ಪರಿಷ್ಕೃತ ಸಾರ್ವಜನಿಕ ಭಾಷಣಗಳಿಂದ ಪ್ರಯೋಜನ ಪಡೆಯುವುದು
1 ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸವು, ಜ್ಞಾನೋಕ್ತಿ 4:18ರ ಮಾತುಗಳಲ್ಲಿ ನಿಷ್ಕೃಷ್ಟವಾಗಿ ವರ್ಣಿಸಲಾಗಿದೆ: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.”
2 ಇದಕ್ಕೆ ಹೊಂದಿಕೆಯಾಗಿ, ಕ್ರೈಸ್ತ ಸಭೆಯು ಬೈಬಲ್ ಬೋಧನೆಗಳ ಸಮಯೋಚಿತ ಸ್ಪಷ್ಟತೆಯನ್ನು ಮತ್ತು ಅವುಗಳ ಸದ್ಯೋಚಿತ ಮಾಹಿತಿಯನ್ನು ಪಡೆಯುತ್ತಾ ಮುಂದುವರಿಯುತ್ತದೆ. (ಮತ್ತಾ. 24:45-47) ಬಹುಶಃ ನೀವು ಯೆಹೋವನ ಸಾಕ್ಷಿಗಳೊಂದಿಗೆ ಸೇರಿಬರಲು ತೊಡಗಿದ ಸಮಯದಿಂದ ಗಮನಿಸಿರುವ ಈ ವಿಷಯದ ಕುರಿತಾದ ಉದಾಹರಣೆಗಳನ್ನು ಹೇಳಬಲ್ಲಿರಿ. ಸಾರ್ವಜನಿಕ ಭಾಷಣಗಳನ್ನು ಸೇರಿಸಿ, ಸಭಾ ಕೂಟಗಳು, ಸತ್ಯದ ಹೆಚ್ಚಾಗುತ್ತಿರುವ ಬೆಳಕಿನೊಂದಿಗೆ ಸರಿಸಮಾನರಾಗಿರುವಂತೆ ನಮಗೆ ಸಹಾಯಮಾಡುತ್ತವೆ.
3 ಪರಿಷ್ಕೃತ ಹೊರಮೇರೆಗಳು: ಇತ್ತೀಚೆಗೆ, ಸೊಸೈಟಿಯು ಹಲವಾರು ಸಾರ್ವಜನಿಕ ಭಾಷಣಗಳ ಹೊರಮೇರೆಗಳನ್ನು ಸದ್ಯೋಚಿತಗೊಳಿಸಿದೆ. ನವೀನ ವಿಷಯವನ್ನು ಸೇರಿಸಲಾಗಿದೆ, ಮತ್ತು ಪ್ರಾಮುಖ್ಯ ಅಂಶಗಳನ್ನು ಸ್ಪಷ್ಟೀಕರಿಸಲಾಗಿದೆ. ಸಭೆಯು ಸದ್ಯೋಚಿತಗೊಳಿಸಲ್ಪಟ್ಟ ಈ ಮಾಹಿತಿಯ ಪೂರ್ಣ ಲಾಭವನ್ನು ಪಡೆಯಬೇಕಾದರೆ, ಸಾರ್ವಜನಿಕ ಭಾಷಣಗಳನ್ನು ನೀಡುವ ಸಹೋದರರು ತೀರ ಇತ್ತೀಚಿನ ಹೊರಮೇರೆಗಳನ್ನು ಮಾತ್ರ ಉಪಯೋಗಿಸತಕ್ಕದ್ದು.
4 ಸಾರ್ವಜನಿಕ ಭಾಷಣಗಳಿಂದ ಅತಿ ಹೆಚ್ಚು ಲಾಭವನ್ನು ಪಡೆಯುವ ಸಲುವಾಗಿ, ನೀಡಲ್ಪಡಲಿಕ್ಕಿರುವ ಭಾಷಣಗಳ ಶೀರ್ಷಿಕೆಗಳ ಕುರಿತು ಸ್ವಲ್ಪ ವಿಚಾರಮಾಡಿರಿ. ಸಾರ್ವಜನಿಕ ಕೂಟವನ್ನು ಹಾಜರಾಗುವ ಮೊದಲು, ವಿಷಯದ ಮೇಲೆ ದೇವಪ್ರಭುತ್ವ ಮೂಲಗಳಲ್ಲಿರುವ ಇತ್ತೀಚಿನ ಮಾಹಿತಿಯನ್ನು ಮರುಜ್ಞಾಪಿಸಲು ಪ್ರಯತ್ನಿಸಿರಿ. ತದನಂತರ, ಆಲಿಸುವಾಗ, ಈ ಮಾಹಿತಿಯ ವಿಕಸನವನ್ನು ಎದುರುನೋಡಿರಿ. ಭವಿಷ್ಯತ್ತಿನ ಉಪಯೋಗಕ್ಕಾಗಿ ಈ ಸತ್ಯಗಳನ್ನು ಸಾದರಪಡಿಸುವ ಯಾವುದೇ ನವೀನ ವಿಧಗಳ ಬಗ್ಗೆ ಗಮನಹರಿಸಿರಿ. ಪರಿಷ್ಕೃತ ಸಾರ್ವಜನಿಕ ಭಾಷಣಗಳಿಂದ ನೀವು ಅತಿ ಹೆಚ್ಚು ಲಾಭವನ್ನು ಪಡೆಯುವಿರೆಂದು ಇದು ಖಚಿತಪಡಿಸುವುದು.
5 ಸಾರ್ವಜನಿಕ ಭಾಷಣಗಳು ಕೇಳುಗರಿಗೆ ಬೋಧಪ್ರದವಾಗಿರಲೂಬೇಕು ಪ್ರಚೋದಿಸಲೂಬೇಕು: ಯೇಸು ಮಾತನಾಡಿದಾಗ, ತನ್ನ ಕೇಳುಗರ ಹೃದಯಗಳನ್ನು ಅವನು ಮುಟ್ಟಿದನು. ನೀಡಲ್ಪಟ್ಟಿರುವುವುಗಳಲ್ಲಿ ಅತ್ಯಂತ ಪ್ರಸಿದ್ಧ ಸಾರ್ವಜನಿಕ ಭಾಷಣವಾದ, ಯೇಸುವಿನ ಪರ್ವತ ಪ್ರಸಂಗದ ಸಮಾಪ್ತಿಯಲ್ಲಿ, ಮತ್ತಾಯ 7:28 ವರದಿಸುವಂತೆ: “ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.”
6 ಯೇಸುವಿನ ಮಾದರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಹೊಸ ಸಾರ್ವಜನಿಕ ಭಾಷಣಕಾರರಿಗೆ ಸಮ್ಮತಿಯನ್ನು ನೀಡುವುದರಲ್ಲಿ ಹಿರಿಯರ ಮಂಡಲಿಗಳು ವಿವೇಚನೆಯನ್ನು ಉಪಯೋಗಿಸತಕ್ಕದ್ದು. ಉತ್ತಮ ಶಿಕ್ಷಕರಾಗಿರುವ, ಸೊಸೈಟಿಯ ಹೊರಮೇರೆಗಳಿಗೆ ನಿಕಟವಾಗಿ ಅಂಟಿಕೊಳ್ಳುವ, ಮತ್ತು ಸಭಿಕರ ಗಮನವನ್ನು ಹಿಡಿದಿಡಲು ಶಕ್ತರಾಗಿರುವ ಸಹೋದರರನ್ನು ಮಾತ್ರ ನೇಮಿಸತಕ್ಕದ್ದು. ಸಾರ್ವಜನಿಕ ಭಾಷಣಗಳನ್ನು ಕೊಡುವ ಸುಯೋಗವಿರುವ ಸಹೋದರರು, ಹಿರಿಯರಿಂದ ಪಡೆಯುವ ಯಾವುದೇ ಸಲಹೆ ಮತ್ತು ಸೂಚನೆಗಳನ್ನು ಸ್ವೀಕರಿಸುತ್ತಾ, ತಮ್ಮ ಮಾತನಾಡುವ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸತತವಾಗಿ ಪ್ರಯಾಸಪಡತಕ್ಕದ್ದು.
7 ಯೆಶಾಯ 65:13, 14 ರಲ್ಲಿ ಮುಂತಿಳಿಸಲಾದಂತೆ, ದೇವರ ಜನರ ಆತ್ಮಿಕ ಏಳಿಗೆಯು ಹೆಚ್ಚು ಸ್ಪಷ್ಟವಾಗಿಗುತ್ತಾ ಮುಂದುವರಿಯುತ್ತದೆ. ಸಾರ್ವಜನಿಕ ಭಾಷಣಗಳಿಗಾಗಿರುವ ಏರ್ಪಾಡು, ನಾವು “ಯೆಹೋವನಿಂದ ಶಿಕ್ಷಿತ” ರಾಗುವ ಅನೇಕ ವಿಧಾನಗಳಲ್ಲಿ ಒಂದಾಗಿದೆ.—ಯೆಶಾ. 54:13, NW.