1996 “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನ
1 ಭಾರತದಲ್ಲಿ 1995ರ ಜಿಲ್ಲಾ ಅಧಿವೇಶನಗಳನ್ನು ಹಾಜರಾದ 23,447 ಮಂದಿಯಲ್ಲಿ ಅನೇಕರಿಂದ, ಆತ್ಮಿಕವಾಗಿ ಪುನರುಜ್ಜೀವಿಸಿದ ಕಾರ್ಯಕ್ರಮಕ್ಕಾಗಿ ಕೃತಜ್ಞತೆಯ ಪ್ರಾಮಾಣಿಕ ಅಭಿವ್ಯಕ್ತಿಗಳು ಕೇಳಿಬಂದವು. ಯೆಹೋವನ 861 ಸ್ತುತಿಗಾರರು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸುವುದನ್ನು ಕಾಣುವಾಗ ನಮ್ಮ ಹೃದಯಗಳು ಆನಂದದಿಂದ ತುಂಬಿದವು. ಜೆಹೋವಾಸ್ ವಿಟ್ನೆಸಸ್ ಆ್ಯಂಡ್ ಎಡ್ಯುಕೇಶನ್ ಮತ್ತು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಎರಡು ಹೊಸ ಪ್ರಕಾಶನಗಳನ್ನು ಪಡೆಯಲು ನಾವು ಉಲ್ಲಾಸಿಸಿದೆವು. ಕಳೆದ ವರ್ಷ ಅಂತಹ ಒಂದು ಹುರಿದುಂಬಿಸುವ ಕಾರ್ಯಕ್ರಮವನ್ನು ನಾವು ಆನಂದಿಸಿರುವುದು, 1996ರ “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಿಗಾಗಿ ಏರ್ಪಡಿಸಲಾಗುತ್ತಿರುವ ಕಾರ್ಯಕ್ರಮಕ್ಕೆ ನಾವು ಹಾಜರಾಗುವಂತೆ ಪ್ರತಿಯೊಂದು ಪ್ರಯತ್ನವನ್ನು ಮಾಡುವಂತೆ ನಮ್ಮನ್ನು ನಿಜವಾಗಿಯೂ ಪ್ರಚೋದಿಸಬೇಕು. ನಿಶ್ಚಯವಾಗಿಯೂ ನಾವೆಲ್ಲರೂ ನಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸಬೇಕು ಮತ್ತು ಅವರು ಅಲ್ಲಿ ನಮ್ಮೊಂದಿಗೆ ಇರುವಂತೆ ಸಹಾಯ ಮಾಡಬೇಕು. ಈ ಕಡೇ ದಿವಸಗಳಲ್ಲಿ ನಾವು ಯೆಹೋವನನ್ನು ಹರ್ಷಭರಿತರಾಗಿ ಸೇವಿಸುವುದನ್ನು ಮುಂದುವರಿಸಿದಂತೆ, ಈ ಅಧಿವೇಶನಗಳು ನಮಗೆ ಉತ್ತೇಜನ ಮತ್ತು ಬಲದ ಒಂದು ನಿಜವಾದ ಮೂಲವಾಗಿ ಪರಿಣಮಿಸುವುವು.
2 ಆರಂಭದ ಗೀತದಿಂದ ಸಮಾಪ್ತಿಯ ಪ್ರಾರ್ಥನೆಯ ವರೆಗೆ, ಸಂತೋಷಗೊಳಿಸುವ ಆತ್ಮಿಕ ಕಾರ್ಯಕ್ರಮದಲ್ಲಿ ಆನಂದಿಸಲು ನೀವು ಅಲ್ಲಿರುವಂತೆ, ನಿಮ್ಮ ಅಧಿವೇಶನ ಏರ್ಪಾಡುಗಳನ್ನು ಸಾಕಷ್ಟು ಮುಂಚಿತವಾಗಿ ಮಾಡುವಂತೆ ಖಚಿತ ಮಾಡಿಕೊಳ್ಳಿರಿ. ನೆರವಿನ ಅಗತ್ಯವಿರುವ ಯಾರನ್ನಾದರೂ, ವಿಶೇಷವಾಗಿ ಹೊಸತಾಗಿ ಆಸಕ್ತರಾಗಿರುವ ವ್ಯಕ್ತಿಗಳನ್ನು, ಅವರೂ ಪ್ರತಿಯೊಂದು ಕಾರ್ಯಕ್ರಮಾವಧಿಗಾಗಿ ಉಪಸ್ಥಿತರಾಗಿರುವಂತೆ, ಪ್ರೀತಿಪೂರ್ವಕವಾಗಿ ನಿಮ್ಮ ಯೋಜನೆಗಳಲ್ಲಿ ಒಳಗೂಡಿಸಿರಿ. ಈ ಪುರವಣಿಯಲ್ಲಿರುವ ಮಾಹಿತಿಯನ್ನು, ಹಾಜರಾಗಲು ಯೋಜಿಸುತ್ತಿರಬಹುದಾದ ಯಾವುದೇ ಬೈಬಲ್ ವಿದ್ಯಾರ್ಥಿಗಳೊಂದಿಗೆ ಪರಿಗಣಿಸುವುದು ತುಂಬ ಸಹಾಯಕಾರಿಯಾಗಿರುವುದು. (ಗಲಾ. 6:6, 10) ಈ ವರ್ಷದ ಜಿಲ್ಲಾ ಅಧಿವೇಶನ ಕಾರ್ಯಕ್ರಮವು ಖಂಡಿತವಾಗಿಯೂ, ನಮ್ಮ ದೈವಿಕ ಶಾಂತಿಯನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುವುದು, ಮತ್ತು ಅಂತಹ ಶಾಂತಿಯನ್ನು ಕಂಡುಕೊಳ್ಳಲು ಇತರರಿಗೆ ಸಹಾಯ ಮಾಡುವುದರಲ್ಲಿ ನಮ್ಮ ಪಾತ್ರವನ್ನು ಅದು ವಿವರಿಸುವುದು. ಕಾರ್ಯಕ್ರಮದ ಯಾವುದೇ ಭಾಗವನ್ನು ತಪ್ಪಿಸದಂತೆ ನೀವು ನಿಮ್ಮ ಯೋಜನೆಗಳನ್ನು ಮಾಡಿದ್ದೀರೊ?
3 ಮೂರು ದಿನದ ಒಂದು ಕಾರ್ಯಕ್ರಮ: ಕಳೆದ ವರ್ಷದ “ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನದ ಕುರಿತಾದ ಒಂದು ಅನುಕೂಲಕರವಾದ ಹೇಳಿಕೆಯು, ಅನೇಕ ಮಂದಿಯ ಭಾವನೆಗಳನ್ನು ವ್ಯಕ್ತಪಡಿಸಿತು: “ಯೆಹೋವನನ್ನು ಸ್ತುತಿಸುತ್ತಾ, ಶಾಂತಭರಿತವಾದ, ಐಕ್ಯ ಸಹವಾಸದಲ್ಲಿ ಮೂರು ಅದ್ಭುತವಾದ ದಿನಗಳನ್ನು ಕಳೆಯಲು ನಾವು ಎಷ್ಟು ಹರ್ಷಭರಿತರಾಗಿದ್ದೇವೆ! ನಾವು ಒಂದು ಸುಂದರವಾದ ಆತ್ಮಿಕ ಪ್ರಮೋದವನದಲ್ಲಿ ಜೀವಿಸುತ್ತಿದ್ದೇವೆಂಬುದನ್ನು ನಮ್ಮ ಅಧಿವೇಶನವು ದೃಢೀಕರಿಸಿದೆ. ಈ ತೊಂದರೆಯುಕ್ತ ಲೋಕದಲ್ಲೂ ಹರ್ಷಧ್ವನಿಗೈಯಲು ನಮಗೆ ನಿಜವಾಗಿಯೂ ಕಾರಣವಿದೆ.” ಈ ವರ್ಷದ ಕಾರ್ಯಕ್ರಮವನ್ನೂ ನೀವು ಸಂಪೂರ್ಣವಾಗಿ ಆನಂದಿಸುವಿರೆಂದು ಮತ್ತು ನವೀಕರಿಸಲ್ಪಟ್ಟ ಬಲದೊಂದಿಗೆ ಮನೆಗೆ ಹಿಂದಿರುಗುವಿರೆಂದು ನಮಗೆ ತಿಳಿದಿದೆ. (2 ಪೂರ್ವ. 7:10) ಈ ವರ್ಷ ನಮಗೆ ಪುನಃ ಮೂರು ದಿನದ ಒಂದು ಕಾರ್ಯಕ್ರಮವಿರುವುದು. ಇಡೀ ಅವಧಿಗಾಗಿ ನೀವು ಹಾಜರಾಗಲು ಸಾಧ್ಯವಾಗುವಂತೆ ಐಹಿಕ ಕೆಲಸದಿಂದ ರಜೆಯನ್ನು ತೆಗೆದುಕೊಳ್ಳಲು ನೀವು ಈಗಾಗಲೇ ಏರ್ಪಾಡುಗಳನ್ನು ಮಾಡಿದ್ದೀರೊ? ಹಲವಾರು ಅಧಿವೇಶನಗಳು ಶಾಲೆಯ ರಜಾಸಮಯಗಳಲ್ಲಿ ಇರುವುದಿಲ್ಲ. ಶಾಲಾ ವಯಸ್ಸಿನ ಮಕ್ಕಳು ನಿಮಗಿರುವಲ್ಲಿ, ಅವರ ಧಾರ್ಮಿಕ ತರಬೇತಿಯ ಈ ಪ್ರಾಮುಖ್ಯ ಭಾಗಕ್ಕಾಗಿ ಅವರು ಒಂದು ಅಥವಾ ಎರಡು ದಿವಸಗಳಿಗೆ ಗೈರುಹಾಜರಿರುವರೆಂದು ನೀವು ಅವರ ಶಿಕ್ಷಕರಿಗೆ ಗೌರವಪೂರ್ವಕವಾಗಿ ತಿಳಿಸಿದ್ದೀರೊ?
4 ಕಾವಲಿನಬುರುಜು ಪತ್ರಿಕೆಯ 1996ರ ಜುಲೈ 1 ಮತ್ತು 15ನೆಯ ಸಂಚಿಕೆಗಳು, ಭಾರತದಲ್ಲಿರುವ ಎಲ್ಲಾ 15 ಅಧಿವೇಶನಗಳ ತಾರೀಖುಗಳು ಮತ್ತು ನಿವೇಶನಗಳನ್ನು ಪಟ್ಟಿಮಾಡುತ್ತವೆ. ಇಂಗ್ಲಿಷ್ಗೆ ಸೇರಿಸಿ, ಕನ್ನಡ, ಗುಜರಾಥಿ, ತಮಿಳು, ತೆಲುಗು ಬಂಗಾಲಿ, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅಧಿವೇಶನಗಳಿರುವವು. ಎಲ್ಲಾ ಮೂರು ದಿನಗಳಂದು ಕಾರ್ಯಕ್ರಮವು ಬೆಳಗ್ಗೆ 9:30ಕ್ಕೆ ಆರಂಭಗೊಳ್ಳುವುದು ಮತ್ತು ಆದಿತ್ಯವಾರದಂದು ಸಾಯಂಕಾಲ ಸರಿಸುಮಾರು 4:00 ಘಂಟೆಗೆ ಸಮಾಪ್ತಿಗೊಳ್ಳುವುದು. ಬಾಗಿಲುಗಳು ಬೆಳಗ್ಗೆ 8:00 ಘಂಟೆಗೆ ತೆರೆಯುವವು. ಆ ಸಮಯಕ್ಕೆ ಮುಂಚೆ ಒಳ ಪ್ರವೇಶಿಸಲು ಅನುಮತಿಸಲ್ಪಡುವವರು ಕೆಲಸದ ನೇಮಕಗಳಿರುವವರು ಮಾತ್ರ, ಮತ್ತು ಕಟ್ಟಡವು ಎಲ್ಲರಿಗಾಗಿ ತೆರೆಯುವ ತನಕ ಇವರು ಆಸನಗಳನ್ನು ಕಾದಿರಿಸಲು ಅನುಮತಿಸಲ್ಪಡದಿರುವರು. ಹೆಚ್ಚು ಅನುಕೂಲಕರವೂ ಹಾಯಾಗಿಯೂ ಇರುವ ಕ್ಷೇತ್ರಗಳಲ್ಲಿನ ಆಸನಗಳನ್ನು ಖಾಲಿ ಬಿಡುವ ಮೂಲಕ ನಮ್ಮ ವೃದ್ಧ ಮತ್ತು ಅಶಕ್ತ ಸಹೋದರರಿಗಾಗಿ ನಾವು ದಯೆಯನ್ನು ಪ್ರದರ್ಶಿಸುವೆವೊ? ನೆನಪಿನಲ್ಲಿಡಿರಿ: “ಪ್ರೀತಿ . . . ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ.”—1 ಕೊರಿಂ. 13:4, 5; ಫಿಲಿ. 2:4.
5 ನೀವು ಹರಿತಗೊಳಿಸಲ್ಪಡುವಿರೊ?: ‘ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವುದು’ ಎಂದು ಹೇಳುವ ಜ್ಞಾನೋಕ್ತಿ 27:17ನೆಯ ವಚನವನ್ನು ಉಲ್ಲೇಖಿಸಿದ ನಂತರ, ಆಗಸ್ಟ್ 15, 1993ರ ಕಾವಲಿನಬುರುಜು ಪತ್ರಿಕೆಯು ಅವಲೋಕಿಸಿದ್ದು: “ಕ್ರಮವಾಗಿ ಹರಿತಗೊಳಿಸಲು ಅವಶ್ಯವಿರುವ ಉಪಕರಣಗಳಂತೆ ನಾವಿದ್ದೇವೆ. ಯೆಹೋವನಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಮತ್ತು ನಾವು ನಮ್ಮ ನಂಬಿಕೆಯ ಆಧಾರದ ಮೇರೆಗೆ ನಿರ್ಣಯಗಳನ್ನು ಮಾಡುವುದಕ್ಕೆ ಲೋಕದಿಂದ ಭಿನ್ನರಾಗಿರುವ ಅರ್ಥವಿರುವುದರಿಂದ, ನಾವು ಬಹುಭಾಗದವರಿಗಿಂತ ಭಿನ್ನವೋ ಎಂಬಂಥ ಒಂದು ಪಥವನ್ನು ಸತತವಾಗಿ ತೆಗೆದುಕೊಳ್ಳಬೇಕು.” ಆ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?
6 ನಾವು ಲೋಕದಿಂದ ಭಿನ್ನರಾಗಿದ್ದೇವೆ ಮತ್ತು ಭಿನ್ನರಾಗಿ ಉಳಿಯಲೇಬೇಕು. ಸತ್ಕಾರ್ಯಗಳಿಗಾಗಿ ನಾವು ಹುರುಪುಳ್ಳವರಾಗಿರಬೇಕಾದರೆ, ಇದನ್ನು ಸಾಧಿಸಲು ಸತತವಾದ ಪ್ರಯತ್ನವು ಕಾಪಾಡಲ್ಪಡತಕ್ಕದ್ದು. (ತೀತ 2:14) ಈ ಕಾರಣದಿಂದ ಮೇಲೆ ಉಲ್ಲೇಖಿಸಲ್ಪಟ್ಟ ಕಾವಲಿನಬುರುಜು ಪತ್ರಿಕೆಯ ಲೇಖನವು ಮುಂದುವರಿಯುತ್ತಾ ಹೇಳಿದ್ದು: “ಯೆಹೋವನನ್ನು ಪ್ರೀತಿಸುವ ಇತರರೊಂದಿಗೆ ನಾವಿರುವಾಗ, ನಾವು ಒಬ್ಬರನ್ನೊಬ್ಬರು ಹರಿತಮಾಡುತ್ತೇವೆ—ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ ಮತ್ತು ಸತ್ಕಾರ್ಯಮಾಡುವುದಕ್ಕೆ ನಾವು ಪ್ರೇರೇಪಿಸುತ್ತೇವೆ.” ನಾವು ಆತ್ಮಿಕವಾಗಿ ತೀಕ್ಷ್ಣಮತಿಗಳಾಗಿ ಉಳಿಯುವಂತೆ ಸಹಾಯ ಮಾಡಲು, ಜಿಲ್ಲಾ ಅಧಿವೇಶನವು ಯೆಹೋವನಿಂದ ಬರುವ ಒದಗಿಸುವಿಕೆಗಳಲ್ಲಿ ಒಂದಾಗಿದೆ. ಅಧಿವೇಶನದ ಮೂರು ದಿನಗಳ ಸಮಯದಲ್ಲಿ ಪ್ರತಿಯೊಂದು ಕಾರ್ಯಕ್ರಮಾವಧಿಯನ್ನು ಹಾಜರಾಗಲು ನಾವು ನಿರ್ಧರಿತರಾಗಿರೋಣ. ಕಾರ್ಯಕ್ರಮದ ಯಾವುದೇ ಭಾಗವು ನಾವು ತಪ್ಪಿಸದಷ್ಟು ಪ್ರಾಮುಖ್ಯವಾಗಿದೆ.
7 ಒಬ್ಬ ವಿವೇಕಿಯಾದ ವ್ಯಕ್ತಿಯು ಕಿವಿಗೊಡುವನು: ನಾವು ಕೇಳುವ ಸಾಮರ್ಥ್ಯದೊಂದಿಗೆ ಹುಟ್ಟಿರಬಹುದು ಆದರೆ ನಾವು ಕಿವಿಗೊಡುವ ಸಾಮರ್ಥ್ಯದೊಂದಿಗೆ ಹುಟ್ಟಿರುವುದಿಲ್ಲ. ಕಿವಿಗೊಡುವಿಕೆಯು, ವಿಕಸಿಸಲ್ಪಡಬೇಕಾದ ಒಂದು ಕಲೆಯಾಗಿದೆ. ಸಾಮಾನ್ಯ ವ್ಯಕ್ತಿಯು ತಾನು ಕೇಳಿಸಿಕೊಂಡಿರುವ ವಿಷಯಗಳಲ್ಲಿ—ತಾನು ಎಷ್ಟು ಜಾಗರೂಕತೆಯಿಂದ ಕಿವಿಗೊಟ್ಟಿದ್ದೇನೆಂದು ನೆನಸಿದರೂ—ಕೇವಲ ಅರ್ಧದಷ್ಟನ್ನು ಮಾತ್ರ ನೆನಪಿನಲ್ಲಿಡಶಕ್ತನಾಗಿದ್ದಾನೆಂದು ಹೇಳಲಾಗಿದೆ. ನಾವು ಅಪಕರ್ಷಣೆಗಳ ಒಂದು ಯುಗದಲ್ಲಿ ಜೀವಿಸುತ್ತಿರುವುದರಿಂದ, ಕೆಲವೊಮ್ಮೆ ದೀರ್ಘಾವಧಿಗಳಿಗಾಗಿ ಮನಸ್ಸನ್ನು ಕೇಂದ್ರೀಕರಿಸುವುದರಲ್ಲಿ ನಾವು ಕಷ್ಟವನ್ನನುಭವಿಸಬಹುದು. ವಿಶೇಷವಾಗಿ ಒಂದು ದೊಡ್ಡ ಸಭಾಂಗಣದಲ್ಲಿ ಕುಳಿತುಕೊಂಡಿರುವಾಗ ಯಾರೋ ಮಾತಾಡುತ್ತಿರುವ ವಿಷಯಕ್ಕೆ ಕಿವಿಗೊಡುತ್ತಾ, ನಮ್ಮ ಗಮನದ ವ್ಯಾಪ್ತಿಯನ್ನು ನಾವು ಹೆಚ್ಚಿಸಲು ಪ್ರಯತ್ನಿಸಬಲ್ಲೆವೊ? ಅಧಿವೇಶನದಿಂದ ಮನೆಗೆ ಹಿಂದಿರುಗಿದ ನಂತರ ಪ್ರತಿ ದಿನದ ಕಾರ್ಯಕ್ರಮದ ಒಂದು ಸಾರಾಂಶವನ್ನು ಕೊಡಲು ನಿಮಗೆ ಕೇಳಲ್ಪಟ್ಟಲ್ಲಿ, ನೀವು ಹಾಗೆ ಮಾಡಲು ಶಕ್ತರಾಗಿರುವಿರೊ? ಅಧಿವೇಶನ ಕಾರ್ಯಕ್ರಮದಲ್ಲಿ ಸಾದರಪಡಿಸಲ್ಪಡುವ ಪ್ರತಿಯೊಂದು ಭಾಗಕ್ಕೆ ಕಿವಿಗೊಡುವ ಮತ್ತು ನಿಕಟವಾದ ಗಮನವನ್ನು ಕೊಡುವ ನಮ್ಮ ಸಾಮರ್ಥ್ಯವನ್ನು ನಾವೆಲ್ಲರೂ ಹೇಗೆ ಉತ್ತಮಗೊಳಿಸಸಾಧ್ಯವಿದೆ?
8 ಅತ್ಯಾಸಕ್ತಿಯು ತೀರ ಆವಶ್ಯಕ, ಯಾಕಂದರೆ ಅದಿಲ್ಲದೆ ಸ್ಮರಣೆಯ ದೈವಿಕ ವರದಾನವು ಚೆನ್ನಾಗಿ ಕೆಲಸಮಾಡಲಾರದು. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯು ಒಂದು ವಿಷಯದಲ್ಲಿ ಎಷ್ಟು ಹೆಚ್ಚು ಆಸಕ್ತಿಯನ್ನು ತೋರಿಸುತ್ತಾನೊ, ಒಂದು ಭಾಷಣ ಅಥವಾ ಕಾರ್ಯಕ್ರಮ ಭಾಗದ ಮುಖ್ಯ ಅಂಶಗಳನ್ನು ನೆನಪಿನಲ್ಲಿಡುವುದು ಅಷ್ಟೇ ಸುಲಭವಾಗಿರುವುದು. ಆದರೂ, ಜಿಲ್ಲಾ ಅಧಿವೇಶನಗಳಲ್ಲಿ ಕೇಳಲು ನಮಗೆ ಸುಯೋಗವಿರುವ ವಿಷಯಗಳಿಗೆ ಸಾಮಾನ್ಯವಾದುದಕ್ಕಿಂತ ಹೆಚ್ಚಿನ ಗಮನವನ್ನು ನಾವು ಕೊಡುವುದರಲ್ಲಿ ಹೆಚ್ಚಿನದ್ದು ಅವಲಂಬಿಸಿರುತ್ತದೆ. ಸಾ.ಶ.ಪೂ. 1513ರಲ್ಲಿ ಐಗುಪ್ತದಲ್ಲಿದ್ದ ಕೆಲವು ಇಸ್ರಾಯೇಲ್ಯ ಕುಟುಂಬಗಳು ಪಸ್ಕಾಚರಣೆಯ ಸೂಚನೆಗಳಿಗೆ ಸ್ವಲ್ಪವೇ ಗಮನವನ್ನು ಕೊಟ್ಟಿದ್ದಲ್ಲಿ ಏನು ಸಂಭವಿಸುತ್ತಿತ್ತು? ವಿಮೋಚನಕಾಂಡ 12:28 (NW) ಹೇಳುವುದು: “ಇಸ್ರಾಯೇಲ್ಯರು ಅಲ್ಲಿಂದ ಹೊರಟು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ನಡಿಸಿದರು. ಅವರು ಹಾಗೆಯೇ ಮಾಡಿದರು.” ದೈವಿಕ ಸೂಚನೆಗಳನ್ನು ಪಾಲಿಸುವುದು ಇಸ್ರಾಯೇಲಿನ ಜ್ಯೇಷ್ಠ ಪುತ್ರರ ಸಂರಕ್ಷಣೆಯನ್ನು ಅರ್ಥೈಸಿತು. ಅಧಿವೇಶನ ಕಾರ್ಯಕ್ರಮದ ಪ್ರತಿಯೊಂದು ಭಾಗದಲ್ಲಿ ನಮ್ಮ ಅತ್ಯಾಸಕ್ತಿ ಮತ್ತು ಗಮನ ಕೊಡುವಿಕೆಗೆ, ನಮ್ಮ ಸದ್ಯದ ಆತ್ಮಿಕ ಪರಿಸ್ಥಿತಿ ಹಾಗೂ ನಮ್ಮ ಭವಿಷ್ಯತ್ತಿನ ಪ್ರತೀಕ್ಷೆಗಳೊಂದಿಗೆ ಸಂಬಂಧವಿದೆ. ಅಧಿವೇಶನಗಳಲ್ಲಿ ನಮಗೆ ಯೆಹೋವನ ಮಾರ್ಗಗಳ ಕುರಿತಾಗಿ ಕಲಿಸಲಾಗುತ್ತದೆ ಮತ್ತು ಒಂದು ಜೀವರಕ್ಷಕ ಕೆಲಸವನ್ನು ಪೂರೈಸಲಿಕ್ಕಾಗಿ ಉಪದೇಶಗಳನ್ನು ಕೊಡಲಾಗುತ್ತದೆ. (1 ತಿಮೊ. 4:16) ಬಿರುಗಾಳಿಯಿಂದ ಹೊಯ್ದಾಡುತ್ತಿರುವ ಒಂದು ಸಮುದ್ರದಲ್ಲಿ ನಿಮ್ಮನ್ನೇ ಒಂದು ಹಡಗಿನೋಪಾದಿ ಭಾವಿಸಿರಿ. ಯೆಹೋವನ ವಾಗ್ದಾನಗಳು ನಿರೀಕ್ಷೆಯ ದೃಢವಾದ ಲಂಗರು ಆಗಿವೆ. ಒಬ್ಬ ವ್ಯಕ್ತಿಯು ಕ್ರೈಸ್ತ ಕಾರ್ಯಕ್ರಮಗಳಲ್ಲಿ ಗಮನಕೊಡದಿರುವುದಾದರೆ ಮತ್ತು ತನ್ನ ಮನಸ್ಸನ್ನು ಅಲೆಯುವಂತೆ ಬಿಡುವುದಾದರೆ, ಏನು ಸಂಭವಿಸಬಹುದು? ಆತ್ಮಿಕ ಹಡಗೊಡೆತವನ್ನು ಅನುಭವಿಸುವುದರಿಂದ ಅವನನ್ನು ತಡೆಯಸಾಧ್ಯವಿರುವ, ಸಲಹೆ ಮತ್ತು ಉಪದೇಶದ ಅತ್ಯಾವಶ್ಯಕ ಅಂಶಗಳನ್ನು ಅವನು ತಪ್ಪಬಹುದು.—ಇಬ್ರಿ. 2:1; 6:19.
9 ಲೋಕದ ಅನೇಕ ಭಾಗಗಳಲ್ಲಿ, ನಮ್ಮ ಸಹೋದರರು ಕೂಟಗಳನ್ನು ಹಾಜರಾಗಲಿಕ್ಕಾಗಿ ಮಹತ್ತಾದ ದೈಹಿಕ ಪ್ರಯತ್ನವನ್ನು ಹಾಕುತ್ತಾರೆ. ಅಧಿವೇಶನಗಳಲ್ಲಿ ಅವರ ಏಕಾಗ್ರತೆಯ ಗಮನವನ್ನು ನೋಡುವುದು ಅದ್ಭುತಕರ. ಕೆಲವು ಸ್ಥಳಗಳಲ್ಲಾದರೊ, ವ್ಯಕ್ತಿಗಳು ಕಾರ್ಯಕ್ರಮಾವಧಿಗಳ ಸಮಯದಲ್ಲಿ ಅಧಿವೇಶನ ಆವರಣಗಳಲ್ಲಿ ಸುತ್ತಲೂ ತಿರುಗಾಡುತ್ತಾ ಇರುವ ಮೂಲಕ ಇತರರನ್ನು ಅಪಕರ್ಷಿಸಿದ್ದಾರೆ. ಇನ್ನಿತರರು ತಡವಾಗಿ ಒಳಬರುತ್ತಾರೆ. ಗತಕಾಲದ ಕೆಲವು ಅಧಿವೇಶನಗಳಲ್ಲಿ, ಕಾರ್ಯಕ್ರಮದ ಆರಂಭದ ಕೆಲವು ನಿಮಿಷಗಳ ವಿಷಯವನ್ನು ಕೇಳಿಸಿಕೊಳ್ಳುವುದು ಕಷ್ಟಕರವಾಗಿತ್ತು, ಯಾಕಂದರೆ ಅನೇಕರು ಪಡಸಾಲೆಗಳಲ್ಲಿ ಮತ್ತು ಆಸನ ಕ್ಷೇತ್ರಗಳ ಹಿಂದೆ ಅಡ್ಡಾಡುತ್ತಿದ್ದರು. ಇವರು ಸಾಮಾನ್ಯವಾಗಿ ಕೆಲಸದ ನೇಮಕಗಳಲ್ಲಿರುವ ಸಹೋದರರಾಗಿರುವುದಿಲ್ಲ ಇಲ್ಲವೇ ತಮ್ಮ ಚಿಕ್ಕ ಮಕ್ಕಳ ಅಗತ್ಯಗಳನ್ನು ಪರಾಮರಿಸುತ್ತಿರುವ ತಾಯಂದಿರಾಗಿರುವುದಿಲ್ಲ. ಹೆಚ್ಚಿನ ಗಲಾಟೆಯು, ಕೇವಲ ಅಡ್ಡಾಡುತ್ತಿರುವ ಮತ್ತು ಹರಟುತ್ತಿರುವ ಜನರಿಂದ ಆಗುತ್ತದೆ. ಈ ವರ್ಷ, ಅಟೆಂಟೆಂಡ್ ಇಲಾಖೆಯು ಈ ಸಮಸ್ಯೆಗೆ ಹೆಚ್ಚು ಗಮನವನ್ನು ಕೊಡಲಿದೆ, ಮತ್ತು ಆಶಾಜನಕವಾಗಿ, ಅಧ್ಯಕ್ಷರು ನಮಗೆ ಕುಳಿತುಕೊಳ್ಳುವಂತೆ ಆಮಂತ್ರಿಸುವಾಗ ಎಲ್ಲರೂ ಆಸನಗಳಲ್ಲಿ ಕುಳಿತಿರುವರು. ಈ ವಿಷಯದಲ್ಲಿ ನಿಮ್ಮ ಸಹಕಾರವು ಮಹತ್ತಾಗಿ ಗಣ್ಯಮಾಡಲ್ಪಡುವುದು.
10 ಅಧಿವೇಶನದ ಕಾರ್ಯಕ್ರಮವಕ್ಕೆ ಹೆಚ್ಚು ಗಮನಕೊಡುವವರಾಗಿರಲು ಮತ್ತು ಸಾದರಪಡಿಸಲ್ಪಟ್ಟ ವಿಷಯದಲ್ಲಿ ಹೆಚ್ಚಿನದ್ದನ್ನು ಮನಸ್ಸಿನಲ್ಲಿ ಇಡಲಿಕ್ಕಾಗಿ ಯಾವ ವ್ಯಾವಹಾರಿಕ ಸಲಹೆಗಳು ನಮಗೆ ಸಹಾಯ ಮಾಡುವವು? ಗತಿಸಿರುವ ವರ್ಷಗಳಲ್ಲಿ ಹೇಳಿರುವ ವಿಷಯವನ್ನು ಪುನಃ ಹೇಳುವುದು ಪ್ರಾಮುಖ್ಯ: (ಎ) ಅಧಿವೇಶನ ನಗರಕ್ಕೆ ಹೋಗುವುದಕ್ಕಾಗಿರುವ ಮುಖ್ಯ ಕಾರಣದ ಮೇಲೆ ಕೇಂದ್ರೀಕರಿಸಿರಿ. ಅದು, ಮನೋರಂಜನೆಯಲ್ಲಿ ಒಳಗೂಡಲಿಕ್ಕಾಗಿ ಅಲ್ಲ, ಬದಲಾಗಿ ಕಿವಿಗೊಟ್ಟು ಕಲಿಯಲಿಕ್ಕಾಗಿರುತ್ತದೆ. (ಧರ್ಮೋ. 31:12) ಪ್ರತಿ ರಾತ್ರಿ ಸಾಕಷ್ಟು ನಿದ್ದೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ನೀವು ಅಧಿವೇಶನಕ್ಕೆ ತುಂಬ ಬಳಲಿದವರಾಗಿ ಬರುವಲ್ಲಿ, ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟಕರವಾಗಿರುವುದು. (ಬಿ) ಕಾರ್ಯಕ್ರಮವು ಆರಂಭಿಸುವ ಮುಂಚೆಯೇ ಒಂದು ಆಸನವನ್ನು ಕಂಡುಕೊಳ್ಳಲು ಮತ್ತು ಕುಳಿತುಕೊಳ್ಳಲು ನಿಮಗೆ ಸಾಕಷ್ಟು ಸಮಯವನ್ನು ಕೊಟ್ಟುಕೊಳ್ಳಿರಿ. ಕಡೇ ನಿಮಿಷದಲ್ಲಿ ಆಸನಗಳಿಗೆ ಅವಸರದಿಂದ ನುಗ್ಗುವುದು, ಸಾಮಾನ್ಯವಾಗಿ ನೀವು ಆರಂಭದ ಭಾಗದಲ್ಲಿ ಸ್ವಲ್ಪ ವಿಷಯವನ್ನು ತಪ್ಪುವುದರಲ್ಲಿ ಫಲಿಸುವುದು. (ಸಿ) ಮುಖ್ಯ ಅಂಶಗಳ ಸಂಕ್ಷಿಪ್ತವಾದ ಟಿಪ್ಪಣಿಗಳನ್ನು ಬರೆದುಕೊಳ್ಳಿರಿ. ತೀರ ಹೆಚ್ಚಿನ ಟಿಪ್ಪಣಿಬರೆಯುವಿಕೆಯು, ಒಳ್ಳಯ ಕಿವಿಗೊಡುವಿಕೆಗೆ ಒಂದು ಅಡಚಣೆಯಾಗಿರಬಲ್ಲದು. ಬರೆಯುತ್ತಿರುವಾಗ, ನಿಮ್ಮ ಟಿಪ್ಪಣಿಗಳ ಮೇಲೆ ಕೇಂದ್ರೀಕರಿಸುವುದರಿಂದಾಗಿ ಇತರ ಅಂಶಗಳನ್ನು ನೀವು ತಪ್ಪಿಸದಂತೆ ಖಚಿತಮಾಡಿಕೊಳ್ಳಿರಿ. (ಡಿ) ಒಂದು ಅಧಿವೇಶನ ಭಾಗವು ಪರಿಚಯಿಸಲ್ಪಡುವಾಗ, ಅದನ್ನು ಕಾತುರ ನಿರೀಕ್ಷಣೆಯೊಂದಿಗೆ ವೀಕ್ಷಿಸಿರಿ. ನಿಮ್ಮನ್ನೇ ಕೇಳಿಕೊಳ್ಳಿರಿ, ‘ಯೆಹೋವನಿಗಾಗಿ ನನ್ನ ಗಣ್ಯತೆ ಮತ್ತು ಪ್ರೀತಿಯನ್ನು ಹೆಚ್ಚಿಸುವ ಯಾವ ವಿಷಯವನ್ನು ನಾನು ಈ ಭಾಗದಿಂದ ಸಂಗ್ರಹಿಸಸಾಧ್ಯವಿದೆ? ಹೊಸ ವ್ಯಕ್ತಿತ್ವವನ್ನು ಹೆಚ್ಚು ಪೂರ್ಣವಾಗಿ ಪ್ರದರ್ಶಿಸುವಂತೆ ಈ ಮಾಹಿತಿಯು ನನಗೆ ಹೇಗೆ ಸಹಾಯ ಮಾಡಬಲ್ಲದು? ಇದು ನಾನು ನನ್ನ ಶುಶ್ರೂಷೆಯಲ್ಲಿ ಉತ್ತಮಗೊಳ್ಳುವಂತೆ ಹೇಗೆ ಸಹಾಯಮಾಡುವುದು?’
11 ನಮ್ಮ ಶುಶ್ರೂಷೆಯನ್ನು ಅಲಂಕರಿಸುವ ನಡತೆ: ತನ್ನನ್ನು ‘ಸತ್ಕಾರ್ಯ ಮಾಡುವುದರಲ್ಲಿ ಮಾದರಿಯಾಗಿ’ ತೋರಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸಿದನು. ತನ್ನ ಕಲಿಸುವಿಕೆಯಲ್ಲಿ ಶುದ್ಧತೆಯನ್ನು ತೋರಿಸುವ ಮೂಲಕ, ತೀತನು ‘ನಮ್ಮ ರಕ್ಷಕನಾದ ದೇವರ ಉಪದೇಶವನ್ನು ಎಲ್ಲಾ ವಿಷಯಗಳಲ್ಲಿ ಅಲಂಕರಿ’ಸುವಂತೆ ಇತರರಿಗೆ ಸಹಾಯ ಮಾಡುವನು. (ತೀತ 2:7, 10) ದೈವಿಕ ನಡತೆಯು ಅಧಿವೇಶನಕ್ಕೆ ಪ್ರಯಾಣಿಸುತ್ತಿರುವಾಗ ಮತ್ತು ಹಿಂದೆ ಬರುತ್ತಿರುವಾಗ ಹಾಗೂ ನಾವು ಹೋಟೆಲುಗಳಲ್ಲಿ ಮತ್ತು ರೆಸ್ಟೋರಾಂಟ್ಗಳಲ್ಲಿ ಮತ್ತು ಅಧಿವೇಶನದಲ್ಲೇ, ಏಕೆ ಅಷ್ಟು ಪ್ರಾಮುಖ್ಯವಾಗಿದೆ ಎಂಬುದರ ಕುರಿತಾಗಿ ನಾವು ಪ್ರತಿ ವರ್ಷ ದಯಾಪರವಾದ ಮರುಜ್ಞಾಪನಗಳನ್ನು ಪಡೆಯುತ್ತೇವೆ. ಕಳೆದ ವರ್ಷ ನಾವು ಪುನಃ ಕೆಲವು ಹೃದಯೋಲ್ಲಾಸಗೊಳಿಸುವ ಹೇಳಿಕೆಗಳನ್ನು ಕೇಳಿಸಿಕೊಂಡೆವು, ಅವುಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.
12 ಒಂದು ಹೋಟೆಲಿನ ಮ್ಯಾನೇಜರ್ ಹೇಳಿದ್ದು: “ಸಾಕ್ಷಿಗಳಿಗೆ ಕೋಣೆಗಳನ್ನು ಕೊಡುವುದು ಯಾವಾಗಲೂ ಹರ್ಷಕರವಾದ ಒಂದು ವಿಷಯವಾಗಿರುತ್ತದೆ, ಯಾಕಂದರೆ ಅವರು ತಾಳ್ಮೆಯುಳ್ಳವರು, ಸಹಕಾರಿಗಳು ಮತ್ತು ತಮ್ಮ ಮಕ್ಕಳ ಮೇಲೆ ಕಟ್ಟುನಿಟ್ಟಾದ ಗಮನವನ್ನು ಇಡುವವರು ಆಗಿದ್ದಾರೆ.” ಒಬ್ಬ ಹೋಟೆಲ್ ಡೆಸ್ಕ್ ಕ್ಲರ್ಕ್ ಹೇಳಿದ್ದೇನಂದರೆ, “ಸಾಕ್ಷಿಗಳು ದಾಖಲಾಗುವಾಗ ಮತ್ತು ಹೊರಡುವಾಗ” ತನ್ನ ಕೆಲಸವು “ಎಷ್ಟೋ ಸುಲಭವಾಗುತ್ತದೆ ಯಾಕಂದರೆ, ಸಾಲಿನಲ್ಲಿ ಕಾಯಬೇಕಾದರೂ, ಅವರು ಯಾವಾಗಲೂ ಸೌಮ್ಯಸ್ವಭಾವದವರೂ, ತಾಳ್ಮೆಯುಳ್ಳವರೂ ಮತ್ತು ತಿಳಿವಳಿಕೆಯುಳ್ಳವರೂ ಆಗಿರುತ್ತಾರೆ.” ಅದೇ ಮೋಟೇಲಿನಲ್ಲಿ ತಂಗಿದ್ದ ಸಾಕ್ಷಿ ಯುವಕರ ನಡತೆಯಿಂದಾಗಿ ನ್ಯೂ ಇಂಗ್ಲೆಂಡಿನ ಒಬ್ಬ ಸ್ತ್ರೀಯು ಎಷ್ಟು ಪ್ರಭಾವಿತಳಾದಳೆಂದರೆ, ನಮ್ಮ ಸಂಸ್ಥೆಯ ಕುರಿತಾಗಿ ಆಕೆ ಕೆಲವೊಂದು ಸಾಹಿತ್ಯಗಳನ್ನು ವಿನಂತಿಸಿಕೊಂಡಳು.
13 ಇನ್ನೊಂದು ಕಡೆಯಲ್ಲಿ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಅವಕಾಶವಿದೆ. ಸೊಸೈಟಿಗೆ ಕಳುಹಿಸಲ್ಪಟ್ಟಿರುವ ಕೆಲವು ಅವಲೋಕನಗಳನ್ನು ನಾವು ಹಂಚಿಕೊಳ್ಳಲು ಇಷ್ಟಪಡುವೆವು. ಹೋಟೆಲುಗಳಲ್ಲಿ ಯೆಹೋವನ ಸಾಕ್ಷಿಗಳ ಮಕ್ಕಳಿಗೆ ಹೆಚ್ಚು ಮೇಲ್ವಿಚಾರಣೆಯ ಅಗತ್ಯವಿದೆಯೆಂದು ಒಬ್ಬ ಸಂಚರಣ ಮೇಲ್ವಿಚಾರಕರು ವರದಿಸಿದರು. ಕೆಲವು ಮಕ್ಕಳು, ಹಜಾರಹಾದಿಯಲ್ಲಿ ಓಡಾಡುತ್ತಿರುವುದನ್ನು, ಎಲೀವೇಟರ್ಗಳಲ್ಲಿ ಮೇಲೆ ಕೆಳಗೆ ಸವಾರಿ ಮಾಡುತ್ತಿರುವುದನ್ನು, ಇತರ ಅತಿಥಿಗಳ ನಿದ್ದೆಯನ್ನು ಕೆಡಿಸುತ್ತಾ ಲಾಬಿಯ ಸುತ್ತಲೂ ತುಂಬ ಗದ್ದಲವನ್ನು ಮಾಡುತ್ತಿರುವುದನ್ನು ನೋಡಲಾಗಿದೆ. ಕ್ರೈಸ್ತ ನಡತೆಯು ಕೇವಲ ನಿರ್ದಿಷ್ಟ ಸಮಯಾವಧಿಗಳಿಗಾಗಿ ಸೀಮಿತವಾಗಿರುವುದಿಲ್ಲವೆಂಬುದನ್ನು ತಿಳಿದುಕೊಳ್ಳಲು ನಾವು ನಮ್ಮ ಮಕ್ಕಳಿಗೆ ತರಬೇತಿಯನ್ನು ನೀಡುವ ಅಗತ್ಯವಿದೆ. ನಾವು ಅಧಿವೇಶನದ ಸೌಕರ್ಯದಿಂದ ಹೊರ ನಡೆದಾಗ ಅದು ಅಂತ್ಯಗೊಳ್ಳುವುದಿಲ್ಲ. ಅದು ದಿನದ 24 ತಾಸುಗಳಲ್ಲಿಯೂ ಇರಬೇಕು. ಹೋಟೆಲುಗಳು, ರೆಸ್ಟೋರಾಂಟ್ಗಳು, ಮತ್ತು ಬೀದಿಗಳಲ್ಲಿ ನಮ್ಮ ನಡತೆಯು, ನಾವು ನಮ್ಮ ಸಹೋದರರೊಂದಿಗೆ ಯೆಹೋವನಿಂದ ಕಲಿಸಲ್ಪಡುತ್ತಾ ಕಾರ್ಯಕ್ರಮಾವಧಿಗಳ ಸಮಯದಲ್ಲಿ ಕುಳಿತುಕೊಂಡಿರುವಾಗ ಇರುವಷ್ಟೇ ಗೌರವಾನಿತ್ವ ಆಗಿರಬೇಕು.—ಯೆಶಾ. 54:13; 1 ಪೇತ್ರ 2:12.
14 ನಮ್ಮ ಅಧಿವೇಶನಗಳಲ್ಲಿ ಆಹಾರದ ಸೇವಾಸೌಕರ್ಯವು ಗಣನೀಯವಾಗಿ ಕಡಿಮೆಗೊಳಿಸಲ್ಪಟ್ಟಿರುವುದರಿಂದ, ಸೌಕರ್ಯವನ್ನು ಬಾಡಿಗೆಗೆ ತೆಗೆದುಕೊಳ್ಳುವುದರಲ್ಲಿ ಮತ್ತು ವಿವಿಧ ವಿಷಯಗಳ ಕಾಳಜಿವಹಿಸುವುದರಲ್ಲಿ ಒಳಗೂಡಿರುವ ಗಣನೀಯವಾದ ಖರ್ಚನ್ನು ಆವರಿಸಲಿಕ್ಕಾಗಿ ನಮ್ಮ ಸ್ವಯಂಪ್ರೇರಿತ ದಾನಗಳ ಹೆಚ್ಚು ಮಹತ್ತಾದ ಅಗತ್ಯವಿದೆ. ಹದಿವಯಸ್ಕ ಮಕ್ಕಳಿರುವ ಒಬ್ಬ ಸಹೋದರಿಯು ಸೀಮಿತವಾದ ಹಣದೊಂದಿಗೆ ಅಧಿವೇಶನಕ್ಕೆ ಬಂದಳು. ಆದಾಗಲೂ, ಅವಳು ಮತ್ತು ಮಕ್ಕಳು ಒಂದು ಚಿಕ್ಕ ಕಾಣಿಕೆಯೊಂದಿಗೆ ಸಹಾಯ ಮಾಡಿದರು. ಈ ವಿಷಯದಲ್ಲಿ ಒಬ್ಬನು ಏನನ್ನು ಮಾಡಲು ನಿರ್ಣಯಿಸುತ್ತಾನೊ ಅದು ಒಂದು ವೈಯಕ್ತಿಕ ವಿಷಯವಾಗಿದೆಯಾದರೂ, ನೀವು ಇಂತಹ ಮರುಜ್ಞಾಪನಗಳನ್ನು ಗಣ್ಯಮಾಡುತ್ತೀರೆಂದು ನಮಗೆ ತಿಳಿದಿದೆ.—ಅ. ಕೃ. 20:35; 2 ಕೊರಿಂ. 9:7.
15 ನಾವು ಉಡುಪನ್ನು ಧರಿಸುವ ವಿಧದಿಂದ ಗುರುತಿಸಲ್ಪಡುವುದು: ನಾವು ಉಡುಪನ್ನು ಧರಿಸುವ ವಿಧವು, ನಮ್ಮ ಕುರಿತಾಗಿ ಮತ್ತು ಇತರರ ಕಡೆಗೆ ನಮ್ಮ ಭಾವನೆಗಳ ಕುರಿತಾಗಿ ಹೆಚ್ಚನ್ನು ಪ್ರಕಟಿಸುತ್ತದೆ. ಹೆಚ್ಚಿನ ಹದಿವಯಸ್ಕರು ಮತ್ತು ಅನೇಕ ವಯಸ್ಕರು, ತಮ್ಮ ಶಾಲೆ ಅಥವಾ ಉದ್ಯೋಗದ ಸ್ಥಳದಲ್ಲಿ ಗೀಳಿನ, ಅಡ್ಡಾದಿಡ್ಡಿಯ ಉಡುಗೆತೊಡುಗೆಯ ಶೈಲಿಗಳಿಂದ ಸುತ್ತುವರಿಯಲ್ಪಟ್ಟಿದ್ದಾರೆ. ಪ್ರತಿ ವರ್ಷ ಉಡುಗೆತೊಡುಗೆಯ ಶೈಲಿಗಳು ಹೆಚ್ಚು ವಿಪರೀತ, ದಿಗ್ಭ್ರಮೆಗೊಳಿಸುವಂತಹದ್ದೂ ಆಗುತ್ತವೆ. ನಾವು ಜಾಗರೂಕರಾಗಿರದಿದ್ದಲ್ಲಿ, ಲೌಕಿಕ ಸಮಾನಸ್ಥರು ಉಡುಪನ್ನು ಧರಿಸುವ ವಿಧದಿಂದ ನಾವು ಸುಲಭವಾಗಿ ಪ್ರಭಾವಿಸಲ್ಪಡಸಾಧ್ಯವಿದೆ. ಅನೇಕ ಶೈಲಿಗಳು, ಆರಾಧನೆಗಾಗಿರುವ ಕೂಟಗಳಲ್ಲಿ ಧರಿಸಲು ಅಯೋಗ್ಯವಾಗಿರುವಂತವುಗಳಾಗಿವೆ. ಕಳೆದ ವರ್ಷದ ಅಧಿವೇಶನಗಳಲ್ಲೊಂದರ ಅನಂತರ ಪಡೆಯಲಾದ ಒಂದು ಚೀಟಿಯು, ಕಾರ್ಯಕ್ರಮಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿತು ಆದರೆ ಕೂಡಿಸಿದ್ದು: “ಅಷ್ಟೊಂದು ಗಿಡ್ಡ ಉಡುಪುಗಳು, ಹೆಚ್ಚಾಗಿ, ಎದೆ ಹೆಗಲುಗಳನ್ನು ತೋರಿಸುವ ಆಳಕತ್ತಿರುವ ರವಿಕೆಗಳು, ಉದ್ದನೆಯ ಸೀಳಿರುವ ಲಂಗಗಳು—ಇವುಗಳನ್ನು ತೊಟ್ಟಿರುವ ಅಷ್ಟೊಂದು ಮಂದಿ ಯುವತಿಯರು ಅಲ್ಲಿ ಏಕೆ ಇದ್ದರೆಂದು ನಾನು ಕುತೂಹಲಪಟ್ಟೆ.” ನಿಶ್ಚಯವಾಗಿಯೂ ನಾವೆಲ್ಲರೂ ಅಧಿವೇಶನದಲ್ಲೂ ಕಾರ್ಯಕ್ರಮದ ನಂತರ ಸಹವಾಸಿಸುವಾಗಲೂ, ಕ್ರೈಸ್ತ ಶುಶ್ರೂಷಕರಿಗೆ ತಕ್ಕದ್ದಾಗಿರುವ ವಿಧದಲ್ಲಿ ಉಡುಪನ್ನು ಧರಿಸಲು ಆಶಿಸುತ್ತೇವೆ. ‘ಸಭ್ಯತೆ ಮತ್ತು ಸ್ವಸ್ಥ ಮನಸ್ಸಿನೊಂದಿಗೆ, ಸುವ್ಯವಸ್ಥಿತವಾದ ಉಡುಪಿ’ನಲ್ಲಿ (NW) ಅಲಂಕರಿಸುವ ಕುರಿತಾದ ಅಪೊಸ್ತಲ ಪೌಲನ ಸಲಹೆಯನ್ನು, ಎಲ್ಲಾ ಸಮಯಗಳಲ್ಲೂ ಜ್ಞಾಪಕಕ್ಕೆ ತಂದುಕೊಳ್ಳುವುದರಿಂದ ನಾವು ಒಳ್ಳೇದನ್ನು ಮಾಡುತ್ತೇವೆ.—1 ತಿಮೊ. 2:9.
16 ಸಭ್ಯ, “ಸುವ್ಯವಸ್ಥಿತ” ಉಡುಪು ಯಾವುದೆಂದು ಯಾರು ನಿರ್ಧರಿಸಬೇಕು? ಸಭ್ಯರಾಗಿರುವುದರ ಅರ್ಥ “ನಿರ್ಲಜ್ಜೆಯವರೂ ಅಲ್ಲ ಹಠವಾದಿಗಳೂ ಅಲ್ಲ” ಆಗಿರುತ್ತದೆ. ಶಬ್ದಕೋಶವು ವಿನಯಶೀಲತೆಯನ್ನು “ನಿರಾಡಂಬರ”ದ ಎಂದೂ ಅರ್ಥನಿರೂಪಿಸುತ್ತದೆ. ಸೊಸೈಟಿಯಾಗಲಿ ಹಿರಿಯರಾಗಲಿ ಉಡುಪು ಅಥವಾ ಕೇಶಶೈಲಿಯ ಕುರಿತಾಗಿ ಯಾವುದೇ ನಿಯಮಗಳನ್ನು ಸ್ಥಾಪಿಸುವುದಿಲ್ಲ. ಹಾಗಿದ್ದರೂ, ಯಾವ ಉಡುಪು ಶೈಲಿಗಳು ವಿನಯಶೀಲವಲ್ಲದವುಗಳು ಅಥವಾ ಸಭ್ಯವಲ್ಲದವುಗಳಾಗಿವೆಯೆಂಬುದು ಸಹ ಒಬ್ಬ ಕ್ರೈಸ್ತನಿಗೆ ಸ್ಪಷ್ಟವಾಗಿರಬಾರದೊ? (ಫಿಲಿಪ್ಪಿ 1:10ನ್ನು ಹೋಲಿಸಿರಿ.) ನಮ್ಮ ಕೇಶಶೈಲಿ ಮತ್ತು ಉಡುಗೆ ಅಯೋಗ್ಯವಾದ ಗಮನವನ್ನು ಆಕರ್ಷಿಸಬಾರದು. ನಾವು ತೋರಿಕೆಯಲ್ಲಿ ಮೆಚ್ಚುವಂಥವರಾಗಿರಬೇಕು, ಲೌಕಿಕರೂ ಅಥವಾ ಜುಗುಪ್ಸೆ ಹುಟ್ಟಿಸುವಂಥವರೂ ಅಲ್ಲ. ಸುವಾರ್ತೆಯ ಶುಶ್ರೂಷಕರೋಪಾದಿ, ನಾವು ಯೋಗ್ಯವಾಗಿ ಉಡುಪನ್ನು ತೊಟ್ಟಿರುವುದು ಮತ್ತು ಕೇಶಶೈಲಿಯನ್ನು ಹೊಂದಿರುವುದು ಯೆಹೋವನಿಗೆ ಸನ್ಮಾನವನ್ನು ತರುತ್ತದೆ ಮತ್ತು ಸಂಸ್ಥೆಯ ಮೇಲೆ ಒಳ್ಳೆಯ ಕೀರ್ತಿಯನ್ನು ಬೀರುತ್ತದೆ. ನಾವು ಜಿಲ್ಲಾ ಅಧಿವೇಶನದ ನಗರದಲ್ಲಿರುವ ಸಮಯದಲ್ಲಿನ ನಮ್ಮ ತೋರಿಕೆ ಮತ್ತು ಉಡುಪು, ಕೂಟಗಳನ್ನು ಹಾಜರಾಗುವಾಗ ಸಭಾಗೃಹಕ್ಕೆ ನಾವು ಸಾಮಾನ್ಯವಾಗಿ ಧರಿಸುವಂತಹದ್ದಕ್ಕೆ ಹೊಂದಾಣಿಕೆಯಲ್ಲಿರಬೇಕು. ಆದುದರಿಂದ, ಹೆತ್ತವರು ಮಾದರಿಯನ್ನು ಇಟ್ಟು, ನಂತರ ತಮ್ಮ ಮಕ್ಕಳು ಸಂದರ್ಭಕ್ಕೆ ಯೋಗ್ಯವಾಗಿ ಉಡುಪನ್ನು ಧರಿಸುವರೆಂಬುದನ್ನು ಖಚಿತಗೊಳಿಸುವರು. ಹಿರಿಯರು ಒಂದು ಒಳ್ಳೆಯ ಮಾದರಿಯನ್ನು ಇಡಲು ಬಯಸುವರು ಮತ್ತು ಅವಶ್ಯವಿದ್ದಲ್ಲಿ ದಯೆಯ ಸಲಹೆಯನ್ನು ನೀಡಲು ಸಿದ್ಧರಾಗಿರುವರು.
17 ಹೋಟೆಲುಗಳು: ಸಹೋದರರು ತಾಳ್ಮೆಯುಳ್ಳವರೂ, ಸೌಮ್ಯಸ್ವಭಾವದವರೂ, ಮತ್ತು ಸಹಕಾರಿಗಳೂ ಆಗಿದ್ದ ಕಾರಣದಿಂದ ತಾವು ಪ್ರಭಾವಿತರಾಗಿದ್ದೆವೆಂದು ಹೇಳಿದ ಹೋಟೆಲ್ ಸಿಬ್ಬಂದಿಯನ್ನು ನಾವು ಈ ಮುಂಚೆ ಉಲ್ಲೇಖಿಸಿದೆವು. ರಿಜಿಸ್ಟರ್ ಮಾಡಿಸಲು ನಾವು ಸಾಲಿನಲ್ಲಿ ಕಾಯಬೇಕಾದಾಗ ನಾವು ಈ ಕ್ರೈಸ್ತ ಗುಣಗಳನ್ನು ಪ್ರದರ್ಶಿಸುತ್ತಾ ಮುಂದುವರಿಯಲು ಬಯಸುತ್ತೇವೆ. ಅನುಕೂಲಕರವಾದ ಬೆಲೆಯಲ್ಲಿ ಕೋಣೆಗಳನ್ನು ಒದಗಿಸಿ ಸೊಸೈಟಿಯೊಂದಿಗೆ ಸಹಕರಿಸಿರುವ ಹೋಟೆಲುಗಳನ್ನು ನಾವು ಗಣ್ಯಮಾಡುತ್ತೇವೆ. ಪ್ರಯಾಣದಿಂದ ನಾವು ಬಳಲಿರುವುದಾದರೂ, ಹೋಟೆಲಿನ ಕಾರ್ಮಿಕರನ್ನು ನಾವು ದಯೆಯಿಂದ ಉಪಚರಿಸಬೇಕೆಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. ನಾವು ಹಾಗೆ ಮಾಡುವುದು, ಕೆಲವರು ಸತ್ಯವನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವಂತೆ ಕಾರಣವಾಗಬಹುದು. ಇದಕ್ಕೆ ಕೂಡಿಸಿ, ಅನುಮತಿಯಿಲ್ಲದೆ ಹೋಟೆಲ್ ಕೋಣೆಗಳಲ್ಲಿ ಯಾವ ಅಡಿಗೆಯು ಮಾಡಲ್ಪಡಬಾರದು.
18 ವಿಡಿಯೊ ಕ್ಯಾಮೆರಾಗಳು, ಕ್ಯಾಮೆರಾಗಳು, ಮತ್ತು ಟೇಪ್ ರೆಕಾರ್ಡ್ಗಳು: ಉಪಸ್ಥಿತರಿರುವ ಇತರರಿಗಾಗಿ ನಾವು ಪರಿಗಣನೆಯನ್ನು ತೋರಿಸುವ ಪಕ್ಷದಲ್ಲಿ, ಕ್ಯಾಮೆರಾಗಳನ್ನು ಮತ್ತು ಇತರ ರೆಕಾರ್ಡುಮಾಡುವ ಸಲಕರಣೆಯನ್ನು ಉಪಯೋಗಿಸಲು ಅನುಮತಿಯಿದೆ. ಕಾರ್ಯಕ್ರಮಾವಧಿಗಳ ಸಮಯದಲ್ಲಿ ನಾವು ಛಾಯಾಚಿತ್ರಗಳನ್ನು ತೆಗೆಯುತ್ತಾ ಸುತ್ತಾಡುವುದಾದರೆ, ಕಿವಿಗೊಡಲು ಪ್ರಯತ್ನಿಸುತ್ತಿರುವ ಇತರರನ್ನು ನಾವು ಅಪಕರ್ಷಿಸುವೆವು ಮಾತ್ರವಲ್ಲದೆ, ನಾವು ಸ್ವತಃ ಕಾರ್ಯಕ್ರಮದಲ್ಲಿ ಸ್ವಲ್ಪ ಭಾಗವನ್ನು ತಪ್ಪಿಸುವೆವು. ಭಾಷಣಕರ್ತರಿಗೆ ನಿಕಟವಾದ ಗಮನವನ್ನು ಕೊಡುವ ಮೂಲಕ ಮತ್ತು ಮಿತವಾದ ಟಿಪ್ಪಣಿಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಸಾಮಾನ್ಯವಾಗಿ ಅಧಿವೇಶನದಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ. ಮನೆಗೆ ನಿರ್ಬಂಧಿಸಲ್ಪಟ್ಟಿರುವ ಒಬ್ಬ ಸಹೋದರ ಅಥವಾ ಸಹೋದರಿಗಾಗಿ ನಾವು ರೆಕಾರ್ಡಿಂಗ್ ಮಾಡುತ್ತಿರಬಹುದು; ಆದಾಗಲೂ ನಮ್ಮ ಸ್ವಂತ ಉಪಯೋಗಕ್ಕಾಗಿ, ಕಾರ್ಯಕ್ರಮದ ಅನೇಕ ತಾಸುಗಳನ್ನು ಟೇಪ್ ಮಾಡಿದ ನಂತರ, ನಾವು ಮನೆಗೆ ಹಿಂದಿರುಗಿದ ಬಳಿಕ, ನಾವು ಏನನ್ನು ರೆಕಾರ್ಡ್ ಮಾಡಿದ್ದೇವೊ ಅದರಲ್ಲಿ ಹೆಚ್ಚಿನದ್ದನ್ನು ಪುನರ್ವಿಮರ್ಶಿಸಲು ನಮಗೆ ಸಮಯವಿರುವುದಿಲ್ಲ ಎಂಬುದನ್ನು ನಾವು ಕಂಡುಕೊಳ್ಳಬಹುದು. ಯಾವುದೇ ರೀತಿಯ ರೆಕಾರ್ಡಿಂಗ್ ಉಪಕರಣಗಳನ್ನು ಇಲೆಕ್ಟ್ರಿಕಲ್ ಅಥವಾ ಧ್ವನಿ ಸೌಕರ್ಯಗಳಿಗೆ ಜೋಡಿಸಬಾರದು, ಅಥವಾ ಸಲಕರಣೆಯು ಪಡಸಾಲೆಗಳು, ನಡೆಯುವ ದಾರಿಗಳನ್ನು ಅಥವಾ ಇತರರ ವೀಕ್ಷಣವನ್ನು ಅಡ್ಡಗಟ್ಟಬಾರದು.
19 ಆಸನವ್ಯವಸ್ಥೆ: ಆಸನಗಳನ್ನು ಕಾದಿರಿಸುವ ವಿಷಯದಲ್ಲಿ ನಾವು ಅಭಿವೃದ್ಧಿಯನ್ನು ಗಮನಿಸುತ್ತಾ ಇದ್ದೇವೆ. ಹೋದ ವರ್ಷ, ನಿಮ್ಮಲ್ಲಿ ಹೆಚ್ಚಿನವರು ನಿರ್ದೇಶನಗಳನ್ನು ಅನುಸರಿಸಿದಿರಿ: ನಿಮ್ಮ ಅತಿ ಸಮೀಪದ ಕುಟುಂಬ ಸದಸ್ಯರಿಗೆ ಮತ್ತು ನಿಮ್ಮೊಂದಿಗೆ ನಿಮ್ಮ ಗುಂಪಿನಲ್ಲಿ ಪ್ರಯಾಣಿಸುತ್ತಿರಬಹುದಾದವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು. ಅನೇಕರು ಈ ಸ್ಪಷ್ಟವಾದ ನಿರ್ದೇಶನಗಳನ್ನು ಅನುಸರಿಸುತ್ತಿದ್ದದರಿಂದ ಬಹುಶಃ ನೀವು ಅದನ್ನು ಕಡಿಮೆ ಒತ್ತಡಭರಿತವಾಗಿ ಕಂಡುಕೊಂಡಿರಿ. ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ನಿಮ್ಮ ಅನುಸರಣೆಯು ಯೆಹೋವನಿಗೆ ಮತ್ತು ಆತ್ಮಿಕ ಆಹಾರವನ್ನು ಕೊಡುವ ‘ನಂಬಿಗಸ್ತ ಆಳಿಗೆ’ ಮೆಚ್ಚುವಂತಹದ್ದಾಗಿತ್ತು.—ಮತ್ತಾ. 24:45.
20 ವಿಶೇಷವಾದ ಆರೋಗ್ಯ ಅಗತ್ಯಗಳಿರುವ ಆದರೆ ಇನ್ನೂ ಅಧಿವೇಶನಕ್ಕೆ ಬರುವ, ನಮ್ಮ ಸಹೋದರರ ಸಂಖ್ಯೆಯು ಅಧಿಕವಾಗುತ್ತಿದೆ. ಕೆಲವರು ಗಾಲಿಕುರ್ಚಿಗಳಲ್ಲಿ ಬರುತ್ತಾರೆ ಮತ್ತು ಕುಟುಂಬ ಸದಸ್ಯರಿಂದ ಕಾಳಜಿ ವಹಿಸಲ್ಪಡಬೇಕಾಗುತ್ತದೆ. ಇತರರು ಹೃದಯದ ಸಮಸ್ಯೆಗಳು ಅಥವಾ ಥಟ್ಟನೆಯ ಹೊಡೆತಗಳಂತಹ ಅಸ್ಥಿಗತ ರೋಗಗಳಿಗಾಗಿ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಿರುತ್ತಾರೆ. ಆತ್ಮಿಕ ಆಹಾರದಲ್ಲಿ ಯಾವುದನ್ನೂ ತಪ್ಪಿಸದಿರಲು ನಿರ್ಧರಿತರಾಗಿದ್ದು, ಈ ಪ್ರಿಯರಾದ ಸಹೋದರ ಸಹೋದರಿಯರನ್ನು ಅಧಿವೇಶನದಲ್ಲಿ ನೋಡುವುದು ನಮ್ಮ ಹೃದಯವನ್ನು ಉಲ್ಲಾಸಗೊಳಿಸುತ್ತದೆ. ಆದಾಗಲೂ, ಕೆಲವೊಮ್ಮೆ, ಕೆಲವು ವ್ಯಕ್ತಿಗಳು, ನೆರವನ್ನು ನೀಡಲಿಕ್ಕಾಗಿ ಕುಟುಂಬ ಇಲ್ಲವೇ ಸಭಾ ಸದಸ್ಯರಿಲ್ಲದೆ, ಅಧಿವೇಶನದ ಸಮಯದಲ್ಲಿ ಅಸ್ವಸ್ಥರಾಗುವ ಸಮಸ್ಯೆಯು ಇದ್ದಿರುತ್ತದೆ. ನಿರ್ದಿಷ್ಟ ವಿದ್ಯಮಾನಗಳಲ್ಲಿ ಅಧಿವೇಶನ ಕಾರ್ಯನಿರ್ವಾಹಕ ಮಂಡಳಿಯು, ಒಬ್ಬ ಸಹೋದರ ಅಥವಾ ಒಬ್ಬ ಸಹೋದರಿಯನ್ನು ಆಸ್ಪತ್ರೆಗೆ ರವಾನಿಸಲು ಒಂದು ತುರ್ತು ವೈದ್ಯಕೀಯ ಸೇವಾಸೌಕರ್ಯವನ್ನು ಕರೆಯಲು ಅವಶ್ಯಪಡಿಸಲ್ಪಟ್ಟಿತು. ಅಸ್ಥಿಗತವಾಗಿ ಅಸ್ವಸ್ಥರಾಗಿರುವವರ ಪರಾಮರಿಸುವಿಕೆಗಾಗಿ ಜವಾಬ್ದಾರಿಯು ಪ್ರಾಥಮಿಕವಾಗಿ ಕುಟುಂಬ ಸದಸ್ಯರು ಮತ್ತು ನಿಕಟವಾದ ಸಂಬಂಧಿಗಳ ಮೇಲೆ ಇರುತ್ತದೆ. ಅಧಿವೇಶನದ ಪ್ರಥಮ ಚಿಕಿತ್ಸೆ ಇಲಾಖೆಯು ಅಸ್ಥಿಗತವಾಗಿ ಅಸ್ವಸ್ಥರಾಗಿರುವವರಿಗಾಗಿ ಆರೈಕೆಯನ್ನು ಒದಗಿಸುವ ಒಂದು ಸ್ಥಾನದಲ್ಲಿರುವುದಿಲ್ಲ. ನಿಮ್ಮ ಕುಟುಂಬದ ಒಬ್ಬ ಸದಸ್ಯನು, ವಿಶೇಷ ಆರೈಕೆಯ ಅಗತ್ಯದಲ್ಲಿರುವಲ್ಲಿ, ಒಂದು ತುರ್ತುಪರಿಸ್ಥಿತಿಯು ಏಳುವಲ್ಲಿ ಅವನು ಒಬ್ಬನೆ ಬಿಡಲ್ಪಟ್ಟಿರದಿರುವುದನ್ನು ದಯವಿಟ್ಟು ಖಚಿತಮಾಡಿಕೊಳ್ಳಿರಿ. ಇದಕ್ಕೆ ಕೂಡಿಸಿ, ಸಾಮಾನ್ಯವಾದ ಆಸನದ ಕ್ಷೇತ್ರಗಳಲ್ಲಿ ಕುಳಿತುಕೊಳ್ಳಲು ಅಸಾಧ್ಯವನ್ನಾಗಿ ಮಾಡುವ ಅಲರ್ಜಿಗಳಿರುವವರಿಗಾಗಿ ವಿಶೇಷ ಕೋಣೆಗಳಿಗಾಗಿ ಅಧಿವೇಶನಗಳಲ್ಲಿ ಏರ್ಪಾಡುಗಳು ಇರುವುದಿಲ್ಲ. ತಮ್ಮ ಸಭೆಯಲ್ಲಿ ವಿಶೇಷವಾದ ಆರೋಗ್ಯ ಅಗತ್ಯಗಳಿರುವವರ ಕುರಿತಾಗಿ ಹಿರಿಯರು ಎಚ್ಚರರಾಗಿರಲು ಬಯಸಬಹುದು, ಮತ್ತು ಅವರ ಆರೈಕೆಗಾಗಿ ಸಮಯಕ್ಕೆ ಮುಂಚೆಯೇ ಏರ್ಪಾಡುಗಳನ್ನು ಮಾಡಲು ನಿಶ್ಚಯ ಮಾಡಬೇಕು.
21 ಅಧಿವೇಶನ ಆಹಾರ ಅಗತ್ಯಗಳು: ಅಧಿವೇಶನದಲ್ಲಿ ಊಟಗಳಿರುವುದಿಲ್ಲವೆಂದು ಕಳೆದ ವರ್ಷ ಪ್ರಕಟಿಸಲ್ಪಟ್ಟಾಗ ನಮ್ಮಲ್ಲಿ ಕೆಲವರು ಸ್ವಲ್ಪ ಆತಂಕಗೊಂಡಿದ್ದಿರಬಹುದು. ಹಾಗಿದ್ದಲ್ಲಿ, ನಮ್ಮ ಸಹೋದರರಲ್ಲಿ ಹೆಚ್ಚಿನವರಂತೆ, ಕೇವಲ ಲಘು ಉಪಹಾರಗಳನ್ನು ಅಥವಾ ನಮ್ಮ ಸ್ವಂತ ಆಹಾರವನ್ನು ತರುವುದರಲ್ಲಿನ ಪ್ರಯೋಜನಗಳಲ್ಲಿ ನಾವು ತುಂಬ ಸಂತೋಷಿತರಾಗಿದ್ದೆವು. ಒಬ್ಬ ಸಹೋದರನು ಬರೆದುದು: “ಇದರಿಂದ ನಾನು ಸ್ಪಷ್ಟವಾಗಿ ಒಂದು ಬೃಹತ್ತಾದ ಆತ್ಮಿಕ ಪ್ರಯೋಜನವನ್ನು ಕಾಣಬಲ್ಲೆ. ಆ ಎಲ್ಲಾ ಸಮಯ ಮತ್ತು ಶಕ್ತಿಯನ್ನು ಈಗ ಆತ್ಮಿಕ ವಿಷಯಗಳ ಕಡೆಗೆ ತಿರುಗಿಸಸಾಧ್ಯವಿದೆ. ನಾನು ಒಂದೇ ಒಂದು ನಕರಾತ್ಮಕ ಹೇಳಿಕೆಯನ್ನು ಕೇಳಿಲ್ಲ.” ಒಬ್ಬ ಸಹೋದರಿಯು ಬರೆದುದು: “ಮಾದರಿಯ ಮೂಲಕ, ಪ್ರಿಯ ಸಹೋದರರಾದ ನೀವು, ಒಬ್ಬೊಬ್ಬ ಕ್ರೈಸ್ತರಂತೆ ನಮ್ಮನ್ನೇ ಪರೀಕ್ಷಿಸಿಕೊಂಡು, ನಮ್ಮ ಜೀವಿತಗಳನ್ನು ಸರಳೀಕರಿಸಿ, ನಮ್ಮ ದೇವಪ್ರಭುತ್ವ ಚಟುವಟಿಕೆಯನ್ನು ಹೆಚ್ಚಿಸಲಿಕ್ಕಾಗಿ ಮಾರ್ಗಗಳನ್ನು ಹುಡುಕಲು ನಮ್ಮನ್ನು ಉತ್ತೇಜಿಸುತ್ತೀರಿ.” ಹಿಂದಿನ ಊಟದ ಸೇವಾಸೌಕರ್ಯದ ಒದಗಿಸುವಿಕೆಗಳ ಕುರಿತಾಗಿ ಒಬ್ಬ ಸಂಚರಣ ಮೇಲ್ವಿಚಾರಕರು ಬರೆದುದು: “ಹಳೆಯ ಏರ್ಪಾಡು, ಗಣನೀಯವಾದ ಸಂಖ್ಯೆಯ ಸಹೋದರರು ಇಡೀ ಸಮ್ಮೇಳನದ ಕಾರ್ಯಕ್ರಮವನ್ನು ತಪ್ಪುವಂತೆ ಮಾಡುತ್ತಿತ್ತು.” ಲಭ್ಯವಿರುವ ಲಘು ಉಪಹಾರಗಳು ಮತ್ತು ಸಹೋದರರು ತಂದಂತಹ ಆಹಾರದ ಕುರಿತಾಗಿ ಒಬ್ಬ ಹಿರಿಯನು ಬರೆದುದು: “ಅವರು ಏನನ್ನು ಬಯಸಿದರೋ ಅದು ಮಾತ್ರ ಅವರಲ್ಲಿತ್ತು.” ಕೊನೆಯದಾಗಿ, ಇನ್ನೊಬ್ಬ ಸಹೋದರಿಯು ಬರೆದುದು: “ಕಾರ್ಯಕ್ರಮಾವಧಿಗಳ ನಂತರ ವಾತಾವರಣವು ಶಾಂತಿಭರಿತವೂ ಪ್ರಶಾಂತವೂ, ಗೆಲವಿನದ್ದೂ ಆಗಿತ್ತು.” ಹೌದು, ಪ್ರತಿಯೊಬ್ಬರು ಒಂದು ಲಘುವಾದ ತಿಂಡಿ ಅಥವಾ ಮಧ್ಯಾಹ್ನದ ಅವಧಿಯಲ್ಲಿ ತನ್ನನ್ನು ಪೋಷಿಸಿಕೊಳ್ಳಲು ಸಾಕಾಗುವಷ್ಟೇ ಆಹಾರವನ್ನು ತರಸಾಧ್ಯವಿತ್ತು. ಸ್ನೇಹಿತರನ್ನು ಭೇಟಿಯಾಗಲು ತಮಗೆ ಹೆಚ್ಚು ಸಮಯವಿತ್ತು ಎಂಬ ವಾಸ್ತವಾಂಶದ ಕುರಿತಾಗಿ ಅನೇಕರು ಹೇಳಿಕೆಯನ್ನಿತ್ತರು.
22 ಈ ವರ್ಷ ಪುನಃ ಯಾವುದೇ ಊಟಗಳನ್ನು ಬಡಿಸಲಾಗುವುದಿಲ್ಲ ಬದಲಾಗಿ ಲಘು ಉಪಹಾರಗಳು ಲಭ್ಯವಿರುವವು. ಅಧಿವೇಶನಕ್ಕೆ ಕೊಂಡೊಯ್ಯಬಹುದಾದ ವ್ಯಾವಹಾರಿಕ, ಪೌಷ್ಟಿಕ ಆಹಾರ ಸಾಮಗ್ರಿಗಳ ಕುರಿತಾಗಿ ಸಲಹೆಗಳಿಗಾಗಿ, ಜುಲೈ 1995ರ ನಮ್ಮ ರಾಜ್ಯದ ಸೇವೆಯ ಪುಟ 6ರಲ್ಲಿರುವ ರೇಖಾಚೌಕವನ್ನು ಪುನರ್ವಿಮರ್ಶಿಸಲು ಕೆಲವು ನಿಮಿಷಗಳನ್ನು ದಯವಿಟ್ಟು ತೆಗೆದುಕೊಳ್ಳಿರಿ. ದಯವಿಟ್ಟು ನೆನಪಿನಲ್ಲಿಡಿರಿ, ಯಾವುದೇ ಗಾಜಿನ ಕಂಟೇನರ್ಗಳು ಅಥವಾ ಮದ್ಯಪಾನೀಯಗಳು ಅಧಿವೇಶನದ ಸೌಕರ್ಯದೊಳಗೆ ತರಲ್ಪಡಬಾರದು. ಚಿಕ್ಕದ್ದಾದ ನೀರಿನ ಕಂಟೇನರ್ಗಳು ಅವಶ್ಯವಿರುವಲ್ಲಿ, ಅವು ನಿಮ್ಮ ಆಸನದ ಕೆಳಗಡೆ ಸೇರುವಂತಹವುಗಳಾಗಿರಬೇಕು. ಮಧ್ಯಾಹ್ನದ ವಿರಾಮದ ಸಮಯದಲ್ಲಿ ನೀವು ಏನನ್ನು ತರುತ್ತೀರೊ ಅದನ್ನು ತಿನ್ನಲು ಮತ್ತು ಕುಡಿಯಲು ಸಾಕಷ್ಟು ಸಮಯವಿದೆಯೆಂಬುದನ್ನು ನೆನಪಿನಲ್ಲಿಡಿರಿ. ಕೂಟಗಳ ಸಮಯದಲ್ಲಿ ನಮ್ಮ ಸಭಾಗೃಹಗಳಲ್ಲಿ ಇರುವಂತೆ, ಕಾರ್ಯಕ್ರಮಾವಧಿಗಳ ಸಮಯದಲ್ಲಿ ನಾವು ಯಾವಾಗಲೂ ತಿನ್ನುವುದರಿಂದ ದೂರವಿರುತ್ತೇವೆ. ಹೀಗೆ ನಾವು ಆರಾಧನೆಗಾಗಿರುವ ಏರ್ಪಾಡು ಮತ್ತು ಒದಗಿಸಲ್ಪಡುತ್ತಿರುವ ಆತ್ಮಿಕ ಆಹಾರಕ್ಕಾಗಿ ಗೌರವವನ್ನು ಪ್ರದರ್ಶಿಸುತ್ತೇವೆ.
23 ಬೇಗನೆ, “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಮೊದಲನೆಯದ್ದು ಆರಂಭಗೊಳ್ಳಲಿದೆ. ಹಾಜರಾಗಲಿಕ್ಕಾಗಿ ನೀವು ನಿಮ್ಮ ತಯಾರಿಗಳನ್ನು ಪೂರ್ಣಗೊಳಿಸಿದ್ದೀರೊ, ಮತ್ತು ಮೂರು ದಿನಗಳ ಸಂತೋಷಕರ ಸಾಹಚರ್ಯ ಮತ್ತು ಆತ್ಮಿಕವಾದ ಸುವಿಷಯಗಳನ್ನು ಆನಂದಿಸಲು ನೀವು ಈಗ ಸಿದ್ಧರಾಗಿದ್ದೀರೊ? ಈ ವರ್ಷದ ಅಧಿವೇಶನವನ್ನು ಹಾಜರಾಗಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನು ಎಂಬುದು ನಮ್ಮ ಪ್ರಾಮಾಣಿಕವಾದ ಪ್ರಾರ್ಥನೆಯಾಗಿದೆ.
[ಪುಟ 6ರಲ್ಲಿರುವಚೌಕ]
ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
ದೀಕ್ಷಾಸ್ನಾನ: ಶನಿವಾರ ಬೆಳಗ್ಗೆ ಕಾರ್ಯಕ್ರಮವು ಆರಂಭವಾಗುವ ಮುಂಚೆ ದೀಕ್ಷಾಸ್ನಾನದ ಅಭ್ಯರ್ಥಿಗಳು ನಿರ್ದಿಷ್ಟವಾಗಿ ನಮೂದಿಸಲ್ಪಟ್ಟ ತಮ್ಮ ಆಸನಗಳಲ್ಲಿ ಇರತಕ್ಕದ್ದು. ದೀಕ್ಷಾಸ್ನಾನ ಪಡೆದುಕೊಳ್ಳಲು ಯೋಜಿಸುವ ಪ್ರತಿಯೊಬ್ಬರಿಂದ ಸಭ್ಯವಾದ ಒಂದು ಸ್ನಾನದ ಉಡುಪು ಮತ್ತು ಒಂದು ಟವಲು ತರಲ್ಪಡತಕ್ದದ್ದು. ದೀಕ್ಷಾಸ್ನಾನದ ಅಭ್ಯರ್ಥಿಗಳೊಂದಿಗೆ ನಮ್ಮ ಶುಶ್ರೂಷೆ ಪುಸ್ತಕದಿಂದ ಪ್ರಶ್ನೆಗಳನ್ನು ಪುನರ್ವಿಮರ್ಶಿಸುವ ಸಭಾ ಹಿರಿಯರು, ಪ್ರತಿಯೊಬ್ಬನು ಈ ಅಂಶಗಳನ್ನು ತಿಳಿಯುತ್ತಾನೆಂಬುದನ್ನು ಖಚಿತಗೊಳಿಸಲು ಬಯಸುವರು. ಭಾಷಣಕರ್ತನಿಂದ ದೀಕ್ಷಾಸ್ನಾನದ ಭಾಷಣ ಮತ್ತು ಪ್ರಾರ್ಥನೆಯು ಆದ ನಂತರ, ಕಾರ್ಯಕ್ರಮಾವಧಿಯ ಅಧ್ಯಕ್ಷನು ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಸಂಕ್ಷಿಪ್ತ ಸೂಚನೆಗಳನ್ನು ಕೊಟ್ಟು, ತದನಂತರ ಹಾಡಿಗಾಗಿ ಕರೆ ನೀಡುವನು. ಕೊನೆಯ ಚರಣದ ತರುವಾಯ, ಅಭ್ಯರ್ಥಿಗಳನ್ನು ದೀಕ್ಷಾಸ್ನಾನ ಪಡೆಯುವ ಸ್ಥಳಕ್ಕೆ ಅಟೆಂಡೆಂಟ್ಗಳು ನಡೆಸುವರು. ಒಬ್ಬನ ಸಮರ್ಪಣೆಯ ಚಿಹ್ನೆಯಾಗಿರುವ ದೀಕ್ಷಾಸ್ನಾನವು ಯೆಹೋವನ ಮತ್ತು ಆ ವ್ಯಕ್ತಿಯ ನಡುವಿನ ಒಂದು ಆಪ್ತವಾದ ಮತ್ತು ವೈಯಕ್ತಿಕವಾದ ವಿಷಯವಾಗಿರುವುದರಿಂದ, ಇಬ್ಬರು ಅಥವಾ ಹೆಚ್ಚು ದೀಕ್ಷಾಸ್ನಾನದ ಅಭ್ಯರ್ಥಿಗಳು ದೀಕ್ಷಾಸ್ನಾನ ಪಡೆಯುವಾಗ, ಅಪ್ಪಿಕೊಳ್ಳುವ ಅಥವಾ ಕೈಗಳನ್ನು ಹಿಡಿದುಕೊಳ್ಳುವ ಸಹಭಾಗಿ ದೀಕ್ಷಾಸ್ನಾನಗಳು ಎಂಬುದಾಗಿ ಕರೆಯಲ್ಪಡುವ ದೀಕ್ಷಾಸ್ನಾನಗಳ ಏರ್ಪಾಡು ಇರುವುದಿಲ್ಲ.
ಬ್ಯಾಡ್ಜ್ ಕಾರ್ಡ್ಗಳು: ಅಧಿವೇಶನದಲ್ಲಿ ಮತ್ತು ಅಧಿವೇಶನದ ಸ್ಥಳಕ್ಕೆ ಹೋಗುವಾಗ ಮತ್ತು ಹಿಂದಿರುಗಿ ಪ್ರಯಾಣಿಸುವಾಗ, 1996ರ ಬ್ಯಾಡ್ಜ್ ಕಾರ್ಡನ್ನು ದಯವಿಟ್ಟು ಧರಿಸಿಕೊಳ್ಳಿರಿ. ಇದು ಅನೇಕವೇಳೆ ನಮಗೆ, ಪ್ರಯಾಣಮಾಡುವಾಗ ಒಂದು ಉತ್ತಮ ಸಾಕ್ಷಿಯನ್ನು ನೀಡಲು ಸಾಧ್ಯಮಾಡುತ್ತದೆ. ಬ್ಯಾಡ್ಜ್ ಕಾರ್ಡುಗಳು ಮತ್ತು ಹೋಲ್ಡರುಗಳು ಅಧಿವೇಶನದಲ್ಲಿ ಲಭ್ಯವಿರುವುದಿಲ್ಲದ ಕಾರಣ, ಅವುಗಳನ್ನು ನಿಮ್ಮ ಸಭೆಯ ಮುಖಾಂತರ ಪಡೆಯತಕ್ಕದ್ದು. ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಕಾರ್ಡುಗಳನ್ನು ಕೇಳಲಿಕ್ಕಾಗಿ, ಅಧಿವೇಶನಕ್ಕೆ ಇನ್ನೇನು ಕೆಲವೇ ದಿನಗಳಿರುವ ತನಕ ಕಾಯಬೇಡಿರಿ. ನಿಮ್ಮ ಪ್ರಸ್ತುತ ಮೆಡಿಕಲ್ ಡಿರೆಕ್ಟಿವ್/ರಿಲೀಸ್ ಕಾರ್ಡನ್ನು ಕೊಂಡೊಯ್ಯಲು ನೆನಪಿಡಿರಿ.
ರೂಮಿಂಗ್: ಹೋಟೆಲಿನ ಸಂಬಂಧದಲ್ಲಿ ಒಂದು ಸಮಸ್ಯೆಯನ್ನು ನೀವು ಅನುಭವಿಸುವುದಾದರೆ, ಆ ವಿಷಯವನ್ನು ಅಧಿವೇಶನದ ರೂಮಿಂಗ್ ಇಲಾಖೆಯ ಮೇಲ್ವಿಚಾರಕರು ಕೂಡಲೇ ಪರಿಹರಿಸುವುದರಲ್ಲಿ ನಿಮಗೆ ಸಹಾಯ ಮಾಡಶಕ್ತರಾಗುವಂತೆ ಅವರ ಗಮನಕ್ಕೆ ಅದನ್ನು ತರಲು ದಯವಿಟ್ಟು ಹಿಂಜರಿಯದಿರಿ. ರೂಮ್ ವಿನಂತಿ ಫಾರ್ಮ್ಗಳು ತಡೆಯಿಲ್ಲದೆ ಸೂಕ್ತವಾದ ಅಧಿವೇಶನ ವಿಳಾಸಗಳಿಗೆ ಸರಿಯಾಗಿ ಕಳುಹಿಸಲ್ಪಟ್ಟಿದೆ ಎಂಬ ವಿಷಯದಲ್ಲಿ ಸಭಾ ಸೆಕ್ರಿಟರಿಗಳು ಖಚಿತರಾಗಿರಬೇಕು. ಅಧಿವೇಶನ ಸಂಘಟನೆಯಿಂದ ಮಾಡಲ್ಪಟ್ಟ ವಸತಿಯನ್ನು ನೀವು ರದ್ದು ಮಾಡಬೇಕಾಗಿದ್ದಲ್ಲಿ, ಕೋಣೆಯನ್ನು ಪುನಃ ನೇಮಿಸಸಾಧ್ಯವಾಗುವಂತೆ ಕೂಡಲೇ ಹೋಟೆಲ್ ಮತ್ತು ಅಧಿವೇಶನ ರೂಮಿಂಗ್ ಇಲಾಖೆಗೆ ತಿಳಿಯಪಡಿಸತಕ್ಕದ್ದು.
ಸ್ವಯಂ ಸೇವೆ: ಕಡಿಮೆಗೊಳಿಸಲ್ಪಟ್ಟಿರುವ ಆಹಾರ ಸೇವಾಸೌಕರ್ಯದಿಂದಾಗಿ, ಆ ಇಲಾಖೆಯಲ್ಲಿ ಈ ಹಿಂದೆ ಕೆಲಸ ಮಾಡಿದ ಅನೇಕ ಮಂದಿ, ಅವರು ಬೇರೆ ಕಡೆ ಕೆಲಸ ಮಾಡಲು ಮುಂದೆ ಬರಬಲ್ಲರೆಂದು ಈಗ ಕಂಡುಕೊಳ್ಳಬಹುದು. ಅಧಿವೇಶನದ ಇಲಾಖೆಗಳಲ್ಲೊಂದರಲ್ಲಿ ನೆರವು ನೀಡಲಿಕ್ಕಾಗಿ ಸ್ವಲ್ಪ ಸಮಯವನ್ನು ನೀವು ಬದಿಗಿರಿಸಬಲ್ಲಿರೋ? ಕೇವಲ ಕೆಲವೊಂದು ತಾಸುಗಳ ಮಟ್ಟಿಗಾದರೊ, ನಮ್ಮ ಸಹೋದರರ ಸೇವೆ ಮಾಡುವುದು ತುಂಬಾ ಸಹಾಯಕಾರಿಯಾಗಿರಸಾಧ್ಯವಿದೆ ಮತ್ತು ಸಾಕಷ್ಟು ಸಂತೃಪ್ತಿಯನ್ನು ತರಬಲ್ಲದು. ನೀವು ಸಹಾಯ ಮಾಡಬಲ್ಲಿರಾದರೆ, ಅಧಿವೇಶನದ ಸ್ವಯಂ ಸೇವಕರ ಇಲಾಖೆಗೆ ದಯವಿಟ್ಟು ವರದಿಮಾಡಿರಿ. 16 ವರ್ಷ ಪ್ರಾಯಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಸಹ, ಹೆತ್ತವರಲ್ಲೊಬ್ಬರ ಅಥವಾ ಇತರ ಜವಾಬ್ದಾರ ವಯಸ್ಕರ ಮಾರ್ಗದರ್ಶನೆಯ ಕೆಳಗೆ ಕೆಲಸ ಮಾಡುವ ಮೂಲಕ ಉತ್ತಮ ನೆರವನ್ನು ನೀಡಬಲ್ಲರು.
ಎಚ್ಚರಿಕೆಯ ಮಾತುಗಳು: ಅನಗತ್ಯವಾದ ತೊಂದರೆಯಿಂದ ದೂರವಿರಲು ಸಂಭಾವ್ಯ ಸಮಸ್ಯೆಗಳ ಕುರಿತಾಗಿ ಎಚ್ಚರವಾಗಿರಿ. ಅನೇಕವೇಳೆ ಕಳ್ಳರು ಮತ್ತು ಇತರ ನೀತಿನಿಷ್ಠೆಗಳಿಲ್ಲದ ವ್ಯಕ್ತಿಗಳು, ತಮ್ಮ ಮನೆ ಪರಿಸರದಿಂದ ದೂರವಿರುವ ಜನರನ್ನು ಸುಲಿಗೆ ಮಾಡುವರು. ಕಳ್ಳರು ಮತ್ತು ಜೇಬುಗಳ್ಳರು ದೊಡ್ಡ ಒಟ್ಟುಗೂಡುವಿಕೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ನಿಮ್ಮ ಆಸನಗಳ ಮೇಲೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಬಿಡುವುದು ವಿವೇಕವುಳ್ಳದ್ದಾಗಿರುವುದಿಲ್ಲ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬನೂ ಒಬ್ಬ ಕ್ರೈಸ್ತನಾಗಿದ್ದಾನೆಂದು ನೀವು ಖಚಿತವಾಗಿರಲಾರಿರಿ. ಯಾವುದೇ ದುಷ್ಪ್ರೇರಣೆಗೆ ಯಾಕೆ ಅವಕಾಶ ಕೊಡಬೇಕು? ಮಕ್ಕಳನ್ನು ಆಕರ್ಷಿಸಲಿಕ್ಕಾಗಿ ಹೊರಗಿನ ಕೆಲವು ವ್ಯಕ್ತಿಗಳಿಂದ ಮಾಡಲ್ಪಟ್ಟ ಪ್ರಯತ್ನಗಳ ಕುರಿತು ವರದಿಗಳು ಬಂದಿವೆ. ಎಲ್ಲಾ ಸಮಯಗಳಲ್ಲಿ ನಿಮ್ಮ ಮಕ್ಕಳ ಮೇಲೆ ದೃಷ್ಟಿಯಿಡಿರಿ.
ಅನೇಕ ಹೋಟೆಲುಗಳಲ್ಲಿ ಲಭ್ಯವಿರುವ ಕೆಲವು ಕೇಬಲ್ ಟಿವಿ ಮತ್ತು ವಿಡಿಯೊ ಸೇವಾಸೌಕರ್ಯಗಳು, ತುಚ್ಛವಾದ, ಲಂಪಟವರ್ಣನೆಯ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತವೆ. ಈ ಪಾಶದ ಕುರಿತಾಗಿ ಎಚ್ಚರಿಕೆಯಿಂದಿರಿ, ಮತ್ತು ಕೋಣೆಯಲ್ಲಿ ಮೇಲ್ವಿಚಾರಣೆಯಿಲ್ಲದೆ ಟಿವಿಯನ್ನು ಉಪಯೋಗಿಸುವಂತೆ ಮಕ್ಕಳನ್ನು ಅನುಮತಿಸಬೇಡಿ.
ಅಧಿವೇಶನದ ಯಾವುದೇ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಲಿಕ್ಕಾಗಿ ಅಧಿವೇಶನದ ಸಭಾಂಗಣದ ನಿರ್ವಾಹಕ ಮಂಡಳಿಗೆ ದಯವಿಟ್ಟು ಫೋನ್ ಮಾಡಬೇಡಿ. ಅಗತ್ಯವಾದ ಮಾಹಿತಿಯು ಹಿರಿಯರಿಂದ ದೊರಕದಿರುವುದಾದರೆ, ದಯವಿಟ್ಟು ಆಗಸ್ಟ್ 1996ರ ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಅಧಿವೇಶನ ಕೇಂದ್ರ ಕಾರ್ಯಸ್ಥಾನಗಳ ವಿಳಾಸಗಳಲ್ಲಿ ಒಂದಕ್ಕೆ ನೀವು ಬರೆಯಬಹುದು.