ಅಕ್ಟೋಬರ್ಗಾಗಿ ಸೇವಾ ಕೂಟಗಳು
ಅಕ್ಟೋಬರ್ 7ರಿಂದ ಪ್ರಾರಂಭವಾಗುವ ವಾರ
ಸಂಗೀತ 47 (21)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ದೇಶ ಮತ್ತು ಸ್ಥಳಿಕ ಸಭೆಗಾಗಿರುವ ಜೂನ್ ತಿಂಗಳ ಕ್ಷೇತ್ರ ಸೇವಾ ವರದಿಯ ಮೇಲೆ ಹೇಳಿಕೆಯನ್ನೀಯಿರಿ.
15 ನಿ: ಪ್ರಶ್ನಾ ರೇಖಾಚೌಕ. ಸೇವಾ ಮೇಲ್ವಿಚಾರಕನು ಅಥವಾ ಇತರ ಅರ್ಹ ಹಿರಿಯನು ಮಾಹಿತಿಯನ್ನು ಸಭಿಕರೊಂದಿಗೆ ಚರ್ಚಿಸುತ್ತಾನೆ.
20 ನಿ: “ನಿಮ್ಮ ಸ್ವಂತ ಪತ್ರಿಕಾ ನಿರೂಪಣೆಯನ್ನು ತಯಾರಿಸಿರಿ.” (1-7ನೆಯ ಪ್ಯಾರಗ್ರಾಫ್ಗಳು) 1-4ನೆಯ ಪ್ಯಾರಗ್ರಾಫ್ಗಳ ಮೇಲೆ ಪ್ರಶ್ನೆಗಳನ್ನು ಕೇಳಿರಿ, ಮತ್ತು ನಂತರ 5-7ನೆಯ ಪ್ಯಾರಗ್ರಾಫ್ಗಳಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಸದ್ಯದ ಪತ್ರಿಕೆಗಳನ್ನು ಚಂದಾಗಳನ್ನು ನೀಡಲಿಕ್ಕಾಗಿ ಹೇಗೆ ಉಪಯೋಗಿಸಬಹುದೆಂದು ತೋರಿಸಲು, ಎರಡು ಅಥವಾ ಮೂರು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳನ್ನು ಮಾಡಿಸಿರಿ. ಮಾರ್ಚ್ 1, 1987ರ ವಾಚ್ಟವರ್ ಪತ್ರಿಕೆಯ ಪುಟ 17, 8-9ನೆಯ ಪ್ಯಾರಗ್ರಾಫ್ಗಳಿಂದ ಹೇಳಿಕೆಗಳನ್ನು ಸೇರಿಸಿರಿ.
ಸಂಗೀತ 222 (119) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 14ರಿಂದ ಪ್ರಾರಂಭವಾಗುವ ವಾರ
ಸಂಗೀತ 39 (16)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: “ಹೆಚ್ಚು ಉತ್ತಮವಾದ ವಿಷಯವೊಂದರ ಸುವಾರ್ತೆಯನ್ನು ಪ್ರಕಾಶಿಸುವುದು.” ಪ್ರಶ್ನೋತ್ತರಗಳು. ಕಾವಲಿನಬುರುಜು ಪತ್ರಿಕೆಯಲ್ಲಿ ತೋರಿಬಂದಿರುವ ಪ್ರಮುಖ ಲೇಖನಗಳಲ್ಲಿ ಕೆಲವನ್ನು ತಿಳಿಸಿರಿ.—ಮಾರ್ಚ್ 1, 1987ರ ದ ವಾಚ್ಟವರ್ ಪತ್ರಿಕೆಯ ಪುಟ 13ನ್ನು ನೋಡಿರಿ.
20 ನಿ: “ನಿಮ್ಮ ಸ್ವಂತ ಪತ್ರಿಕಾ ನಿರೂಪಣೆಯನ್ನು ತಯಾರಿಸಿರಿ.” (8-11ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. ಜನವರಿ 1, 1994ರ ಕಾವಲಿನಬುರುಜು, ಪುಟಗಳು 24-5, ಪ್ಯಾರಗ್ರಾಫ್ಗಳು 18-21ರಲ್ಲಿರುವ ನಾಲ್ಕು ಸಲಹೆಗಳ ಮೇಲೆ ಹೇಳಿಕೆಗಳನ್ನು ಸೇರಿಸಿರಿ. ಪತ್ರಿಕೆಗಳ ಅಕ್ಟೋಬರ್ ಸಂಚಿಕೆಗಳನ್ನು ಉಪಯೋಗಿಸುತ್ತಾ, ಒಂದು ನಿರೂಪಣೆಯನ್ನು ತಯಾರಿಸುವ ವಿಧವನ್ನು ತೋರಿಸಿರಿ: (1) ನಿಮ್ಮ ಟೆರಿಟೊರಿಯಲ್ಲಿ ಆಸಕ್ತಿಯನ್ನು ಆಕರ್ಷಿಸಬಹುದಾದ ಒಂದು ಲೇಖನವನ್ನು ಆರಿಸಿಕೊಳ್ಳಿರಿ, (2) ಪ್ರದರ್ಶಿಸಲು ಒಂದು ಆಸಕ್ತಿಕರ ವಿಷಯಕ್ಕಾಗಿ ಹುಡುಕಿರಿ, (3) ಆ ವಿಷಯಕ್ಕೆ ಗಮನವನ್ನು ಸೆಳೆಯಲು ಉಪಯೋಗಿಸಸಾಧ್ಯವಿರುವ ಒಂದು ಪ್ರಶ್ನೆಯ ಕುರಿತು ಯೋಚಿಸಿರಿ, (4) ಸಂದರ್ಭವು ಕೊಡಲ್ಪಟ್ಟಲ್ಲಿ ಓದಲಿಕ್ಕಾಗಿ ಒಂದು ವಚನವನ್ನು ಆರಿಸಿಕೊಳ್ಳಿರಿ, ಮತ್ತು (5) ನಿಮ್ಮ ಆರಂಭದ ಮಾತುಗಳನ್ನು ಮತ್ತು ಮನೆಯವನು ಒಂದು ಚಂದಾವನ್ನು ಸ್ವೀಕರಿಸಲು ಉತ್ತೇಜಿಸುವಂತೆ ನೀವು ಪತ್ರಿಕೆಯ ಕುರಿತಾಗಿ ಏನನ್ನು ಹೇಳುವಿರೆಂಬುದನ್ನು ತಯಾರಿಸಿರಿ. ಇಬ್ಬರು ಅಥವಾ ಮೂವರು ಸಮರ್ಥ ಪ್ರಚಾರಕರಲ್ಲಿ ಪ್ರತಿಯೊಬ್ಬರು ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಒಂದು ಸರಳವಾದ ಪತ್ರಿಕಾ ನೀಡಿಕೆಯನ್ನು ಪ್ರತ್ಯಕ್ಷಾಭಿನಯಿಸುವ ಒಬ್ಬ ಯುವಕನನ್ನು ಸೇರಿಸಿರಿ. ಒಂದು ಚಂದಾವು ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಲು ಖಚಿತರಾಗಿರಿ.
ಸಂಗೀತ 82 (26) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 21ರಿಂದ ಪ್ರಾರಂಭವಾಗುವ ವಾರ
ಸಂಗೀತ 169 (28)
15 ನಿ: ಸ್ಥಳಿಕ ತಿಳಿಸುವಿಕೆಗಳು. ಪತ್ರಿಕೆಗಳಲ್ಲಿ ಆಸಕ್ತಿಯನ್ನು ತೋರಿಸುವ, ಆದರೆ ಒಂದು ಚಂದಾವನ್ನು ಸ್ವೀಕರಿಸದ ಒಬ್ಬ ವ್ಯಕ್ತಿಯೊಂದಿಗೆ ಪತ್ರಿಕಾ ಮಾರ್ಗವನ್ನು ಆರಂಭಿಸುವ ವಿಧವನ್ನು ವಿವರಿಸಿರಿ: (1) ಪ್ರತಿಯೊಂದು ನೀಡುವಿಕೆಯನ್ನು ಮತ್ತು ಪ್ರದರ್ಶಿಸಲ್ಪಟ್ಟ ಲೇಖನವನ್ನು ರೆಕಾರ್ಡ್ ಮಾಡಿರಿ, (2) ಮುಂದಿನ ಸಂಚಿಕೆಗಳೊಂದಿಗೆ ಹಿಂದಿರುಗಲು ಏರ್ಪಡಿಸಿರಿ, ಮತ್ತು (3) ಈ ಸಂದರ್ಶನಗಳನ್ನು ಮಾಡಲು ನಿಮ್ಮ ಸಾಪ್ತಾಹಿಕ ಸೇವಾ ಕಾರ್ಯತಖ್ತೆಯಲ್ಲಿ ಒಂದು ನಿರ್ದಿಷ್ಟ ಸಮಯವನ್ನು ಬದಿಗಿಡಿರಿ. ಪ್ರತಿಯೊಂದು ಪತ್ರಿಕಾ ಮಾರ್ಗ ಸಂದರ್ಶನವನ್ನು ಒಂದು ಪುನರ್ಭೇಟಿಯಾಗಿ ವರದಿಸಲು ನೆನಪಿಡಿರಿ.
15 ನಿ: “ನಿಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸಿರಿ.” ಲೇಖನವನ್ನು ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಕೆಲಸಮಾಡಲಿಕ್ಕಾಗಿರುವ ಸ್ಥಳಿಕ ಏರ್ಪಾಡುಗಳನ್ನು ಚರ್ಚಿಸಿರಿ. ತಮ್ಮ ಟೆರಿಟೊರಿಯಲ್ಲಿ ಒಳಗೊಂಡಿರುವ ಅಂಗಡಿಗಳಲ್ಲಿ ಕೆಲಸ ಮಾಡಿದಾಗ ತಾವು ಆನಂದಿಸಿದ ಉತ್ತೇಜನದಾಯಕ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
15 ನಿ: ಸ್ಥಳಿಕ ಅಗತ್ಯಗಳು. ಅಥವಾ ಮೇ 1, 1996ರ ಕಾವಲಿನಬುರುಜು, ಪುಟಗಳು 21-4ರಿಂದ “ನಿಮ್ಮ ಭರವಸೆಯನ್ನು ಅಂತ್ಯದ ವರೆಗೆ ದೃಢವಾಗಿ ಕಾಪಾಡಿಕೊಳ್ಳಿರಿ” ಎಂಬ ಲೇಖನದ ಮೇಲೆ ಒಬ್ಬ ಹಿರಿಯನಿಂದ ಒಂದು ಭಾಷಣ.
ಸಂಗೀತ 12 (52) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 28ರಿಂದ ಪ್ರಾರಂಭವಾಗುವ ವಾರ
ಸಂಗೀತ 27 (7)
10 ನಿ: ಸ್ಥಳಿಕ ತಿಳಿಸುವಿಕೆಗಳು. ಡಿಸೆಂಬರ್ನಲ್ಲಿ, ಪ್ರಾಯಶಃ ಐಹಿಕ ಕೆಲಸ ಮತ್ತು ಶಾಲೆಯಿಂದ ರಜೆಯನ್ನು ಅನುಮತಿಸುವಂತಹ, ಲೌಕಿಕ ರಜಾದಿನಗಳು ಸಮೀಪಿಸುತ್ತಿರುವುದರಿಂದ, ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವ ಸಾಧ್ಯತೆಯ ಕುರಿತಾಗಿ ಯೋಚಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಈ ವಾರಾಂತ್ಯದಲ್ಲಿ ಅಕ್ಟೋಬರ್ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕಲು ಎಲ್ಲರನ್ನು ಉತ್ತೇಜಿಸಿರಿ.
20 ನಿ: “ಅನುಕೂಲವಾದ ಸಮಯವನ್ನು ಖರೀದಿಸುವ ವಿಧ.” ಪ್ರಶ್ನೋತ್ತರಗಳು. ಡಿಸೆಂಬರ್ 1, 1989ರ ವಾಚ್ಟವರ್, ಪುಟಗಳು 16-17, 7-11ನೆಯ ಪ್ಯಾರಗ್ರಾಫ್ಗಳಿಂದ ಹೇಳಿಕೆಗಳನ್ನು ಸೇರಿಸಿರಿ.
15 ನಿ: ನವೆಂಬರ್ ತಿಂಗಳಿಗಾಗಿರುವ ಸಾಹಿತ್ಯ ನೀಡಿಕೆಯನ್ನು ಪುನರ್ವಿಮರ್ಶಿಸಿರಿ. ಜ್ಞಾನ ಪುಸ್ತಕವು ನೀಡಲ್ಪಡುವುದು, ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಒಂದು ನೋಟದಿಂದ, ಎಲ್ಲಾ ನೀಡುವಿಕೆಗಳನ್ನು ಅನುಸರಿಸಿಕೊಂಡು ಹೋಗಲು ಒಂದು ವಿಶೇಷ ಪ್ರಯತ್ನವು ಮಾಡಲ್ಪಡುವುದು. ಇಬ್ಬರು ಅಥವಾ ಮೂವರು ಸಮರ್ಥ ಪ್ರಚಾರಕರು ಪುಸ್ತಕದ ಮೌಲ್ಯವನ್ನು ಮತ್ತು ಅದು ಉಪಯೋಗಿಸಸಾಧ್ಯವಿರುವ ವಿಧವನ್ನು ಚರ್ಚಿಸುತ್ತಾರೆ. ಅದರಲ್ಲಿ ಅಡಕವಾಗಿರುವ ಮಾಹಿತಿಯು, ಪ್ರತಿಯೊಂದು ವೃತ್ತಿಯ ಜನರ ಜೀವಿತಗಳನ್ನು ಪ್ರಭಾವಿಸುತ್ತದೆ. ಹೊಸಬರು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮುಂಚೆ ತಿಳಿದುಕೊಳ್ಳಲು ಅಗತ್ಯವಿರುವ ಮೂಲಭೂತ ಬೈಬಲ್ ವಿಷಯಗಳನ್ನು ಮತ್ತು ತತ್ವಗಳನ್ನು ಅದು ಆವರಿಸುತ್ತದೆ. ನಾವು ಅಭ್ಯಾಸವನ್ನು ಒಂದೇ ಸಮನೆಯ ಗತಿಯಲ್ಲಿ ಮುಂದುವರಿಸುವುದಾದರೆ, ವಿದ್ಯಾರ್ಥಿಯು ಕ್ಷಿಪ್ರವಾದ ಪ್ರಗತಿಯನ್ನು ಮಾಡಸಾಧ್ಯವಿದೆ. ನೇರವಾದ ಪ್ರಸ್ತಾವವನ್ನು ಉಪಯೋಗಿಸುವ ಮೂಲಕ ಒಂದು ಅಭ್ಯಾಸವನ್ನು ಆರಂಭಿಸುವ ವಿಧವನ್ನು ಚರ್ಚಿಸಿ, ಪ್ರತ್ಯಕ್ಷಾಭಿನಯಿಸಿರಿ: 4-5 ಪುಟಗಳಲ್ಲಿರುವ ಚಿತ್ರ ಮತ್ತು ವಿವರಣೆಯಬರಹವನ್ನು ಪುನರ್ವಿಮರ್ಶಿಸಿರಿ; ನಮ್ಮ ಅಭ್ಯಾಸದ ವಿಧಾನವನ್ನು ವಿವರಿಸಿರಿ; ಅಧ್ಯಾಯ 1ರಲ್ಲಿರುವ ಪ್ರಥಮ ಐದು ಪ್ಯಾರಗ್ರಾಫ್ಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ; ಇನ್ನೊಂದು ಸಲ ಹಿಂದಿರುಗಿ, ನಿತ್ಯ ಜೀವವು ಕೇವಲ ಒಂದು ಸ್ವಪ್ನವೊ? ಎಂಬ ಪ್ರಶ್ನೆಯನ್ನು ಉತ್ತರಿಸುತ್ತಾ ಚರ್ಚೆಯನ್ನು ಮುಂದುವರಿಸಲಿಕ್ಕಾಗಿ ಒಂದು ಭೇಟಿನಿಶ್ಚಯವನ್ನು ಮಾಡಿರಿ. ಒಂದು ಮನೆ ಬೈಬಲ್ ಅಭ್ಯಾಸವನ್ನು ನಡಿಸುವ ಸುಯೋಗದೊಂದಿಗೆ ಬರುವಂತಹ ಆನಂದವನ್ನು ಒತ್ತಿಹೇಳಿರಿ.
ಸಂಗೀತ 162 (89) ಮತ್ತು ಸಮಾಪ್ತಿಯ ಪ್ರಾರ್ಥನೆ.