ರಾಜ್ಯದ ವಾಕ್ಯ—ಅದರ ಅರ್ಥವನ್ನು ಗ್ರಹಿಸುವುದು
1 ಬೀಜ ಬಿತ್ತುವವನ ದೃಷ್ಟಾಂತದಲ್ಲಿ, “ಒಳ್ಳೆಯ ನೆಲದ” ಮೇಲೆ ಬೀಳುವ ಬೀಜವು “ವಾಕ್ಯವನ್ನು ಕೇಳಿ ಅದರ ಅರ್ಥವನ್ನು ಗ್ರಹಿಸುವವನನ್ನು” ಚಿತ್ರಿಸಿತು ಎಂದು ಯೇಸು ಹೇಳಿದನು. (ಮತ್ತಾ. 13:23, NW) ರಾಜ್ಯದ ಕುರಿತು ಕೇಳಿಯಾದ ಮೇಲೆ, “ಅದರ ಅರ್ಥ” ನಮಗಾಗಿದೆಯೊ? ನಮ್ಮ ಜೀವಿತಗಳನ್ನು ಅದು ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ? ಸಂದೇಶದ ಅರ್ಥ ನಮಗಾಗಿದೆ ಎಂಬುದನ್ನು ಪ್ರಕಟಿಸುತ್ತಾ, ಹೀಗೆ ರಾಜ್ಯದ ಅಭಿರುಚಿಗಳನ್ನು ನಾವು ಪ್ರಥಮ ಸ್ಥಾನದಲ್ಲಿ ಇಟ್ಟಿದ್ದೇವೊ?
2 ರಾಜ್ಯದ ಸಂದೇಶದ ಸರಿಯಾದ ತಿಳಿವಳಿಕೆಯು ವೈಯಕ್ತಿಕ ಅಧ್ಯಯನವನ್ನು ಕೇಳಿಕೊಳ್ಳುತ್ತದೆ. ಒದಗಿಸಲ್ಪಡುವ ಆತ್ಮಿಕ ಆಹಾರದ ಕುರಿತು ಮನನ ಮಾಡಲು ಸಮಯವನ್ನು ಬದಿಗಿಡುವ ಅಗತ್ಯ ನಮಗಿದೆ. ಕಾವಲಿನಬುರುಜು ಪತ್ರಿಕೆಯ ಆತುರದ ಓದುವಿಕೆಯು, ರುಚಿಕರ ಹಾಗೂ ಪುಷ್ಟಿದಾಯಕವಾದೊಂದು ಊಟವನ್ನು ನುಂಗುವಂತಿದೆ. ಆತ್ಮಿಕ ಆಹಾರಕ್ಕೆ ಪೂರ್ತಿಯಾದ ಪರಿಗಣನೆಯನ್ನು ನೀಡಲು ನೀವು ಸಮಯವನ್ನು ತೆಗೆದುಕೊಳ್ಳುತ್ತೀರೊ? ಅತಿ ಹೆಚ್ಚಿನ ಪ್ರಯೋಜನವನ್ನು ಪಡೆಯಲು, ಒಂದು ಪ್ರೇರಕವು ಹಾಗೂ ಆರೋಗ್ಯಕರವಾದ ಆತ್ಮಿಕ ಹಸಿವು ಇರಬೇಕು. ಇವು ಇಲ್ಲದಿದ್ದರೆ, ಇತರ ಚಟುವಟಿಕೆಗಳು ವೈಯಕ್ತಿಕ ಅಧ್ಯಯನದ ಪ್ರಯೋಜನಗಳನ್ನು ಕಡಿಮೆಗೊಳಿಸಬಲ್ಲವು ಅಥವಾ ಅದಕ್ಕಾಗಿ ನಮಗೆ ಬೇಕಾಗುವ ಸಮಯವನ್ನು ವ್ಯಯಮಾಡಬಲ್ಲವು. ಒಳ್ಳೆಯ ಅಧ್ಯಯನದ ವೇಳಾಪಟ್ಟಿಗೆ ಅಂಟಿಕೊಳ್ಳುವುದು ಸುಲಭವಲ್ಲ. ಆದ್ಯತೆಗಳ ಜಾಗರೂಕವಾದ ಸರಿದೂಗುವಿಕೆಯನ್ನು ಅದು ಕೇಳಿಕೊಳ್ಳುತ್ತದಾದರೂ, ಸಿಗುವಂತಹ ಆತ್ಮಿಕ ಐಶ್ವರ್ಯವು ಅಮೂಲ್ಯವಾದದ್ದು.—ಜ್ಞಾನೋ. 3:13-18; ಕೊಲೊ. 1:27.
3 ಶಾಸ್ತ್ರವಚನಗಳನ್ನು ಪರೀಕ್ಷಿಸುವುದು ಪ್ರತಿದಿನ ರಾಜ್ಯದ ಕುರಿತು ಸಕಾರಾತ್ಮಕ, ಆತ್ಮೋನ್ನತಿ ಮಾಡುವ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಯಾರು “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವ” ರಾಗಿದ್ದಾರೊ, ಅವರು ದೈನಿಕ ವಚನವನ್ನು ಮತ್ತು ಹೇಳಿಕೆಗಳನ್ನು ಓದಲು ಪ್ರತಿ ದಿನ ಕೆಲವೊಂದು ನಿಮಿಷಗಳನ್ನು ಬದಿಗಿಡಲು ಯೋಜಿಸುತ್ತಾರೆ. (ಮತ್ತಾ. 5:3, NW) ಅನೇಕ ವಚನಗಳು ರಾಜ್ಯದ ವಿಭಿನ್ನ ವಿಷಯಾಂಶಗಳನ್ನು ವಿವರಿಸುತ್ತವೆ. ಉದಾಹರಣೆಗೆ, 1994 ನವಂಬರ 22 ರಂದು, ಪ್ರದರ್ಶಿಸಲ್ಪಟ್ಟ ವಚನವು ಮತ್ತಾಯ 13:4 ಆಗಿತ್ತು. ಹೇಳಿಕೆಯು ರಾಜ್ಯದ ನಿರೀಕ್ಷೆಯನ್ನು ಪರಿಗಣಿಸಿತು ಮತ್ತು ಸಂಬಂಧಿಕರೊಂದಿಗೆ ಮತ್ತು ನೆರೆಯವರೊಂದಿಗೆ ಹಿತಕರವಲ್ಲದ ಸಹವಾಸದ ಅಪಾಯಗಳ ಕುರಿತು ನಮಗೆ ಜ್ಞಾಪಕ ಹುಟ್ಟಿಸಿತು. ಲೋಕದ ಸುತ್ತಲೂ ಬೆತೆಲ್ ಗೃಹಗಳಲ್ಲಿ, ಪ್ರತಿ ಕೆಲಸದ ದಿನದ ಬೆಳಗ್ಗೆ ದೈನಿಕ ವಚನದ 15 ನಿಮಿಷದ ಚರ್ಚೆಯಿರುತ್ತದೆ ಎಂಬ ಸಂಗತಿಯು, ಒಟ್ಟಿಗೆ ದಿನದ ವಚನವನ್ನು ಪರಿಗಣಿಸುವುದರ ಪ್ರಯೋಜನಗಳನ್ನು ಮತ್ತು ಮಹತ್ವವನ್ನು ಒತ್ತಿಹೇಳುತ್ತದೆ. ತದ್ರೀತಿಯ ಪರಿಗಣನೆಯನ್ನು ನಿಮ್ಮ ಕುಟುಂಬವು ನಿಮ್ಮ ದೈನಿಕ ದಿನಚರಿಯಲ್ಲಿ ಒಳಗೂಡಿಸುತ್ತದೊ?
4 ರಾಜ್ಯಕ್ಕಾಗಿ ಗಣ್ಯತೆಯಲ್ಲಿ ನೀವು ಬೆಳೆಯುವಾಗ, ಇತರರೊಂದಿಗೆ ರಾಜ್ಯದ ಸಂದೇಶವನ್ನು ಹಂಚಿಕೊಳ್ಳಲು ಒಂದು ಹೆಚ್ಚಿನ ಪ್ರೇರಕವು ಇರುವುದು. ನಮ್ಮ ಮನಸ್ಸುಗಳಿಗೆ ನವೀನ, ಸದ್ಯೋಚಿತವಾದ ಮಾಹಿತಿಯನ್ನು ನೀಡುವ ಮಾನಸಿಕ ಇಂಧನಕ್ಕೆ ಹೋಲಿಸಬಹುದಾದ ವಿಷಯವನ್ನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಒದಗಿಸುತ್ತವೆ. ಲೋಕಕ್ಕೆ ಎಷ್ಟರ ಮಟ್ಟಿಗೆ ದೇವರ ರಾಜ್ಯದ ಅಗತ್ಯವಿದೆ ಎಂಬುದರ ಕುರಿತು ಆಳವಾದ ಅರಿವನ್ನು ಕಾಪಾಡಿಕೊಳ್ಳುವಂತೆ ನಮಗೆ ಅವು ಸಹಾಯ ಮಾಡುತ್ತವೆ. ‘ಕ್ರಿಸ್ತನ ಮನಸ್ಸಿರುವ’ ಆತ್ಮಿಕ ವ್ಯಕ್ತಿಗಳಾಗಿರುವಂತೆ ನಮಗೆ ಅವು ಸಹಾಯ ಮಾಡುತ್ತವೆ. (1 ಕೊರಿಂ. 2:15, 16) ಇದೆಲ್ಲವು ನಮ್ಮ ನಿರೀಕ್ಷೆಯನ್ನು ಬಲಪಡಿಸಬಲ್ಲದು ಮತ್ತು ಇತರರೊಂದಿಗೆ ರಾಜ್ಯದ ನಿರೀಕ್ಷೆಯನ್ನು ಹಂಚಿಕೊಳ್ಳಲಿಕ್ಕಿರುವ ನಮ್ಮ ಹುರುಪನ್ನು ಹೆಚ್ಚಿಸಬಲ್ಲದು.—1 ಪೇತ್ರ 3:15.
5 ರಾಜ್ಯ ಸಂದೇಶದ ಅರ್ಥವನ್ನು ನಾವು ವೈಯಕ್ತಿಕವಾಗಿ ಗ್ರಹಿಸುವುದು ಪ್ರಾಮುಖ್ಯವಾಗಿದೆ. ದೇವರು ತನ್ನ ಸಾರ್ವಭೌಮತೆಯನ್ನು ಎತ್ತಿಹಿಡಿಯಲು, ದುಷ್ಟತನವನ್ನು ಕೊನೆಗೊಳಿಸಲು, ಮತ್ತು ಒಂದು ಹೊಸ ಲೋಕವನ್ನು, ಒಂದು ಪ್ರಮೋದವನವನ್ನು ತರಲು ಬಳಸುವ ಮಾಧ್ಯಮವು ರಾಜ್ಯವಾಗಿದೆ. ನಮ್ಮ ಜೀವಿತಗಳಲ್ಲಿ ಅದನ್ನು ಪ್ರಥಮವಾಗಿಡುವಂತೆ ಯೇಸು ಆಜ್ಞಾಪಿಸಿದನು. ಅದರ ಆಳಿಕೆಯ ಕೆಳಗೆ ಜೀವಿಸಲು ನಾವು ಕುರಿಗಳಂಥ ಪ್ರಜೆಗಳಾಗಿರಬೇಕು. (ಮತ್ತಾ. 6:10, 33) ಅದರ ಆಶೀರ್ವಾದಗಳನ್ನು ಅನುಭವಿಸಲು ನಿಮ್ಮ ಅವಕಾಶದ ಪೂರ್ಣ ಲಾಭ ಪಡೆಯಿರಿ.