ಫೆಬ್ರವರಿಗಾಗಿ ಸೇವಾ ಕೂಟಗಳು
ಫೆಬ್ರವರಿ 6ರ ವಾರ
ಸಂಗೀತ 73 (71)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. ಇತ್ತೀಚಿನ ಪ್ರತಿಕೆಗಳಲ್ಲಿರುವ ಲೇಖನಗಳನ್ನು ಹೇಗೆ ಮನೆ ಮನೆಯ ಕೆಲಸದಲ್ಲಿ ಪ್ರದರ್ಶಿಸಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
17 ನಿ: “ಸಾರುವಿಕೆ—ಗೌರವಿತವಾದೊಂದು ಸುಯೋಗ.” ಪ್ರಶ್ನೋತ್ತರಗಳು. ಜುಲೈ 15, 1990ರ ವಾಚ್ಟವರ್, ಪುಟ 19, ಪ್ಯಾರಗ್ರಾಫ್ 13-16ರ ಮೇಲೆ ಆಧರಿಸಿ, ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ.
18 ನಿ: “ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು.” ಸ್ಕೂಲ್ ಗೈಡ್ಬುಕ್, ಪುಟಗಳು 46-7, ಪ್ಯಾರಗ್ರಾಫ್ 9-12 ರಲ್ಲಿರುವ ಹೇಳಿಕೆಗಳನ್ನು ಸೇರಿಸಿ, ಸಭಿಕರೊಂದಿಗೆ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. ನಿಮ್ಮ ಟೆರಿಟೊರಿಯಲ್ಲಿ ಯಾವ ರೀತಿಯ ಪೀಠಿಕೆ ಪರಿಣಾಮಕಾರಿಯಾಗಿರಬಹುದು ಎಂಬುದನ್ನು ಚರ್ಚಿಸಿರಿ. ಒಂದು ಯಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 82 (26) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 13ರ ವಾರ
ಸಂಗೀತ 103 (87)
5 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಪಡೆದಿರಬಹುದಾದ ದಾನಗಳ ಕುರಿತ ಸೊಸೈಟಿಯ ಅಂಗೀಕಾರ ಪತ್ರಗಳ ಬಗ್ಗೆ ಹೇಳಿರಿ.
10 ನಿ: ಸ್ಥಳಿಕ ಅಗತ್ಯಗಳು. ಅಥವಾ ಅಕ್ಟೋಬರ 8, 1994ರ ಎಚ್ಚರ!, ಪುಟಗಳು 17-19 ರಲ್ಲಿರುವ “ದೇವರ ಕುರಿತು ಏಕೆ ಮಾತಾಡಬೇಕು?” ಎಂಬ ಲೇಖನದ ಮೇಲೆ ಒಂದು ಭಾಷಣ.
15 ನಿ: “ರಾಜ್ಯದ ವಾಕ್ಯ—ಅದರ ಅರ್ಥವನ್ನು ಗ್ರಹಿಸುವುದು.” ಪ್ರಶ್ನೋತ್ತರಗಳು. ತಮ್ಮ ವೈಯಕ್ತಿಕ ಅಧ್ಯಯನವನ್ನು ಅಥವಾ ದೈನಿಕ ವಚನದ ವಿಮರ್ಶೆಯನ್ನು ಮಾಡಲು, ಅವರು ಹೇಗೆ ಮತ್ತು ಯಾವಾಗ ಏರ್ಪಡಿಸುತ್ತಾರೆಂದು ಇಬ್ಬರು ಯಾ ಮೂವರು ವ್ಯಕ್ತಿಗಳು ಹೇಳಲಿ.
15 ನಿ: “ಇತರರಿಗಾಗಿ ಪರಿಗಣನೆಯನ್ನು ತೋರಿಸಿರಿ—ಭಾಗ 2.” ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕಾದ ಭಾಷಣ ಮತ್ತು ಚರ್ಚೆ. ಸ್ಥಳಿಕವಾಗಿ ಗಮನಿಸಲ್ಪಟ್ಟಿರುವ ಯಾವುದೇ ಸಮಸ್ಯೆಗಳನ್ನು ಸೂಚಿಸಿಹೇಳಿರಿ, ಮತ್ತು ಸೂಕ್ತವಾದ ಬುದ್ಧಿವಾದವನ್ನು ನೀಡಿರಿ.
ಸಂಗೀತ 109 (119) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 20ರ ವಾರ
ಸಂಗೀತ 134 (33)
12 ನಿ: ಸ್ಥಳಿಕ ತಿಳಿಸುವಿಕೆಗಳು. ಸ್ಥಳಿಕ ಟೆರಿಟೊರಿಗೆ ಸೂಕ್ತವಾಗಿರುವ ಪ್ರಚಲಿತ ಪತ್ರಿಕೆಗಳಲ್ಲಿನ ಲೇಖನಗಳನ್ನು ಸೂಚಿಸಿ ಹೇಳಿರಿ. ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: “ಯೆಹೋವನನ್ನು ಆರಿಸುವಂತೆ ನೀವು ನಿಮ್ಮ ಮಗುವಿಗೆ ಸಹಾಯ ಮಾಡುತ್ತಿದ್ದೀರೊ?” ಹಿರಿಯನಿಂದ ಭಾಷಣ. ಆದರ್ಶಪ್ರಾಯ ಮಕ್ಕಳಿರುವ ಒಬ್ಬ ಹಿರಿಯನು ಹೆಚ್ಚು ಅರ್ಹನು. ಅದು ಅಕ್ಟೋಬರ 1, 1994ರ ಕಾವಲಿನಬುರುಜು (ಪಾಕ್ಷಿಕ ಮುದ್ರಣಗಳು) ವಿನ ಪುಟಗಳು 26-30 ರಲ್ಲಿರುವ ಲೇಖನದ ಮೇಲೆ ಆಧರಿತವಾಗಿದೆ.
18 ನಿ: “ನೀವು ಕಂಡುಕೊಂಡಂಥ ಆಸಕ್ತಿಯನ್ನು ಪುನಃ ಸಂಪರ್ಕಿಸಿರಿ.” ಸಭಿಕರೊಂದಿಗೆ ಚರ್ಚಿಸಿರಿ. ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪಡೆದುದಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸುವ ಹೇಳಿಕೆಗಳನ್ನು ತಿಳಿಸಿರಿ. (ಇಂಗ್ಲಿಷ್ನಲ್ಲಿ ಕಾವಲಿನಬುರುಜು ಪತ್ರಿಕೆಗಳ ಜುಲೈ 15, 1991 ಮತ್ತು ದಶಂಬರ 1, 1991ರ ಪುಟ 32ನ್ನು ನೋಡಿರಿ.) ಸೂಚಿಸಲ್ಪಟ್ಟ ನಿರೂಪಣೆಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸುತ್ತಾ, ಒಂದು ಯಾ ಎರಡು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಆಸಕ್ತ ಜನರೊಂದಿಗೆ ಅಧ್ಯಯನಗಳನ್ನು ಆರಂಭಿಸಲು ಪ್ರಯತ್ನಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
ಸಂಗೀತ 147 (82) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 27ರ ವಾರ
ಸಂಗೀತ 184 (36)
15 ನಿ: ಸ್ಥಳಿಕ ತಿಳಿಸುವಿಕೆಗಳು. “ಪರಿಷ್ಕೃತ ಸಾರ್ವಜನಿಕ ಭಾಷಣಗಳಿಂದ ಪ್ರಯೋಜನ ಪಡೆಯುವುದು” ಎಂಬ ವಿಷಯವನ್ನು ಚರ್ಚಿಸಿರಿ.
15 ನಿ: “ಅದು ಯಾರ ದೋಷ?” ಹಿರಿಯನಿಂದ ಫೆಬ್ರವರಿ 1, 1994ರ ಕಾವಲಿನಬುರುಜು ಪುಟಗಳು 26-29 ರಲ್ಲಿ ಕಾಣಿಸಿಕೊಳ್ಳುವ ಲೇಖನದ ಮೇಲೆ ಆಧರಿತ ಭಾಷಣ. ಪ್ರಾಯೋಗಿಕ ಅನ್ವಯವನ್ನು ಮಾಡಿರಿ.
15 ನಿ: ಮಾರ್ಚ್ ತಿಂಗಳಿನಲ್ಲಿ ಯುವ ಜನರು ಕೇಳುವ ಪ್ರಶ್ನೆಗಳು (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕವನ್ನು ನೀಡುವುದು. ಅದನ್ನು ನೀಡುವುದರ ಕುರಿತು ಉತ್ಸಾಹಿಗಳಾಗಿರುವಂತೆ ಎಲ್ಲರನ್ನು ಉತ್ತೇಜಿಸಿರಿ. ಪುಟಗಳು 5-7 ರಲ್ಲಿರುವ ಮುನ್ನುಡಿಯಲ್ಲಿ ವಿವರಿಸಲಾದಂತೆ, ಅದರ ಪ್ರಕಾಶನಕ್ಕಾಗಿರುವ ಕಾರಣಗಳನ್ನು ವಿಮರ್ಶಿಸಿರಿ. ಪುಸ್ತಕಕ್ಕಾಗಿ ಗಣ್ಯತೆಯ ಅಭಿವ್ಯಕ್ತಿಗಳನ್ನು ತಿಳಿಸಿರಿ. (ಇಂಗ್ಲಿಷ್ನಲ್ಲಿರುವ ಕಾವಲಿನಬುರುಜು ಪತ್ರಿಕೆಗಳ ಫೆಬ್ರವರಿ 1, 1991, ಮಾರ್ಚ್ 1, 1991, ಮತ್ತು ನವಂಬರ 15, 1991ರ ಪುಟ 32ನ್ನು ನೋಡಿರಿ.) “ಇಂದಿನ ಸಮಸ್ಯೆಗಳೊಂದಿಗೆ ಯಶಸ್ವಿಕರವಾಗಿ ನಿಭಾಯಿಸುವಂತೆ ಯುವ ಜನರಿಗೆ ಸಹಾಯ ಮಾಡಲು ಏನನ್ನಾದರೂ ಮಾಡಸಾಧ್ಯವಿದೆ ಎಂದು ನೀವು ನೆನಸುತ್ತೀರೊ?” ಎಂಬ ಪ್ರಶ್ನೆಯೊಂದಿಗೆ ಆರಂಭಿಸುವ ನಿರೂಪಣೆಯನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ ಮತ್ತು ಪ್ರತ್ಯಕ್ಷಾಭಿನಯಿಸಿರಿ. (ಆ ಪ್ರಶ್ನೆಯನ್ನು ಉತ್ತರಿಸಿ, ಪುಸ್ತಕವನ್ನು ನೀಡುವುದು ಹೇಗೆ ಎಂಬ ಸೂಚನೆಗಳಿಗಾಗಿ ಮಾರ್ಚ್ 1994ರ ನಮ್ಮ ರಾಜ್ಯದ ಸೇವೆ, ಪುಟ 4ನ್ನು ನೋಡಿರಿ.) ಈ ವಾರಾಂತ್ಯ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಪ್ರತಿಗಳನ್ನು ತೆಗೆದುಕೊಳ್ಳುವಂತೆ ಎಲ್ಲರನ್ನು ಮರುಜ್ಞಾಪಿಸಿರಿ.
ಸಂಗೀತ 207 (112) ಮತ್ತು ಸಮಾಪ್ತಿಯ ಪ್ರಾರ್ಥನೆ.