ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಸೆಪ್ಟೆಂಬರ್: ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ, ರೂ. 20.00ರ ಕಾಣಿಕೆಗೆ. ಪರ್ಯಾಯವಾಗಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಅಥವಾ ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಎವಲ್ಯೂಷನ್ ಆರ್ ಬೈ ಕ್ರಿಯೇಷನ್? ಎಂಬ ಎರಡು ಪುಸ್ತಕಗಳಲ್ಲಿ ಯಾವುದನ್ನಾದರೂ ರೂ. 25.00ರ ಕಾಣಿಕೆಗೆ ನೀಡಬಹುದು (ದೊಡ್ಡ ಸೈಸ್ ರೂ. 45.00 ಆಗಿದೆ). ಪಂಜಾಬಿ ಭಾಷೆಯನ್ನು ಓದಲು ಇಷ್ಟಪಡುವ ವ್ಯಕ್ತಿಗಳಿಗೆ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ನೀಡಲ್ಪಡಸಾಧ್ಯವಿದೆ.
ಅಕ್ಟೋಬರ್: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು.
ನವೆಂಬರ್: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು ರೂ. 20.00ರ ಕಾಣಿಕೆಗೆ. ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸುವ ಉದ್ದೇಶದೊಂದಿಗೆ, ಎಲ್ಲ ಕೊಡಿಕೆಗಳನ್ನು ಅನುಸರಿಸಿಕೊಂಡು ಹೋಗಲು ಒಂದು ವಿಶೇಷವಾದ ಪ್ರಯತ್ನವು ಮಾಡಲ್ಪಡುವುದು.
ಡಿಸೆಂಬರ್: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್ ರೂ. 45.00 ಆಗಿದೆ). ಪರ್ಯಾಯವಾಗಿ, ಸೂಕ್ತವಾಗಿರುವಲ್ಲಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕ ಎಂಬ ಪುಸ್ತಕವು, ರೂ. 45.00ರ ಕಾಣಿಕೆಗೆ ನೀಡಲ್ಪಡಬಹುದು. ಪಂಜಾಬಿ ಭಾಷೆಯನ್ನು ಓದಲು ಇಷ್ಟಪಡುವ ವ್ಯಕ್ತಿಗಳಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, ರೂ. 20.00ರ ಕಾಣಿಕೆಗೆ ನೀಡಲ್ಪಡಸಾಧ್ಯವಿದೆ.
ಸೂಚನೆ: ಮೇಲೆ ತಿಳಿಸಲ್ಪಟ್ಟ ಕ್ಯಾಂಪೇನ್ ಸಾಹಿತ್ಯಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ (S-AB-14) ವಿನಂತಿಸತಕ್ಕದ್ದು.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಸೆಪ್ಟೆಂಬರ್ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ ಮಾಡಬೇಕು. ಇದು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.
◼ ಅಕ್ಟೋಬರ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು ಯೋಜಿಸುತ್ತಿರುವ ಪ್ರಚಾರಕರು ಅರ್ಜಿಯೊಂದನ್ನು ಬೇಗನೇ ತುಂಬಿಸಿಕೊಡಬೇಕು. ಇದು ಹಿರಿಯರು, ಪತ್ರಿಕೆಗಳು, ಸಾಹಿತ್ಯ ಮತ್ತು ಟೆರಿಟೊರಿಗಾಗಿ ಆವಶ್ಯಕವಾದ ಏಪಾರ್ಡುಗಳನ್ನು ಮಾಡುವಂತೆ ಅನುಮತಿಸುವುದು.
◼ ಪುನಸ್ಸ್ಥಾಪಿತರಾಗುವ ಪ್ರವೃತ್ತಿಯಿರಬಹುದಾದ ಯಾವುದೇ ಬಹಿಷ್ಕೃತ
ಅಥವಾ ಸಹವಾಸಿಸುವುದನ್ನು ಬಿಟ್ಟುಬಿಟ್ಟಿರುವ ವ್ಯಕ್ತಿಗಳ ಕುರಿತಾಗಿ ಎಪ್ರಿಲ್ 15, 1991ರ ವಾಚ್‌ಟವರ್ ಪತ್ರಿಕೆಯ 21-3ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸಲು ಹಿರಿಯರನ್ನು ನೆನಪಿಸಲಾಗುತ್ತದೆ.
◼ ಕಲ್ಕತ್ತದಲ್ಲಿನ ಜಿಲ್ಲಾ ಅಧಿವೇಶನದ ದಿನಾಂಕವು, 1996, ಡಿಸೆಂಬರ್ 27-29ಕ್ಕೆ ಬದಲಾಯಿಸಲ್ಪಟ್ಟಿದೆ.
◼ ಜನವರಿ 1997ರಿಂದ ಆರಂಭಿಸಿ, ಎಚ್ಚರ! ಪತ್ರಿಕೆಯ ಮರಾಠಿ ಮುದ್ರಣವು ಒಂದು ಮಾಸಿಕ ಪ್ರಕಾಶನವಾಗಿರುವುದು.
◼ ಎಲ್ಲಾ ಪ್ರಚಾರಕರು ಆಗಸ್ಟ್ ತಿಂಗಳಿಗಾಗಿರುವ ತಮ್ಮ ಕ್ಷೇತ್ರ ಸೇವಾ ರಿಪೋರ್ಟ್‌ಗಳನ್ನು ಗುರುವಾರ, ಆಗಸ್ಟ್ 29, ಅಥವಾ ಕಡಿಮೆಪಕ್ಷ ಆದಿತ್ಯವಾರ, ಸೆಪ್ಟೆಂಬರ್ 1ರಂದು ತಮ್ಮ ಸಭೆಗೆ ಸಲ್ಲಿಸುವಂತೆ ನಾವು ಉತ್ತೇಜಿಸುತ್ತೇವೆ. ಸೇವಾ ವರ್ಷಕ್ಕಾಗಿರುವ ವಾರ್ಷಿಕ ವರದಿಯನ್ನು ಸಂಕಲಿಸಲಿಕ್ಕಾಗಿ ನಮಗೆ ಸರಿಯಾದ ಸಮಯದಲ್ಲಿ ತಲಪುವಂತೆ, ತದನಂತರ ಸಭಾ ಸೆಕ್ರಿಟರಿಯು, ಕಾಂಗ್ರೀಗೇಷನ್ ರಿಪೋರ್ಟ್ (S-1)ನ್ನು ಮಂಗಳವಾರ, ಸೆಪ್ಟೆಂಬರ್ 3ರ ಒಳಗೆ ಸಂಸ್ಥೆಗೆ ಕಳುಹಿಸುವಂತೆ ಪ್ರತಿಯೊಂದು ಪ್ರಯತ್ನವನ್ನು ಮಾಡತಕ್ಕದ್ದು.