1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 3
1 ಸುವಾರ್ತೆಯನ್ನು ಧೈರ್ಯದಿಂದ ಮಾತಾಡುವ ಸಾಮರ್ಥ್ಯವನ್ನು ತಾನು ಪಡೆದುಕೊಳ್ಳಸಾಧ್ಯವಾಗಲಿಕ್ಕಾಗಿ, ತನ್ನ ಸಹೋದರರು ತನ್ನ ಪರವಾಗಿ ಪ್ರಾರ್ಥಿಸುವಂತೆ ಅಪೊಸ್ತಲ ಪೌಲನು ಬಯಸಿದನು. (ಎಫೆ. 6:18-20) ಅದೇ ರೀತಿಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಾವೂ ಅಪೇಕ್ಷಿಸುತ್ತೇವೆ. ಆ ಸಾಮರ್ಥ್ಯವನ್ನು ಗಳಿಸಲಿಕ್ಕಾಗಿ, ಯಾವುದರಲ್ಲಿ ಕೂಟಗಳಿಗೆ ಹಾಜರಾಗುವವರೊಳಗೆ ಅರ್ಹರಾದ ವ್ಯಕ್ತಿಗಳು ಭಾಗವಹಿಸುವಂತೆ ಉತ್ತೇಜಿಸಲ್ಪಡುತ್ತಾರೊ, ಆ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಒದಗಿಸಲ್ಪಡುವ ಸಹಾಯವನ್ನು ನಾವು ಗಣ್ಯಮಾಡುತ್ತೇವೆ.
2 ವಿದ್ಯಾರ್ಥಿಗಳೋಪಾದಿ, ನಮ್ಮ ಮಾತಾಡುವ ಹಾಗೂ ಬೋಧಿಸುವ ಸಾಮರ್ಥ್ಯಗಳನ್ನು ಉತ್ತಮಗೊಳಿಸುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ವೈಯಕ್ತಿಕವಾದ ಸಲಹೆಯನ್ನು ನಾವು ಪಡೆದುಕೊಳ್ಳುತ್ತೇವೆ. (ಜ್ಞಾನೋ. 9:9) ಇತರ ವಿದ್ಯಾರ್ಥಿಗಳು ಪಡೆದುಕೊಳ್ಳುವ ಸಲಹೆಗೆ ಕಿವಿಗೊಡುವ ಮೂಲಕವೂ, ನಾವು ಕಲಿಯುವ ವಿಷಯಗಳನ್ನು ಸ್ವತಃ ಅನ್ವಯಿಸಿಕೊಳ್ಳುತ್ತಾ, ನಾವು ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು. ನೇಮಕವೊಂದನ್ನು ತಯಾರಿಸುತ್ತಿರುವಾಗ, ಅದರ ಕುರಿತಾದ ನಮ್ಮ ವಿವರಣೆಯು ನಿಷ್ಕೃಷ್ಟವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಿಕ್ಕಾಗಿ ನಾವು ಮೂಲ ವಿಷಯವನ್ನು ಜಾಗರೂಕತೆಯಿಂದ ಅಭ್ಯಾಸಿಸಬೇಕು. ನಾವು ಉಪಯೋಗಿಸುವ ಮುಖ್ಯಾಂಶಗಳು ಹಾಗೂ ಶಾಸ್ತ್ರವಚನಗಳು, ಇಡೀ ಮುಖ್ಯವಿಷಯದ ವಿಕಸನೆಯೊಂದಿಗೆ ಸರಿಹೊಂದತಕ್ಕದ್ದು. ಆ ನೇಮಕವು ಇನ್ನೊಬ್ಬ ವ್ಯಕ್ತಿಯನ್ನು ಒಳಗೊಳ್ಳುವುದಾದರೆ, ಅದು ಶಾಲೆಯಲ್ಲಿ ಪ್ರಸ್ತುತಪಡಿಸಲ್ಪಡುವುದಕ್ಕೆ ಮುಂಚಿತವಾಗಿಯೇ ಚೆನ್ನಾಗಿ ಪೂರ್ವಾಭಿನಯಿಸಲ್ಪಡಬೇಕು. ನಾವು ಪ್ರಗತಿಯನ್ನು ಮಾಡಿದಂತೆ, ಒಂದು ಹಸ್ತಪ್ರತಿಗೆ ಬದಲಾಗಿ ಟಿಪ್ಪಣಿಗಳನ್ನು ಉಪಯೋಗಿಸುತ್ತಾ, ಭಾಷಣಮಾಡಲಿಕ್ಕಾಗಿ ಪ್ರಯತ್ನವು ಮಾಡಲ್ಪಡಬೇಕು.
3 ಶಾಲೆಯಲ್ಲಿ ನೇಮಕವನ್ನು ಪಡೆದಿರುವವರೆಲ್ಲರೂ ಬೇಗನೆ ಆಗಮಿಸಿ, ತಮ್ಮ ಸ್ಪೀಚ್ ಕೌನ್ಸಿಲ್ ಸ್ಲಿಪ್ ಅನ್ನು ಶಾಲಾ ಮೇಲ್ವಿಚಾರಕನಿಗೆ ಕೊಟ್ಟು, ಸಭಾಗೃಹದ ಮುಂಭಾಗದಲ್ಲಿ ಕುಳಿತುಕೊಳ್ಳಬೇಕು. ತಮ್ಮ ಸೆಟಿಂಗ್ ಏನಾಗಿದೆ ಎಂಬುದನ್ನು ಮತ್ತು ತಮ್ಮ ಭಾಗವನ್ನು ನಿರ್ವಹಿಸಲು ಅವರು ನಿಂತುಕೊಳ್ಳುವರೊ ಅಥವಾ ಕುಳಿತುಕೊಳ್ಳುವರೊ ಎಂಬುದನ್ನು ಸಹೋದರಿಯರು ಶಾಲಾ ಮೇಲ್ವಿಚಾರಕರಿಗೆ ಮುಂದಾಗಿಯೇ ತಿಳಿಸಬೇಕು. ಈ ರೀತಿಗಳಲ್ಲಿ ಸಹಕರಿಸುವುದು, ಸರಾಗವಾದ ಕಾರ್ಯಕ್ರಮಕ್ಕೆ ನೆರವನ್ನೀಯುತ್ತದೆ ಮತ್ತು ವೇದಿಕೆಯ ಜಾಗ್ರತೆ ವಹಿಸುವವರು ಮುಂಚಿತವಾಗಿಯೇ ಎಲ್ಲವನ್ನೂ ಸಿದ್ಧಪಡಿಸಲು ಸಹಾಯ ಮಾಡುತ್ತದೆ.
4 ನೇಮಕ ನಂಬ್ರ 2ನ್ನು ತಯಾರಿಸುವುದು: ಬೈಬಲ್ ವಾಚನದ ಒಂದು ಉದ್ದೇಶವು, ವಿದ್ಯಾರ್ಥಿಯು ತನ್ನ ಓದುವ ಸಾಮರ್ಥ್ಯವನ್ನು ಉತ್ತಮಗೊಳಿಸುವಂತೆ ಸಹಾಯ ಮಾಡುವುದಾಗಿದೆ. ಇದನ್ನು ಅತ್ಯುತ್ತಮವಾಗಿ ಹೇಗೆ ಪೂರೈಸಸಾಧ್ಯವಿದೆ? ಆ ವಿಷಯವನ್ನು ಪುನಃ ಪುನಃ ಗಟ್ಟಿಯಾಗಿ ಓದುವುದು, ಅದರಲ್ಲಿ ಸಂಪೂರ್ಣ ನಿಪುಣತೆಯನ್ನು ಪಡೆದುಕೊಳ್ಳಲು ಅತ್ಯುತ್ತಮವಾದ ಮಾರ್ಗವಾಗಿದೆ. ಯಾವುದೇ ಅಪರಿಚಿತ ಶಬ್ದಗಳ ಅರ್ಥವನ್ನು ಹಾಗೂ ಸೂಕ್ತವಾದ ಉಚ್ಚಾರಣಾ ರೀತಿಯನ್ನು ಕಲಿಯಲಿಕ್ಕಾಗಿ, ವಿದ್ಯಾರ್ಥಿಯು ಅವುಗಳನ್ನು ಶಬ್ದಕೋಶವೊಂದರಲ್ಲಿ ಹುಡುಕಿನೋಡಬೇಕು. ಇದು ಶಬ್ದಕೋಶದಲ್ಲಿ ಉಪಯೋಗಿಸಲ್ಪಡುವ ಉಚ್ಚಾರಣಾ ಸಂಕೇತಗಳ ಅರ್ಥದೊಂದಿಗೆ ಪರಿಚಿತರಾಗುವುದನ್ನೂ ಅಗತ್ಯಪಡಿಸಬಹುದು.
5 ಇಂಗ್ಲಿಷ್ನಲ್ಲಿ ಬೈಬಲಿನಲ್ಲಿ ಕಂಡುಬರುವ ಸೂಕ್ತವಾದ ಹೆಸರುಗಳನ್ನು ಹಾಗೂ ಅಸಾಮಾನ್ಯವಾದ ಶಬ್ದಗಳನ್ನು ಉಚ್ಚರಿಸುವುದರಲ್ಲಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಸಹಾಯವನ್ನೊದಗಿಸುತ್ತದೆ. ಅವುಗಳನ್ನು ಅಕ್ಷರಗಳು ಹಾಗೂ ಸ್ವರಭಾರದ ಗುರುತುಗಳನ್ನಾಗಿ ಬೇರ್ಪಡಿಸುವ ಮೂಲಕ ಇದನ್ನು ಮಾಡುತ್ತದೆ. (“ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” [ಇಂಗ್ಲಿಷ್] ಎಂಬ ಪುಸ್ತಕದ 325-6ನೆಯ ಪುಟಗಳಲ್ಲಿರುವ 27-8ನೆಯ ಪ್ಯಾರಗ್ರಾಫ್ಗಳನ್ನು ನೋಡಿರಿ.) ಒಂದು ನಿಯಮವಾಗಿ, ಸ್ವರಭಾರದ ಗುರುತಿಗೆ ಮುಂಚಿತವಾಗಿ ಬರುವ ಅಕ್ಷರವು ಪ್ರಧಾನ ಒತ್ತನ್ನು ಪಡೆದುಕೊಳ್ಳುತ್ತದೆ. ಸ್ವರಭಾರದ ಗುರುತುಹಾಕಲ್ಪಟ್ಟ ಅಕ್ಷರವು ಒಂದು ಸ್ವರಾಕ್ಷರದಿಂದ ಕೊನೆಗೊಳ್ಳುವಲ್ಲಿ, ಆ ಸ್ವರಾಕ್ಷರವು ತನ್ನ ಉಚ್ಚಾರಣೆಯಲ್ಲಿ ದೀರ್ಘವಾಗಿದೆ. ಅಕ್ಷರವು ಒಂದು ವ್ಯಂಜನಾಕ್ಷರದಿಂದ ಕೊನೆಗೊಳ್ಳುವಲ್ಲಿ, ಆ ಅಕ್ಷರದಲ್ಲಿರುವ ಸ್ವರಾಕ್ಷರವು ಅದೀರ್ಘವಾಗಿದೆ. (Saʹlu with Salʹlu—ಸಾಲುವಿನೊಂದಿಗೆ ಸೇಲುವನ್ನು ಹೋಲಿಸಿರಿ.) ತಮ್ಮ ಬೈಬಲ್ ವಾಚನ ನೇಮಕಗಳನ್ನು ತಯಾರಿಸಲಿಕ್ಕಾಗಿ, ಕೆಲವು ಸಹೋದರರು ಸೊಸೈಟಿಯ ಆಡಿಯೊಕ್ಯಾಸೆಟ್ಟುಗಳನ್ನು ಆಲಿಸುತ್ತಾರೆ.
6 ವಾಚನ ನೇಮಕಗಳನ್ನು ತಯಾರಿಸಲಿಕ್ಕಾಗಿ ಹೆತ್ತವರು ತಮ್ಮ ಎಳೆಯ ಮಕ್ಕಳಿಗೆ ಸಹಾಯ ಮಾಡಬಲ್ಲರು. ಮಗುವು ಪೂರ್ವಾಭಿನಯಿಸುತ್ತಿರುವಾಗ ಕಿವಿಗೊಡುವುದು ಮತ್ತು ಬಳಿಕ ಅವನಿಗೆ ಅಭಿವೃದ್ಧಿ ಮಾಡಲಿಕ್ಕಾಗಿ ಸಹಾಯಕರವಾದ ಸಲಹೆಗಳನ್ನು ಕೊಡುವುದನ್ನು ಇದು ಒಳಗೂಡಬಹುದು. ಕೊಡಲ್ಪಡುವ ಸಮಯವು, ಒಂದು ಸಂಕ್ಷಿಪ್ತವಾದ ಪೀಠಿಕೆಗಾಗಿ ಮತ್ತು ಪ್ರಮುಖ ಅಂಶಗಳ ಅನ್ವಯವನ್ನು ಮಾಡುವ ಸೂಕ್ತವಾದ ಸಮಾಪ್ತಿಗಾಗಿ ಅನುಮತಿಸುತ್ತದೆ. ಹೀಗೆ ವಿದ್ಯಾರ್ಥಿಯು ಟಿಪ್ಪಣಿಗಳನ್ನು ಉಪಯೋಗಿಸುತ್ತಾ ಭಾಷಣಮಾಡುವ ತನ್ನ ಸಾಮರ್ಥ್ಯವನ್ನು ವಿಕಸಿಸಿಕೊಳ್ಳುತ್ತಾನೆ.
7 ಕೀರ್ತನೆಗಾರನು ಪ್ರಾರ್ಥನಾಪೂರ್ವಕವಾಗಿ ಬೇಡಿಕೊಂಡದ್ದು: “ಕರ್ತನೇ [“ಯೆಹೋವನೇ,” NW], ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.” (ಕೀರ್ತ. 51:15) ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ನಮ್ಮ ಭಾಗವಹಿಸುವಿಕೆಯು, ಇದೇ ಅಪೇಕ್ಷೆಯನ್ನು ಸಂತೃಪ್ತಿಪಡಿಸಲು ನಮಗೆ ಸಹಾಯ ಮಾಡುವಂತಾಗಲಿ.