ಪ್ರಶ್ನಾ ಪೆಟ್ಟಿಗೆ
● ದೇವಪ್ರಭುತ್ವ ಶುಶ್ರೂಷೆ ಶಾಲೆಯಲ್ಲಿ ವಿದ್ಯಾರ್ಥಿಗಳು ಎಷ್ಟು ಬಾರಿ ಭಾಷಣ ನೇಮಕಗಳನ್ನು ಪಡೆಯಬೇಕು?
ದೇವಪ್ರಭುತ್ವ ಶುಶ್ರೂಷೆ ಶಾಲೆಯ ಮುಖ್ಯ ಉದ್ದೇಶಗಳಲ್ಲಿ ಒಂದು ಬಹಿರಂಗ ಭಾಷಕರಾಗಿ ವಿಕಸನಗೊಳ್ಳುವದಾಗಿದೆ. ಈ ಕಾರಣದಿಂದಾಗಿ ದೇವಪ್ರಭುತ್ವ ಶಾಲಾ ಶೆಡ್ಯೂಲ್, ಹೆಚ್ಚಿನ ಭಾಷಣಗಳನ್ನು ಸಹೋದರರಿಗೆ ನೇಮಿಸುವ ಒದಗಿಸುವಿಕೆಯನ್ನು ಮಾಡುತ್ತದೆ.
ಆದರೂ ಈ ಶಾಲೆಯ ಇನ್ನೊಂದು ಮಹತ್ವದ ಧ್ಯೇಯವು, ಯೆಹೋವನ ಜನರೆಲ್ಲರನ್ನು ಕ್ರೈಸ್ತ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿ ಸಾರುವ ಮತ್ತು ಕಲಿಸುವವರಾಗಿ ಮಾಡುವದಾಗಿದೆ. ಈ ಕಾರಣದಿಂದಾಗಿ ಸಹೋದರಿಯರು ಸಹಾ, ಈ ಶಾಲೆಯಲ್ಲಿ ಸೇರಿಕೊಳ್ಳುವದು ಯುಕ್ತವಾಗಿದೆ.
ಈ ಶಾಲೆಯಿಂದ ಪೂರ್ಣ ಪ್ರಯೋಜನ ಪಡೆಯಲಿಕ್ಕಾಗಿ, ಅದರಲ್ಲಿ ಸೇರಿದವರಿಗೆ ಕ್ರಮದ ವಿದ್ಯಾರ್ಥಿ ನೇಮಕಗಳು ದೊರಕಬೇಕು. ಒಬ್ಬ ವಿದ್ಯಾರ್ಥಿಗೆ ಪ್ರತಿ ಮೂರು ತಿಂಗಳಿಗೆ ಕಡಿಮೆಪಕ್ಷ ಒಂದಾದರೂ ನೇಮಕವು ಸಿಗುವಂತೆ ಸೂಚಿಸಲಾಗಿದೆ. ಸ್ಥಳೀಕ ಪರಿಸ್ಥಿತಿಗಳು ಅನುಮತಿಸಿದಲ್ಲಿ, ಸಹೋದರರಿಗೆ ಹೆಚ್ಚು ನೇಮಕಗಳನ್ನು ನೀಡಬಹುದು. ಉಪದೇಶ ಭಾಷಣ ಮತ್ತು ಬೈಬಲ್ ಹೈಲೈಟ್ಸ್‌ಗಳನ್ನು ಕ್ರಮವಾಗಿ ಕೊಡುವ ಹಿರಿಯರಿಗೆ ವಿದ್ಯಾರ್ಥಿ ಭಾಷಣಗಳನ್ನೂ ನೇಮಿಸಿ ಕೊಡುವ ಅಗತ್ಯವಿಲ್ಲ. ಸುಮಾರು ಅರ್ಧ ಶತಕದಿಂದ ಈ ದೇವಪ್ರಭುತ್ವ ಶಾಲೆಯು, ಮಿಲ್ಯಾಂತರ ಜನರಿಗೆ ಆತ್ಮಿಕ ಪ್ರಗತಿಯನ್ನು ಮಾಡಲು ಮತ್ತು ರಾಜ್ಯದ ಸಂದೇಶ ನೀಡುವುದರಲ್ಲಿ ತಮ್ಮನ್ನು ಒಳ್ಳೇದಾಗಿ ವ್ಯಕ್ತಪಡಿಸುವ ವಿಧಾನವನ್ನು ಕಲಿತುಕೊಳ್ಳಲು ಸಹಾಯ ಮಾಡಿದೆ. ಯೆಹೋವ ದೇವರ ಈ ಆಶ್ಚರ್ಯಕರ ಒದಗಿಸುವಿಕೆಯನ್ನು ಪೂರ್ಣವಾಗಿ ಉಪಯೋಗಿಸುವಂತೆ ಎಲ್ಲರನ್ನು ಪ್ರೋತ್ಸಾಹಿಸಲಾಗುತ್ತದೆ. “ಸತ್ಯ ವಾಕ್ಯವನ್ನು ಸರಿಯಾಗಿ ಉಪದೇಶಿಸುವುದರಲ್ಲಿ ನಾಚಿಕೆಪಡದ” ಕೆಲಸಗಾರರಾಗಿ, ದೇವರ ದೃಷ್ಟಿಯಲ್ಲಿ ಯೋಗ್ಯರಾಗಿ ಕಾಣಿಸಿಕೊಳ್ಳುವುದೇ ನಮ್ಮ ಗುರಿಯಾಗಿರತಕ್ಕದ್ದು.—2 ತಿಮೊ. 2:15.