ನಮ್ಮ ಹಳೆಯ ಪುಸ್ತಕಗಳ ಸದುಪಯೋಗವನ್ನು ಮಾಡುವುದು
1 ಯೆಹೋವನು ನಮಗೆ ಗುಣಾತಿಶಯವುಳ್ಳ ಆತ್ಮಿಕ ಆಹಾರದ ಸಮೃದ್ಧಿಯನ್ನು ಒದಗಿಸಿದ್ದಾನೆ. ಈ ವಿಷಯಗಳಲ್ಲಿ ಹೆಚ್ಚಿನದು ಇತ್ತೀಚೆಗಿನ ವರ್ಷಗಳಲ್ಲಿ ಪ್ರಕಾಶಿಸಲ್ಪಟ್ಟ 192-ಪುಟಗಳ ಪುಸ್ತಕಗಳ ರೂಪದಲ್ಲಿದೆ. ಜನವರಿಯಲ್ಲಿ ನಾವು ನಮ್ಮ ರಾಜ್ಯದ ಸೇವೆ ಯಲ್ಲಿ ಪಟ್ಟಿಮಾಡಲಾಗಿರುವ 192-ಪುಟಗಳ ಪುಸ್ತಕಗಳಲ್ಲಿ ಯಾವುದನ್ನೇ ವಿಶೇಷ ದರದಲ್ಲಿ ವಿತರಣೆಗಾಗಿ ನೀಡುವೆವು. ಇನ್ನೂ ಒಳ್ಳೆಯ ಸ್ಥಿತಿಯಲ್ಲಿರುವ ಇವುಗಳಲ್ಲಿ ಕೆಲವು ನಿಮ್ಮ ಮನೆಯಲ್ಲಿ ಇವೆಯೋ? ನಿಮ್ಮ ಸಭೆಯಿಂದ ಒಂದು ಸಂಗ್ರಹವನ್ನು ನೀವು ಪಡೆದಿದ್ದೀರೋ? ಹಾಗಿದ್ದಲ್ಲಿ, ಅವುಗಳ ಒಳವಿಷಯಗಳನ್ನು ಪುನರ್ವಿಮರ್ಶಿಸಿ, ನಿಮ್ಮ ನಿರೂಪಣೆಯಲ್ಲಿ ನೀವು ಉಪಯೋಗಿಸಬಹುದಾದ ಕೆಲವು ಮಾತಾಡುವ ವಿಷಯಗಳನ್ನು ಆರಿಸುವುದು ಒಳ್ಳೆಯದು.
2 “ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು” ಎಂಬ ಪುಸ್ತಕವನ್ನು ನೀವು ಪ್ರದರ್ಶಿಸುತ್ತಿರುವದಾದರೆ ನೀವು ಈ ಪ್ರಸ್ತಾಪವನ್ನು ಪ್ರಯತ್ನಿಸಬಹುದು:
▪ “ಹಲವಾರು ಸಮಸ್ಯೆಗಳಿರುವದರಿಂದ ಹೆಚ್ಚಿನ ಜನರು ಈ ಲೋಕದಲ್ಲಿ ಸಂತೋಷವನ್ನು ಕಂಡುಕೊಳ್ಳುವದು ಕಷ್ಟಕರವಾಗಿ ಕಂಡುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಗಳ ಕೆಳಗೆ ಸಂತೋಷಿತರಾಗಿರಲು ಸಾಧ್ಯವಿದೆಯೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 106 ಕ್ಕೆ ತಿರುಗಿಸಿರಿ, ಮತ್ತು ಮಾನವಕುಲವು ಹೇಗೆ ಹಿಂಸಾಕೃತ್ಯದ ಭಯದಲ್ಲಿ ಜೀವಿಸುತ್ತಿದೆಯೆಂದು ತಿಳಿಸಿರಿ.] ಇಂದಿನ ಸಮಸ್ಯೆಗಳೊಂದಿಗೆ ನಾವು ಹೇಗೆ ನಿಭಾಯಿಸಬಲ್ಲೆವು ಮತ್ತು ಕ್ರಮೇಣ ಒಂದು ಶಾಂತಿಯುಕ್ತ ಹೊಸ ಲೋಕದಲ್ಲಿ ಅಂತ್ಯವಿಲ್ಲದ ಸಂತೋಷವನ್ನು ಹೇಗೆ ಆನಂದಿಸಬಲ್ಲೆವು ಎಂದು ಬೈಬಲ್ ತೋರಿಸುತ್ತದೆ. [ಪುಟ 188ಕ್ಕೆ ತಿರುಗಿಸಿರಿ ಮತ್ತು 2 ಪೇತ್ರ 3:13ನ್ನು ಓದಿರಿ; ಪುಟ 189 ರಲ್ಲಿರುವ ಚಿತ್ರವನ್ನು ವಿವರಿಸಿರಿ.] ಬೈಬಲು ಈ ಸುವಾರ್ತೆಯ ಮೂಲವಾಗಿದೆ ಮತ್ತು ಈ ಪುಸ್ತಕವು ಅದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಬಲ್ಲದು.”
3 ಮನೆಯವರು ಚರ್ಚಿನ ಹಿನ್ನಲೆಯವರಾಗಿರುವದಾದರೆ, ನೀವು “ನಿನ್ನ ರಾಜ್ಯವು ಬರಲಿ” ಪುಸ್ತಕವನ್ನು ಹೀಗೆ ಪರಿಚಯಿಸುತ್ತಾ ನೀಡಬಲ್ಲಿರಿ:
▪ “ಸುಮಾರು 2,000 ವರ್ಷಗಳಿಂದ ಕ್ರೈಸ್ತರು ದೇವರ ರಾಜ್ಯದ ಬರೋಣಕ್ಕಾಗಿ ಪ್ರಾರ್ಥಿಸಿದ್ದಾರೆ. ರಾಜ್ಯವು ಮಾನವಕುಲಕ್ಕಾಗಿ ಏನು ಮಾಡಲಿದೆಯೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 25 ರಲ್ಲಿರುವ ರೇಖಾಚೌಕಕ್ಕೆ ತಿರುಗಿಸಿರಿ, ಮತ್ತು ರಾಜ್ಯದಾಳುವಿಕೆಯ ಕೆಳಗೆ ವಾಸ್ತವರೂಪಕ್ಕೆ ತರಲಾಗುವ ಆಶೀರ್ವಾದಗಳಲ್ಲಿ ಕೆಲವನ್ನು ಸೂಚಿಸಿ ಮಾತಾಡಿರಿ.] ಈ ಪುಸ್ತಕವು, ರಾಜ್ಯವು ಸಾಧಿಸಲಿರುವ ಸಂಗತಿಗಳನ್ನು ಚರ್ಚಿಸುತ್ತದೆ ಮತ್ತು ನೀವು ಮತ್ತು ನಿಮ್ಮ ಪ್ರಿಯ ಜನರು ಹೇಗೆ ಪ್ರಯೋಜನ ಪಡೆಯಬಹುದು ಎಂಬದನ್ನು ವಿವರಿಸುತ್ತದೆ. ನೀವು ಇದನ್ನು ಓದಲು ಇಷ್ಟಪಡುವದಾದರೆ, ನಿಮಗೆ ಒಂದು ಪ್ರತಿಯನ್ನು ಬಿಟ್ಟುಹೋಗಲು ನಾನು ಸಂತೋಷಿಸುವೆನು.”
4 “ನಿಜ ಶಾಂತಿ ಮತ್ತು ಭದ್ರತೆ—ಯಾವ ಮೂಲದಿಂದ?” ಎಂಬ ಪುಸ್ತಕವನ್ನು ನೀವು ಉಪಯೋಗಿಸುತ್ತಿರುವಲ್ಲಿ, ನೀವು ಇದನ್ನು ಪ್ರಯತ್ನಿಸಲು ಇಷ್ಟಪಡಬಹುದು:
▪ “ಶಾಂತಿ ಮತ್ತು ಭದ್ರತೆಯಿರುವ ಒಂದು ಲೋಕದಲ್ಲಿ ಎಲ್ಲರೂ ಜೀವಿಸಲು ಬಯಸುವರು. ವಿಷಾದಕರವಾಗಿ, ನಾವದನ್ನು ನಮ್ಮ ಜೀವಮಾನದಲ್ಲಿ ಅನುಭವಿಸಿಲ್ಲ. ಶಾಂತಿ ಮತ್ತು ಭದ್ರತೆಯನ್ನು ಒಂದು ವಾಸ್ತವಿಕತೆಯನ್ನಾಗಿ ಮಾಡಲು ನಾವು ಏನನ್ನು ಮಾಡಬೇಕು ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರಿಗೆ ಈ ಭೂಮಿಯ ಮೇಲೆ ಶಾಂತಿಯನ್ನು ತರುವ ಶಕಿಯಿದ್ತೆ, ಮತ್ತು ಅದನ್ನು ಮಾಡುವೆನೆಂದು ಆತನು ವಾಗ್ದಾನಿಸಿದ್ದಾನೆ.” ಪುಟ 4 ರಲ್ಲಿರುವ ಚಿತ್ರಕ್ಕೆ ತಿರುಗಿಸಿರಿ, ಮತ್ತು ನಂತರ ಮೀಕ 4:3, 4ನ್ನು ಓದಿರಿ. ಒಳ್ಳೆ ಪ್ರತಿಕ್ರಿಯೆ ಇದ್ದಲ್ಲಿ, ರಾಜ್ಯ ನಿರೀಕ್ಷೆಯ ಕುರಿತಾಗಿ ಹೆಚ್ಚನ್ನು ವಿವರಿಸಿರಿ, ಪುಸ್ತಕವನ್ನು ನೀಡಿರಿ ಮತ್ತು ಒಂದು ಪುನರ್ಭೇಟಿಗಾಗಿ ಏರ್ಪಾಡುಗಳನ್ನು ಮಾಡಿರಿ.
5 “ಇರುವುದು ಈ ಜೀವಿತ ಮಾತ್ರವೋ?” ಪುಸ್ತಕವನ್ನು ನೀವು ಉಪಯೋಗಿಸಲು ಆರಿಸಬಹುದು. ಹಾಗಿದ್ದಲ್ಲಿ, ನೀವಿದನ್ನು ಹೇಳಬಹುದು:
▪ “ದೇವರು ಲೋಕದಲ್ಲಿ ಇಷ್ಟೊಂದು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆಂದು ಅನೇಕ ಜನರು ಕೌತುಕಪಡುತ್ತಾರೆ. ಅವನು ಸರ್ವಶಕ್ತನಾಗಿರುವದರಿಂದ, ನಮ್ಮ ಸಂಕಷ್ಟಗಳನ್ನು ಅಂತ್ಯಗೊಳಿಸಲು ಆತನು ಯಾಕೆ ಏನನ್ನಾದರೂ ಮಾಡುವದಿಲ್ಲ? ನಿಮಗೆ ಹೇಗೆ ಅನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ನಮ್ಮನ್ನು ತೊರೆದಿರುವದಿಲ್ಲವೆಂದು ಬೈಬಲು ನಮಗೆ ಆಶ್ವಾಸನೆಯನ್ನೀಯುತ್ತದೆ.” 142 ಮತ್ತು 143 ಪುಟಗಳಿಗೆ ತಿರುಗಿಸಿರಿ ಮತ್ತು ನಾವು ಇದನ್ನು ಮುನ್ನೋಡಬಹುದೆಂದು ಹೇಳುತ್ತಾ, ಯೆಶಾಯ 11:6-9 ಮತ್ತು ಪ್ರಕಟನೆ 21:2-4ರ ಉಲ್ಲೀಖಗಳ ಕಡೆಗೆ ಗಮನ ಸೆಳೆಯಿರಿ. ಬೈಬಲಿನಿಂದ ಕೀರ್ತನೆ 37:11, 29ನ್ನು ಓದಿರಿ. ಪುಸ್ತಕವು ಸ್ವೀಕರಿಸಲ್ಪಟ್ಟರೆ, ಅದನ್ನು ವಿವರಿಸಲು ಪುನಃ ಬರಲು ಸಿದ್ಧರೆಂದು ಹೇಳಿರಿ.
6 ನಮ್ಮ ಸಾಹಿತ್ಯವು ಸಾವಿರಾರು ಜನರಿಗೆ ಬೈಬಲನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವಂತೆ ಪ್ರಚೋದಿಸಿದೆ. ಅವರು ಏನನ್ನು ಕಲಿತಿದ್ದಾರೋ ಅದು ಅವರಿಗೆ ಒಂದು ಸಂತೋಷದ ಭವಿಷ್ಯತ್ತಿನ ಒಂದು ನಿರೀಕ್ಷೆಯನ್ನು ತಂದಿದೆ. (ಕೀರ್ತ. 146:5) ಅವರಿಗೆ ಸಹಾಯ ಮಾಡುವುದು ನಮ್ಮ ಸುಯೋಗವಾಗಿದೆ.