ದೀನರಿಗಾಗಿ ಸುವಾರ್ತೆ
1 ಸನ್ನಿಹಿತವಾಗಿರುವ ನ್ಯಾಯತೀರ್ಪಿನ ಸಮಯವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ. (ಯೆಹೆ. 9:5, 6) ಏನು ಬರಲಿದೆಯೋ ಅದಕ್ಕಾಗಿ ಅವರು ತಯಾರಿಸಲು ಸಾಧ್ಯವಾಗುವಂತೆ, ಎಲ್ಲೆಲ್ಲಿಯೂ ಇರುವ ದೀನ ಜನರಿಗೆ ತಿಳಿಸುವುದು ತುರ್ತಿನದಾಗಿದ್ದೆ. ಆತನ ಪ್ರೀತಿ-ದಯೆಯಿಂದ, ಯೆಹೋವನು “ದೀನರಿಗೆ ಶುಭವರ್ತಮಾನವನ್ನು” ತಿಳಿಸಲು ತನ್ನ ಜನರನ್ನು ನಿಯೋಜಿಸಿದ್ದಾನೆ. (ಯೆಶಾ. 61:1, 2) ನಮ್ಮ ಪತ್ರಿಕೆಗಳು ಈ ಸುವಾರ್ತೆಯನ್ನು ವ್ಯಾಪಕವಾಗಿ ಪ್ರಕಟಪಡಿಸಲು ನಮಗೆ ಸಹಾಯ ಮಾಡುತ್ತವೆ.
2 ನಮ್ಮನ್ನು ಬಲಪಡಿಸಿ ಪ್ರಚೋದಿಸುವ ಗಟ್ಟಿಯಾದ ಆತ್ಮಿಕಾಹಾರವನ್ನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಒದಗಿಸುತ್ತವೆ. ದೇವರ ರಾಜ್ಯವು ಬೇಗನೇ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಪರಿವರ್ತಿಸಲಿರುವುದೆಂಬ ಸುವಾರ್ತೆಯೊಂದಿಗೆ ಕಾವಲಿನಬುರುಜು ದೀನರನ್ನು ಸಾಂತನಗೊಳ್ವಿಸುತ್ತದೆ. ಎಚ್ಚರ! ಪತ್ರಿಕೆಯು ಒಂದು ಶಾಂತಿಭರಿತ ಮತ್ತು ಸುರಕ್ಷೆಯ ಹೊಸ ಲೋಕದ ಕುರಿತಾದ ಸೃಷ್ಟಿಕರ್ತನ ವಾಗ್ದಾನದಲ್ಲಿ ಭರವಸೆಯನ್ನು ಕಟ್ಟುತ್ತದೆ. ಈ ನಿಯತಕಾಲಿಕ ಪತ್ರಿಕೆಗಳ ವ್ಯಾಪಕ ವಿತರಣೆಯು ದೀನರಿಗೆ ಸುವಾರ್ತೆಯನ್ನು ತಲಪಿಸುವ ಕ್ಷಿಪ್ರ ವಿಧಾನಗಳಲ್ಲಿ ಒಂದಾಗಿದೆ. ಇತ್ತೀಚೆಗಿನ ಸಂಚಿಕೆಗಳಲ್ಲಿ ಯಾವ ಮಾತಾಡುವ ಅಂಶಗಳನ್ನು ನಾವು ಎತ್ತಿತೋರಿಸಬಲ್ಲೆವು?
3 ತಕ್ಕದ್ದಾಗಿರುವಲ್ಲಿ, ನೀವು “ದೈನಿಕ ಬೈಬಲ್ ವಾಚನದಿಂದ ಪ್ರಯೋಜನ ಪಡೆಯುವುದು” ಎಂಬ ಲೇಖನಕ್ಕೆ ಸೂಚಿಸುತ್ತಾ, ಈ ಪ್ರಶ್ನೆಯನ್ನು ಕೇಳುವ ಮೂಲಕ ಮೇ 1ರ “ಕಾವಲಿನಬುರುಜು” ಪತ್ರಿಕೆಯನ್ನು ನೀಡಬಹುದು:
◼ “ಬೈಬಲನ್ನು ಓದುವುದರಿಂದ ನಮಗೆ ಯಾವ ಪ್ರಯೋಜನವು ದೊರೆಯಬಲ್ಲದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲ್ ತಾನೇ, ರೋಮಾಪುರ 15:4 ರಲ್ಲಿ, ಆ ಪ್ರಶ್ನೆಯ ಮೇಲೆ ವಿವೇಚಿಸಲು ನಮಗೆ ಸಹಾಯ ಮಾಡುತ್ತದೆ. [ರೋಮಾಪುರ 15:4ನ್ನು ಓದಿರಿ.] ಅನೇಕ ಜನರು, ವಿಶೇಷವಾಗಿ ಒಂದು ಚರ್ಚಿನ ಹಿನ್ನೆಲೆಯುಳ್ಳವರು, ಒಂದು ಬೈಬಲನ್ನು ಹೊಂದಿರುತ್ತಾರೆ, ಆದರೆ ಅದನ್ನು ಕ್ರಮವಾಗಿ ಓದಲು ಕೆಲವರೇ ಸಮಯವನ್ನು ತೆಗೆದುಕೊಳ್ಳುತ್ತಾರೆ. ಭವಿಷ್ಯತ್ತಿಗಾಗಿ ಏಕಮಾತ್ರ ಖಚಿತ ನಿರೀಕ್ಷೆಯನ್ನು ಬೈಬಲಿನಲ್ಲಿ ಕಂಡುಕೊಳ್ಳಬಹುದೆಂದು ನಾವು ನಂಬುತ್ತೇವೆ, ಮತ್ತು ನಾವು ಅದನ್ನು ಓದುವುದಾದರೆ ಆಶೀರ್ವದಿಸಲ್ಪಡುವೆವು.” ತಕ್ಕದ್ದಾಗಿರುವ ಇನ್ನು ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ, ಮತ್ತು ಅನಂತರ ಪತ್ರಿಕೆಗಳನ್ನು ನೀಡಿರಿ.
4 ಮೇ 15ರ “ಕಾವಲಿನಬುರುಜು” ಪತ್ರಿಕೆಯು, “ನಮ್ಮ ಪೂರ್ವಜರಿಗಾಗಿ ಒಂದು ಹೊಸ ಜೀವನ” ಎಂಬ ಶೀರ್ಷಿಕೆಯುಳ್ಳ ಕುತೂಹಲ ಕೆರಳಿಸುವ ಲೇಖನವನ್ನು ಪ್ರದರ್ಶಿಸುತ್ತದೆ. ಈ ಪೀಠಿಕೆಯೊಂದಿಗೆ ನೀವು ಆಸಕ್ತಿಯನ್ನು ಪ್ರಚೋದಿಸಸಾಧ್ಯವಿದೆ:
◼ “ತಮ್ಮ ಪೂರ್ವಜರು ಹೇಗಿದ್ದರೆಂದು ಅನೇಕರು ಅನೇಕವೇಳೆ ಕೌತುಕಪಟ್ಟಿದ್ದಾರೆ. ಅವರು ಸತ್ತು ಹೋಗಿರುವುದರಿಂದ, ನಾವು ಎಂದೂ ಅದನ್ನು ತಿಳಿಯಲಾರೆವೆಂದು ಹೆಚ್ಚಿನ ಜನರು ತೀರ್ಮಾನಿಸುತ್ತಾರೆ. ನಮ್ಮ ಪೂರ್ವಜರನ್ನು ನಾವು ಎಂದಾದರೂ ಅರಿಯಲು ಸಾಧ್ಯವಾಗುವ ಯಾವುದಾದರೂ ಸಾಧ್ಯತೆಯಿದೆಯೆಂದು ನೀವು ನೆನಸುತ್ತೀರೋ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಯೋಹಾನ 5:28, 29ನ್ನು ಓದಿರಿ ಮತ್ತು ಒಂದು ಪ್ರಮೋದವನ ಭೂಮಿಯಲ್ಲಿ ಅವರಿಗೆ ಒಂದು ಹೊಸ ಜೀವನವನ್ನು ಕೊಡಲು ದೇವರು ಹೇಗೆ ವಾಗ್ದಾನಿಸಿದ್ದಾನೆಂಬದನ್ನು ವಿವರಿಸಿರಿ.
5 ಪ್ರಶ್ನೆಯೊಂದನ್ನು ಕೇಳುವ ಮೂಲಕ ನೀವು ಮೇ 8ರ “ಎಚ್ಚರ!” ಪತ್ರಿಕೆಯನ್ನು ನೀಡಬಹುದು:
◼ “ಜೀವಿತವನ್ನು ಜೀವಿಸಲು ನಿಜವಾಗಿಯೂ ಅರ್ಹವಾಗಿ ಮಾಡಲು ಏನು ಬೇಕಾಗುವುದೆಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 26 ರಲ್ಲಿರುವ “ಜೀವಿತದ ಅರ್ಥವೇನು?” ಎಂಬ ಲೇಖನಕ್ಕೆ ಸೂಚಿಸಿರಿ ಮತ್ತು ಪ್ರಸಂಗಿ 2:11 ರಲ್ಲಿ ಸೊಲೊಮೋನನು ಹೇಳಿದ ವಿಷಯವನ್ನು ಓದಿರಿ. ಅನಂತರ, 12ನೇ ಅಧ್ಯಾಯ, 13ನೇ ವಚನದಲ್ಲಿರುವ ಆತನ ಸಲಹೆಯನ್ನು ತೋರಿಸಿರಿ. ಪತ್ರಿಕೆಯನ್ನು ಸ್ವೀಕರಿಸಲು ಮನೆಯವನನ್ನು ಆಮಂತ್ರಿಸಿರಿ.
6 ಮೇ 14 ಕ್ಕಿಂತ ಮೊದಲು ನೀವು ಪತ್ರಿಕೆಗಳೊಂದಿಗೆ ಕೆಲಸಮಾಡುತ್ತಿರುವಲ್ಲಿ, ರಾಜ್ಯ ವಾರ್ತೆ ನಂಬ್ರ. 34ರ ಪ್ರತಿಗಳನ್ನು ಕೊಂಡೊಯ್ಯಲು ಖಾತ್ರಿಯಿಂದಿರ್ರಿ ಮತ್ತು ಒಂದು ಪ್ರತಿಯನ್ನು ಇನ್ನೂ ಪಡೆದಿರದ ಯಾರಿಗಾದರೂ ಅದನ್ನು ನೀಡಿರಿ. ನಿಮ್ಮೊಂದಿಗೆ ಪತ್ರಿಕೆಗಳನ್ನು ಕೊಂಡೊಯ್ಯಿರಿ ಮತ್ತು ಅವುಗಳನ್ನು, ಎಲ್ಲಾ ಸಮಯಗಳಲ್ಲಿ, ಅನೌಪಚಾರಿಕ ಸಾಕ್ಷಿ ಕಾರ್ಯದಲ್ಲೂ ನೀಡಲು ತಯಾರಾಗಿರ್ರಿ. ಕುಟುಂಬದಲ್ಲಿರುವ ಇತರರಿಂದ ಹಾಗೂ ಅವರಿಗೆ ಭೇಟಿ ನೀಡಬಹುದಾದ ಮಿತ್ರರಿಂದ ಅದು ಓದಲ್ಪಡಬಹುದೆಂದು ಗ್ರಹಿಸುತ್ತಾ, ನಾವು ಯಾವಾಗಲೂ ನಮ್ಮ ಸಾಹಿತ್ಯವನ್ನು ಹಂಚಲು ಸಿದ್ಧರಿರಬೇಕು. (1 ತಿಮೋ. 6:18) ನಾವು ದೀನರಿಗೆ ತಲಪಿಸುವ ಸುವಾರ್ತೆಯು ಅವರ ಜೀವಗಳನ್ನು ರಕ್ಷಿಸಬಹುದು.—1 ತಿಮೊ. 4:16.