‘ಈಗ, ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸಲು’ ಯುವಕರಿಗೆ ನೆರವು ನೀಡುವುದು
1 ಬೈಬಲಿನಲ್ಲಿ ಕೊಡಲ್ಪಟ್ಟ ಸಲಹೆಯ ವ್ಯಾವಹಾರ್ಯ ಮಾತುಗಳನ್ನು ಕೇವಲ “ಕೇಳುವ”ದು ಸಾಕಾಗುವದಿಲ್ಲ. ಪೂರ್ಣವಾಗಿ ಪ್ರಯೋಜನಪಡೆಯಲು, ಒಬ್ಬನು ಅದರಲ್ಲಿ ಬರೆದಿರುವಂತಹದ್ದನ್ನು “ಕೈಕೊಂಡು ನಡೆಯ” ಬೇಕು. (ಪ್ರಕ. 1:3) ಸಾಹಿತ್ಯವನ್ನು ನೀಡುವುದು ಶಿಷ್ಯರನ್ನಾಗಿ ಮಾಡುವದರ ಕಡೆಗಿನ ಕೇವಲ ಒಂದು ಪ್ರಥಮ ಹೆಜ್ಜೆಯಾಗಿದೆ. ಕಿವಿಗೊಡಲು ಸಿದ್ಧರಾಗಿರುವ ಆಸಕ್ತರನ್ನು ನಾವು ಒಮ್ಮೆ ಕಂಡುಹಿಡಿದ ನಂತರ, ಅವರು ಹೆಚ್ಚನ್ನು ಕಲಿಯುವಂತೆ ನೆರವು ಕೊಡಲು ನಾವು ತಡವಿಲ್ಲದೇ ಪುನಃ ಹೋಗಬೇಕು. ಯುವ ಜನರು ಹಾಗೂ ಇನ್ನಿತರರು ‘ಈಗ, ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸಲು’ ಮತ್ತು ಈ ರೀತಿಯಲ್ಲಿ ನಿತ್ಯಜೀವವನ್ನು ಪಡೆಯುವಂತೆ ನಾವು ಸಹಾಯ ನೀಡುವ ಅಗತ್ಯವಿದೆ. (ಪ್ರಸಂ. 12:1) ನಮ್ಮ ಪುನರ್ಭೇಟಿಯಲ್ಲಿ ನಾವು ಯಾವುದರ ಕುರಿತು ಮಾತಾಡಬಲ್ಲೆವು?
2 ನಿಮ್ಮ ಮೊದಲ ಭೇಟಿಯಲ್ಲಿ, ಯುವ ಜನರು ಇಂದು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ನೀವು ಮಾತಾಡಿದ್ದಲ್ಲಿ, ನೀವು ನಿಮ್ಮ ಸಂಭಾಷಣೆಯನ್ನು ಈ ರೀತಿಯಲ್ಲಿ ಆರಂಭಿಸಬಹುದು:
▪ “ಇಂದಿನ ಲೋಕದಲ್ಲಿ ಯುವ ಜನರು ಎದುರಿಸಬೇಕಾಗಿರುವ ಕೆಲವು ಸನ್ನಿವೇಶಗಳ ಕುರಿತಾಗಿ ನಾವು ಈ ಮುಂಚೆ ಮಾತಾಡಿದ್ದೆವು. ಯೆಹೋವನು ಯುವ ಜನರ ಸಹಿತ, ಎಲ್ಲರಲ್ಲಿ ಆಸಕ್ತನಾಗಿರುವದರಿಂದ, ಇಷ್ಟೊಂದು ಯುವಕರು ಸಿಕ್ಕಿಬೀಳುವ ಪಾಶಗಳನ್ನು ಹೋಗಲಾಡಿಸಿ, ಅವರು ಜೀವನವನ್ನು ಆನಂದಿಸುವಂತೆ, ಅವರಿಗೆ ಸಹಾಯಮಾಡಬಲ್ಲ ಮಾರ್ಗದರ್ಶಕಗಳನ್ನು ತನ್ನ ವಾಕ್ಯವಾದ ಬೈಬಲಿನಲ್ಲಿ ಆತನು ಒದಗಿಸಿದ್ದಾನೆ.” ಯುವ ಜನರು ಕೇಳುವ ಪ್ರಶ್ನೆಗಳು ಪುಸ್ತಕದ ಪರಿವಿಡಿಯನ್ನು ತೆರೆಯಿರಿ ಮತ್ತು ಪಟ್ಟಿಮಾಡಲಾದ ಯಾವ ವಿಷಯಗಳು ಅವನ ಆಸಕ್ತಿಯನ್ನು ಸೆಳೆಯುತ್ತವೆ ಎಂಬದನ್ನು ಮನೆಯವನಿಗೆ ಕೇಳಿರಿ. ಉದಾಹರಣೆಗಾಗಿ, ಆತನು ಅಮಲೌಷಧಗಳ ವಿಷಯವನ್ನು ಆರಿಸುವದಾದರೆ, ಪುಟ 272 ರಲ್ಲಿರುವ ಅಧ್ಯಾಯ 34ಕ್ಕೆ ತಿರುಗಿಸಿರಿ. “ಅಮಲೌಷಧಗಳು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ,” “ಅಮಲೌಷಧಗಳು ನನ್ನ ಆರೋಗ್ಯವನ್ನು ನಷ್ಟಪಡಿಸಬಲ್ಲವೋ?” “ಅಮಲೌಷಧಗಳು—ಬೈಬಲಿನ ದೃಷ್ಟಿಕೋನ” ಇಂತಹ ಕೆಲವೊಂದು ಉಪಶೀರ್ಷಿಕೆಗಳು ಮತ್ತು “ನೀವು ಬೇಡ ಎಂದು ಹೇಳಬಲ್ಲಿರಿ!” ಎಂಬ ಉಪಶೀರ್ಷಿಕೆಯ ಕೆಳಗಿರುವ ವ್ಯಾವಹಾರ್ಯ ಸಲಹೆಯ ಕಡೆಗೆ ಅವನ ಗಮನವನ್ನು ಸೆಳೆಯಿರಿ. ಅಧ್ಯಾಯದ ಕೊನೆಯಲ್ಲಿರುವ “ಚರ್ಚೆಗಾಗಿ ಪ್ರಶ್ನೆಗಳು,” ವಾಚಕನು ವಿಷಯವನ್ನು ಪುನರ್ವಿಮರ್ಶಿಸಲು ಮತ್ತು ಮುಖ್ಯ ಅಂಶಗಳನ್ನು ಗ್ರಹಿಸಲು ಶಕ್ತನನ್ನಾಗಿ ಮಾಡುವ ವಿಧವನ್ನು ತೋರಿಸಿರಿ. ಕ್ರಮವಾಗಿ ಭೇಟಿನೀಡಲು ಮತ್ತು ಈ ರೀತಿಯಲ್ಲಿ ಇಡೀ ಪುಸ್ತಕವನ್ನು ಅವನೊಂದಿಗೆ ಆವರಿಸಲು ನೀಡಿಕೊಳ್ಳಿರಿ.
3 ಒಳ್ಳೆಯ ಬುದ್ಧಿವಾದದ ಮೂಲವನ್ನು ನೀವು ಪ್ರಥಮ ಭೇಟಿಯಲ್ಲಿ ಚರ್ಚಿಸಿದ್ದಲ್ಲಿ, ಈ ಪ್ರಶ್ನೆಯನ್ನು ಕೇಳುವ ಮೂಲಕ ನೀವು ಮುಂದುವರಿಸಲು ನಿರ್ಣಯಿಸಬಹುದು:
▪ “ಯುವ ಜನರು ಶಾಲಾ ವಿಷಯಗಳಲ್ಲಿ ಶಿಕ್ಷಣವನ್ನು ಪಡೆಯುವುದು ಸಾಕೆಂದು ನೀವು ಆಲೋಚಿಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಯೆರೆಮೀಯ 10:23.] ನೀವು ನೋಡುತ್ತಿರುವಂತೆ, ಹೆಚ್ಚು ಉನ್ನತವಾದ ಒಂದು ಮೂಲದಿಂದ ತರಬೇತಿಯು ಆವಶ್ಯಕವಾಗಿದೆ. ದೇವರ ಸಹಾಯವಿಲ್ಲದೆ ಜೀವಿಸುವ ಪ್ರಯತ್ನಗಳು ನಮ್ಮ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಿವೆ. ಯಶಸ್ವಿಕರವಾದ ಜೀವಿತಗಳನ್ನು ಜೀವಿಸುವುದರ ಮೇಲೆ ಭರವಸಾರ್ಹವಾದ, ಸಮಯ ಪರೀಕ್ಷಿತವಾದ ಏಕಮಾತ್ರ ಮೂಲವು ದೇವರ ವಾಕ್ಯವಾಗಿದೆ.” ಪುಟ 316 ಮತ್ತು 317 ರಲ್ಲಿರುವ ಚೌಕಟ್ಟಿಗೆ ನಿರ್ದೇಶಿಸಿರಿ, ಬೈಬಲಿನ ಸೂತ್ರಗಳನ್ನು ಗೌರವಿಸುವ ವ್ಯಕ್ತಿಗಳೊಂದಿಗೆ ಸಹವಸಿಸುವುದು ಮತ್ತು ಅಭ್ಯಸಿಸುವುದು ಜೀವನವನ್ನು ಆನಂದಿಸುವ ಮತ್ತು ಸಮಸ್ಯೆಗಳಿಂದ ದೂರವಿರಿಸುವ ಹೆಜ್ಜೆಗಳು, ಮತ್ತು ಈ ಉದ್ದೇಶಕ್ಕಾಗಿಯೇ ಬೈಬಲ್ ಆಧರಿತವಾದ ಬುದ್ಧಿವಾದದ ಒಂದು ಏಕಮಾತ್ರವಾದ ಮೂಲವಾಗಿ ಕೂಟಗಳು ಇವೆಯೆಂದು ತೋರಿಸಿರಿ.
4 ಒಂದು ಶಾಸ್ತ್ರೀಯ ಚರ್ಚೆಯನ್ನು ಆರಂಭಿಸಲಿಕ್ಕೆ ನೀವು ಇದನ್ನು ಪ್ರಯತ್ನಿಸಲು ಇಷ್ಟಪಡಬಹುದು:
▪ ಯುವ ಜನರು ಕೇಳುವ ಪ್ರಶ್ನೆಗಳು ಪುಸ್ತಕದ ಪುಟ 318 ರಲ್ಲಿರುವ ಚಿತ್ರಗಳನ್ನು ತೋರಿಸಿರಿ ಮತ್ತು ವಿವರಿಸಿರಿ: “ನಮ್ಮ ಸೃಷ್ಟಿಕರ್ತನೊಂದಿಗೆ ಒಂದು ನಿಕಟವಾದ ಸಂಬಂಧವನ್ನು ಕಟ್ಟುವುದು ನಾವು ನಿತ್ಯವಾದ ಲಾಭಗಳನ್ನು ಪಡೆಯುವುದನ್ನು ಖಚಿತಗೊಳಿಸುವುದು. ಆದರೆ ಅಂತಹ ಒಂದು ನಿಕಟವಾದ ಸಂಬಂಧವನ್ನು ಬೆಳೆಸಲು ಒಬ್ಬನಿಗೆ ಏನು ಆವಶ್ಯಕವಾಗಿದೆ? ಒಂದು ಹೆಜ್ಜೆಯು, ಕ್ರಮವಾಗಿ ದೇವರ ಪ್ರೇರಿತ ವಾಕ್ಯವನ್ನು ಅಭ್ಯಸಿಸುವುದೇ ಆಗಿದೆ.” ಪುಟ 308 ರಲ್ಲಿರುವ ಉಪಶೀರ್ಷಿಕೆಗಳನ್ನು ಚರ್ಚಿಸಿರಿ ಮತ್ತು ಹೆಚ್ಚನ್ನು ಕಲಿಯಲಿಕ್ಕಾಗಿ ನಮ್ಮ ಬೈಬಲ್ ಅಭ್ಯಾಸದ ಕಾರ್ಯಕ್ರಮದಿಂದ ಲಾಭಪಡೆಯುವಂತೆ ಮನೆಯವನನ್ನು ಆಮಂತ್ರಿಸಿರಿ.
5 ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು ನಮ್ಮ ಉದ್ದೇಶವಾಗಿರುವದರಿಂದ, ನಾವು ಪರಿಣಾಮಕಾರಿಯಾದ ಪುನರ್ಭೇಟಿಗಳನ್ನು ಮಾಡುವ ಅಗತ್ಯವಿದೆ. ಅವುಗಳಿಗಾಗಿ ಸಮಯವನ್ನು ನಿಗದಿಪಡಿಸಿರಿ, ಮತ್ತು ಚೆನ್ನಾಗಿ ತಯಾರಿಸಿರಿ. ಈ ರೀತಿಯಲ್ಲಿ ನಾವು ಪ್ರಾಮಾಣಿಕ ಹೃದಯದ ಜನರಿಗೆ ನಿಜವಾಗಿಯೂ ಸಹಾಯ ಮಾಡಬಲ್ಲೆವು.—ಪ್ರಕ. 22:6, 7.