1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 2
1 ದೇವಪ್ರಭುತ್ವ ಶುಶ್ರೂಷಾ ಶಾಲೆಯು 1943ರಲ್ಲಿ ಪ್ರಾರಂಭವಾದ ಸ್ವಲ್ಪ ಸಮಯಾನಂತರ, ಸೊಸೈಟಿಯ ಶಾಖೆಗಳಲ್ಲಿ ಒಂದು ಶಾಖೆಯು ವರದಿಸಿದ್ದು: “ವೇದಿಕೆಯ ಮೇಲೆ ಹೆಚ್ಚು ದಕ್ಷನಾಗಿ ಪರಿಣಮಿಸಲು ಮತ್ತು ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪರಿಣಮಿಸಲು ತಾವೆಂದೂ ಸಾರ್ವಜನಿಕ ಭಾಷಣಕರ್ತರಾಗುವುದಿಲ್ಲವೆಂದು ಯಾರು ಭಾವಿಸಿಕೊಂಡಿದ್ದರೋ, ಆ ಅನೇಕ ಸಹೋದರರಿಗೆ ಸಹಾಯಮಾಡುವುದರಲ್ಲಿ ಈ ಅತ್ಯಂತ ಉತ್ತಮವಾದ ಏರ್ಪಾಡು ಕೊಂಚ ಸಮಯದಲ್ಲಿಯೇ ಯಶಸ್ವಿಗೊಂಡಿತು.” ಶಾಲೆಯು ನಮಗೆಲ್ಲರಿಗೂ ಅಗತ್ಯವಿರುವ ಅತ್ಯುತ್ಕೃಷ್ಟವಾದ ತರಬೇತಿಯನ್ನು ಒದಗಿಸುವುದನ್ನು ಮುಂದುವರಿಸಿದೆ.
2 ಬೈಬಲ್ ವಾಚನ: ಯಾರಿಗೆ ಭಾಷಣದ ಭಾಗಗಳು ಕೊಡಲ್ಪಡುತ್ತವೋ ಅವರು ಮಾತ್ರ ಶಾಲೆಯಿಂದ ಪ್ರಯೋಜನವನ್ನು ಹೊಂದುವುದಿಲ್ಲ. ವಾಸ್ತವವಾಗಿ, ನಮ್ಮಲ್ಲಿ ಎಲ್ಲರಿಗೂ ನೇಮಕವೊಂದಿದೆ—ವಾರದ ಬೈಬಲ್ ವಾಚನ. ಶಾಲೆಯ ಕಾರ್ಯತಖ್ತೆಯು ಬೈಬಲಿನ ಯಾವ ಅಧ್ಯಾಯಗಳು ಪ್ರತಿ ವಾರ ಓದಲ್ಪಡಬೇಕಾಗಿವೆ ಎಂಬುದನ್ನು ತೋರಿಸುತ್ತದೆ. ಬೈಬಲನ್ನು ಪ್ರತಿನಿತ್ಯವೂ ಓದುವುದರ ಪ್ರಾಮುಖ್ಯವನ್ನು ಒತ್ತಿ ಹೇಳುವ ಅನೇಕ ಶಾಸ್ತ್ರೀಯ ಮರುಜ್ಞಾಪನಗಳು ಇವೆ. (ಯೆಹೋ. 1:8; ಕೀರ್ತ. 1:2; ಅ. ಕೃ. 17:11) ಬೈಬಲ್ ವಾಚನವು ಒಳ್ಳೆಯ ಆತ್ಮಿಕ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ; ಇದು ಹೃದಮನವನ್ನು ಪೋಷಿಸುತ್ತದೆ. ನಾವು ಬೈಬಲನ್ನು ದಿನವೊಂದಕ್ಕೆ ಕಡಿಮೆಪಕ್ಷ ಐದು ನಿಮಿಷಗಳ ವರೆಗಾದರೂ ಓದುವುದಾದರೆ, ನಾವು ಬೈಬಲ್ ವಾಚನಕ್ಕಾಗಿರುವ ಶಾಲಾ ಕಾರ್ಯತಖ್ತೆಗೆ ಸಮವಾಗಿ ಹೋಗಲು ಶಕ್ತರಾಗುವೆವು. ವರ್ಷದ ಅಂತ್ಯದಲ್ಲಿ, ದೇವರ ವಾಕ್ಯದ ಸುಮಾರು 150 ಅಧ್ಯಾಯಗಳನ್ನು ನಾವು ಓದಿರುವೆವು. ಬೈಬಲೊಂದನ್ನು ಕೈಗೆಟುಕುವಂತೆ ಇಡುವುದಾದರೆ, ಅದರ ಕೆಲವೊಂದು ಭಾಗವನ್ನು ನಾವು ಪ್ರತಿ ದಿನವೂ ಓದಶಕ್ತರಾಗುವೆವು.
3 ಉಪದೇಶ ಭಾಷಣ: ಸಹೋದರರನ್ನು ನಿಷ್ಠೆಯ, ಹುರುಪಿನ ಸೇವೆಗೆ ಪ್ರಚೋದಿಸುವ ಉದ್ದೇಶದಿಂದ, ಉಪದೇಶ ಭಾಷಣವನ್ನು ನೀಡುವ ಭಾಷಣಕರ್ತನು, ತಿಳಿವಳಿಕೆ ನೀಡಲು ಮತ್ತು ಯೆಹೋವನಿಗೆ, ಆತನ ವಾಕ್ಯಕ್ಕೆ, ಹಾಗೂ ಆತನ ಸಂಸ್ಥೆಗಾಗಿ ಗಣ್ಯತೆಯನ್ನು ಕಟ್ಟಲಿಕ್ಕಾಗಿ ಒಳ್ಳೆಯ ಕಲಿಸುವ ವಿಧಾನಗಳನ್ನು ಉಪಯೋಗಿಸುವ ಅಗತ್ಯವಿದೆ. ಇದನ್ನು ಹಿರಿಯರು ಮತ್ತು ಶುಶ್ರೂಷಾ ಸೇವಕರು ಚೆನ್ನಾಗಿ ತಯಾರಿಸುವ ಮೂಲಕ, ವಿಷಯದ ಸುತ್ತಲೂ ತಮ್ಮ ಭಾಷಣವನ್ನು ಕೇಂದ್ರೀಕರಿಸುವ ಮೂಲಕ, ನಿಶ್ಚಿತಾಭಿಪ್ರಾಯದಿಂದ ಮಾತಾಡುವ ಮೂಲಕ, ಮತ್ತು ವಿಷಯವನ್ನು ಸಜೀವವಾಗಿ ಮಾಡುವ ಮೂಲಕ ಪೂರೈಸಬಲ್ಲರು. (ಇಬ್ರಿ. 4:12) ತನಗೆ ನಿಗದಿ ಮಾಡಲ್ಪಟ್ಟ ಸಮಯದೊಳಗೆ ಭಾಷಣಕರ್ತನು ಭಾಷಣವನ್ನು ಮುಗಿಸುವುದು ಪ್ರಾಮುಖ್ಯವಾಗಿದೆ. “ಸಕಲ ಶಾಸ್ತ್ರ” (ಇಂಗ್ಲಿಷ್) ಪುಸ್ತಕವು ಬೈಬಲ್ ವಚನಗಳಿಂದ ಭರಿತವಾಗಿದ್ದು, ನಮಗೆ ಆತ್ಮಿಕವಾಗಿ ಪ್ರಯೋಜನವನ್ನು ನೀಡಬಲ್ಲ ಉತ್ತೇಜಿಸುವ ಶಾಸ್ತ್ರೀಯ ವಿಷಯದ ಒಂದು ಸರಣಿಯನ್ನು ಪ್ರಸ್ತುತಪಡಿಸುತ್ತದೆ. ಘೋಷಕರು (ಇಂಗ್ಲಿಷ್) ಪುಸ್ತಕವು ಯೆಹೋವನ ದೃಶ್ಯ ಸಂಸ್ಥೆಯ ಆಧುನಿಕ ದಿನದ ಇತಿಹಾಸವನ್ನು ಒಳಗೊಂಡಿದೆ ಮತ್ತು ನಂಬಿಕೆ, ಹುರುಪು, ಭಕ್ತಿ ಮತ್ತು ಪ್ರೀತಿಯನ್ನು ಪ್ರದರ್ಶಿಸಿದ ನಿಜ ಜನರ ಜೀವಿತಗಳಲ್ಲಿನ ಘಟನೆಗಳನ್ನು ತಿಳಿಸುತ್ತದೆ. ನಮ್ಮ ದೇವಪ್ರಭುತ್ವ ಪರಂಪರೆಯ ಕುರಿತಾಗಿ ಮತ್ತು ಆಧುನಿಕ ಸಮಯಗಳಲ್ಲಿ ಯೆಹೋವನು ತನ್ನ ಜನರನ್ನು ಯಾವ ವಿಧದಲ್ಲಿ ಆಶೀರ್ವದಿಸಿದ್ದಾನೆ ಎಂಬುದರ ಕುರಿತಾಗಿ ಹೇರಳವಾಗಿ ಕಲಿಯಲಿಕ್ಕಿದೆ. ಆರಾಧನೆಯಲ್ಲಿ ಐಕ್ಯರು ಎಂಬ ಪುಸ್ತಕವು ಯೆಹೋವನ ವ್ಯಕ್ತಿತ್ವದ ಕುರಿತಾಗಿ ಹೆಚ್ಚು ಅಗಾಧವಾದ ಒಳನೋಟವನ್ನು ಪಡೆಯಲು ಮತ್ತು ಬೈಬಲ್ ತತ್ವಗಳ ವೈಯಕ್ತಿಕ ಅನ್ವಯವನ್ನು ಮಾಡಲು ಸಹಾಯವನ್ನೀಯುತ್ತದೆ.
4 ಬೈಬಲ್ ಮುಖ್ಯಾಂಶಗಳು: ಯಾರಿಗೆ ಈ ನೇಮಕವು ನೀಡಲ್ಪಟ್ಟಿದೆಯೋ ಆ ಸಹೋದರರು ಸಭೆಯ ಪ್ರಯೋಜನಕ್ಕಾಗಿ ಒಂದು ಪ್ರಾಯೋಗಿಕ ವಿಧದಲ್ಲಿ ಅನ್ವಯಿಸಲ್ಪಡಸಾಧ್ಯವಿರುವ ನಿರ್ದಿಷ್ಟ ವಚನಗಳನ್ನು ಆರಿಸಿಕೊಳ್ಳಬೇಕು. ಇದು ನೇಮಿಸಲ್ಪಟ್ಟ ಅಧ್ಯಾಯಗಳನ್ನು ಓದುವುದು, ಅವುಗಳ ಕುರಿತು ಮನನ ಮಾಡುವುದು, ಮತ್ತು ಆ ಶಾಸ್ತ್ರವಚನಗಳ ಅರ್ಥವನ್ನು ಸ್ಪಷ್ಟೀಕರಿಸುವ ಅಂಶಗಳನ್ನು ಕಂಡುಹಿಡಿಯಲಿಕ್ಕಾಗಿ ಆಯ್ದ ವಚನಗಳನ್ನು ಸಂಶೋಧಿಸುವುದನ್ನು ಕೇಳಿಕೊಳ್ಳುತ್ತದೆ. ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ನ ಹಿಂದೆ, “ಶಾಸ್ತ್ರವಚನದ ವಿಷಯಸೂಚಿ” ಇದೆ, ಅದು ನಿರ್ದಿಷ್ಟ ಬೈಬಲ್ ವಚನಗಳ ಕುರಿತಾದ ಮಾಹಿತಿಯ ಗುರುತಿಸುವಿಕೆಯಲ್ಲಿ ಸಹಾಯವನ್ನೀಯಸಾಧ್ಯವಿದೆ. ಈ ಭಾಗವನ್ನು ನಿರ್ವಹಿಸುತ್ತಿರುವ ಸಹೋದರರು ಒಳ್ಳೆಯ ವಿವೇಚನೆಯನ್ನು ಉಪಯೋಗಿಸಬೇಕು ಮತ್ತು ಅಸಂಬದ್ಧ ವಿಷಯದ ಒಳತರುವಿಕೆಯನ್ನು ವರ್ಜಿಸಬೇಕು. ಆರು ನಿಮಿಷಗಳಲ್ಲಿ ಸಮಂಜಸವಾಗಿ ಆವರಿಸಲ್ಪಡಸಾಧ್ಯವಿರುವುದಕ್ಕಿಂತ ಹೆಚ್ಚಿನ ವಿಷಯವನ್ನು ಅವರು ತಯಾರಿಸಬಾರದು.
5 ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ನಾವೆಲ್ಲರೂ ಪ್ರಯೋಜನವನ್ನು ಪಡೆಯಬಲ್ಲೆವು. ಇದು ನಮ್ಮ ಮಾತಾಡುವಿಕೆಯಲ್ಲಿ ಮತ್ತು ಬೋಧನಾ ಸಾಮರ್ಥ್ಯದಲ್ಲಿ ಅಭಿವೃದ್ಧಿಮಾಡುವಂತೆ ನಮಗೆ ಸಹಾಯವನ್ನೀಯಬಲ್ಲದು. ಈ ಒದಗಿಸುವಿಕೆಯ ಪೂರ್ಣ ಪ್ರಯೋಜನವನ್ನು ಪಡೆಯುವುದು, ನಮ್ಮ ‘ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವಂತೆ’ ಮಾಡಲು ನಮಗೆ ಖಚಿತವಾಗಿ ಸಹಾಯವನ್ನೀಯುವುದು.—1 ತಿಮೊ. 4:15.