ಸೆಪ್ಟೆಂಬರ್ಗಾಗಿ ಸೇವಾ ಕೂಟಗಳು
ಸೆಪ್ಟೆಂಬರ್ 2ರಿಂದ ಪ್ರಾರಂಭವಾಗುವ ವಾರ
ಸಂಗೀತ 98 (91)
12 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಎಲ್ಲರು, ವಿಶೇಷವಾಗಿ ಸಭಾ ಪುಸ್ತಕ ಅಭ್ಯಾಸ ಚಾಲಕರು, ಎಪ್ರಿಲ್ 1993ರ ನಮ್ಮ ರಾಜ್ಯದ ಸೇವೆಯ “ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಅಭ್ಯಾಸಿಸುವುದು” ಎಂಬ ಲೇಖನವನ್ನು ಪುನರ್ವಿಮರ್ಶಿಸುವಂತೆ ಉತ್ತೇಜಿಸಿರಿ. ಲೇಖನದ ಮುಖ್ಯ ಅಂಶಗಳನ್ನು ಎತ್ತಿಹೇಳಿರಿ.
15 ನಿ: “ನಂಬಿಕೆಯಿಂದ ನಡೆಯಿರಿ.” ಪ್ರಶ್ನೋತ್ತರಗಳು.
18 ನಿ: “ಸುವಾರ್ತೆಯನ್ನು ಒಂದು ಸಕಾರಾತ್ಮಕ ಮನೋಭಾವದೊಂದಿಗೆ ಸಾದರಪಡಿಸುವುದು.” ಪ್ಯಾರಗ್ರಾಫ್ 1ರ ಮೇಲೆ ಆಧರಿತವಾದ ಆರಂಭದ ಹೇಳಿಕೆಗಳನ್ನು ಮಾಡಿರಿ. ಕುಟುಂಬ ಪುಸ್ತಕಕ್ಕೆ ಒಂದು ಬದಲಿ ನೀಡಿಕೆಯಾಗಿ, ಸದಾ ಜೀವಿಸಬಲ್ಲಿರಿ ಅಥವಾ ಕ್ರಿಯೇಷನ್ ಪುಸ್ತಕಗಳನ್ನು ಉಪಯೋಗಿಸಬಹುದೆಂದು ವಿವರಿಸಿರಿ ಆದರೆ ಎಷ್ಟರ ವರೆಗೆ ಸಭೆಯಲ್ಲಿ ಕುಟುಂಬ ಜೀವನ ಪುಸ್ತಕಗಳು ವಶದಲ್ಲಿರುತ್ತವೊ ಅಷ್ಟರ ವರೆಗೆ, ಇವುಗಳನ್ನು ಮೊದಲು ಉಪಯೋಗಿಸಬೇಕು. ಅನಂತರ ಲೇಖನದ 2-5ನೆಯ ಪ್ಯಾರಗ್ರಾಫ್ಗಳನ್ನು ಮಾತ್ರ ಆವರಿಸಿರಿ. ಕುಟುಂಬ ಪುಸ್ತಕವನ್ನು ನೀಡುವ, ಒಂದು ಪುನರ್ಭೇಟಿಯನ್ನು ಮಾಡುವ ಮತ್ತು ಜ್ಞಾನ ಪುಸ್ತಕದಲ್ಲಿ ಒಂದು ಅಭ್ಯಾಸವನ್ನು ಆರಂಭಿಸುವ ವಿಧವನ್ನು ತೋರಿಸುವ, ಚೆನ್ನಾಗಿ ತಯಾರಿಸಲ್ಪಟ್ಟ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 48 (28) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 9ರಿಂದ ಪ್ರಾರಂಭವಾಗುವ ವಾರ
ಸಂಗೀತ 18 (36)
12 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. “ರಾಜ್ಯವನ್ನು ಸಾರಿರಿ” ಎಂಬ ಲೇಖನವನ್ನು ಚರ್ಚಿಸಿರಿ.
18 ನಿ: ಸಭೆಯ 1996 ಸೇವಾ ವರ್ಷ ವರದಿಯನ್ನು ಪುನರ್ವಿಮರ್ಶಿಸಿರಿ. ಸೇವಾ ಮೇಲ್ವಿಚಾರಕನಿಂದ ಆತ್ಮೋನ್ನತಿ ಮಾಡುವ, ಉತ್ಸಾಹಭರಿತ ಭಾಷಣ. (ನಮ್ಮ ಶುಶ್ರೂಷೆ ಪುಸ್ತಕದ ಪುಟಗಳು 100-2ನ್ನು ನೋಡಿರಿ.) ಸಭೆಯು ಎಲ್ಲಿ ಉತ್ತಮವಾಗಿ ಮಾಡಿದೆಯೆಂಬುದನ್ನು ಸೂಚಿಸಿ, ಶ್ಲಾಘಿಸಿರಿ. ಕ್ರಮದ ಮತ್ತು ಸಹಾಯಕ ಪಯನೀಯರರ ಚಟುವಟಿಕೆಯು, ಸ್ಥಳಿಕವಾಗಿ ಕೆಲಸವನ್ನು ಮುಂದುವರಿಸಲು ಹೇಗೆ ಹೆಚ್ಚಿನ ಸಹಾಯ ಮಾಡಿದೆಯೆಂಬುದನ್ನು ತೋರಿಸಿರಿ. ಕೂಟದ ಹಾಜರಿಯ ಸಂಖ್ಯೆಗಳನ್ನು ತಿಳಿಸುತ್ತಾ, ಕ್ರಮವಾದ ಹಾಜರಿಯ ಪ್ರಾಮುಖ್ಯವನ್ನು ಒತ್ತಿಹೇಳಿರಿ. ಬರುವ ವರ್ಷದಲ್ಲಿ ಸಭೆಯು ಸಾಧಿಸಲು ಪ್ರಯತ್ನಿಸಸಾಧ್ಯವಿರುವ ವ್ಯಾವಹಾರಿಕ ಗುರಿಗಳನ್ನು ರೇಖಿಸಿರಿ.
15 ನಿ: “ಸುವಾರ್ತೆಯನ್ನು ಒಂದು ಸಕಾರಾತ್ಮಕ ಮನೋಭಾವದೊಂದಿಗೆ ಸಾದರಪಡಿಸುವುದು.” ಪ್ಯಾರಗ್ರಾಫ್ 6-8ನ್ನು ಮಾತ್ರ ಪುನರ್ವಿಮರ್ಶಿಸಿರಿ, ಮತ್ತು ಆರಂಭದ ಭೇಟಿ ಹಾಗೂ ಪುನರ್ಭೇಟಿಗಾಗಿರುವ ಅಂಗಡಿಯಿಂದ ಅಂಗಡಿಯ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. (ವ್ಯಾಪಾರ ಟೆರಿಟೊರಿಯಲ್ಲಿ ಕೆಲಸಮಾಡುವ ಕುರಿತಾದ ಅಕ್ಟೋಬರ್ 1989ರ ನಮ್ಮ ರಾಜ್ಯದ ಸೇವೆಯಲ್ಲಿರುವ [ಇಂಗ್ಲಿಷ್] ಹೆಚ್ಚಿನ ಸಲಹೆಗಳನ್ನು ನೋಡಿರಿ.) ತಮ್ಮ ಪುನರ್ಭೇಟಿಗಳನ್ನು ತಡವಿಲ್ಲದೆ ಮಾಡುವಂತೆ ಎಲ್ಲರನ್ನು ಉತ್ತೇಜಿಸಿರಿ.
ಸಂಗೀತ 123 (63) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 16ರಿಂದ ಪ್ರಾರಂಭವಾಗುವ ವಾರ
ಸಂಗೀತ 10 (18)
15 ನಿ: ಸ್ಥಳಿಕ ತಿಳಿಸುವಿಕೆಗಳು. ಸಭಿಕರೊಂದಿಗೆ ಪ್ರಶ್ನಾ ರೇಖಾಚೌಕವನ್ನು ಚರ್ಚಿಸಿರಿ. ಸ್ಕೂಲ್ ಗೈಡ್ಬುಕ್ನ ಅಧ್ಯಾಯ 6ರಿಂದ ಒಂದು ಅಥವಾ ಎರಡು ಅಂಶಗಳನ್ನು ಸಂಕ್ಷಿಪ್ತವಾಗಿ ಜೋಡಿಸಿರಿ.
15 ನಿ: “ಮಾತುಕತೆ ಮತ್ತು ನಡತೆಯಲ್ಲಿ ಒಂದು ಮಾದರಿಯಾಗಿರ್ರಿ.” ಪ್ರಶ್ನೋತ್ತರಗಳು.
15 ನಿ: ಶಾಲೆಯಲ್ಲಿ ಕ್ರೈಸ್ತ ನಡತೆ. ಶಾಲಾ ಪರಿಸರದಲ್ಲಿರುವ ಗಂಭೀರವಾದ ಮುಚ್ಚುಗುಂಡಿಗಳನ್ನು ತೋರಿಸಲು ತಂದೆ, ಮಗ ಅಥವಾ ಮಗಳೊಂದಿಗೆ ಮಾತಾಡುತ್ತಾನೆ; ಸಹವಾಸದ ಮೇಲೆ ನಿಗಾ ಇಡುವ ಮತ್ತು ಸಂದೇಹಾಸ್ಪದ ಚಟುವಟಿಕೆಗಳನ್ನು ದೂರವಿರಿಸುವ ಅಗತ್ಯವನ್ನು ಅವನು ಒತ್ತಿಹೇಳುತ್ತಾನೆ. ಎಡ್ಯುಕೇಷನ್ ಬ್ರೋಷರಿನಲ್ಲಿ ಪುಟ 24ರಲ್ಲಿರುವ ರೇಖಾಚೌಕವನ್ನು ಅವನು ಪುನರ್ವಿಮರ್ಶಿಸಿ, ಒಬ್ಬ ಸಾಕ್ಷಿಯೋಪಾದಿ ಒಳ್ಳೆಯ ಮಾದರಿಯನ್ನಿಡುವ ಅಗತ್ಯವನ್ನು ವಿವರಿಸುತ್ತಾನೆ. ಅಮಲೌಷಧದ ಉಪಯೋಗ, ಡೇಟಿಂಗ್, ಸಾಮಾಜಿಕ ನೆರವಿಗಳಲ್ಲಿ ಹಾಜರಿ, ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದರಲ್ಲಿ ಒಳಗೂಡುವುದರಿಂದ ಎದ್ದೇಳುವ ಕೆಲವು ಶೋಧನೆಗಳನ್ನು ತಂದೆ ಹೇಳುತ್ತಾನೆ; ಸಮಸ್ಯೆಗಳಿಂದ ದೂರವಿರುವುದು ಹೇಗೆಂಬುದನ್ನು ಅವರು ಚರ್ಚಿಸುತ್ತಾರೆ. ಕಷ್ಟಗಳಿರುವಾಗ ತನ್ನಲ್ಲಿ ಅಂತರಂಗವನ್ನು ತೋಡಿಕೊಳ್ಳುವುದರಲ್ಲಿ ತಡಮಾಡದಿರಲು ತಂದೆಯು ಯೌವನಸ್ಥನನ್ನು ಉತ್ತೇಜಿಸುತ್ತಾನೆ—ಅವನು ಕಷ್ಟಗಳ ಕುರಿತಾಗಿ ತಿಳಿದುಕೊಳ್ಳಲು ಮತ್ತು ಸಹಾಯ ಮಾಡಲು ಬಯಸುತ್ತಾನೆ.
ಸಂಗೀತ 32 (10) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 23ರಿಂದ ಪ್ರಾರಂಭವಾಗುವ ವಾರ
ಸಂಗೀತ 21 (1)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: ಸ್ಥಳಿಕ ಅಗತ್ಯಗಳು. ಅಥವಾ ಫೆಬ್ರವರಿ 15, 1996ರ ಕಾವಲಿನಬುರುಜು ಪತ್ರಿಕೆಯಲ್ಲಿ, ಪುಟಗಳು 27-9ರಲ್ಲಿರುವ “ನಿಮ್ಮ ನೋಟಕ್ಷೇತ್ರದಾಚೆಗೆ ದೃಷ್ಟಿಹರಿಸಿರಿ!” ಲೇಖನದ ಮೇಲೆ ಆಧರಿಸಿದ ಒಂದು ಭಾಷಣ.
20 ನಿ: “1996 ‘ದೈವಿಕ ಶಾಂತಿಯ ಸಂದೇಶವಾಹಕರು’ ಜಿಲ್ಲಾ ಅಧಿವೇಶನಗಳು.” 1-16ನೆಯ ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. 10-11 ಮತ್ತು 15ನೆಯ ಪ್ಯಾರಗ್ರಾಫ್ಗಳನ್ನು ಓದಿರಿ.
ಸಂಗೀತ 215 (117) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 30ರಿಂದ ಪ್ರಾರಂಭವಾಗುವ ವಾರ
ಸಂಗೀತ 171 (59)
10 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “1996 ‘ದೈವಿಕ ಶಾಂತಿಯ ಸಂದೇಶವಾಹಕರು’ ಜಿಲ್ಲಾ ಅಧಿವೇಶನಗಳು.” 17-23ನೆಯ ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. 17-18ನೆಯ ಪ್ಯಾರಗ್ರಾಫ್ಗಳನ್ನು ಓದಿರಿ. “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.
15 ನಿ: ಅಕ್ಟೋಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳನ್ನು ನೀಡುವೆವು. ಇವುಗಳಂತಹ, ವಿವಿಧ ಅಂಶಗಳನ್ನು ಚರ್ಚಿಸಿರಿ: (1) ಆರಂಭದ ಪುಟಗಳಲ್ಲಿ ವಿವರಿಸಲ್ಪಟ್ಟಂತೆ, ಪತ್ರಿಕೆಗಳು ಪ್ರಕಾಶಿಸಲ್ಪಡುವ ಉದ್ದೇಶ. (2) ಲೋಕವ್ಯಾಪಕವಾಗಿ ಬೈಬಲ್ ಜ್ಞಾನವನ್ನು ಲಭ್ಯಗೊಳಿಸುತ್ತಾ, ಅವು ಅನೇಕ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿವೆ. (3) ಕಾವಲಿನಬುರುಜು ಪತ್ರಿಕೆಯು, ವೈಯಕ್ತಿಕ, ಕುಟುಂಬ ಮತ್ತು ಗುಂಪು ಅಭ್ಯಾಸಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ. (4) ವಿಭಿನ್ನ ಧರ್ಮಗಳೊಂದಿಗೆ ಸಂಬಂಧವಿರುವ ಜನರು ಅವುಗಳನ್ನು ಓದುತ್ತಾರೆ. (5) ಅವುಗಳನ್ನು ಪ್ರಾಮಾಣಿಕವಾಗಿ ಓದಬಯಸುವ, ಆದರೆ ಒಂದು ಚಂದಾವನ್ನು ಮಾಡಲು ಸಾಮರ್ಥ್ಯವಿಲ್ಲದ, ಯಾವುದೇ ವ್ಯಕ್ತಿಗೆ ನಾವು ವೈಯಕ್ತಿಕವಾಗಿ ಇತ್ತೀಚಿನ ಸಂಚಿಕೆಗಳನ್ನು ತಂದುಕೊಡುವೆವು. (6) ಅವು ಕಾರ್ಯಮಗ್ನರಾಗಿರುವ ಜನರಿಗಾಗಿ ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿವೆ. (7) ಕಾವಲಿನಬುರುಜು ಪತ್ರಿಕೆಯು 1879ರಿಂದ ಪ್ರಕಾಶಿಸಲ್ಪಟ್ಟಿದೆ; ಎಚ್ಚರ! ಪತ್ರಿಕೆಯು 1919ರಿಂದ. (8) ನಮ್ಮ ಕೆಲಸವು ಒಂದು ಸ್ವಯಂಸೇವಕ, ಶೈಕ್ಷಣಿಕ ಕೆಲಸವಾಗಿದೆ, ಒಂದು ವ್ಯಾಪಾರವಲ್ಲ. ಆದುದರಿಂದ ಈ ಪತ್ರಿಕೆಗಳಿಗಾಗಿರುವ ಕಾಣಿಕೆಯು ತೀರ ಸಮಂಜಸವಾದದ್ದಾಗಿದೆ. ಗಣ್ಯತಾಭಾವದ ಒಬ್ಬ ವಾಚಕನಿಂದ ಮಾಡಲ್ಪಟ್ಟ ಹೇಳಿಕೆಗಳನ್ನು ತಿಳಿಸುವ ಮೂಲಕ ಸಮಾಪ್ತಿಗೊಳಿಸಿರಿ.—ಎಪ್ರಿಲ್ 15, 1986ರ ವಾಚ್ಟವರ್ ಪತ್ರಿಕೆಯ ಪುಟ 32ನ್ನು ನೋಡಿರಿ.
ಸಂಗೀತ 3 (33) ಮತ್ತು ಸಮಾಪ್ತಿಯ ಪ್ರಾರ್ಥನೆ.