ಮಾರ್ಚ್ಗಾಗಿ ಸೇವಾ ಕೂಟಗಳು
ಮಾರ್ಚ್ 4ರ ವಾರ
ಸಂಗೀತ 1 (22)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಮಾರ್ಚ್ 1ರಿಂದ ಕಾರ್ಯರೂಪಕ್ಕೆ ತರಲ್ಪಟ್ಟಿರುವ, ಪತ್ರಿಕೆಗಳು ಮತ್ತು ಚಂದಾಗಳಿಗಾಗಿರುವ ಹೊಸ ದರಗಳ ಕುರಿತು ಸಭಿಕರಿಗೆ ಜ್ಞಾಪಕಹುಟ್ಟಿಸಿರಿ.
15 ನಿ: ಹೊಸ ಜ್ಞಾನ ಪುಸ್ತಕವನ್ನು ಉಪಯೋಗಿಸಲು ತಯಾರಿಸಿರಿ. ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಮುಖ ಪುಟದ ಮೇಲ್ಭಾಗದಲ್ಲಿರುವ ಲೇಖನದ ಪ್ರಶ್ನೋತ್ತರ ಚರ್ಚೆ. ಅವರು ಕ್ಷೇತ್ರದಲ್ಲಿ ಅದರ ಕಾರ್ಯಸಾಧಕ ಉಪಯೋಗವನ್ನು ಮಾಡಸಾಧ್ಯವಾಗುವಂತೆ, ಪುಸ್ತಕದ ಒಳವಿಷಯಗಳೊಂದಿಗೆ ಸಂಪೂರ್ಣವಾಗಿ ಪರಿಚಿತರಾಗುವಂತೆ ಎಲ್ಲರನ್ನೂ ಉತ್ತೇಜಿಸಿರಿ.
20 ನಿ: “ಸತ್ಯ ದೇವರ ಜ್ಞಾನವು ಜೀವಕ್ಕೆ ನಡೆಸುತ್ತದೆ.” ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಒಂದೆರಡು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳಿರುವಂತೆ ಮಾಡಿರಿ.
ಸಂಗೀತ 78 (112) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 11ರ ವಾರ
ಸಂಗೀತ 164 (73)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
20 ನಿ: “1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 3.” ಶಾಲಾ ಮೇಲ್ವಿಚಾರಕನಿಂದ ಭಾಷಣ. ಸಾಧ್ಯವಿರುವವರೆಲ್ಲರಿಗೆ ನಮೂದಿಸಿಕೊಳ್ಳಲು ಮತ್ತು ತಮ್ಮ ನೇಮಕಗಳನ್ನು ನಂಬಿಗಸ್ತಿಕೆಯಿಂದ ಪೂರೈಸಲು ಉತ್ತೇಜಿಸಿರಿ. “ಆಲ್ ಸ್ಕ್ರಿಪ್ಚರ್” ಪುಸ್ತಕದ 325-6ನೆಯ ಪುಟಗಳಲ್ಲಿನ 27-8ನೆಯ ಪ್ಯಾರಗ್ರಾಫ್ಗಳಲ್ಲಿ ಕಂಡುಬರುವಂತೆ, ಬೈಬಲ್ ಹೆಸರುಗಳನ್ನು ಉಚ್ಚರಿಸುವ ನಿಯಮಗಳನ್ನು ಸ್ಪಷ್ಟವಾಗಿ ವಿವರಿಸಿರಿ. ಹಾಗೂ ಇಂಗ್ಲಿಷಿನಲ್ಲಿ ಹೆಸರುಗಳಲ್ಲಿ “ch” ಸಂಯೋಜನೆಯು “k”ಯಂತೆ ಬಲವಾಗಿ ಉಚ್ಚರಿಸಲ್ಪಡುತ್ತದೆ ಎಂದೂ ವಿವರಿಸಿರಿ. (ರೇಚೆಲ್ ಎಂಬ ಹೆಸರಿನ ಹೊರತಾಗಿ. ಇದರಲ್ಲಿ “ch” ಲಘುವಾಗಿ ಉಚ್ಚರಿಸಲ್ಪಡುತ್ತದೆ.) ಸಭಿಕರು ತಮ್ಮ ಬೈಬಲುಗಳಲ್ಲಿ ಹಿಂಬಾಲಿಸುವಂತೆ ಮಾಡುತ್ತಾ, ಸೊಸೈಟಿಯ ಆಡಿಯೊಕ್ಯಾಸೆಟ್ನಿಂದ ಲೂಕ 3:23-38ರ ತನಕ ಇರುವ ಇಂಗ್ಲಿಷ್ ಭಾಗವನ್ನು ನುಡಿಸುವ ಮೂಲಕ ಆ ನಿಯಮಗಳನ್ನು ದೃಷ್ಟಾಂತಿಸಿರಿ.
15 ನಿ: ಕುಟುಂಬವಾಗಿ ವಿಷಯಗಳನ್ನು ಒಡಗೂಡಿ ಮಾಡಿರಿ. ಸೆಪ್ಟೆಂಬರ್ 1, 1993ರ ಕಾವಲಿನಬುರುಜು ಪತ್ರಿಕೆಯ 16-19ನೆಯ ಪುಟಗಳ ಮೇಲಾಧಾರಿತವಾದ ವಿಷಯವನ್ನು, ಒಡಗೂಡುವಿಕೆಯ ಅಗತ್ಯದ ಕುರಿತಾಗಿ ಅನೌಪಚಾರಿಕವಾಗಿ ತಂದೆಯು ತನ್ನ ಕುಟುಂಬದೊಂದಿಗೆ ಮಾತಾಡುತ್ತಾನೆ. ಕುಟುಂಬ ಅಭ್ಯಾಸದ ಮೇಲೆ ಹಾಗೂ ಸೌವಾರ್ತಿಕ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಆಧುನಿಕ ಕುಟುಂಬಗಳು ಒಟ್ಟಿಗೆ ಸಮಯವನ್ನು ಕಳೆಯದಿರುವುದರಿಂದ ಹಾಗೂ ಯಾರಲ್ಲಿಯೂ ಸಾಮಾನ್ಯ ಅಭಿರುಚಿಗಳು ಇಲ್ಲದಿರುವುದರಿಂದ, ಅವು ಹೇಗೆ ಒಡೆಯುತ್ತಿವೆ ಎಂಬುದನ್ನು ಹೊರಪಡಿಸಿರಿ. ಒಟ್ಟಿಗೆ ದೇವರ ವಾಕ್ಯವನ್ನು ಅಭ್ಯಾಸಿಸುವುದು ಮತ್ತು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು, ಕ್ರೈಸ್ತ ಕುಟುಂಬಕ್ಕೆ ಒಂದು ಆಶೀರ್ವಾದವಾಗಿದೆ. ತಂದೆಯು ಈ ವಿಷಯಗಳನ್ನು ಚೆನ್ನಾಗಿ ವ್ಯವಸ್ಥಾಪಿಸುವ ಅಗತ್ಯವನ್ನೂ ಮತ್ತು ತಾಯಿಯು ಸಹಕರಿಸುವ ಅಗತ್ಯವನ್ನೂ ಒತ್ತಿಹೇಳಿರಿ. ತಮ್ಮ ಹೆತ್ತವರೊಂದಿಗೆ ನಿಕಟವಾಗಿ ಕೆಲಸಮಾಡುವ ಮೂಲಕ, ಮಕ್ಕಳು ಆತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳಬೇಕು. ಕುಟುಂಬವು ಐಕ್ಯಗೊಳ್ಳುವುದು ಹಾಗೂ ಲೌಕಿಕತೆಯ ಕಡೆಗಿನ ಅಧಿಕಗೊಳ್ಳುತ್ತಿರುವ ಒತ್ತಡಗಳೊಂದಿಗೆ ನಿಭಾಯಿಸಲಿಕ್ಕಾಗಿ ದೃಢಪಡಿಸಲ್ಪಡುವುದು.
ಸಂಗೀತ 211 (66) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 18ರ ವಾರ
ಸಂಗೀತ 6 (4)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಭ್ಯಾಸಗಳನ್ನು ನಡಿಸುತ್ತಿರುವವರು, ತಮ್ಮ ಬೈಬಲ್ ಅಭ್ಯಾಸದಲ್ಲಿ ಚೆನ್ನಾಗಿ ಪ್ರಗತಿ ಮಾಡುತ್ತಿರುವ ಹೊಸಬರಿಗೆ, ಅಸ್ನಾತ ಪ್ರಚಾರಕರಾಗುವ ಗುರಿಯನ್ನು ಬೆನ್ನಟ್ಟುವಂತೆ ಉತ್ತೇಜಿಸಬೇಕು. ಹೆತ್ತವರು ತಮ್ಮ ಮಕ್ಕಳು ಪ್ರಚಾರಕರಾಗುವಂತೆ ಸಹ ಸಹಾಯ ಮಾಡಬಲ್ಲರು. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 97-100ನೆಯ ಪುಟಗಳಲ್ಲಿ ರೇಖಿಸಲ್ಪಟ್ಟಿರುವ ಶಿಫಾರಸ್ಸು ಮಾಡಲ್ಪಟ್ಟ ಕಾರ್ಯವಿಧಾನವನ್ನು ಪುನರ್ವಿಮರ್ಶಿಸಿರಿ. ಸಭೆಯಲ್ಲಿರುವ ಎಲ್ಲಾ ದೀಕ್ಷಾಸ್ನಾನಿತ ಪ್ರಚಾರಕರನ್ನು, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವಂತೆ ಉತ್ತೇಜಿಸಿರಿ.
15 ನಿ: 1996 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ದಲ್ಲಿರುವ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. 3-5 ಮತ್ತು 33ನೆಯ ಪುಟಗಳಲ್ಲಿ ಆವರಿಸಲ್ಪಟ್ಟಿರುವ, ನಮ್ಮ ಲೋಕವ್ಯಾಪಕ ಚಟುವಟಿಕೆಯ ಕುರಿತಾದ ಆಸಕ್ತಿಭರಿತ ವೈಶಿಷ್ಟ್ಯಗಳಲ್ಲಿ ಕೆಲವನ್ನು ಕುಟುಂಬ ಗುಂಪು ಚರ್ಚಿಸುತ್ತದೆ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಕದಲ್ಲಿರುವ ನಿಗದಿತ ಬೈಬಲ್ ವಚನಗಳನ್ನು ಪರಿಗಣಿಸಿದ ಬಳಿಕ, ಪ್ರತಿ ದಿನ ಒಟ್ಟಿಗೆ ವರ್ಷಪುಸ್ತಕ (ಇಂಗ್ಲಿಷ್)ದ ಕೆಲವೊಂದು ಪುಟಗಳನ್ನು ಓದಲು ಪ್ರಯತ್ನಿಸುವೆವೆಂದು ಅವರು ಒಪ್ಪಿಕೊಳ್ಳುತ್ತಾರೆ.
20 ನಿ: “ಜೀವಕ್ಕೆ ನಡೆಸುವ ಜ್ಞಾನವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯ ಮಾಡಿರಿ.” ಪುನರ್ಭೇಟಿಗಳಲ್ಲಿ ಉಪಯೋಗಿಸಲಿಕ್ಕಾಗಿ ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಒಂದೆರಡು ಪ್ರತ್ಯಕ್ಷಾಭಿನಯಗಳನ್ನು ಒಳಗೂಡಿಸಿರಿ. ಅಭ್ಯಾಸಗಳನ್ನು ಆರಂಭಿಸುವ ಗುರಿಯನ್ನು ಒತ್ತಿಹೇಳಿರಿ.
ಸಂಗೀತ 130 (58) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 25ರ ವಾರ
ಸಂಗೀತ 5 (28)
15 ನಿ: ಸ್ಥಳಿಕ ತಿಳಿಸುವಿಕೆಗಳು. “ಜ್ಞಾಪಕದ ಜ್ಞಾಪನಗಳು” ಪುನರ್ವಿಮರ್ಶಿಸಿರಿ. ಹಾಜರಾಗುವುದು ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ವಿವರಿಸಿರಿ. (ಫೆಬ್ರವರಿ 15, 1985ರ ವಾಚ್ಟವರ್ ಪತ್ರಿಕೆಯ 18-20ನೆಯ ಪುಟಗಳನ್ನು ನೋಡಿರಿ.) ವೃದ್ಧರನ್ನು, ದುರ್ಬಲರನ್ನು, ಮತ್ತು ಹೊಸಬರನ್ನು, ಹಾಜರಿರುವಂತೆ ಸಹಾಯ ಮಾಡಲಿಕ್ಕಾಗಿ ಯೋಜನೆಗಳನ್ನು ಪುನರ್ವಿಮರ್ಶಿಸಿರಿ. ಈ ಮುಂದಿನ ವಾರದಲ್ಲಿ ವಿಸ್ತೃತ ಕ್ಷೇತ್ರ ಸೇವಾ ಚಟುವಟಿಕೆಗಾಗಿರುವ ಏರ್ಪಾಡುಗಳನ್ನು ಚರ್ಚಿಸಿರಿ. ಹಾಗೂ, ಅಕ್ಟೋಬರ್ 8, 1995ರ ಎಚ್ಚರ! ಪತ್ರಿಕೆಯಲ್ಲಿ, 32ನೆಯ ಪುಟದಲ್ಲಿರುವ “ಅಪರಿಚಿತರಿಗೆ ಅತಿಥಿಸತ್ಕಾರವು ತೋರಿಸಲ್ಪಡುವ ಸ್ಥಳ” ಎಂಬ ಲೇಖನವನ್ನು ಪುನರ್ವಿಮರ್ಶಿಸಿರಿ.
15 ನಿ: “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ.” ಸಭಿಕರೊಂದಿಗೆ ಚರ್ಚಿಸಿರಿ. ತಿಳಿದಿರುವಲ್ಲಿ ಮುಂದಿನ ಸಮ್ಮೇಳನದ ತಾರೀಖನ್ನು ಪ್ರಕಟಿಸಿರಿ. ಎಲ್ಲರೂ ಹಾಜರಾಗುವಂತೆ ಮತ್ತು ಹೊಸಬರು ದೀಕ್ಷಾಸ್ನಾನವನ್ನು ಹೊಂದುವದಕ್ಕೆ ಅರ್ಹರಾಗಲು ಕೆಲಸಮಾಡುವಂತೆ ಉತ್ತೇಜಿಸಿರಿ.
15 ನಿ: “ತಯಾರಿ—ಯಶಸ್ಸಿಗೆ ಕೀಲಿ ಕೈ.” ಪ್ರಶ್ನೋತ್ತರಗಳು. ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳನ್ನು ನೀಡಲಿರುವೆವು ಎಂಬುದನ್ನು ಪ್ರಸ್ತಾಪಿಸಿರಿ. ಹೆಚ್ಚಿನ ಪ್ರತಿಗಳಿಗಾಗಿ ಆರ್ಡರ್ ಮಾಡುವ ಮೂಲಕ, ಚಂದಾ ಫಾರ್ಮ್ಗಳನ್ನು ಪಡೆದುಕೊಳ್ಳುವ ಮೂಲಕ, ಮತ್ತು ಪತ್ರಿಕಾ ದಿನದ ಚಟುವಟಿಕೆಗಾಗಿರುವ ಸಭಾ ಏರ್ಪಾಡುಗಳನ್ನು ಬೆಂಬಲಿಸಲು ಯೋಜನೆಗಳನ್ನು ಮಾಡುವ ಮೂಲಕ, ಈಗಲೇ ತಯಾರಿಗಳನ್ನು ಮಾಡಿರಿ.
ಸಂಗೀತ 7 (105) ಮತ್ತು ಸಮಾಪ್ತಿಯ ಪ್ರಾರ್ಥನೆ.