ಫೆಬ್ರವರಿಗಾಗಿ ಸೇವಾ ಕೂಟಗಳು
ಫೆಬ್ರವರಿ 5ರ ವಾರ
ಸಂಗೀತ 96 (72)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಮಾರ್ಚ್ 1, 1996ರಿಂದ ಆಗುವ ಪತ್ರಿಕಾ ದರಗಳಲ್ಲಿನ ಹೆಚ್ಚಳಕ್ಕೆ ಗಮನವನ್ನು ಸೆಳೆಯಿರಿ.
15 ನಿ: “ಯೇಸುವಿನ ಅನುಕರಣೆಯಲ್ಲಿ ದಿನಾಲು ಸತ್ಯವನ್ನು ಘೋಷಿಸುತ್ತಿರುವುದು.” ಪ್ರಶ್ನೋತ್ತರಗಳು. ಪ್ಯಾರಗ್ರಾಫ್ 5ನ್ನು ಓದಿರಿ.
20 ನಿ: “ನಿಜ ಸಂತೋಷಕ್ಕೆ ಒಂದು ಕೀಲಿ ಕೈ.” ಸೂಚಿಸಲ್ಪಟ್ಟ ನಿರೂಪಣೆಗಳನ್ನು ಚರ್ಚಿಸಿರಿ ಮತ್ತು ಒಂದು ಅಥವಾ ಎರಡು ಪ್ರತ್ಯಕ್ಷಾಭಿನಯಗಳಿರಲಿ. ಸದಾ ಜೀವಿಸಬಲ್ಲಿರಿ ಮತ್ತು ಕುಟುಂಬ ಪುಸ್ತಕಗಳನ್ನು ಪ್ರಚಾರಕರು ಯಾವಾಗಲೂ ತಮ್ಮೊಂದಿಗೆ ಒಯ್ಯಬೇಕೆಂಬ ಸಲಹೆಯನ್ನು ನೀಡಿರಿ, ಏಕೆಂದರೆ ಇವು ಬಹಳ ಪ್ರಾಯೋಗಿಕವೂ ನೀಡಲು ಬಹಳ ಸುಲಭವೂ ಆಗಿವೆ.
ಸಂಗೀತ 14 (6) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 12ರ ವಾರ
ಸಂಗೀತ 191 (98)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
13 ನಿ: “ಎಪ್ರಿಲ್ನಲ್ಲಿ ಪತ್ರಿಕಾ ಚಟುವಟಿಕೆಗಾಗಿ ತಯಾರಿಮಾಡಿರಿ.” ಸುವಾರ್ತೆಯನ್ನು ತಿಳಿಯಪಡಿಸುವುದರಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮೌಲ್ಯವನ್ನು ಎತ್ತಿಹೇಳಿರಿ. ಎರಡು ಪ್ಯಾರಗ್ರಾಫ್ನ ಆ ಲೇಖನವನ್ನು ಓದಿರಿ ಮತ್ತು ಪತ್ರಿಕಾ ವಿತರಣೆಗಾಗಿ ಎಪ್ರಿಲ್ ತಿಂಗಳನ್ನು ಒಂದು ವಿಶೇಷ ತಿಂಗಳನ್ನಾಗಿ ಮಾಡಲು ಸ್ಥಳಿಕ ಸಭೆಯು ಏನು ಮಾಡುವುದು ಎಂಬುದನ್ನು ರೇಖಿಸಿರಿ. ಎಪ್ರಿಲ್ ಅಥವಾ ಮೇ, ಅಥವಾ ಎರಡೂ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ಸಭೆಯಲ್ಲಿರುವ ಎಲ್ಲರನ್ನೂ ಉತ್ತೇಜಿಸಿರಿ.
22 ನಿ: “ಕಿವಿಗೊಡುವವರನ್ನು ನಾನು ಹೇಗೆ ಕಂಡುಕೊಳ್ಳಬಲ್ಲೆ?” ಪ್ರಶ್ನೋತ್ತರಗಳು. ಶಾಲಾ ಮಾರ್ಗದರ್ಶಕ (ಇಂಗ್ಲಿಷ್) ಪುಸ್ತಕದಲ್ಲಿ 165-7ನೇ ಪುಟಗಳಲ್ಲಿರುವ, 10-21 ಪ್ಯಾರಗ್ರಾಫ್ಗಳಲ್ಲಿ ನೀಡಲ್ಪಟ್ಟಿರುವ ಕೆಲವು ಸಲಹೆಗಳನ್ನು ಉಪಯೋಗಿಸುತ್ತಾ, ಮನೆಬಾಗಿಲಲ್ಲಿ ಮಾತಾಡುತ್ತಿರುವಾಗ ಹೆಚ್ಚಿನ ಹೃದಯೋಲ್ಲಾಸವನ್ನು ತೋರಿಸಲು ಅವರು ಹೇಗೆ ಪ್ರಯತ್ನಿಸುವರು ಎಂಬುದನ್ನು ಇಬ್ಬರು ಪ್ರಚಾರಕರು ಚರ್ಚಿಸುವಂತೆ ಮಾಡಿರಿ. ಟೆರಿಟೊರಿಯಲ್ಲಿ ವಿರೋಧವನ್ನು ಎದುರಿಸುವಾಗ ಔಚಿತ್ಯ ಜ್ಞಾನಕ್ಕಾಗಿರುವ ಅಗತ್ಯವನ್ನು ಒತ್ತಿಹೇಳಿರಿ.
ಸಂಗೀತ 133 (68) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 19ರ ವಾರ
ಸಂಗೀತ 72 (58)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 2.” ಶಾಲಾ ಮೇಲ್ವಿಚಾರಕನಿಂದ ಭಾಷಣ. ಪ್ರತಿನಿತ್ಯವೂ ದೇವರ ವಾಕ್ಯವನ್ನು ಓದುವ ಅಗತ್ಯವನ್ನು ಒತ್ತಿ ಹೇಳಿರಿ.
20 ನಿ: “ಅವರಿಗೆ ಗ್ರಹಿಸಲು ಸಹಾಯಮಾಡಿರಿ.” ಪುನರ್ಭೇಟಿಗಳನ್ನು ಮಾಡಲಿಕ್ಕಾಗಿರುವ ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಸದಾ ಜೀವಿಸಬಲ್ಲಿರಿ ಮತ್ತು ಕುಟುಂಬ ಪುಸ್ತಕಗಳ ವೈಶಿಷ್ಟ್ಯಗಳನ್ನು ಹಾಗೂ ಇವು ಹೇಗೆ ಎತ್ತಿತೋರಿಸಲ್ಪಡಬಹುದೆಂಬುದನ್ನು, ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ ಹಿರಿಯನು ಚರ್ಚಿಸುತ್ತಾನೆ. ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಬೈಬಲ್ ಅಭ್ಯಾಸವೊಂದನ್ನು ಪ್ರಾರಂಭಿಸಸಾಧ್ಯವಿರುವ ಹಂತದ ತನಕ ಆಸಕ್ತಿಯನ್ನು ಹೇಗೆ ವಿಕಸಿಸುವುದು ಎಂಬುದರ ಕುರಿತಾಗಿ ಸಲಹೆಗಳನ್ನು ನೀಡಿರಿ.
ಸಂಗೀತ 53 (27) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 26ರ ವಾರ
ಸಂಗೀತ 28 (5)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: ಹಿಡಿಸುವಂಥ ನಿರೂಪಣೆಗಳನ್ನು ತಯಾರಿಸುವುದು. ಸೇವಾ ಮೇಲ್ವಿಚಾರಕನು ಅಥವಾ ಇತರ ಹಿರಿಯನು, ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ—ಸ್ಥಳಿಕವಾಗಿ ಹಿಡಿಸುವ ಯಾವುದೋ ವಿಷಯವನ್ನು ತೋರಿಸುವ—ಮನೆಯಿಂದ ಮನೆಗೆ ನೀಡಲ್ಪಡುವ ನಿರೂಪಣೆಗಳನ್ನು ಹೊಂದುವುದರ ಪ್ರಯೋಜನಗಳನ್ನು ಚರ್ಚಿಸುವನು. ಉದಾಹರಣೆಗಾಗಿ, ಜೀವನದ ಮಟ್ಟವನ್ನು ಅಭಿವೃದ್ಧಿಗೊಳಿಸುವ ಸದ್ಯದ ಪ್ರಯತ್ನಗಳ ಕುರಿತಾದ ಸ್ಥಳಿಕ ವಾರ್ತಾ ವರದಿಗಳು; ವೈವಾಹಿಕ ಸಮಸ್ಯೆಗಳ ಬೆಳೆಯುತ್ತಿರುವ ಪ್ರವೃತ್ತಿ, ಅಪರಾಧಿ ಮಕ್ಕಳು, ಅಥವಾ ಉದ್ಯೋಗವನ್ನು ಕಂಡುಕೊಳ್ಳುವುದರಲ್ಲಿನ ಕಷ್ಟಗಳು; ಅಥವಾ ರಾಜಕಾರಣಿಗಳು ಮತ್ತು ವೈದಿಕರಿಂದ ನೀಡಲ್ಪಡುವ ಪರಿಹಾರಗಳ ಕುರಿತು ಜನರು ಏಕೆ ಹೆಚ್ಚೆಚ್ಚು ಸಂದೇಹವಾದಿಗಳಾಗಿ ಪರಿಣಮಿಸುತ್ತಿದ್ದಾರೆ ಎಂಬುದನ್ನು ತೋರಿಸುವ ವಾರ್ತಾ ಅಂಶಗಳು. ನಿಮ್ಮ ಸಮುದಾಯದಲ್ಲಿರುವ, ಕೆಲವು ಸದ್ಯದ ವಾರ್ತೆಗಳನ್ನು ಉಲ್ಲೇಖಿಸಿರಿ ಮತ್ತು ಸಂಭಾಷಣೆಗಳನ್ನು ಪ್ರಾರಂಭಿಸಲು ಅವು ಹೇಗೆ ಉಪಯೋಗಿಸಲ್ಪಡಬಹುದು ಎಂಬುದನ್ನು ಚರ್ಚಿಸಿರಿ.
20 ನಿ: ಮಾರ್ಚ್ ತಿಂಗಳಿನಲ್ಲಿ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ನೀಡುವುದು. ಸಂಭಾಷಣೆಗಳನ್ನು ಪ್ರಾರಂಭಿಸಲು ಉಪಯೋಗಿಸಸಾಧ್ಯವಿರುವ ಪುಸ್ತಕದ ಕೆಲವು ಆಸಕ್ತಿಕರವಾದ ವೈಶಿಷ್ಟ್ಯಗಳನ್ನು ಹೇಳಿರಿ. (1) 4-5, 86, 124-5, 188-9ನೇ ಪುಟಗಳಲ್ಲಿ ತೋರಿಸಲ್ಪಟ್ಟಿರುವಂಥ ಮನತಾಕಿಸುವ ಚಿತ್ರಗಳಿಗೆ ಗಮನವನ್ನು ಸೆಳೆಯಿರಿ. (2) ಪ್ರತಿ ಅಧ್ಯಾಯವು ಪುನರ್ವಿಮರ್ಶೆಯ ಪ್ರಶ್ನೆಗಳ ಒಂದು ಪಟ್ಟಿಯೊಂದಿಗೆ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ತೋರಿಸಿರಿ ಮತ್ತು ನಿರೂಪಣೆಗಳಿಗಾಗಿ ಆಧಾರದೋಪಾದಿ ಇವುಗಳು ಹೇಗೆ ಉಪಯೋಗಿಸಲ್ಪಡಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಮನೆಯವನು ಉತ್ತರಗಳನ್ನು ತಿಳಿಯಲು ಬಯಸುತ್ತಾನೋ ಎಂಬುದಾಗಿ ಅವನನ್ನು ಕೇಳಸಾಧ್ಯವಿದೆ. 11, 22, 61, 149ನೇ ಪುಟಗಳಲ್ಲಿ ಪಟ್ಟಿಮಾಡಲ್ಪಟ್ಟಿರುವ ಪ್ರಶ್ನೆಗಳಲ್ಲಿ ಕೆಲವನ್ನು ಆರಿಸಿಕೊಳ್ಳಿರಿ. (3) ಪುಟ 102ರಲ್ಲಿರುವ ರೇಖಾಚೌಕಕ್ಕೆ ನಿರ್ದೇಶಿಸಿರಿ ಮತ್ತು “ಕೊನೆಯ ದಿವಸಗಳ ಕೆಲವು ಲಕ್ಷಣಗಳು” ಹೇಗೆ ಆಸಕ್ತಿಯನ್ನು ಪ್ರಚೋದಿಸಲು ಉಪಯೋಗಿಸಲ್ಪಡಸಾಧ್ಯವಿದೆ ಎಂಬುದನ್ನು ತೋರಿಸುವ ಸಲಹೆಗಳನ್ನು ನೀಡಿರಿ. (4) ಪ್ರಗತಿಪರ ಅಭ್ಯಾಸಗಳನ್ನು ನಿರ್ವಹಿಸಲಿಕ್ಕಾಗಿ ಪುಸ್ತಕವು ಹೇಗೆ ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿದೆ ಎಂಬುದನ್ನು ಒತ್ತಿ ಹೇಳಿರಿ. ಅಧ್ಯಾಯಗಳು ಚಿಕ್ಕದಾಗಿವೆ, ವಿಷಯವು ಗ್ರಹಿಸಲು ಅತಿ ಸುಲಭವಾಗಿದೆ, ಶಕ್ತಿಶಾಲಿ ಶಾಸ್ತ್ರವಚನಗಳು ಉದ್ಧರಿಸಲ್ಪಟ್ಟಿವೆ, ಮತ್ತು ಅನ್ವೇಷಕ ಪ್ರಶ್ನೆಗಳು ಮುಖ್ಯ ಅಂಶಗಳ ಮೇಲೆ ಕೇಂದ್ರೀಕರಿಸುತ್ತವೆ. ಅಭ್ಯಾಸಗಳನ್ನು ಪ್ರಾರಂಭಿಸುವ ಗುರಿಯೊಂದಿಗೆ ಪುಸ್ತಕವನ್ನು ನೀಡುವಂತೆ ಎಲ್ಲರನ್ನು ಪ್ರೇರೇಪಿಸಿರಿ. ನಿಮ್ಮ ಸಭೆಯಲ್ಲಿ, ಪುಸ್ತಕವು ನಿಮ್ಮ ಭಾಷೆಯಲ್ಲಿ ಇನ್ನೂ ದೊರೆಯದಿರುವಲ್ಲಿ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಲಿಕ್ಕೆ ಈ ಐಟಮ್ ಅನ್ನು ಸರಿಹೊಂದಿಸಿಕೊಳ್ಳಿರಿ. ಎಲ್ಲ ಸಮಯಗಳಲ್ಲೂ ತಮ್ಮೊಂದಿಗೆ ಕುಟುಂಬ ಪುಸ್ತಕವನ್ನು ಒಯ್ಯುವಂತೆಯೂ ಮತ್ತು ಸೂಕ್ತವಾದಲ್ಲಿ ಅದನ್ನು ನೀಡುವಂತೆಯೂ ಪ್ರಚಾರಕರನ್ನು ಉತ್ತೇಜಿಸಿರಿ.
ಸಂಗೀತ 151 (25) ಮತ್ತು ಸಮಾಪ್ತಿಯ ಪ್ರಾರ್ಥನೆ.