ಸಾರುವಿಕೆ—ಗೌರವಿತವಾದೊಂದು ಸುಯೋಗ
1 ಸುವಾರ್ತೆಯ ಶುಶ್ರೂಷೆಯು ಯೆಹೋವನು ನಮಗೆ ನೀಡಿರುವ ಗೌರವಿತವಾದೊಂದು ಸುಯೋಗವಾಗಿದೆ. (ರೋಮಾ. 15:16; 1 ತಿಮೊ. 1:12) ನೀವು ಅದನ್ನು ಹಾಗೆ ವೀಕ್ಷಿಸುತ್ತೀರೊ? ಸಮಯದ ಸಾಗುವಿಕೆಯಾಗಲಿ ಇತರರ ಅಪಹಾಸ್ಯವಾಗಲಿ ನಮ್ಮ ದೃಷ್ಟಿಯಲ್ಲಿ ಅದರ ಪ್ರಮುಖತೆಯನ್ನು ಕುಗ್ಗಿಸುವಂತೆ ನಾವು ಬಿಡಬಾರದು. ದೇವರ ನಾಮವನ್ನು ಧರಿಸಿರುವುದು ಕೆಲವರಿಗೆ ಮಾತ್ರ ನೀಡಲ್ಪಟ್ಟಿರುವ ಗೌರವವಾಗಿದೆ. ಈ ಸುಯೋಗಕ್ಕಾಗಿ ನಮ್ಮ ಗಣ್ಯತೆಯನ್ನು ನಾವು ಹೇಗೆ ಬೆಳಸಬಲ್ಲೆವು?
2 ರಾಜ್ಯದ ಸಂದೇಶವನ್ನು ಸಾರುವುದು, ನಮಗೆ ಲೋಕದ ಅನುಗ್ರಹವನ್ನು ತರುವುದಿಲ್ಲ. ಅನೇಕರು ನಮ್ಮ ಕೆಲಸವನ್ನು ಉದಾಸೀನತೆ ಅಥವಾ ಉಪೇಕ್ಷೆಯಿಂದ ವೀಕ್ಷಿಸುತ್ತಾರೆ. ಇತರರು ಅಪಹಾಸ್ಯ ಮಾಡುತ್ತಾರೆ ಮತ್ತು ಅದನ್ನು ವಿರೋಧಿಸುತ್ತಾರೆ. ಅಂತಹ ವಿರೋಧವು ಜೊತೆಕೆಲಸಗಾರರಿಂದ, ನೆರೆಯವರಿಂದ, ಅಥವಾ ಕುಟುಂಬದ ಸದಸ್ಯರಿಂದಲೂ ಬರಬಲ್ಲದು. ಅವರ ದೃಷ್ಟಿಯಲ್ಲಿ ನಾವು ತಪ್ಪುದಾರಿಗೆ ಎಳೆಯಲ್ಪಟ್ಟವರಾಗಿಯೂ ಮೂರ್ಖರಾಗಿಯೂ ತೋರಬಹುದು. (ಯೋಹಾನ 15:19; 1 ಕೊರಿಂ. 1:18, 21; 2 ತಿಮೊ. 3:12) ಅವರ ಎದೆಗುಂದಿಸುವ ಹೇಳಿಕೆಗಳು, ನಮ್ಮ ಹುರುಪನ್ನು ಕುಂದಿಸಲು ಮತ್ತು ನಾವು ನಿಧಾನರಾಗುವಂತೆ ಅಥವಾ ನಮ್ಮ ಗೌರವಿತವಾದ ಸುಯೋಗವನ್ನು ತ್ಯಜಿಸುವಂತೆ ಮಾಡಲು ರಚಿಸಲ್ಪಟ್ಟಿವೆ. “ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು . . . ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿ” ರುವ ಸೈತಾನನಿಂದ ನಕಾರಾತ್ಮಕ ದೃಷ್ಟಿಕೋನಗಳು ಪ್ರವರ್ಧಿಸಲ್ಪಡುತ್ತವೆ. (2 ಕೊರಿಂ. 4:4) ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
3 ರಾಜ್ಯದ ಕುರಿತಾದ ನಮ್ಮ ಸಾರುವಿಕೆಯು, ಇಂದು ನಮ್ಮಲ್ಲಿ ಯಾರಾದರೂ ಮಾಡುತ್ತಿರಬಹುದಾದ ಕೆಲಸಗಳಲ್ಲಿ ಅತ್ಯಂತ ಪ್ರಮುಖ ಕೆಲಸವಾಗಿದೆ ಎಂಬುದನ್ನು ಮನಸ್ಸಿನಲ್ಲಿಡುವುದು ಪ್ರಾಮುಖ್ಯವಾಗಿದೆ. ಬೇರೆ ಯಾವುದೇ ವಿಧಾನದ ಮುಖಾಂತರ ಲಭ್ಯವಾಗದಂತಹ, ಜೀವವನ್ನು ರಕ್ಷಿಸುವ ಸಂದೇಶವು ನಮ್ಮಲ್ಲಿದೆ. (ರೋಮಾ. 10:13-15) ಮನುಷ್ಯನದ್ದಲ್ಲ, ದೇವರ ಮೆಚ್ಚಿಗೆಯನ್ನು ಪಡೆದಿರುವುದು ಮಹತ್ವವುಳ್ಳ ವಿಷಯವಾಗಿದೆ. ನಮ್ಮ ಸಾರುವ ಚಟುವಟಿಕೆಯ ಕುರಿತು ಲೋಕದ ನಕಾರಾತ್ಮಕ ವೀಕ್ಷಣೆಯು, ಸುವಾರ್ತೆಯನ್ನು ಧೈರ್ಯವಾಗಿ ಘೋಷಿಸುವುದರಿಂದ ನಮ್ಮನ್ನು ತಡೆಗಟ್ಟುವುದಿಲ್ಲ.—ಅ. ಕೃ. 4:29.
4 ಯೇಸು ತನ್ನ ತಂದೆಯ ಚಿತ್ತವನ್ನು ಮಾಡುವ ಸುಯೋಗವನ್ನು ಬಹಳ ಗೌರವದಿಂದ ಕಂಡನು. (ಯೋಹಾನ 4:34) ಅವನು ತನ್ನನ್ನು ಸಂಪೂರ್ಣವಾಗಿ ಶುಶ್ರೂಷೆಗೆ ಅರ್ಪಿಸಿಕೊಂಡನು ಮತ್ತು ಅಪಕರ್ಷಣೆಗಳಾಗಲಿ ಅಥವಾ ವಿರೋಧಿಗಳಾಗಲಿ ತನ್ನನ್ನು ನಿಧಾನಗೊಳಿಸುವಂತೆ ಅವನು ಅನುಮತಿಸಲಿಲ್ಲ. ರಾಜ್ಯದ ಸಂದೇಶವನ್ನು ಸಾರುವುದು ಅವನ ಜೀವಿತದಲ್ಲಿ ಯಾವಾಗಲೂ ಪ್ರಥಮ ಸ್ಥಾನವನ್ನು ತೆಗೆದುಕೊಂಡಿತು. (ಲೂಕ 4:43) ಅವನ ಮಾದರಿಯನ್ನು ಅನುಕರಿಸುವಂತೆ ನಾವು ಆಜ್ಞಾಪಿಸಲ್ಪಡುತ್ತೇವೆ. (1 ಪೇತ್ರ 2:21) ಹಾಗೆ ಮಾಡುವಲ್ಲಿ, ನಾವು “ದೇವರ ಜೊತೆಕೆಲಸದವ” ರೋಪಾದಿ ಸೇವಿಸುತ್ತೇವೆ. (1 ಕೊರಿಂ. 3:9) ಈ ಸುಯೋಗದ ಪೂರ್ಣ ಪ್ರಯೋಜನವನ್ನು ನಾವು ತೆಗೆದುಕೊಳ್ಳುತ್ತಿದ್ದೇವೊ? ಇತರರೊಂದಿಗೆ ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ, ಎರಡೂ ವಿಧಗಳಲ್ಲಿಯೂ ಸುವಾರ್ತೆಯನ್ನು ಹಂಚಿಕೊಳ್ಳಲು ನಾವು ಸಂದರ್ಭಗಳನ್ನು ಹುಡುಕುತ್ತೇವೊ? ಯೆಹೋವನ ಸಾಕ್ಷಿಗಳೋಪಾದಿ, “ಆತನ ನಾಮಕ್ಕೆ ಸಾರ್ವಜನಿಕ ಘೋಷಣೆಯನ್ನು ಮಾಡಲು” ನಾವು ಯಾವಾಗಲೂ ಸಿದ್ಧರಾಗಿರತಕ್ಕದ್ದು.—ಇಬ್ರಿ. 13:15, NW.
5 ಶುಶ್ರೂಷೆಯಲ್ಲಿನ ನಮ್ಮ ಪಾಲು, ಬಹುಮಟ್ಟಿಗೆ ನಮ್ಮ ಮನೋಭಾವದ ಮೂಲಕ ನಿರ್ಧರಿಸಲ್ಪಡುತ್ತದೆ. ಯೆಹೋವನು ನಮಗಾಗಿ ಮಾಡಿರುವ ಎಲ್ಲವನ್ನು ನಾವು ಆಳವಾಗಿ ಗಣ್ಯಮಾಡುತ್ತೇವೊ? ಆತನ ಸೇವೆಯಲ್ಲಿ ನಮ್ಮಿಂದ ಸಾಧ್ಯವಾಗುವ ಎಲ್ಲವನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುವಂತಹ, ಯೆಹೋವನಿಗಾಗಿರುವ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ನಾವು ವಿಕಸಿಸಿಕೊಂಡಿದ್ದೇವೊ? ನಾವು ಈಗ ಅನುಭವಿಸುವ ಅಷ್ಟೇ ಅಲ್ಲದೆ ಭವಿಷ್ಯತ್ತಿಗಾಗಿ ಯೆಹೋವನು ವಾಗ್ದಾನಿಸಿರುವ ಆಶೀರ್ವಾದಗಳ ಕುರಿತು ಮನನ ಮಾಡುವುದು, ನಮ್ಮ ಸೃಷ್ಟಿಕರ್ತನಿಗಾಗಿ ಪ್ರೀತಿಯಿಂದ ತುಂಬಿರುವಂತೆ ನಮಗೆ ಸಹಾಯ ಮಾಡುತ್ತದೆ. ಅಂತಹ ಪ್ರೀತಿಯು ನಮ್ಮನ್ನು ಕ್ರಿಯೆಗೈಯುವಂತೆ, ನಮ್ಮ ಪರಿಸ್ಥಿತಿಗಳು ಅನುಮತಿಸುವ ಮಟ್ಟಿಗೆ ರಾಜ್ಯ ಸಾರುವಿಕೆಯ ಕೆಲಸದಲ್ಲಿ ಛಲ ಮತ್ತು ಕ್ರಮಬದ್ಧತೆಯನ್ನು ತೋರಿಸುವಂತೆ ಪ್ರಚೋದಿಸುತ್ತದೆ. ನಮ್ಮ ಹುರುಪು ಯೆಹೋವನಿಗಾಗಿ ಮತ್ತು ನಮ್ಮ ನೆರೆಯವನಿಗಾಗಿರುವ ನಮ್ಮ ಪ್ರೀತಿಯ ಪ್ರಮಾಣವನ್ನು ನೀಡುವುದು.—ಮಾರ್ಕ 12:30, 31.
6 ಯಾವುದಾದರೊಂದು ವಿಷಯದೊಂದಿಗೆ ನಾವು ಏನನ್ನು ಮಾಡುತ್ತೇವೊ ಮತ್ತು ಅದರ ಕುರಿತು ಏನನ್ನು ಹೇಳುತ್ತೇವೊ, ಅದರಿಂದ ನಾವು ಅದನ್ನು ಎಷ್ಟು ಹೆಚ್ಚಾಗಿ ಮೌಲ್ಯದ್ದೆಂದೆಣಿಸುತ್ತೇವೆಂದು ತೋರಿಸುತ್ತೇವೆ. ರಾಜ್ಯದ ಕುರಿತು ಸಾರುವ ನಮ್ಮ ಸುಯೋಗವನ್ನು ನಾವು ನಿಜವಾಗಿಯೂ ಮೌಲ್ಯವುಳ್ಳದ್ದೆಂದೆಣಿಸುತ್ತೇವೊ? ನಮ್ಮ ಶುಶ್ರೂಷೆಯನ್ನು ನಾವು ಮಹಿಮೆಪಡಿಸುತ್ತೇವೊ? ವಿರೋಧದ ಹೊರತೂ ಈ ಪ್ರಮುಖ ಕೆಲಸದಲ್ಲಿ ಪಟ್ಟುಹಿಡಿದಿರಲು ನಾವು ನಿಶ್ಚಯಿಸಿಕೊಂಡಿದ್ದೇವೊ? ಈ ಅದ್ಭುತಕರ ಸುಯೋಗವನ್ನು ನಾವು ಹೆಚ್ಚಾಗಿ ಗೌರವಿಸುವುದಾದರೆ, ನಾವು ಖಂಡಿತವಾಗಿಯೂ ಹುರುಪುಳ್ಳವರು ಮತ್ತು ಮನಃಪೂರ್ವಕರು ಆಗಿರುವೆವು.—2 ಕೊರಿಂ. 4:1, 7.