ನಾವು ದೃಢರಾಗಿ ನಿಲಲ್ಲಿಕ್ಕಾಗಿ ಕ್ರಮವಾದ ಕೂಟದ ಹಾಜರಿಯು ಆವಶ್ಯಕ
1 “ನಂಬಿಕೆಯಲ್ಲಿ ಆರೋಗ್ಯವಂತರಾಗಿ” ಉಳಿಯುವಂತೆ ಅಪೊಸ್ತಲ ಪೌಲನು ನಮ್ಮನ್ನು ಪ್ರೇರೇಪಿಸಿದನು. (ತೀತ 1:9, 13, NW) ಕೂಟಗಳಲ್ಲಿ ನಾವು ಹಿತಕರವಾದ ವಿಚಾರಗಳನ್ನು ಪರಿಗಣಿಸುತ್ತೇವೆ ಮತ್ತು ನಾವು “ಸೈತಾನನ ತಂತ್ರೋಪಾಯಗಳನ್ನು . . . ಎದುರಿಸಿ ನಿಲ್ಲುವದಕ್ಕೆ” ಶಕ್ತರಾಗಲಿಕ್ಕಾಗಿ, ನಮ್ಮನ್ನು ಸಂಪೂರ್ಣವಾಗಿ ಆತ್ಮಿಕ ಯುದ್ಧಕವಚದಿಂದ ಹೊದಿಸಿಕೊಳ್ಳಬೇಕಾದ ವಿಧವು ನಮಗೆ ಬೋಧಿಸಲ್ಪಡುತ್ತದೆ.—ಎಫೆ. 6:11; ಫಿಲಿ. 4:8.
2 ನಮಗೆ ಅಗತ್ಯವಿರುವ ವಿಷಯವನ್ನು ಕೂಟಗಳು ಒದಗಿಸುತ್ತವೆ: ನಾವು ದೃಢರಾಗಿ ನಿಲಲ್ಲಿಕ್ಕಾಗಿ ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಆವಶ್ಯಕವಾಗಿದೆ. (1 ಕೊರಿಂ. 16:13) ಕೂಟಗಳಲ್ಲಿ, ದೇವರಿಗೆ ಉಪಕಾರವನ್ನು ಸಲ್ಲಿಸಲಿಕ್ಕಾಗಿ ಮತ್ತು ಆತನನ್ನು ಸುತ್ತಿಸಲಿಕ್ಕಾಗಿ, ಹಾಗೂ ಸಭೆಯ ಮತ್ತು ಅದರ ಅಗತ್ಯಗಳ ಪರವಾಗಿ ಆತನಿಗೆ ಬಿನ್ನೈಸಲಿಕ್ಕಾಗಿ ಪ್ರಾರ್ಥನೆಗಳು ನಿವೇದಿಸಲ್ಪಡುತ್ತವೆ. (ಫಿಲಿ. 4:6, 7) ರಾಜ್ಯ ಗೀತೆಗಳಲ್ಲಿ ಜೊತೆಗೂಡುವುದು ನಮಗೆ ಆತ್ಮೋನ್ನತಿಯನ್ನುಂಟುಮಾಡುತ್ತದೆ ಮತ್ತು ನಾವು ಯೆಹೋವನನ್ನು ಆರಾಧಿಸುವಾಗ ನಮ್ಮ ಭಾವಾತಿರೇಕಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಂತೆ ಶಕ್ತರನ್ನಾಗಿ ಮಾಡುತ್ತವೆ. (ಎಫೆ. 5:19, 20) ರಾಜ್ಯ ಸಭಾಗೃಹದಲ್ಲಿ ಕೂಟಗಳ ಮೊದಲು ಮತ್ತು ಅನಂತರ ನಾವು ಒಟ್ಟಿಗೆ ಸಾಹಚರ್ಯ ನಡೆಸುವುದು, ನಮ್ಮನ್ನು ಉತ್ತೇಜಿಸುತ್ತದೆ, ನಮ್ಮ ಭಕ್ತಿವೃದ್ಧಿಮಾಡುತ್ತದೆ, ಮತ್ತು ನಮ್ಮನ್ನು ಪುನರ್ಚೈತನ್ಯಗೊಳಿಸುತ್ತದೆ.—1 ಥೆಸ. 5:11.
3 ಕಳೆದ ಎಪ್ರಿಲ್ ತಿಂಗಳಲ್ಲಿ “ಸುಳ್ಳು ಧರ್ಮದ ಅಂತ್ಯವು ಹತ್ತಿರವಿದೆ” ಎಂಬ ವಿಶೇಷ ಭಾಷಣವು, ಮಹಾ ಬಾಬೆಲಿನಿಂದ ಹೊರಬರಲಿಕ್ಕಾಗಿ ಒಡನೆಯೆ ಕ್ರಿಯೆ ಕೈಕೊಳ್ಳುವುದರ ಜರೂರಿಯನ್ನು, ಸತ್ಯಪ್ರಿಯರ ಮನಸ್ಸುಗಳ ಮೇಲೆ ಒತ್ತಯಾಪೂರ್ವಕವಾಗಿ ಅಚೊತ್ಚಿತ್ತು. (ಪ್ರಕ. 18:4) ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ, ನೀತಿವಂತರ ಮಾರ್ಗವನ್ನು ಬೆಳಗಿಸಿರುವ ಬೆಳಕಿನ ಬೆಳಗುಗಳ ಕುರಿತಾಗಿ ಕಾವಲಿನಬುರುಜು ಪತ್ರಿಕೆಯ ಮೂರು ಅಭ್ಯಾಸ ಲೇಖನಗಳನ್ನು ಆವರಿಸುವುದು ಎಷ್ಟೊಂದು ಪ್ರಚೋದನಾತ್ಮಕವಾಗಿತ್ತು! (ಜ್ಞಾನೋ. 4:18) ಆ ಕೂಟಗಳಿಗೆ ಹಾಜರಾಗುವುದನ್ನು ನಾವು ಅಲಕ್ಷ್ಯ ಮಾಡಿದ್ದಲ್ಲಿ, ನಾವು ಏನನ್ನು ಕಳೆದುಕೊಳ್ಳುತ್ತಿದ್ದೆವೆಂಬುದರ ಕುರಿತು ಆಲೋಚಿಸಿರಿ.
4 ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕವು 72ನೆಯ ಪುಟದಲ್ಲಿ ಸೂಚಿಸುವಂತೆ, ದೇವಪ್ರಭುತ್ವ ಶುಶ್ರೂಷಾ ಶಾಲೆಯು ಇಡೀ ಸಭೆಯ ಮುಂದುವರಿಯುತ್ತಿರುವ ಶಿಕ್ಷಣಕ್ಕಾಗಿರುವ ಒಂದು ಒದಗಿಸುವಿಕೆಯಾಗಿದೆ. ಸದ್ಯದಲ್ಲಿ, ಇಂಗ್ಲಿಷ್ ಭಾಷೆಯ ಶೆಡ್ಯೂಲಿನ ಒಂದು ವೈಶಿಷ್ಟ್ಯವು, ಘೋಷಕರು (ಇಂಗ್ಲಿಷ್) ಪುಸ್ತಕವನ್ನು ಉಪಯೋಗಿಸುವ ಮೂಲಕವಾಗಿ ಸಂಸ್ಥೆಯ ಆಧುನಿಕ ದಿನದ ಇತಿಹಾಸದೊಂದಿಗೆ ಹೆಚ್ಚು ಉತ್ತಮವಾಗಿ ಪರಿಚಿತರಾಗುವಂತೆ ನಮಗೆ ಸಹಾಯ ಮಾಡುತ್ತದೆ. ಈ ಶಿಕ್ಷಣ ಸಂದರ್ಭಗಳನ್ನು ಕಳೆದುಕೊಳ್ಳುವುದು ನಮಗೆ ನಷ್ಟಕರ.
5 ನಾವು ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವಂತೆ ನಮ್ಮ ಸೇವಾ ಕೂಟವು ನಮ್ಮನ್ನು ಸಜ್ಜುಗೊಳಿಸುತ್ತದೆ. ರಾಜ್ಯ ವಾರ್ತೆ ನಂಬ್ರ 34ರ ವ್ಯಾಪಕವಾದ ವಿತರಣೆಯಲ್ಲಿ ಪಾಲುತೆಗೆದುಕೊಳ್ಳುವಂತೆ ನಮಗೆ ಎಲ್ಲಿ ಉಪದೇಶಗಳು ಕೊಡಲ್ಪಟ್ಟವೊ, ಆ ಕೂಟದಿಂದ ಇದು ದೃಷ್ಟಾಂತಿಸಲ್ಪಟ್ಟಿತು. ಲೋಕವ್ಯಾಪಕವಾಗಿ ಅಸಾಧಾರಣವಾದ ಫಲಿತಾಂಶಗಳಲ್ಲಿ ಅವಲೋಕಿಸಲ್ಪಡುವಂತೆ, ಈ ಕೆಲಸದ ಮೇಲಿನ ಯೆಹೋವನ ಆಶೀರ್ವಾದಗಳು ಹೇರಳವಾಗಿದ್ದವು. (2 ಕೊರಿಂಥ 9:6, 7ನ್ನು ಹೋಲಿಸಿ.) ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದವರು ಉತ್ತೇಜಿಸಲ್ಪಟ್ಟರು, ಮತ್ತು ಆ ಕಾರ್ಯದಲ್ಲಿ ಕೊಡಲ್ಪಟ್ಟ ಬೆಂಬಲವನ್ನು ವಿಕಸಿಸುವಂತೆ ಅವರು ಸಹಾಯ ಮಾಡಿದರು.
6 ಸಭಾ ಪುಸ್ತಕ ಅಭ್ಯಾಸದಲ್ಲಿ, ಪ್ರಕಟನೆ ಪರಮಾವಧಿ ಪುಸ್ತಕದ ಸಹಾಯದೊಂದಿಗೆ ದೇವರ ವಾಕ್ಯದಿಂದ ನಾವು ಕಲಿಯುತ್ತಿರುವ ವಿಷಯಗಳಿಂದ, ನಮ್ಮ ತುರ್ತಿನ ಭಾವವು ಪ್ರಬಲಗೊಳಿಸಲ್ಪಡುತ್ತದೆ. ಲೋಕ ದೃಶ್ಯದ ಮೇಲೆ ಘಟನೆಗಳು ಶೀಘ್ರವಾಗಿ ಚಲಿಸುತ್ತಿರುವುದರೊಂದಿಗೆ, ಪ್ರಕಟನೆಯ ಹೆಚ್ಚು ಅಗಾಧವಾದ ಪ್ರವಾದನೆಗಳ ನೆರವೇರಿಕೆಯನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ.
7 ಕ್ರಮವಾದ ಕೂಟದ ಹಾಜರಿಗೆ ಆದ್ಯತೆಯನ್ನು ನೀಡಿರಿ: ನಮ್ಮ ಸಹೋದರರು ಪರೀಕ್ಷೆಗಳನ್ನು ಅನುಭವಿಸುತ್ತಿರುವ ಅನೇಕ ದೇಶಗಳಲ್ಲಿ, ಪ್ರತಿ ವಾರ ಒಟ್ಟಿಗೆ ಕೂಡುವುದು ತಮಗೆ ಎಷ್ಟು ಅತ್ಯಾವಶ್ಯಕವಾಗಿದೆ ಎಂಬುದನ್ನು ಅವರು ಇನ್ನೂ ಗ್ರಹಿಸುತ್ತಾರೆ. ಉದಾಹರಣೆಗೆ, ಬುರುಂಡಿ, ರುಆಂಡ, ಲೈಬೀರಿಯ, ಮತ್ತು ಬಾಸ್ನಿಯ ಮತ್ತು ಹರ್ಸಗೊವೀನದಲ್ಲಿ, ಎಷ್ಟೊಂದು ಮಂದಿ ಹೊಸಬರು ಕೂಟಗಳಲ್ಲಿ ಹಾಜರಿರುತ್ತಾರೆಂದರೆ, ಒಟ್ಟು ಸಂಖ್ಯೆಯ ಪ್ರಚಾರಕರಿಗಿಂತ ಅವರ ಹಾಜರಿಯು ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿರುತ್ತದೆ. ಈ ರೀತಿಯಲ್ಲಿ ಯೆಹೋವನು, ಒಂದೇ ಆತ್ಮದಲ್ಲಿ ದೃಢರಾಗಿ ಉಳಿಯುವಂತೆ ಸಹೋದರರಿಗೆ ಸಹಾಯ ಮಾಡುತ್ತಾನೆ.—ಫಿಲಿ. 1:27; ಇಬ್ರಿ. 10:23-25.
8 ಕ್ರಮವಾದ ಕೂಟದ ಹಾಜರಿಯನ್ನು ಅಲಕ್ಷ್ಯ ಮಾಡುತ್ತಿದ್ದಿರಬಹುದಾದ ಯಾರಾದರೂ, ಈ ಪ್ರವೃತ್ತಿಯನ್ನು ಸರಿಪಡಿಸಿಕೊಳ್ಳಲು ಈಗ ಕ್ರಮಗಳನ್ನು ತೆಗೆದುಕೊಳ್ಳಬೇಕು. (ಪ್ರಸಂ. 4:9-12) ದೃಢರಾಗಿ ನಿಲಲ್ಲಿಕ್ಕಾಗಿ, ಕ್ರಮವಾದ ಕೂಟದ ಹಾಜರಿಯಿಂದ ಒದಗಿಸಲ್ಪಡುವಂತೆ, ನಮಗೆ ಪ್ರೌಢರೊಂದಿಗೆ ವಿಷಯಗಳ ಪರಸ್ಪರ ವಿನಿಮಯದ ಅಗತ್ಯವಿದೆ.—ರೋಮಾ. 1:11.