ಸಮಯೋಚಿತವಾದ ರಾಜ್ಯ ವಾರ್ತೆಯು ಲೋಕವ್ಯಾಪಕವಾಗಿ ಹಂಚಲ್ಪಡುವುದು
1 ಆದಿತ್ಯವಾರ, ಎಪ್ರಿಲ್ 23 ರಂದು ಒಂದು ವಿಶೇಷ ಬಹಿರಂಗ ಭಾಷಣವು, “ಸುಳ್ಳು ಧರ್ಮದ ಅಂತ್ಯವು ಸಮೀಪವಿದೆ” ಎಂಬ ಗಮನಸೆಳೆಯುವ ವಿಷಯದ ಮೇಲೆ ನೀಡಲ್ಪಡುವುದು. ಆ ದಿನದ ಕೂಟದ ಅಂತ್ಯದಲ್ಲಿ, ನಾಲ್ಕು ಪುಟಗಳ ಒಂದು ವಿಚಾರ ಪ್ರೇರಕ ರಾಜ್ಯ ವಾರ್ತೆಯು ಬಿಡುಗಡೆಗೊಳಿಸಲ್ಪಡುವುದು. ಅದು ಒಳಗೂಡಿಸುವ ಸಮಯೋಚಿತ ಸಂದೇಶವನ್ನು, ಎಪ್ರಿಲ್ 24 ರಿಂದ ಮೇ 14ರ ವರೆಗಿನ ಮೂರು ವಾರಗಳ ಅವಧಿಯಲ್ಲಿ, ಲೋಕವ್ಯಾಪಕವಾಗಿ ಹಂಚಲಾಗುವುದು.
2 ಲೋಕದ ಎಲ್ಲಾ ಭಾಗಗಳಲ್ಲಿ, ಜನರು ಕಂಗೆಟ್ಟಿದ್ದಾರೆ. ಅವರು ಎಲ್ಲೇ ಜೀವಿಸುತ್ತಿರಲಿ, ಅವರು ಸಮಸ್ಯೆಗಳಿಂದ ಬಾಧಿಸಲ್ಪಟ್ಟಿದ್ದಾರೆ. ಏನು ಸಂಭವಿಸುತ್ತಿದೆ ಎಂಬದರ ಕುರಿತು ಪ್ರಾಮಾಣಿಕವಾಗಿ ಚಿಂತಿತರಾಗಿರುವವರಿಗೆ ರಾಜ್ಯ ವಾರ್ತೆಯು ನಿಜ ಆಸಕ್ತಿಯದ್ದಾಗಿರುವುದು ಯಾಕಂದರೆ ಅದು ಅವರನ್ನು ಮನುಷ್ಯನಿಗೆ ಮಾರ್ಗದರ್ಶನೆಯ ತಪ್ಪೇ ಆಗದ ಮೂಲವಾಗಿ, ದೇವರ ವಾಕ್ಯದ ಕಡೆಗೆ ನಿರ್ದೇಶಿಸುವುದು. (ಕೀರ್ತ. 119:105) ಎಪ್ರಿಲ್ 23 ರಂದು ಅದು ಬಿಡುಗಡೆಗೊಳಿಸಲ್ಪಟ್ಟಾಗ ನಾವೆಲ್ಲರು ಅದರ ಒಂದು ಪ್ರತಿಯನ್ನು ಪಡೆಯಲು ಮುನ್ನೋಡುತ್ತೇವೆ. ಅಷ್ಟರ ತನಕ, ಈ ಮೂರು ವಾರಗಳ ತೀವ್ರವಾದ ಕಾರ್ಯಾಚರಣೆಗಾಗಿ ತಯಾರಿಸುವುದರಲ್ಲಿ ಮಾಡಲು ಹೆಚ್ಚಿನದಿದ್ದೆ.
3 ಒಂದು ಹುರುಪುಳ್ಳ ಪಾಲನ್ನು ತೆಗೆದುಕೊಳ್ಳಲು ಎಲ್ಲರನ್ನು ಉತ್ತೇಜಿಸಿರಿ: ಈ ಕೆಲಸದಲ್ಲಿ ಯಾರು ಪಾಲು ತೆಗೆದುಕೊಳ್ಳಬಹುದು? ಖಂಡಿತವಾಗಿಯೂ ಈಗಾಗಲೇ ಪ್ರಚಾರಕರಾಗಿರುವ ಪ್ರತಿಯೊಬ್ಬರು ಅದನ್ನು ಮಾಡಲು ಆತುರರಾಗಿರುವರು! ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಬೈಬಲ್ ವಿದ್ಯಾರ್ಥಿಗಳ ಕುರಿತೇನು? ಕೆಲವರು ನಮ್ಮೊಂದಿಗೆ ತುಂಬಾ ಸಮಯದಿಂದ ಸಹವಸಿಸಿರುತ್ತಾರೆ ಮತ್ತು ಏಕಪ್ರಕಾರವಾಗಿ ಪ್ರಗತಿಯನ್ನು ಮಾಡುತ್ತಿದ್ದಾರೆ. ತಮ್ಮ ಜೀವಿತಗಳನ್ನು ಶಾಸ್ತ್ರೀಯ ಸೂತ್ರಗಳಿಗೆ ಹೊಂದಿಕೆಯಲ್ಲಿ ತಂದಿರುವುದಾದರೆ, ಅವರು ರಾಜ್ಯದ ಘೋಷಕರಾಗಿ ಪರಿಗಣಿಸಲ್ಪಡಲು ಅರ್ಹರಾಗಿದ್ದಾರೋ? ಬೈಬಲ್ ಅಭ್ಯಾಸವನ್ನು ನಡಿಸುತ್ತಿರುವ ಪ್ರಚಾರಕನು ಈ ವಿಷಯವನ್ನು ವಿದ್ಯಾರ್ಥಿಯೊಂದಿಗೆ ಚರ್ಚಿಸಬಹುದು, ಮತ್ತು ವಿದ್ಯಾರ್ಥಿಯು ಕ್ಷೇತ್ರ ಸೇವೆಯಲ್ಲಿ ಪಾಲಿಗನಾಗಲು ಅಪೇಕ್ಷಿಸುವುದಾದರೆ, ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ ಪುಟ 98 ಮತ್ತು 99 ರಲ್ಲಿರುವ ವಿಷಯವನ್ನು ಇಬ್ಬರು ಹಿರಿಯರು ಅವನೊಂದಿಗೆ ಪುನರ್ವಿಮರ್ಶಿಸುವರು. ಅಸ್ನಾನಿತ ಪ್ರಚಾರಕರಾಗಿ ಅರ್ಹರಾಗುವವರು ಕಾರ್ಯಾಚರಣೆಯಲ್ಲಿ ಒಂದು ಪೂರ್ಣ ಪಾಲನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಇದನ್ನು ಸಾಧ್ಯವಿದ್ದಷ್ಟು ಬೇಗನೇ ಮಾಡಬೇಕು. ಅಸ್ನಾನಿತ ಪ್ರಚಾರಕರಾಗಿ ಎಣಿಸಲ್ಪಡಲು ಇನ್ನೂ ಅರ್ಹರಾಗದಿರುವ ಬೈಬಲ್ ವಿದ್ಯಾರ್ಥಿಗಳು, ಈ ಸಮಯೋಚಿತವಾದ ರಾಜ್ಯ ವಾರ್ತೆ ಯನ್ನು ಪರಿಚಿತರೊಂದಿಗೆ ಅಥವಾ ಕುಟುಂಬ ಸದಸ್ಯರೊಂದಿಗೆ ಹಂಚಲು ಉತ್ತೇಜಿಸಲ್ಪಡಬಹುದು.—ನವಂಬರ 15, 1988ರ ದ ವಾಚ್ಟವನ ಪುಟ 17, ಪ್ಯಾರಗ್ರಾಫ್ 8ನ್ನು ನೋಡಿರಿ.
4 ಈ ಕೆಲಸವು ಕಷ್ಟಕರವಲ್ಲ; ಎಲ್ಲರೂ ಒಂದು ಪಾಲನ್ನು ಪಡೆಯಲು ಸಾಧ್ಯವಿದೆ. ವಾರದ ಕುಟುಂಬ ಬೈಬಲ್ ಅಭ್ಯಾಸದ ಭಾಗವಾಗಿ, ಹೆತ್ತವರು ರಾಜ್ಯ ವಾರ್ತೆ ಯೊಂದಿಗೆ ರೂಢಿಸುವ ಕಾಲಾವಧಿ (ಪ್ರ್ಯಾಕ್ಟೀಸ್ ಸೆಷನ್) ಗಳನ್ನು ಒಳಗೂಡಿಸಬಹುದು, ಹೀಗೆ ಕುಟುಂಬದ ಎಲ್ಲ ಸದಸ್ಯರು ಅದನ್ನು ಮನೆಯಿಂದ ಮನೆಗೆ ಪ್ರಸ್ತುತಪಡಿಸಲು ಚೆನ್ನಾಗಿ ತಯಾರುಗೊಳಿಸಲ್ಪಡುವರು. ಸಾಮಾನ್ಯವಾಗಿ ಒಂದು ಸರಳವಾದ ಸಾದರಪಡಿಸುವಿಕೆ ಅತ್ಯುತ್ತಮವಾಗಿದೆ. ಒಂದು ಸಂಕ್ಷಿಪ್ತ ಪೀಠಿಕೆಯ ನಂತರ, ರಾಜ್ಯ ವಾರ್ತೆ ಯನ್ನು ಮನೆಯವನಿಗೆ ನೀಡಿರಿ, ಮತ್ತು ಅದನ್ನು ಓದಲು ಅವನನ್ನು ಪ್ರೋತ್ಸಾಹಿಸಿರಿ. ಮನೆಯವನು ಆಸಕ್ತಿಯನ್ನು ತೋರಿಸಿದಾಗ, ಆಸಕ್ತಿಯನ್ನು ವಿಕಸಿಸಲಿಕ್ಕಾಗಿ ನೀವು ಹಿಂದಿರುಗಿ ಹೋಗಲು ಸಾಧ್ಯವಾಗುವಂತೆ, ಒಂದು ರೆಕಾರ್ಡನ್ನು ಮಾಡಿರಿ. (1 ಕೊರಿಂ. 3:6, 7) ಸಾಫಲ್ಯಕ್ಕೆ ಕೀಲಿಕೈಯು, ಒಂದು ಸರಳವಾದ, ಚೆನ್ನಾಗಿ ತಯಾರಿಸಲ್ಪಟ್ಟ ಸಾದರಪಡಿಸುವಿಕೆಯೇ ಆಗಿದೆ.
5 ಎಪ್ರಿಲ್ ಮತ್ತು ಮೇ ಯಲ್ಲಿ “ಮಾಡಲು ಬೇಕಾದಷ್ಟಿರು” ವುದು. ನಮ್ಮ ರಾಜ್ಯದ ಸೇವೆಯ ಮುಂದಿನ ತಿಂಗಳ ಸಂಚಿಕೆಯಲ್ಲಿ, “ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿದೆ” ಎಂಬ ನಾಮಾಂಕಿತ ಪುರವಣಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಕೊಡಲಾಗುವುದು.—1 ಕೊರಿಂ. 15:58, NW.