ವಿಮೋಚನೆಯನ್ನು ತರುವ ಗುರುತಿಸುವಿಕೆ
1 ತನ್ನ ನೀತಿಯುಕ್ತ ನ್ಯಾಯತೀರ್ಪುಗಳನ್ನು ಜಾರಿಗೆ ತರುವ ಮುಂಚೆ, ಯೆಹೋವನು ಯಾವಾಗಲೂ ಎಚ್ಚರಿಕೆಯನ್ನು ಕೊಡುತ್ತಾನೆ ಮತ್ತು ದೀನರಿಗಾಗಿ ತಪ್ಪಿಸಿಕೊಳ್ಳುವ ಒಂದು ಮಾರ್ಗವನ್ನು ಒದಗಿಸುತ್ತಾನೆ. ಯೆಹೆಜ್ಕೇಲನ ದಿನದಲ್ಲಿ, ಮಾಡಲ್ಪಡುತ್ತಿದ್ದ ಎಲ್ಲಾ ಅಸಹ್ಯಕರವಾದ ವಿಷಯಗಳ ಕುರಿತು ನರಳಿ ಗೋಳಾಡುತ್ತಿರುವವರಿದ್ದರು. ಅವರ ವಿಮೋಚನೆಗಾಗಿ ಅಂತಹ ಅರ್ಹ ವ್ಯಕ್ತಿಗಳು ಗುರುತಿಸಲ್ಪಡುವಂತೆ ದೇವರು ಮಾಡಿದನು. (ಯೆಹೆ. 9:4-6) ನಮ್ಮ ಸಾರುವ ಕಾರ್ಯವು ಇಂದು ಅದೇ ಉದ್ದೇಶವನ್ನು ಪೂರೈಸುತ್ತದೆ. ನಾವು ಒಂದು ಮಹತ್ವದ ಪಾತ್ರವನ್ನು ವಹಿಸಬಲ್ಲೆವು.
2 ಪ್ರಾಮಾಣಿಕ ಜನರನ್ನು ಹುಡುಕುವುದು ಕೇವಲ ಪ್ರಥಮ ಹೆಜ್ಜೆಯಾಗಿದೆ. ನಾವು ಒಂದು ಪುನರ್ಭೇಟಿಗಾಗಿ ಏರ್ಪಡಿಸುತ್ತೇವೆ. ಕೊಡಿಗೆಯನ್ನು ಮತ್ತು ಚರ್ಚಿಸಲ್ಪಟ್ಟ ವಿಷಯವನ್ನು ಬರೆದಿಡುವುದರ ಮೂಲಕ ಪ್ರಥಮ ಭೇಟಿಯಲ್ಲೇ ಪುನರ್ಭೇಟಿಗಾಗಿ ತಯಾರಿಯು ಮಾಡಲ್ಪಡುತ್ತದೆ. ನಾವೇನನ್ನು ಹೇಳಲು ತಯಾರಿಸಿದ್ದೇವೂ ಮತ್ತು ಹಿಂದಿರುಗುವಾಗ ನಾವೇನನ್ನು ಮಾಡುತ್ತೇವೋ ಅದರ ಮೇಲೆ ಪುನಃ ಸಂದರ್ಶಿಸುವ ಯಶಸ್ಸು ಬಹುವಾಗಿ ಆಧರಿಸಲಿದೆ.
3 “ಕಾವಲಿನಬುರುಜು” ಪತ್ರಿಕೆಯ ಕೊಡಿಗೆಯನ್ನು ಅನುಸರಿಸಿ ಹೋಗುವಾಗ, ನೀವು ಅದರ ಮುಖ್ಯ ವಿಷಯದ ಮೇಲೆ ಕೇಂದ್ರೀಕರಿಸಬಲ್ಲಿರಿ:
◼ ಕಾವಲಿನಬುರುಜು ಪತ್ರಿಕೆಯ ಮುಖಪುಟದಲ್ಲಿ ‘ಯೆಹೋವನ ರಾಜ್ಯವನ್ನು ಪ್ರಕಟಿಸುವುದು’ ಎಂಬ ಹೇಳಿಕೆಯು ತೋರಿಬರುತ್ತದೆಂಬುದನ್ನು ಗಮನಿಸಿರಿ. ಈ ಪತ್ರಿಕೆಯನ್ನು ಅಪೂರ್ವವಾಗಿ ಮಾಡುವಂತಹ ವಿಷಯವೇನಂದರೆ, ಅದು ದೇವರ ರಾಜ್ಯವನ್ನು ಲೋಕದ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವಾಗಿ ಸಮರ್ಥಿಸುತ್ತದೆ. ದೇವರ ಚಿತ್ತವು ಭೂಮಿಯ ಮೇಲೆ ನೆರವೇರಿಸಲ್ಪಡುವಾಗ ದೇವರ ರಾಜ್ಯವು ಏನನ್ನು ಪೂರೈಸುವದೆಂದು ಅದು ವಿವರಿಸುತ್ತದೆ. ಇಡೀ ಭೂಮಿಯಲ್ಲಿ ಪ್ರಕಟಪಡಿಸಲ್ಪಡಲಿರುವ ಸುವಾರ್ತೆಯು ಇದೇ ಆಗಿದೆ.” ಮತ್ತಾಯ 24:14ನ್ನು ಓದಿರಿ, ಮತ್ತು ಕಾವಲಿನಬುರುಜು ಪತ್ರಿಕೆಯನ್ನು ಕ್ರಮವಾಗಿ ಪಡೆಯಸಾಧ್ಯವಿರುವ ಮತ್ತು ವೈಯಕ್ತಿಕ ಬೈಬಲ್ ಅಭ್ಯಾಸಕ್ಕಾಗಿ ಉಪಯೋಗಿಸಸಾಧ್ಯವಿರುವ ವಿಧವನ್ನು ವಿವರಿಸಿರಿ.
4 ಕೇವಲ ಬೈಬಲಿನ ಮೇಲೆ ಕೇಂದ್ರೀಕರಿಸಲು ಮತ್ತು ಅದನ್ನು ಕ್ರಮವಾಗಿ ಓದುವ ಅಗತ್ಯವನ್ನು ಒತ್ತಿಹೇಳಲು ನೀವು ಇಚ್ಛಿಸಬಹುದು. ನೀವು ಹೀಗನ್ನಬಲ್ಲಿರಿ:
◼ “ಬಹುಮಟ್ಟಿಗೆ ನಮಗೆ ತಿಳಿದಿರುವ ಪ್ರತಿಯೊಬ್ಬರೂ, ದಿನನಿತ್ಯ ಜೀವಿಸುವ ಸಮಸ್ಯೆಗಳನ್ನು ನಿಭಾಯಿಸುವದರ ಮೇಲೆ ಸ್ವಲ್ಪ ವ್ಯಾವಹಾರಿಕ ಸಲಹೆಯನ್ನು ಗಣ್ಯಮಾಡುವರು. ನಾವು ಭರವಸೆಯನ್ನಿಡಸಾಧ್ಯವಿರುವ ಸಲಹೆಯನ್ನು ನಾವು ಎಲ್ಲಿ ಕಂಡುಕೊಳ್ಳಬಲ್ಲೆವೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸ್ನೇಹಿತರ ಸಲಹೆಯಲ್ಲಿ ತಮ್ಮ ಭರವಸೆಯನ್ನು ಇಟ್ಟಿರುವ ಅಥವಾ ವೃತ್ತಿಪರ ಸಲಹೆಗಾಗಿ ಹಣವನ್ನು ತೆತ್ತಿರುವ ಅನೇಕರು ಮಹತ್ತಾಗಿ ನಿರಾಶೆಗೊಳಿಸಲ್ಪಟ್ಟಿದ್ದಾರೆ. ಇನ್ನೊಂದು ಕಡೆ, ಕೋಟ್ಯಂತರ ಜನರು, ಬೈಬಲನ್ನು ತಾವು ನಿಜವಾಗಿ ಭರವಸೆಯನ್ನಿಡಸಾಧ್ಯವಿರುವ ಸಲಹೆಯ ಏಕಮಾತ್ರ ಮೂಲವಾಗಿದೆಯೆಂದು ಕಂಡುಕೊಂಡಿದ್ದಾರೆ. ನಾವು ಎದುರಿಸಬಹುದಾದ ಯಾವುದೇ ಸಮಸ್ಯೆಯನ್ನು ನಿಭಾಯಿಸುವ ವಿಧದ ಕುರಿತಾಗಿ ಬೈಬಲ್ ಉಪದೇಶವನ್ನು ಒದಗಿಸುತ್ತದೆ. [2 ತಿಮೊಥೆಯ 3:16, 17ನ್ನು ಓದಿರಿ.] ಬೈಬಲನ್ನು ತಿಳಿದುಕೊಳ್ಳುವುದನ್ನು ನೀವು ಕಷಕರವ್ಟಾಗಿ ಕಂಡುಕೊಂಡಿರಬಹುದಾದರೂ, ವಿವೇಕದ ಸಲಹೆಯ ಒಂದು ನಿಧಿ-ಭಂಡಾರವನ್ನು ತೆರೆಯಲು ನೀವು ಅದನ್ನು ಉಪಯೋಗಿಸಬಹುದಾದ ವಿಧವನ್ನು ನಿಮಗೆ ತೋರಿಸಲು ನನಗೆ ಬಿಡಿರಿ.” ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಹಿಂಬದಿಯಲ್ಲಿರುವ “ಬೈಬಲ್ ವರ್ಡ್ಸ್ ಇಂಡೆಕ್ಸ್ಡ್” ವಿಭಾಗದಲ್ಲಿ “ಪ್ರೀತಿ” ಎಂಬ ವಿಷಯಕ್ಕೆ ತಿರುಗಿಸುತ್ತಾ ಮುಂದುವರಿಯಿರಿ, ಮತ್ತು ಇತರರೊಂದಿಗೆ ಮನಸ್ತಾಪಗಳನ್ನು ಬಗೆಹರಿಸಲು ಪ್ರೀತಿಯು ಹೇಗೆ ಸಹಾಯ ಮಾಡಬಲ್ಲದೆಂದು ತೋರಿಸುವ ಕೆಲವು ಉಲ್ಲೇಖಗಳಿಗೆ ನಿರ್ದೇಶಿಸಿರಿ.
5 ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವ ಗುರಿಯೊಂದಿಗೆ ಈ ಪೀಠಿಕೆಯನ್ನು ಉಪಯೋಗಿಸುತ್ತಾ “ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ” ಎಂಬ ಪುಸ್ತಕವನ್ನು ಉಪಯೋಗಿಸಲು ನೀವು ಆರಿಸಬಹುದು:
◼ “ನಾವು ನಮ್ಮ ಕುಟುಂಬಗಳನ್ನು ಪ್ರೀತಿಸುತ್ತೇವೆ ಮತ್ತು ಅವುಗಳಿಗಾಗಿ ಅತ್ಯುತ್ತಮವಾದದ್ದನ್ನು ಬಯಸುತ್ತೇವೆ. ಇಂತಹ ಒಂದು ಲೋಕದಲ್ಲಿ ಜೀವಿಸುವದರಿಂದ ನಿಮ್ಮ ಕುಟುಂಬವು ಹೇಗೆ ಪ್ರಯೋಜನ ಪಡೆಯುವುದು?” 156-7ನೇ ಪುಟಗಳಲ್ಲಿರುವ ಚಿತ್ರಗಳನ್ನು ತೋರಿಸಿರಿ. ಆ ಪುಟಗಳಲ್ಲಿ ಉದ್ಧರಿಸಲ್ಪಟ್ಟಿರುವ ಒಂದು ಅಥವಾ ಎರಡು ವಚನಗಳನ್ನು ಓದಿರಿ, ಮತ್ತು ಈ ವಾಗ್ದಾನಗಳು ಸುಳ್ಳಾಡಲಾರದ ಯೆಹೋವ ದೇವರಿಂದ ಮಾಡಲ್ಪಟ್ಟಿವೆಯೆಂದು ವಿವರಿಸಿರಿ. ಪುಟಗಳು 5-6 ರಲ್ಲಿರುವ ಅಧ್ಯಾಯಗಳ ಪಟ್ಟಿಗೆ ಸೂಚಿಸಿರಿ, ಮತ್ತು ಮನೆಯವನಿಗೆ ಯಾವ ವಿಷಯವು ಆಸಕ್ತಿಯದಾಗಿದ್ದೆಯೆಂದು ಅವನನ್ನು ಕೇಳಿರಿ; ಅವನು ಆರಿಸುವ ಅಧ್ಯಾಯಕ್ಕೆ ತಿರುಗಿಸಿರಿ, ಮತ್ತು ಒಂದು ಅಥವಾ ಎರಡು ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ.
6 ಇನ್ನೊಬ್ಬ ವ್ಯಕ್ತಿಯು ವಿಮೋಚನೆಗೆ ಗುರುತಿಸಲ್ಪಡುವಂತೆ ಸಹಾಯ ಮಾಡಲು ನೀವು ಇಷಪಡುವ್ಟಿರೋ? ಚೆನ್ನಾಗಿ ತಯಾರಿಸುವುದರಿಂದ ಮತ್ತು ನೀವು ಕಂಡುಹಿಡಿಯುವ ಎಲ್ಲಾ ಆಸಕ್ತಿಯನ್ನು ತಡವಿಲ್ಲದೆ ಅನುಸರಿಸುವದರಿಂದ ‘ನಿಮ್ಮ ಶುಶ್ರೂಷೆಯನ್ನು ಪೂರ್ತಿಯಾಗಿ ನೆರವೇರಿಸು’ ವುದರಲ್ಲಿ ಯಶಸ್ಸು ಅಡಗಿದೆ.—2 ತಿಮೊ. 4:5.