ಒಂದು ಉದ್ದೇಶದೊಂದಿಗೆ ಪುನರ್ಭೇಟಿಗಳು
1 ಪುನರ್ಭೇಟಿಯೊಂದನ್ನು ಮಾಡುವಾಗ, ನೀವು ಹಿಂದೆ ಚರ್ಚಿಸಿದ ವಿಷಯದ ಕುರಿತು ವ್ಯಕ್ತಿಯ ಜ್ಞಾನಕ್ಕೆ ಹೆಚ್ಚನ್ನು ಕೂಡಿಸುವ ಒಂದು ಶಾಸ್ತ್ರವಚನವನ್ನು ಉಪಯೋಗಿಸಲು ನೀವು ಪ್ರಯತ್ನಿಸಬೇಕು.
2 ಒಂದು ಚಂದಾ ದೊರಕದಿದ್ದಲ್ಲಿ, ಪತ್ರಿಕಾ ಕೊಡಿಗೆಗಳ ಸ್ಥಳದಲ್ಲಿ ಪುನರ್ಭೇಟಿಗಳನ್ನು ಮಾಡುವ ಗುರಿಗಳಲ್ಲಿ ಒಂದು, ಪತ್ರಿಕಾ ಮಾರ್ಗವೊಂದನ್ನು ಸ್ಥಾಪಿಸುವುದೇ ಆಗಿದೆ. ಇಂತಹ ಒಂದು ಸರಳವಾದ ನಿರೂಪಣೆಯು ಪರಿಣಾಮಕಾರಿಯಾಗಿರಬಹುದು:
◼ “ನಾನು ನಿಮ್ಮೊಂದಿಗೆ ಬಿಟ್ಟುಹೋದ, ನಾವು ದೇವರಿಗೆ ಏಕೆ ಭಯಪಡುವವರಾಗಿರಬೇಕು ಎಂಬುದನ್ನು ವಿವರಿಸಿದ ಕಾವಲಿನಬುರುಜು ಲೇಖನವನ್ನು ನೀವು ಓದಿ ಆನಂದಿಸಿದಿರೆಂದು ನಾನೆಣಿಸುತ್ತೇನೆ. ಇಂದು, ಎಚ್ಚರ! ಪತ್ರಿಕೆಯಲ್ಲಿ ಬಂದಿರುವ ‘ಜೀವನವು ಇಷ್ಟು ಅಲ್ಪಕಾಲದ್ದಾಗಿದೆ ಏಕೆ?’ ಎಂದು ಕೇಳುವ ಒಂದು ಲೇಖನವನ್ನು ನಾನು ತಂದಿದ್ದೇನೆ. ಅದು ಒಂದು ಒಳ್ಳೆಯ ಪ್ರಶ್ನೆಯಾಗಿದೆ ಅಲ್ಲವೆ?” ಹೀಗೆ ಹೇಳುವ ಮೂಲಕ ನೀವು ಮುಂದುವರಿಸಸಾಧ್ಯವಿದೆ: “ಯೋಹಾನ 3:16 ರಲ್ಲಿರುವ ಯೇಸುವಿನ ಮಾತುಗಳು, ನಿತ್ಯ ಜೀವದ ವಾಗ್ದಾನವನ್ನು ಕೊಡುತ್ತವೆ. ದಯಮಾಡಿ ಈ ಪತ್ರಿಕೆಯನ್ನು ಸ್ವೀಕರಿಸಿರಿ ಮತ್ತು ಬೈಬಲಿನಲ್ಲಿ ಕೊಡಲ್ಪಟ್ಟಿರುವ ಘನವಾದ ನಿರೀಕ್ಷೆಯಿಂದ ಪ್ರೋತ್ಸಾಹವನ್ನು ಪಡೆದುಕೊಳ್ಳಿರಿ.” ತದನಂತರ, ಮುಂದಿನ ಸಂಚಿಕೆಗಳನ್ನು ತರಲು ಮತ್ತು ವಿಧೇಯ ಮಾನವ ಕುಲಕ್ಕಾಗಿ ದೇವರು ವಾಗ್ದಾನಿಸಿರುವ ವಿಷಯವನ್ನು ಪ್ರಾಯಶಃ ಇನ್ನೂ ಹೆಚ್ಚಾಗಿ ಚರ್ಚಿಸಲು ನೀವು ಹಿಂದಿರುಗುವಿರಿ ಎಂಬುದನ್ನು ವಿವರಿಸಿರಿ. ಪ್ರತಿ ಬಾರಿ ನೀವು ಪತ್ರಿಕೆಯನ್ನು ವಿತರಿಸಿದಾಗ, ನೀವು ಒಂದು ಪುನರ್ಭೇಟಿಯನ್ನು ವರದಿಸಬಲ್ಲಿರೆಂಬುದನ್ನು ಜ್ಞಾಪಕದಲ್ಲಿಡಿರಿ.
3 “ಯುದ್ಧರಹಿತವಾದ ಒಂದು ಜಗತ್ತು—ಯಾವಾಗ?” ಎಂಬ ಲೇಖನವನ್ನು ನೀವು ನೀಡಿರುವಲ್ಲಿ, ನೀವು ಹೀಗೆ ಹೇಳಬಹುದು:
◼ “ಸಂಪೂರ್ಣ ಶಾಂತಿಯು ಇರುತ್ತಿದ್ದಲ್ಲಿ ಈ ಭೂಮಿಯ ಮೇಲಿನ ಜೀವನವು ಹೇಗಿರುತ್ತಿತ್ತು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ಏನನ್ನು ಮಾಡುವುದಾಗಿ ವಾಗ್ದಾನಿಸಿದ್ದಾನೆಂಬುದನ್ನು ನಾನು ನಿಮಗೆ ತೋರಿಸುತ್ತೇನೆ.” ಕೀರ್ತನೆ 37:10, 11ನ್ನು ಓದಿರಿ, ಮತ್ತು ದೇವರ ಚಿತ್ತವು ಭೂಮಿಯ ಮೇಲೆ ನೆರವೇರಿಸಲ್ಪಡುವಾಗ ವಿಷಯಗಳು ಹೇಗಿರುವವು ಎಂಬುದನ್ನು ವರ್ಣಿಸಿರಿ. ಮತ್ತಾಯ 6:9, 10 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯಾವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನೆಂಬುದನ್ನು ಆ ವ್ಯಕ್ತಿಗೆ ಹೇಳಿರಿ. ಯೇಸುವಿನ ಮಾತುಗಳ ಅರ್ಥದ ಕುರಿತು ವಿವೇಚಿಸುವಂತೆ ಅವನಿಗೆ ಸಹಾಯ ಮಾಡಿರಿ. ಮನೆಯವನು ಈ ಹಿಂದೆ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಒಂದು ಚಂದಾವನ್ನು ಮಾಡಿರದಿದ್ದಲ್ಲಿ, ನೀವದನ್ನು ಈಗ ನೀಡಬಹುದು ಮತ್ತು ಇನ್ನೂ ಹೆಚ್ಚಿನ ಚರ್ಚೆಗಾಗಿ ಪುನಃ ಹಿಂದಿರುಗಲು ಏರ್ಪಾಡುಗಳನ್ನು ಮಾಡಿರಿ.
4 “ಜೀವನವು ಇಷ್ಟು ಅಲ್ಪಕಾಲದ್ದಾಗಿದೆ ಏಕೆ?” ಎಂಬ ಲೇಖನದ ಮೇಲಿನ ಇನ್ನೂ ಹೆಚ್ಚಿನ ಚರ್ಚೆಗಾಗಿ ನೀವು ಹಿಂದಿರುಗಿದ್ದಲ್ಲಿ, ನೀವು ಈ ರೀತಿ ಆರಂಭಿಸಬಹುದು:
◼ “ಕಳೆದ ಬಾರಿ ನಾನು ಸಂದರ್ಶಿಸಿದಾಗ, ನಾವು ಮಾನವ ದೀರ್ಘಾಯುಸ್ಸಿನ ಕುರಿತಾಗಿ ಮಾತಾಡಿದೆವು. ಎಚ್ಚರ! ಪತ್ರಿಕೆಯ ಲೇಖನಗಳಲ್ಲಿ ನೀವು ನಿಸ್ಸಂಶಯವಾಗಿ ಗಮನಿಸಿದಂತೆ, ನಾವು 70 ಅಥವಾ 80 ಕ್ಕಿಂತಲೂ ಹೆಚ್ಚು ವರ್ಷಗಳಕಾಲ ಜೀವಿಸಲು ಸಹಾಯ ಮಾಡುವ ಅಲ್ಪ ನಿರೀಕ್ಷೆಯನ್ನೇ ವಿಜ್ಞಾನಿಗಳು ಕೊಡುತ್ತಾರೆ. ಆದರೆ ಬೈಬಲು ವಾಗ್ದಾನಿಸುವ ವಿಷಯದ ಕುರಿತು ನೀವೇನು ಅಭಿಪ್ರಯಿಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮನುಷ್ಯನಿಗಾಗಿ, ಹೆಚ್ಚು ಉತ್ತಮವಾದ ಯಾವುದೋ ವಿಷಯವು ದೇವರ ಮನಸ್ಸಿನಲ್ಲಿದೆಯೆಂದು ಬೈಬಲು ತೋರಿಸುತ್ತದೆ.” ಬಳಿಕ ಯೋಹಾನ 17:3ನ್ನು ಓದಿರಿ, ಹಾಗೂ ಜ್ಞಾನವನ್ನು ಪಡೆದುಕೊಳ್ಳುವುದು ಹೇಗೆ ನಿತ್ಯ ಜೀವಕ್ಕೆ ನಡಿಸಬಲ್ಲದೆಂಬುದನ್ನು ವಿವರಿಸಿರಿ. ಈ ಹಂತದಲ್ಲಿ ನೀವು ಒಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಳ್ಳಲು ಅಥವಾ ಇನ್ನೊಂದು ಚರ್ಚೆಗಾಗಿ ಏರ್ಪಾಡನ್ನು ಮಾಡಲು ಶಕ್ತರಾಗಬಹುದು.
5 ನಮ್ಮ ಶುಶ್ರೂಷೆಯಲ್ಲಿ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದು ಒಂದು ಪ್ರಾಮುಖ್ಯವಾದ ಗುರಿಯಾಗಿದೆ. ಬಹುಶಃ ಪತ್ರಿಕೆಗಳನ್ನು ಸ್ವೀಕರಿಸಿರುವ ಒಬ್ಬ ವ್ಯಕ್ತಿಯ ಬಳಿ ನೀವು ಅನೇಕ ಭೇಟಿಗಳನ್ನು ಮಾಡಿದ್ದೀರಿ. ಮುಂದಿನ ಬಾರಿ ನೀವು ಭೇಟಿನೀಡುವಾಗ ಈ ಪ್ರಸ್ತಾವನೆಯನ್ನು ಏಕೆ ಪ್ರಯತ್ನಿಸಬಾರದು?:
◼ “ಧರ್ಮ ಮತ್ತು ಆಧುನಿಕ ಜೀವಿತದಲ್ಲಿನ ಅದರ ಮೌಲ್ಯದ ಕುರಿತಾಗಿ ಜನರಿಗೆ ಅನೇಕ ವಿಭಿನ್ನ ಕಲ್ಪನೆಗಳಿವೆ. ದೇವರು ದುಷ್ಟತನಕ್ಕೆ ಏಕೆ ಅನುಮತಿಯನ್ನು ಕೊಟ್ಟಿದ್ದಾನೆ ಅಥವಾ ನಾವು ವೃದ್ಧರಾಗಿ ಸಾಯುವುದರ ಕಾರಣವೇನು ಎಂಬುದರ ಕುರಿತು ಘರ್ಷಣಾತ್ಮಕವಾದ ನಂಬಿಕೆಗಳಿವೆ. ಪ್ರಾರ್ಥಿಸುವ ಮತ್ತು ದೇವರಿಂದ ಆಲಿಸಲ್ಪಡುವ ವಿಧವನ್ನು ತಿಳಿದುಕೊಳ್ಳಲು ಕೆಲವು ಜನರು ಇಷ್ಟಪಡುವರು.” ಮನೆಯವನಿಗೆ ಆಸಕ್ತಿದಾಯಕವಾಗಿದೆ ಎಂದು ನಿಮಗನಿಸುವ ಒಂದು ವಿಷಯದ ಕಡೆಗೆ ನಿಮ್ಮ ಬೈಬಲ್ ಅಧ್ಯಯನದ ಪ್ರಕಾಶನಗಳಲ್ಲಿ ಒಂದನ್ನು ತೆರೆಯಿರಿ, ಮತ್ತು ಒಂದು ಅಧ್ಯಯನವು ಹೇಗೆ ನಡಿಸಲ್ಪಡುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸಿರಿ.
6 ಯೆಹೋವನು ಉದ್ದೇಶದ ಒಬ್ಬ ದೇವರಾಗಿದ್ದಾನೆ. ಒಂದು ಉದ್ದೇಶದೊಂದಿಗೆ ಪುನರ್ಭೇಟಿಯನ್ನು ಮಾಡುವ ಮೂಲಕ, ಅಕ್ಟೋಬರ್ ತಿಂಗಳಿನಲ್ಲಿ ನಾವು ಆತನನ್ನು ಅನುಕರಿಸೋಣ.