಏರ್ಪಡಿಸಿರಿ; ಪೂರ್ತಿಯಾಗಿ ತುಂಬಿರುವ ಒಂದು ಕಾಲತಖ್ತೆಯನ್ನು ಕಾಪಾಡಲು ಮತ್ತು ಇನ್ನೂ ತಮ್ಮ ಆನಂದವನ್ನು ಇಟ್ಟುಕೊಳ್ಳಲು ಅವರು ಶಕ್ತರಾಗುವ ವಿಧವನ್ನು ವಿವರಿಸುವಂತೆ ಅವರನ್ನು ಕೇಳಿರಿ.

18 ನಿ: “ನಮ್ಮ ಹಳೆಯ ಪುಸ್ತಕಗಳ ಸದುಪಯೋಗವನ್ನು ಮಾಡುವುದು.” ಸಭಿಕರೊಂದಿಗೆ ಚರ್ಚಿಸಿರಿ. ಲಭ್ಯವಾಗಿರುವ ಹಳೆಯ ಪುಸ್ತಕಗಳು ಯಾವುವು ಎಂದು ಸಭೆಗೆ ತಿಳಿದಿರಲಿ; ಸೇವೆಯಲ್ಲಿ ಉಪಯೋಗಕ್ಕಾಗಿ ಕೆಲವು ಪ್ರತಿಗಳನ್ನು ಪಡೆಯಲು ಅವರನ್ನು ಉತ್ತೇಜಿಸಿರಿ. ಸೂಚಿಸಲ್ಪಟ್ಟ ನಿರೂಪಣೆಗಳ ಒಂದು ಅಥವಾ ಎರಡು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ.

ಸಂಗೀತ 188 (81) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 9ರ ವಾರ

ಸಂಗೀತ 183 (73)

15 ನಿ: ಸ್ಥಳಿಕ ತಿಳಿಸುವಿಕೆಗಳು. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ.” ಒಂದು ಭಾಷಣ. ವಾರಾಂತ್ಯಕ್ಕಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಪ್ರಕಟಿಸಿರಿ. ಎಲ್ಲರೂ ಇತ್ತೀಚೆಗಿನ ಪತ್ರಿಕೆಗಳನ್ನು ಒಯ್ದು ಸೂಕ್ತವಾಗಿರುವಾಗ ಅವುಗಳನ್ನು ನೀಡಲು ಎಲ್ಲರನ್ನು ಉತ್ತೇಜಿಸಿರಿ.

15 ನಿ: “ಭಕ್ತಿವೃದ್ಧಿಯನ್ನುಂಟುಮಾಡುವ ಪಾಲನೆ.” ಒಬ್ಬ ಹಿರಿಯನಿಂದ ಕಾವಲಿನಬುರುಜು ವಿನ ಸಪ್ಟಂಬರ್‌ 15, 1993ರ ಸಂಚಿಕೆಯ ಪುಟ 21-3 ರಲ್ಲಿ ಉಪಶೀರ್ಷಿಕೆಯ ಕೆಳಗೆ ಇರುವ ಮಾಹಿತಿಯ ಮೇಲಾಧಾರಿತ ಭಾಷಣ. ಸಮಸ್ಯೆಗಳೊಂದಿಗೆ ನಿಭಾಯಿಸಲು ಸಹಾಯಕ್ಕಾಗಿ ಶಾಸ್ತ್ರೀಯ ಬುದ್ಧಿವಾದವನ್ನು ಎತ್ತಿಹೇಳಿರಿ.

15 ನಿ: ನಂಬಿಕೆಯನ್ನು ಪಂಥಾಹ್ವಾನಕ್ಕೊಡ್ಡುವ ವೈದ್ಯಕೀಯ ಸನ್ನಿವೇಶವನ್ನು ಎದುರಿಸಲು ನೀವು ತಯಾರಾಗಿದ್ದೀರೋ? ಅಡ್‌ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌⁄ರಿಲೀಸ್‌ ಕಾರ್ಡ್‌ ಮತ್ತು ಐಡೆಂಟಿಟಿ ಕಾರ್ಡ್‌ನ ಸಂರಕ್ಷಕ ಮೌಲ್ಯವನ್ನು ಗಣ್ಯಮಾಡಲು ಒಬ್ಬ ನುರಿತ ಹಿರಿಯನಿಂದ ಗಂಭೀರವಾದ ಆದರೆ ಪ್ರಚೋದಕ ಭಾಷಣ. ಯೋಗ್ಯರಾಗಿರುವವರೆಲ್ಲರು ಮತ್ತು ಈ ಸಂರಕ್ಷಣೆಯನ್ನು ಬಯಸುವವರೆಲ್ಲರು ಕಾರ್ಡುಗಳನ್ನು ತುಂಬಿಸುವ ಮೂಲಕ ಅದನ್ನು ಪಡೆಯಬಲ್ಲರು ಎಂದು ಆಶ್ವಾಸನೆ ಕೊಡಲು ಕಳೆದ ಜನವರಿಯ ಕಾರ್ಯಕ್ರಮವನ್ನು ಪುನರಾವೃತ್ತಿಸಿರಿ. ವಿವರಣೆಗಳಿಗಾಗಿ ಜನವರಿ 1994ರ ನಮ್ಮ ರಾಜ್ಯದ ಸೇ ಯಲ್ಲಿ ಪುಟ 2ರಲ್ಲಿ “ಜನವರಿ 10ರ ವಾರ”ದ ಕೆಳಗೆ ನೋಡಿರಿ.

ಸಂಗೀತ 198 (50) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 16ರ ವಾರ

ಸಂಗೀತ 182 (97)

10 ನಿ: ಸ್ಥಳಿಕ ತಿಳಿಸುವಿಕೆಗಳು. ಇತ್ತೀಚೆಗಿನ ಪತ್ರಿಕೆಗಳಿಂದ ಮಾತನಾಡುವ ಅಂಶಗಳನ್ನು ಚರ್ಚಿಸಿರಿ. ಈ ವಾರಾಂತ್ಯದಲ್ಲಿ ಎಲ್ಲರೂ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಿರಿ.

18 ನಿ: “ಇತರರಿಗಾಗಿ ಪರಿಗಣನೆಯನ್ನು ತೋರಿಸಿರಿ—ಭಾಗ 1.” ಪ್ರಶ್ನೋತ್ತರಗಳು. ಮಾಳಿಗೆ, ಕೊಳಾಯಿ ವ್ಯವಸ್ಥೆ, ವಿದ್ಯುತ್ತಿನ ಏರ್ಪಾಟುಗಳು, ಮತ್ತು ರಾಜ್ಯ ಸಭಾಗೃಹದ ಭದ್ರತೆಗಾಗಿ ಮುನ್ನೇರ್ಪಾಡುಗಳು ಸುಸ್ಥಿತಿಯಲ್ಲಿವೆಯೆಂದು ನೋಡಲು ಹಿರಿಯರು ನಿಕಟವಾಗಿ ಕೆಲಸಮಾಡುವ ಅಗತ್ಯದ ಕುರಿತಾಗಿ ಮರುಜ್ಞಾಪನಗಳನ್ನು ಒಳಗೂಡಿಸಿರಿ.—ದಶಂಬರ 1984ರ ನಮ್ಮ ರಾಜ್ಯದ ಸೇವೆಯ ಪುಟ 4ನ್ನು ನೋಡಿರಿ.

17 ನಿ: “ನೀವು ಕಾಳಜಿ ವಹಿಸುತ್ತೀರೆಂದು ಪುನರ್ಭೇಟಿಗಳನ್ನು ಮಾಡುವ ಮೂಲಕ ತೋರಿಸಿರಿ.” ಪುನರ್ಭೇಟಿಗಳನ್ನು ಮಾಡುವ ಉದ್ದೇಶ ಮತ್ತು ಮಹತ್ವವನ್ನು ಮೂವರು ಅಥವಾ ನಾಲ್ವರು ಪ್ರಚಾರಕರು ಚರ್ಚಿಸುತ್ತಾರೆ. ಅಭ್ಯಾಸಗಳನ್ನು ಆರಂಭಿಸುವ ಧ್ಯೇಯವನ್ನು ಒತ್ತಿ ಹೇಳಿರಿ. ಸೂಚಿಸಲ್ಪಟ್ಟ ನಿರೂಪಣೆಗಳನ್ನು ವಿಮರ್ಶಿಸಿರಿ. ಒಂದು ಅಥವಾ ಎರಡು ಪ್ರತ್ಯಕ್ಷಾಭಿನಯಗಳಿರಲಿ, ಮತ್ತು ಆ ಗುಂಪು ಪ್ರಶಂಸೆ ಹಾಗೂ ಅಭಿವೃದ್ಧಿಗಾಗಿ ಸಲಹೆಗಳನ್ನು ಕೊಡಲಿ.

ಸಂಗೀತ 196 (64) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 23ರ ವಾರ

ಸಂಗೀತ 161 (110)

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

10 ನಿ: ನಮ್ಮ ಟೆರಿಟೊರಿಯನ್ನು ಪೂರ್ತಿಯಾಗಿ ಆವರಿಸುವದು. ಸೇವಾ ಮೇಲಿಚಾರ್ವಕನಿಂದ ಭಾಷಣ. ಜುಲೈ 15, 1988 ವಾಚ್‌ಟವರ್‌ನ ಅಭ್ಯಾಸ ಲೇಖನಗಳಲ್ಲಿರುವ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. ಸ್ಥಳಿಕ ಅನ್ವಯವನ್ನು ಮಾಡಿರಿ. ಸಭೆಯ ಟೆರಿಟೊರಿಯ ಭಾಗಗಳು ಕ್ರಮವಾಗಿ ಆವರಿಸಲ್ಪಡದಿದ್ದಲ್ಲಿ, ಇದನ್ನು ಹೇಗೆ ಮಾಡಬಹುದೆಂಬದರ ಕುರಿತಾಗಿ ಸಲಹೆಗಳನ್ನು ಕೊಡಿರಿ.

10 ನಿ: ಸ್ಥಳಿಕ ಅಗತ್ಯಗಳು. ಅಥವಾ ನವಂಬರ 1, 1994 ಕಾವಲಿನಬುರುಜು ವಿನ (ಪಾಕ್ಷಿಕ ಮುದ್ರಣಗಳು) ಪುಟ 28-31ರ ಮೇಲೆ ಆಧರಿತವಾದ “ದೇವಪ್ರಭುತ್ವ ಪುಸ್ತಕಭಂಡಾರವನ್ನು ಸಂಘಟಿಸುವ ವಿಧ” ಇದರ ಮೇಲೆ ಭಾಷಣ ಕೊಡಿರಿ.

15 ನಿ: “ವೈಯಕ್ತಿಕ ಅಧ್ಯಯನ—ಚಿಂತೆಯ ಒಂದು ವಿಷಯ.” ಪ್ರಶ್ನೋತ್ತರಗಳು. ಜೂನ್‌ 15, 1985ರ ವಾಚ್‌ಟವರ್‌, ಪುಟ 8-13ರ ಮೇಲೆ ಆಧರಿತವಾದ ಆಯ್ದ ಹೇಳಿಕೆಗಳನ್ನು ಸೇರಿಸಿರಿ.

ಸಂಗೀತ 116 (37) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 30ರ ವಾರ

ಸಂಗೀತ 141 (64)

10 ನಿ: ಸ್ಥಳಿಕ ತಿಳಿಸುವಿಕೆಗಳು.

20 ನಿ: ಒಬ್ಬ ಹಿರಿಯನಿಂದ ಸಪ್ಟಂಬರ್‌ 1, 1994 ಕಾವಲಿನಬುರುಜು ಪತ್ರಿಕೆಯ ಪಾಕ್ಷಿಕ ಮುದ್ರಣಗಳ, 27-8 ಪುಟಗಳಲ್ಲಿರುವ “ನಿರ್ಬಂಧಗಳು ನಿಮ್ಮನ್ನು ನಿರುತ್ಸಾಹಗೊಳಿಸುತ್ತವೊ?” ಎಂಬ ಲೇಖನದ ಮೇಲೆ ಆಧರಿತವಾದ ಭಾಷಣ.

15 ನಿ: ಫೆಬ್ರವರಿಯಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಿರಿ. ಈ ಪುಸ್ತಕದಲ್ಲಿರುವ ಮಾಹಿತಿಯು ಏಕೆ ಜನರೊಂದಿಗೆ ಇರಬೇಕಾದ ಅಗತ್ಯವಿದೆಯೆಂದು ವಿವರಿಸಿರಿ. (ಎಪ್ರಿಲ್‌ 1, 1988ರ ವಾಚ್‌ಟವರ್‌ ಸಂಚಿಕೆಯ ಪುಟಗಳು 25-6, ಪ್ಯಾರಗ್ರಾಫ್‌ಗಳು 17, 18ನ್ನು ನೋಡಿರಿ.) ಅದನ್ನು ಓದಿದ ಯಥಾರ್ಥ ಜನರಿಂದ ಪ್ರದರ್ಶಿಸಲ್ಪಟ್ಟ ಗಣ್ಯತೆಯನ್ನು ತೋರಿಸುವ ಸಂಕ್ಷಿಪ್ತ ಅನುಭಗಳನ್ನು ತಿಳಿಸಿರಿ. (ಸಪ್ಟಂಬರ್‌ 1, 1989ರ ವಾಚ್‌ಟವರ್‌, ಪುಟ 32 ಮತ್ತು ದಶಂಬರ 1, 1991ರ ವಾಚ್‌ಟವರ್‌ ಪುಟ 32ನ್ನು ನೋಡಿರಿ.) ನಾವು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಿರುವ ಆಸಕ್ತ ಜನರೊಂದಿಗೆ ಹೇಗೆ ಬೈಬಲಭ್ಯಾಸಗಳನ್ನು ಆರಂಭಿಸಬಹುದೆಂಬದನ್ನು ತೋರಿಸುವ ಕೆಲವು ಸಲಹೆಗಳನ್ನು ಕೊಡಿರಿ. ರೀಸನಿಂಗ್‌ ಪುಸ್ತಕದಲ್ಲಿ ಪುಟ 13 ರಲ್ಲಿರುವ “ಜೀವನ⁄ಸಂತೋಷ” ಶೀರ್ಷಿಕೆಯನ್ನು ಉಪಯೋಗಿಸಿ ನಿರೂಪಣೆಯನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಲು ಒಬ್ಬ ನುರಿತ ಪ್ರಚಾರಕನಿಗೆ ಹೇಳಿರಿ. ಇಲ್ಲವೇ ಸ್ಥಳಿಕ ಟೆರಿಟೊರಿಗೆ ತಕ್ಕದ್ದಾಗಿರುವ ಇನ್ನೊಂದು ನಿರೂಪಣೆಯನ್ನು ಉಪಯೋಗಿಸಿರಿ. ಈ ವಾರದಲ್ಲಿ ಸೇವೆಗಾಗಿ ಸಾಹಿತ್ಯವನ್ನು ಪಡೆಯಲು ಸಭಿಕರಿಗೆ ನೆನಪು ಮಾಡಿರಿ.

ಸಂಗೀತ 199 (105) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ