ಹೆಚ್ಚು ಕೊಡಲ್ಪಟ್ಟಿದೆ—ಹೆಚ್ಚು ಕೇಳಿಕೊಳ್ಳಲ್ಪಡುತ್ತದೆ
1 ಸತ್ಯವನ್ನು ಹೊಂದಿರುವದಕ್ಕಾಗಿ ನಾವೆಷ್ಟು ಅನುಗ್ರಹಿತರು! ಯೆಹೋವನಿಗೆ ನಮ್ಮ ಸಮರ್ಪಣೆಯ ಕಾರಣದಿಂದ, ‘ಸುವಾರ್ತೆಯು ನಮ್ಮ ವಶಕ್ಕೆ ಒಪ್ಪಿ’ಸಲ್ಪಟ್ಟಿದೆ. (1 ಥೆಸ. 2:4) ಇದು ನಮ್ಮನ್ನು ಹೆಚ್ಚು ಮಹತ್ತಾದ ಜವಾಬ್ದಾರಿಯ ಕೆಳಗೆ ಇರಿಸುತ್ತದೆ. ಯೇಸು ಅಂದದ್ದು: “ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು (ಕೇಳಲ್ಪಡುವುದು, NW).”—ಲೂಕ 12:48ಬಿ.
2 ಆ ಮಾತುಗಳು ಎಷ್ಟು ಸತ್ಯವಾಗಿವೆ! ನಾವೆಲ್ಲರು ದೇವರ ವಾಕ್ಯದ ಜ್ಞಾನ, ಸಹೋದರರ ಒಂದು ಅದ್ಭುತ ಸಹವಾಸ, ಮತ್ತು ಒಂದು ಆಶ್ಚರ್ಯಕರ ನಿರೀಕ್ಷೆಯೊಂದಿಗೆ ಆಶೀರ್ವದಿಸಲ್ಪಟ್ಟಿರುವದರಿಂದ, ನಮಗೆ ಹೆಚ್ಚು ಕೊಡಲ್ಪಟ್ಟಿದೆ ಎಂದು ಸತ್ಯವಾಗಿ ಹೇಳಲುಸಾಧ್ಯ. ನ್ಯಾಯಯುಕ್ತವಾಗಿ, ಮರಳಿ ನಮ್ಮಿಂದ ಹೆಚ್ಚು ಕೇಳಿಕೊಳ್ಳಲ್ಪಟ್ಟಿದೆ.
3 ಆವಶ್ಯಕತೆಗಳ ಕುರಿತಾದ ಯೋಗ್ಯ ನೋಟವನ್ನು ಕಾಪಾಡಿಕೊಳ್ಳಿರಿ: ಕೆಲವರು, ನಮ್ಮಿಂದ ಹೆಚ್ಚನ್ನು ನಿರೀಕ್ಷಿಸಲಾಗಿದೆಯೆಂಬ ಸಮಾಪ್ತಿಗೆ ಬಂದಿದ್ದಾರೆ. ಕ್ರೈಸ್ತ ಸಭೆಯ ತಲೆಯಾಗಿ, ಅದು ಯೋಗ್ಯವಾಗಿ ಕಾರ್ಯನಡಿಸಲಿಕ್ಕೆ “ಏನು ಬೇಕಾಗಿದೆಯೋ” ಅದನ್ನು ಯೇಸು ಕ್ರಿಸ್ತನು ನಿರ್ಧರಿಸುತ್ತಾನೆ. (ಎಫೆ. 4:15, 16, NW) ‘ತನ್ನ ನೊಗವು ಮೃದುವಾದದ್ದು ಮತ್ತು ತನ್ನ ಹೊರೆಯು ಹೌರವಾದದ್ದು’ ಎಂದು ಆತನು ನಮಗೆ ಆಶ್ವಾಸನೆ ನೀಡುತ್ತಾನೆ. (ಮತ್ತಾ. 11:28-30) ಮಿತಿಗಳಿರುವವರಿಗೆ ಅವನು ಪ್ರೀತಿಯಿಂದ ವಿನಾಯಿತಿಗಳನ್ನು ಮಾಡುತ್ತಾನೆ. (ಲೂಕ 21:1-4) ಮೊತ್ತವನ್ನು ಪರಿಗಣಿಸದೆ ನಾವು ನಮ್ಮ ಅತ್ಯುತ್ತಮವಾದದ್ದನ್ನು ಕೊಡುವುದಾದರೆ, ನಾವು ಆಶೀರ್ವದಿಸಲ್ಪಡುವೆವು.—ಕೊಲೊ. 3:23, 24.
4 ನಿಮ್ಮನ್ನೇ ಕೇಳಿಕೊಳ್ಳಿರಿ, ‘ನನ್ನ ಜೀವಿತದಲ್ಲಿ ರಾಜ್ಯ ಅಭಿರುಚಿಗಳು ಪ್ರಥಮವಾಗಿವೆಯೋ? ದೇವರ ನಾಮಕ್ಕೆ ಸ್ತುತಿ ಮತ್ತು ಇತರರಿಗೆ ಪ್ರಯೋಜನದಲ್ಲಿ ಫಲಿಸುವಂತಹ ರೀತಿಯಲ್ಲಿ ನಾನು ನನ್ನ ಸಮಯ ಮತ್ತು ನನ್ನ ಸಂಪನ್ಮೂಲಗಳನ್ನು ಉಪಯೋಗಿಸುತ್ತಿದ್ದೇನೊ? ಪ್ರಾಪಂಚಿಕ ವಸ್ತುಗಳನ್ನು ಸ್ವಾರ್ಥಪರವಾಗಿ ಆನಂದಿಸುವದಕ್ಕಿಂತ ನನಗೆ ಯೆಹೋವನನ್ನು ಸೇವಿಸುವದರಿಂದ ಅತಿ ಹೆಚ್ಚಿನ ಸುಖಾನುಭವವು ಸಿಗುತ್ತದೋ?’ ಈ ಪ್ರಶ್ನೆಗಳಿಗೆ ನಮ್ಮ ಪ್ರಾಮಾಣಿಕ ಉತ್ತರಗಳು ನಮ್ಮ ಹೃದಯದೊಳಗಿನ ಹೇತುಗಳನ್ನು ಪ್ರಕಟಪಡಿಸುತ್ತವೆ.—ಲೂಕ 6:45.
5 ಕೆಟ್ಟದ್ದನ್ನು ಮಾಡಲು ಶೋಧಿಸಲ್ಪಡುವದನ್ನು ಹೋಗಲಾಡಿಸಿರಿ: ಸ್ವಆಸಕ್ತಿ, ಲೋಭ, ಮತ್ತು ಇಂದ್ರಿಯ ಸುಖಾನುಭವದ ಪ್ರೀತಿಯ ಕಡೆಗೆ ಇಷ್ಟೊಂದು ಶೋಧನೆಗಳು ಮತ್ತು ಒತ್ತಡಗಳು ಹಿಂದೆಂದೂ ಇರಲಿಲ್ಲ. ಪ್ರತಿ ದಿನ, ನಾವು ನೈತಿಕ ಪಂಥಾಹ್ವಾನಗಳಿಂದ, ಒಪ್ಪಂದ ಮಾಡಿಕೊಳ್ಳಲು ಶೋಧನೆಗಳಿಂದ ಎದುರಿಸಲ್ಪಟ್ಟಿದ್ದೇವೆ. ಈ ಪಂಥಾಹ್ವಾನಗಳನ್ನು ಯಶಸ್ವಿಕರವಾಗಿ ಎದುರಿಸಲು, ನಮಗೆ ಸಹಾಯ ಮಾಡುವಂತೆ ನಾವು ಯೆಹೋವನಿಗೆ ಕೇಳಬೇಕು. (ಮತ್ತಾ. 26:41) ಆತನ ಆತ್ಮದ ಮೂಲಕ, ಆತನು ನಮ್ಮನ್ನು ಬಲಿಷ್ಠರನ್ನಾಗಿ ಮಾಡಬಲ್ಲನು. (ಯೆಶಾ. 40:29) ದೇವರ ವಾಕ್ಯವನ್ನು ಪ್ರತಿ ದಿನ ಓದುವುದು ಒಂದು ಮಹತ್ತಾದ ಸಹಾಯಕವಾಗಿದೆ. (ಕೀರ್ತ. 1:2, 3) ಸಶ್ವಿಸ್ತು ಮತ್ತು ಸ್ವನಿಯಂತ್ರಣ ಕೂಡ ಒಂದು ದೊಡ್ಡ ಪಾತ್ರವನ್ನು ವಹಿಸುತ್ತವೆ.—1 ಕೊರಿಂ. 9:27.
6 ಒಳ್ಳೆಯದನ್ನು ಪ್ರೀತಿಸುವುದು ಮಾತ್ರ ಸಾಕಾಗುವದಿಲ್ಲ—ಆದರೆ ನಾವು ಕೆಟ್ಟದ್ದನ್ನೂ ದ್ವೇಷಿಸಬೇಕು. (ಕೀರ್ತ. 97:10) ಇದರ ಅರ್ಥ ಕೆಟ್ಟದ್ದಾಗಿರುವಂತಹ ವಿಷಯಗಳಿಗಾಗಿ ಒಂದು ಹಂಬಲವನ್ನು ಬೆಳೆಸದಿರುವುದಾಗಿದೆ. ಯೆಹೋವನು ದ್ವೇಷಿಸುವಂತಹ ಏಳು ವಿಷಯಗಳನ್ನು ಜ್ಞಾನೋಕ್ತಿ 6:16-19 ಪಟ್ಟಿಮಾಡುತ್ತದೆ. ವಿಶದವಾಗಿ, ಯೆಹೋವನನ್ನು ಮೆಚ್ಚಿಸಲು ಬಯಸುವ ಒಬ್ಬನು ಅಂತಹ ವಿಷಯಗಳನ್ನು ಸಹ ದ್ವೇಷಿಸಬೇಕು. ಸತ್ಯದ ನಿಷ್ಕೃಷ್ಟ ಜ್ಞಾನದೊಂದಿಗೆ ಆಶೀರ್ವದಿಸಲ್ಪಟ್ಟವರಾಗಿ, ಒಳ್ಳೇ ವಿಷಯಗಳ ಮೇಲೆ ನಮ್ಮ ಮನಸ್ಸುಗಳನ್ನು ಕೇಂದ್ರೀಕರಿಸುತ್ತಾ, ಆ ಜ್ಞಾನಕ್ಕೆ ಹೊಂದಿಕೆಯಲ್ಲಿ ವರ್ತಿಸಲು ನಾವು ಬಯಸಬೇಕು.
7 “ಯಾವಾಗಲೂ ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟು” ಇರುವಂತೆ ಅನುಕೂಲಕರವಾಗಿರುವ ಪರಿಸ್ಥಿತಿಗಳಿಗಾಗಿ ಪ್ರಾರ್ಥಿಸುವುದು ಯೋಗ್ಯವಾಗಿದೆ. (1 ಕೊರಿಂ. 15:58, NW) ಯೆಹೋವನ ಸೇವೆಯಲ್ಲಿ ಒಂದು ಕಾರ್ಯಮಗ್ನ ಕಾಲತಖ್ತೆಯು ಸುರಕ್ಷೆಯಾಗಿದೆ ಎಂದು ಅನೇಕರು ಕಂಡುಕೊಂಡಿದ್ದಾರೆ, ಯಾಕಂದರೆ ಅದು ವ್ಯರ್ಥವಾದ ವಿಷಯಗಳನ್ನು ಬೆನ್ನಟ್ಟುವದಕ್ಕಾಗಿ ಕೊಂಚವೇ ಸಮಯವನ್ನು ಅನುಮತಿಸುತ್ತದೆ.
8 ಎಲ್ಲ ವಿಷಯಗಳನ್ನು ಪರಿಗಣಿಸಿಯಾದ ನಂತರ, ಯೆಹೋವನು ನಮ್ಮಿಂದ ಏನ್ನನ್ನು ಅವಶ್ಯಪಡಿಸುತ್ತಾನೋ ಅದು ತುಂಬಾ ನ್ಯಾಯಯುಕ್ತವಾಗಿದೆ. (ಮೀಕ 6:8) ಸೇವೆಯ ಪ್ರತಿಯೊಂದು ಸುಯೋಗಕ್ಕಾಗಿ ಕೃತಜ್ಞರಾಗಿರಲು ನಮಗೆ ಪ್ರತಿಯೊಂದೂ ಕಾರಣವಿದೆ. (ಎಫೆ. 5:20) ಆದುದರಿಂದ ನಮ್ಮ ಬಹುಮಾನವು ನಮ್ಮಿಂದ ಅವಶ್ಯಪಡಿಸಲ್ಪಡುವಂತಹದಕ್ಕಿಂತ ಅಪಾರವಾಗಿ ಹೆಚ್ಚು ಮಹತ್ತಾಗಿರುವದೆಂಬ ಭರವಸೆಯಿಂದಿರುತ್ತಾ ನಾವು ‘ಕಷ್ಟಪಟ್ಟು ದುಡಿಯುತ್ತಾ ಮತ್ತು ಸ್ವತಃ ಹೆಣಗುತ್ತಾ’ ಇರೋಣ.—1 ತಿಮೊ. 4:10, NW.