ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
ಸ್ಥಳೀಯ ಜನರನ್ನು ಚಿಂತೆಗೀಡುಮಾಡಿರುವ ಒಂದು ಸುದ್ದಿಯ ಮಾತೆತ್ತಿ. ಆಮೇಲೆ ಹೀಗನ್ನಿ: “ಜನರು ಯಾಕೆ ಹೀಗೆ ಕೆಟ್ಟದ್ದು ಮಾಡುತ್ತಾರೆ ಎಂಬುದನ್ನು ಯೋಚಿಸಿದ್ದೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ದೇವರು ನಮಗೆ ಒಂದು ನಿರೀಕ್ಷೆ ಕೊಟ್ಟಿದ್ದಾನೆ. ಅದರ ಬಗ್ಗೆ ಒಂದು ವಚನವನ್ನು ತೋರಿಸಲಾ? [ಮನೆಯವನಿಗೆ ಆಸಕ್ತಿಯಿದ್ದರೆ 2 ಪೇತ್ರ 3:13 ಓದಿ.] ಜನರು ಕೆಟ್ಟದ್ದನ್ನು ಮಾಡಲು ಕಾರಣಗಳೇನು ಮತ್ತು ದುಷ್ಕೃತ್ಯಗಳನ್ನು ದೇವರು ಹೇಗೆ ಬೇಗನೆ ಕೊನೆಗೊಳಿಸುತ್ತಾನೆಂದು ಈ ಪತ್ರಿಕೆ ವಿವರಿಸುತ್ತದೆ.”
ಎಚ್ಚರ! ಜನವರಿ-ಮಾರ್ಚ್
“ವಿವಾಹ ಸಂಗಾತಿಯೋ ರಾಜಕಾರಣಿಗಳೋ ಬೇರೆ ಯಾರಾದರೋ ನಂಬಿಕೆದ್ರೋಹ ಮಾಡಿದ ಸುದ್ದಿ ನಮ್ಮ ಕಿವಿಗೆ ಆಗಾಗ್ಗೆ ಬೀಳುತ್ತಾ ಇರುತ್ತದೆ. ನೀವೇನು ನೆನಸುತ್ತೀರಿ, ಈಗೀಗ ಲೋಕದಲ್ಲಿ ನಂಬಿಕೆಗೆ ಅರ್ಹರಾದ ಜನರು ಸಿಗುವುದು ಕಷ್ಟವೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಹೀಗೆಲ್ಲ ನಡೆಯುತ್ತದೆ ಎಂದು ನಮ್ಮ ಸೃಷ್ಟಿಕರ್ತನು ಮುಂಚೆಯೇ ಹೇಳಿದ ಮಾತನ್ನು ನಿಮಗೆ ತೋರಿಸಲಾ? [ಮನೆಯವನು ಒಪ್ಪುವಲ್ಲಿ 2 ತಿಮೊಥೆಯ 3:1-5 ಓದಿ.] ನಮ್ಮೀ ಕಾಲದಲ್ಲಿ ಯಾರು ನಂಬಿಕೆಗರ್ಹರಾದ ಜನರಾಗಿದ್ದಾರೆ ಎಂಬದನ್ನು ಈ ಪತ್ರಿಕೆ ತಿಳಿಸುತ್ತದೆ.”