ಪ್ರತಿಯೊಂದು ಸಂದರ್ಭದಲ್ಲಿ ಚಂದಾಗಳನ್ನು ನೀಡಿರಿ
1 ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಗಣ್ಯಮಾಡಲು ನಮಗೆ ಸಕಾರಣವಿದೆ. ಇತರ ಯಾವ ಪತ್ರಿಕೆಗಳಿಗೆ ಅಂತಹ ಅಂತಾರಾಷ್ಟ್ರೀಯ ಆಕರ್ಷಣೆ ಇದೆ? ನಮ್ಮ ಸಾರುವ ಚಟುವಟಿಕೆಯಲ್ಲಿ ಈ ತಿಂಗಳು, ಈ ಪತ್ರಿಕೆಗಳಿಗೆ ಚಂದಾಗಳು ವೈಶಿಷ್ಟ್ಯಸೂಚಕವಾಗಿ ತೋರಿಸಲ್ಪಡುವವು, ಮತ್ತು ಅಕ್ಟೋಬರ್ ತಿಂಗಳ ಸಂಚಿಕೆಗಳು ಎಂತಹ ಪ್ರಬಲವಾದ ಸಮಾಚಾರವನ್ನು ಒಳಗೊಂಡಿವೆ! ಸಾಮಾನ್ಯವಾಗಿ, ಮನೆಯಿಂದ ಮನೆಯ ಕಾರ್ಯದಲ್ಲಿ ನಾವು ನಮ್ಮ ಅಧಿಕಾಂಶ ಪತ್ರಿಕೆಗಳು ಮತ್ತು ಚಂದಾಗಳನ್ನು ನೀಡುತ್ತೇವೆ; ಆದರೂ, ಇತರ ಪ್ರತಿಯೊಂದು ಸೂಕ್ತ ಸಂದರ್ಭದಲ್ಲಿ ಅವುಗಳನ್ನು ನೀಡಲಿಕ್ಕಾಗಿ ಸಹ ಸಿದ್ಧರಾಗಿರುವಂತೆ ನಾವು ಬಯಸುವೆವು.
2 ಅಕ್ಟೋಬರ್ 1ರ “ಕಾವಲಿನಬುರುಜು” ಪತ್ರಿಕೆಯನ್ನು ನೀಡುವಾಗ, ಹೀಗೆ ಹೇಳುವ ಮೂಲಕ, “ಯುದ್ಧರಹಿತವಾದ ಒಂದು ಜಗತ್ತು—ಯಾವಾಗ?” ಎಂಬ ಲೇಖನದಲ್ಲಿ ನೀವು ಆಸಕ್ತಿಯನ್ನು ಪ್ರಚೋದಿಸಬಹುದು:
◼ “ಮಾನವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಶಾಂತಿಭರಿತವಾದ ಒಂದು ಜಗತ್ತು ಅಪ್ರಾಪ್ಯವಾದದ್ದಾಗಿ ಏಕೆ ತೋರುತ್ತದೆ ಎಂದು ಅನೇಕ ಜನರು ಆಶ್ಚರ್ಯಪಡುತ್ತಾರೆ. ಅಕ್ಟೋಬರ್ 1ರ ಕಾವಲಿನಬುರುಜು ಪತ್ರಿಕೆಯ 4 ನೆಯ ಪುಟದಲ್ಲಿರುವ ಈ ಹೇಳಿಕೆಗಳ ಕುರಿತು ನಿಮ್ಮ ಅಭಿಪ್ರಾಯವೇನು? [ಆ ಪುಟದ ಕೆಳಭಾಗದ ರೇಖಾಚೌಕದಲ್ಲಿರುವ ಕೆಲವು ಹೇಳಿಕೆಗಳನ್ನು ಓದಿ, ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಿಶ್ಚಯವಾಗಿ, ಶಾಂತಿಯು ಎಂದಿಗೂ ಬರುವುದಿಲ್ಲವೆಂಬುದನ್ನು ಇದು ಅರ್ಥೈಸುವುದಿಲ್ಲ. ಇಲ್ಲಿ ಯೆಶಾಯ 9:6, 7ರಲ್ಲಿರುವ ದೇವರ ವಾಗ್ದಾನವನ್ನು ಗಮನಿಸಿರಿ.” ನೀವು ಈ ವಚನವನ್ನು ನಿಮ್ಮ ಬೈಬಲಿನಿಂದ ಅಥವಾ ಕಾವಲಿನಬುರುಜು ಪತ್ರಿಕೆಯ 7ನೆಯ ಪುಟದಲ್ಲಿನ ಎರಡನೆಯ ಅಂಕಣದ ಮೇಲ್ಭಾಗದಲ್ಲಿ ಉದ್ಧರಿಸಲ್ಪಟ್ಟಿರುವ ಹಾಗೆಯೇ ಓದಬಹುದು. ಕಾವಲಿನಬುರುಜು ಪತ್ರಿಕೆಯು, ಯೆಹೋವನ ರಾಜ್ಯವನ್ನು ಒಂದು ಶಾಂತಿಭರಿತ ಜಗತ್ತಿಗಾಗಿರುವ ಏಕಮಾತ್ರ ನಿರೀಕ್ಷೆಯೋಪಾದಿ ಸಮರ್ಥಿಸುತ್ತದೆಂದು ಸಂಕ್ಷಿಪ್ತವಾಗಿ ವಿವರಿಸಿ, ಮತ್ತು ಆ ಲೇಖನವನ್ನು ಓದುವಂತೆ ಆ ವ್ಯಕ್ತಿಗೆ ಉತ್ತೇಜಿಸಿರಿ.
3 ಬೈಬಲಿನ ವಿಷಯದಲ್ಲಿ ಪ್ರಾಯಶಃ ಕಡಿಮೆ ಆಸಕ್ತರಾಗಿರುವ ವ್ಯಕ್ತಿಗಳೊಂದಿಗೆ ಮಾತಾಡುವಾಗ, ನೀವು ನವೆಂಬರ್ 8ರ “ಎಚ್ಚರ!” ಪತ್ರಿಕೆಯನ್ನು ನೀಡಿ, ಹೀಗೆ ಹೇಳಬಹುದು:
◼ “ಈ ಪತ್ರಿಕೆಯ ಮುಖಪುಟದ ಮೇಲಿರುವ ಪ್ರಶ್ನೆಯ ಕುರಿತು ನೀವೇನು ಯೋಚಿಸುತ್ತೀರಿ: ‘ಜೀವನವು ಇಷ್ಟು ಅಲ್ಪಕಾಲದ್ದಾಗಿದೆ ಏಕೆ?’ [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಲೇಖನಗಳ ಸರಣಿಯು, ವೃದ್ಧಾಪ್ಯದ ಕುರಿತು ಆಧುನಿಕ ವಿಜ್ಞಾನಿಗಳು ಮತ್ತು ಇತರರು ಹೇಳಬೇಕಾಗಿರುವ ವಿಷಯಕ್ಕೆ ಗಮನವನ್ನು ಸೆಳೆಯುತ್ತದೆ, ಮತ್ತು ತದನಂತರ ನಿತ್ಯ ಜೀವಕ್ಕಾಗಿರುವ ಪ್ರತೀಕ್ಷೆಗಳ ಕುರಿತಾಗಿ ನಮ್ಮ ಸೃಷ್ಟಿಕರ್ತನು ಏನನ್ನು ವಾಗ್ದಾನಿಸಿದ್ದಾನೆ ಎಂಬ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ. ಅಂಚೆಯ ಮೂಲಕ ಕ್ರಮವಾಗಿ ಈ ಪತ್ರಿಕೆಯನ್ನು ನೀವು ಪಡೆದುಕೊಳ್ಳುವಂತೆ ನಾನು ಬಯಸುತ್ತೇನೆ.”
4 ಧಾರ್ಮಿಕ ಒಲವುಳ್ಳವರಾಗಿರುವ ಜನರನ್ನು ನೀವು ಕಂಡುಕೊಳ್ಳುವಾಗ, ಅಕ್ಟೋಬರ್ 15ರ “ಕಾವಲಿನಬುರುಜು” ಪತ್ರಿಕೆಯಿಂದ ಒಂದು ಲೇಖನವನ್ನು ಏಕೆ ತೋರಿಸಬಾರದು? ಈ ನಿರೂಪಣೆಯು ಪ್ರತಿಕ್ರಿಯಾತ್ಮಕವಾದ ವಿಷಯವನ್ನು ನೆನಪಿಗೆ ತರಬಹುದು:
◼ “ಈ ಪ್ರಶ್ನೆಯ ಕುರಿತಾಗಿ ನಿಮ್ಮ ಅಭಿಪ್ರಾಯವನ್ನು ಪಡೆದುಕೊಳ್ಳಲು ನಾನು ಇಷ್ಟಪಡುತ್ತೇನೆ: ದೇವರನ್ನು ಪ್ರೀತಿಸಲು ಮತ್ತು ಅದೇ ಸಮಯದಲ್ಲಿ ಆತನಿಗೆ ಭಯಪಡಲು ಸಾಧ್ಯವಿದೆಯೆ?” ಉತ್ತರಕ್ಕಾಗಿ ಅನುಮತಿಸಿರಿ, ಮತ್ತು ಬಳಿಕ “ಸತ್ಯ ದೇವರಿಗೆ ಈಗ ಏಕೆ ಭಯಪಡಬೇಕು?” ಎಂಬ ಲೇಖನದ ಶೀರ್ಷಿಕೆಯ ವಿಷಯವನ್ನು ಓದಿರಿ. (ಪ್ರಸಂ. 12:13) ರೀಸನಿಂಗ್ ಪುಸ್ತಕದ 199ನೆಯ ಪುಟದಲ್ಲಿರುವ ದೃಷ್ಟಾಂತಗಳಲ್ಲಿ ಒಂದನ್ನು ಉಪಯೋಗಿಸಿರಿ, ಮತ್ತು ಚಂದಾವನ್ನು ನೀಡಿರಿ.
5 ಮನೆಯಿಂದ ಮನೆಗೆ ಕಾರ್ಯನಡಿಸುತ್ತಿರುವಾಗ, ಸಣ್ಣ ಸ್ಟೋರ್ಗಳು ಮತ್ತು ಅಂಗಡಿಗಳನ್ನು ಅಲಕ್ಷಿಸಬೇಡಿ. ಯಾರು ಕ್ರಮವಾಗಿ ಸ್ಟೋರ್ಗಳನ್ನು ಸಂದರ್ಶಿಸುತ್ತಾರೋ, ಅವರು ಈ ಕಾರ್ಯಚಟುವಟಿಕೆಯನ್ನು ಆನಂದದಾಯಕವೂ ಫಲಪ್ರದವೂ ಆದದ್ದಾಗಿ ವರ್ಣಿಸುತ್ತಾರೆ. ಅಕ್ಟೋಬರ್ 8ರ “ಅವೇಕ್!” ಪತ್ರಿಕೆಯನ್ನು ನೀಡುವಾಗ ಇಂತಹ ಒಂದು ಸರಳ ನಿರೂಪಣೆಯನ್ನು ನೀವು ಪ್ರಯತ್ನಿಸಸಾಧ್ಯವಿದೆ:
◼ “ವ್ಯಾಪಾರಸ್ಥರು, ತಮ್ಮ ಸಮುದಾಯವನ್ನು ಬಾಧಿಸುವ ವಿವಾದಾಂಶಗಳ ಕುರಿತು ಕಾಲೋಚಿತವಾಗಿರಲು ಅಪೇಕ್ಷೆಪಡುತ್ತಾರೆಂಬುದು ನಮಗೆ ತಿಳಿದಿದೆ. ಈ ಲೇಖನವು ನಿಮಗೆ ಆಸಕ್ತಿಕರವಾದದ್ದಾಗಿರುವುದೆಂದು ನನಗೆ ನಿಶ್ಚಯವಿದೆ.” ತದನಂತರ “ಏಕ-ಹೆತ್ತವರ ಕುಟುಂಬಗಳು—ಅವರು ಎಷ್ಟು ಸಫಲರಾಗಸಾಧ್ಯವಿದೆ?” ಎಂಬ ಲೇಖನದಿಂದ ಒಂದು ಅಂಶವನ್ನು ಸಂಕ್ಷಿಪ್ತವಾಗಿ ಹಂಚಿರಿ.
6 ನೀವು ಸಮೀಪಿಸುವ ಒಬ್ಬ ವ್ಯಕ್ತಿಯು ನಿಜವಾಗಿಯೂ ಕಾರ್ಯಮಗ್ನನಾಗಿರುವುದಾದರೆ, ನೀವು ಪತ್ರಿಕೆಗಳನ್ನು ತೋರಿಸಿ, ಹೀಗನ್ನಸಾಧ್ಯವಿದೆ:
◼ “ಇಂದು ನೀವು ಒಬ್ಬ ಸಂದರ್ಶಕನನ್ನು ನಿರೀಕ್ಷಿಸುತ್ತಿದ್ದಿರಲಿಲ್ಲವೆಂದು ನನಗೆ ಗೊತ್ತು, ಆದುದರಿಂದ ನಾನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಪ್ರಾಮುಖ್ಯವಾಗಿರುವ ಒಂದು ವಿಷಯವನ್ನು ಓದಲಿಕ್ಕಾಗಿ ನಿಮಗೆ ಒಂದು ಅವಕಾಶವನ್ನು ಕೊಡಲು ನಾನು ಬಯಸುತ್ತೇನೆ.” ನೀವು ಆಯ್ದುಕೊಂಡಿರುವ ಒಂದು ಲೇಖನವನ್ನು ನಿರ್ದೇಶಿಸಿ, ಪತ್ರಿಕೆಗಳನ್ನು ನೀಡಿರಿ.
7 ಒಂದು ಮನೆಯಿಂದ ಮನೆಯ ರೆಕಾರ್ಡನ್ನು ಜಾಗರೂಕತೆಯಿಂದ ಇಡಿರಿ, ಮತ್ತು ಎಲ್ಲಾ ಪತ್ರಿಕಾ ಕೊಡಿಗೆಗಳ ಸ್ಥಳಗಳಿಗೆ ಪುನರ್ಭೇಟಿ ಮಾಡಿರಿ. ಒಂದು ಚಂದಾ ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಲು ನಿಶ್ಚಿತರಾಗಿರ್ರಿ. ತದನಂತರ ಪುನಃ ಸಂದರ್ಶಿಸುವಾಗ ಚಂದಾವನ್ನು ನೀಡಿರಿ. ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ಚಂದಾಗಳನ್ನು ನೀಡಲು ನಾವು ಸಿದ್ಧರೂ ಜಾಗೃತರೂ ಆಗಿರೋಣ.