ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/95 ಪು. 2
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1995 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • “ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಕೂಟಗಳಲ್ಲಿ ಉತ್ತರಗಳನ್ನು ಹೇಳುವ ಮೂಲಕ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸಿರಿ
    1998 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1995 ನಮ್ಮ ರಾಜ್ಯದ ಸೇವೆ
km 6/95 ಪು. 2

ಪ್ರಶ್ನಾ ಪೆಟ್ಟಿಗೆ

◼ ಕೂಟಗಳಲ್ಲಿ ನಾವು ಅತ್ಯಂತ ಪರಿಣಾಮಕಾರಿಯಾಗಿ ಹೇಳಿಕೆಯನ್ನು ಹೇಗೆ ನೀಡಬಲ್ಲೆವು?

ಸಾಪ್ತಾಹಿಕ ಸಭಾ ಕೂಟಗಳಿಗೆ ಒಟ್ಟಾಗಿ ಕೂಡಲು ನಾವು ಕಾತುರದಿಂದ ಎದುರುನೋಡುತ್ತೇವೆ. ನಮ್ಮ ನಂಬಿಕೆಯನ್ನು ಅಭಿವ್ಯಕ್ತಿಸಲು ಮತ್ತು ನಾವು ಹೇಳಿಕೆಯನ್ನು ನೀಡುವುದರ ಮೂಲಕ ಇತರರನ್ನು ಉತ್ತೇಜಿಸಲು ನಮಗೆ ಅಲ್ಲಿ ಒಂದು ಅವಕಾಶವಿರುತ್ತದೆ. (ಜ್ಞಾನೋ. 20:15; ಇಬ್ರಿ. 10:23, 24) ಹೇಳಿಕೆಯನ್ನು ನೀಡುವುದನ್ನು ಒಂದು ಸುಯೋಗದೋಪಾದಿ ನಾವು ವೀಕ್ಷಿಸಬೇಕು ಮತ್ತು ಕ್ರಮವಾದೊಂದು ಪಾಲನ್ನು ಹೊಂದಲು ಪ್ರಯತ್ನಿಸಬೇಕು. ಇದನ್ನು ನಾವು ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ಮಾಡಬಲ್ಲೆವು?

ತಯಾರಿ ಮಾಡುವುದು ಪ್ರಥಮವಾದ ಹೆಜ್ಜೆಯಾಗಿದೆ. ವಿಷಯದ ಮೇಲೆ ಪೂರ್ವಭಾವಿಯಾಗಿ ಓದುವುದು ಮತ್ತು ಚಿಂತನೆ ಮಾಡುವುದು ಪ್ರಾಮುಖ್ಯವಾಗಿದೆ. ಏನು ಸಾದರಪಡಿಸಲಾಗಿದೆಯೋ ಅದರ ನಿಜವಾದ ಅರ್ಥವನ್ನು ಸೆರೆಹಿಡಿಯಲು ಪ್ರಯತ್ನಿಸಿರಿ. ವಿಷಯವು ಹಿಂದೆ ಚರ್ಚಿಸಲ್ಪಟ್ಟಿರಬಹುದಾದರೂ, ಸಾದರಪಡಿಸಿರುವ ಯಾವುದೇ ವಿಸ್ತಾರ್ಯವಾದ ಅಥವಾ ಉತ್ಪ್ರೇಕ್ಷಿಸಿದ ಅಂಶಗಳಿಗಾಗಿ ನೋಡಿರಿ. ವಸ್ತು ವಿಷಯದ, ಮೊತ್ತದ ಮುಖ್ಯವಿಷಯವನ್ನು ಮನಸ್ಸಿನಲ್ಲಿಡಿರಿ. ಒಂದು ಬೈಬಲ್‌ ಪುಸ್ತಕದ ವ್ಯಾಪಕ ಅಧ್ಯಯನವನ್ನು ಎತ್ತಿ ತೋರಿಸುವ, ಪ್ರಕಟನೆ ಪರಮಾವಧಿ ಎಂಬ ಪುಸ್ತಕದಂಥ ಒಂದು ಪ್ರಕಾಶನದಿಂದ ಹೇಳಿಕೆಗಳನ್ನು ತಯಾರಿಸುವಾಗ ಅದನ್ನು ಸುತ್ತುವರಿದಿರುವ ವಚನಗಳಿಗೆ ಒಂದು ನಿರ್ದಿಷ್ಟವಾದ ವಚನವು ಹೇಗೆ ಸಂಬಂಧಿಸುತ್ತದೆಂದು ನೋಡಲು ಪ್ರಯತ್ನಿಸಿರಿ. ಈ ಸಲಹೆಗಳ ಅನುಸರಿಸುವಿಕೆಯು ನಿಮ್ಮ ಆಲೋಚನಾ ಸಾಮರ್ಥ್ಯವನ್ನು ಉದ್ದೀಪನಗೊಳಿಸುವುದು. ಒಳ್ಳೆಯ ಹೇಳಿಕೆಗಳನ್ನು ತಯಾರಿಸಲು ಮತ್ತು ನಿಮ್ಮ ಭಾಗವಹಿಸುವಿಕೆಯಲ್ಲಿ ಆನಂದವನ್ನು ಪಡೆಯಲು ಇದು ನಿಮಗೆ ಸಹಾಯವನ್ನೀಯುವುದು.

ಉತ್ತಮ ಹೇಳಿಕೆಗಳು ಸಂಕ್ಷಿಪ್ತವೂ, ಸರಳವಾಗಿ ಹೇಳಿದ್ದೂ, ಅಭ್ಯಾಸಿಸಲ್ಪಡುತ್ತಿರುವ ಪ್ರಕಾಶನದ ಮೇಲಾಧರಿತವಾದದ್ದೂ ಆಗಿರುತ್ತವೆ. ಪ್ರಥಮ ಹೇಳಿಕೆಗಾರನು ಅಧಿಕ ಹೇಳಿಕೆಗಳಿಗಾಗಿ ಇತರ ಅಂಶಗಳನ್ನು ಬಿಡುತ್ತಾ, ಪ್ರಶ್ನೆಗೆ ನೇರವಾದ ಉತ್ತರವನ್ನು ನೀಡಬೇಕು. ವಿಪರೀತವಾದ ಸಮಯ ಮತ್ತು ಇತರರನ್ನು ಹೇಳಿಕೆ ನೀಡುವುದರಿಂದ ತಡೆಯುವ, ನಿಡಿದಾದ ಅಸಂಬದ್ಧ ಹೇಳಿಕೆಗಳನ್ನು ತೊರೆಯಿರಿ. ನಿಮ್ಮ ಹೇಳಿಕೆಯನ್ನು ಪ್ರಕಾಶನದಿಂದ ಒಂದೊಂದು ಪದವಾಗಿ ಓದುವುದರ ಬದಲಾಗಿ, ನೀವೇ ನಿಮ್ಮ ಸ್ವಂತ ಪದಗಳಲ್ಲಿ ವ್ಯಕ್ತಪಡಿಸಿರಿ. ಬೆಂಬಲದ ಹೇಳಿಕೆಗಳು ಉದ್ಧರಿಸಿದ ಶಾಸ್ತ್ರವಚನಗಳಲ್ಲಿಯ ಆವೃತ ಅಂಶಗಳನ್ನು ಒಳಗೂಡಬಹುದು. ಇತರರು ಏನು ಹೇಳುತ್ತಾರೆಂದು ಜಾಗರೂಕರಾಗಿ ಆಲಿಸಿರಿ, ಹೀಗೆ ಯಾವುದೇ ಅನಾವಶ್ಯಕವಾದ ಪುನರಾವರ್ತನೆಯನ್ನು ನೀವು ತೊರೆಯಬಲ್ಲಿರಿ.

ಹಲವಾರು ಸಮಯಗಳಲ್ಲಿ ಕೈಯನ್ನು ಎತ್ತುವುದು ಒಳ್ಳೆಯದಾಗಿರುತ್ತದೆ ಆದರೆ ಪ್ರತಿ ಪ್ಯಾರಗ್ರಾಫ್‌ಗಲ್ಲ. ಹೇಳಿಕೆಗಳಲ್ಲಿ ಪಾಲನ್ನು ತೆಗೆದುಕೊಳ್ಳಲು ನಾವು ಎಳೆಯರನ್ನು ಆಮಂತ್ರಿಸುತ್ತೇವೆ. ನೀವು ಹೇಳಿಕೆಗಳನ್ನು ನೀಡುವುದರ ಕುರಿತು ಅನಿಶ್ಚಿತರಾಗಿರುವುದಾದರೆ, ಯಾವ ಪ್ಯಾರಗ್ರಾಫ್‌ನ ಹೇಳಿಕೆಯನ್ನು ನೀಡಲು ನೀವು ಬಯಸುತ್ತೀರೆಂದು ಮುಂಗಡವಾಗಿ ನಿರ್ವಾಹಕನಿಗೆ ನೀವು ಹೇಳಬಹುದು, ಮತ್ತು ಬಹುಶಃ ಹಾಗೆ ಮಾಡಲು ಅವನು ನಿಮಗೆ ಅವಕಾಶವನ್ನೀಯಲು ಶಕ್ತನಾಗುವನು.

ಸಭಿಕರ ಭಾಗವಹಿಸುವಿಕೆಯನ್ನು ಒಳಗೂಡುವ ಸಭಾ ಕೂಟಗಳಲ್ಲಿ ಯಾವುದಾದರೂ ಪಾಲನ್ನು ಹೊಂದಲು ನಾವೆಲ್ಲರು ಒಂದು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಬೇಕು. ಅಂಥ ಕೂಟಗಳ ಸಫಲತೆಯು, ಹೇಳಿಕೆಗಳನ್ನು ಕೊಡುವ ನಮ್ಮ ಸಿದ್ಧಮನಸ್ಸು ಮತ್ತು ಪರಿಣಾಮಕಾರಿತ್ವದ ಮೇಲೆ ಬಹುಮಟ್ಟಿಗೆ ಆತುಕೊಂಡಿರುತ್ತದೆ ಎಂಬುದನ್ನು ಜ್ಞಾಪಕದಲ್ಲಿಡಿರಿ.—ಕೀರ್ತ. 26:12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ