ಡಿಸೆಂಬರ್ಗಾಗಿ ಸೇವಾ ಕೂಟಗಳು
ಡಿಸೆಂಬರ್ 2ರಿಂದ ಆರಂಭವಾಗುವ ವಾರ
ಸಂಗೀತ 134 (33)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಸಾಹಿತ್ಯ ನೀಡುವಿಕೆಗಳನ್ನು ಉಲ್ಲೇಖಿಸಿರಿ.
15 ನಿ: “ನಮ್ಮ ಸಂದೇಶಕ್ಕೆ ಯಾರು ಕಿವಿಗೊಡುವರು?” ಪ್ರಶ್ನೋತ್ತರಗಳು. ನಮ್ಮ ಸಂದೇಶವು ಏಕೆ ಆಕರ್ಷಕವಾಗಿದೆಯೆಂಬುದರ ಕುರಿತಾಗಿ, ಮಾರ್ಚ್ 22, 1987ರ ಅವೇಕ್! ಪತ್ರಿಕೆಯ ಪುಟ 5ರಿಂದ ವಿಷಯಗಳನ್ನು ಸೇರಿಸಿರಿ.
20 ನಿ: “ಬೈಬಲು ನಿರೀಕ್ಷೆ ಮತ್ತು ಮಾರ್ಗದರ್ಶನೆಯನ್ನು ಒದಗಿಸುತ್ತದೆ.” (1-6ನೆಯ ಪ್ಯಾರಗ್ರಾಫ್ಗಳು) 1-2ನೆಯ ಪ್ಯಾರಗ್ರಾಫ್ಗಳೊಂದಿಗೆ ಭಾಗವನ್ನು ಆರಂಭಿಸಿರಿ. (ರೀಸನಿಂಗ್ ಪುಸ್ತಕದ 58-60ನೆಯ ಪುಟಗಳನ್ನು ಸೇರಿಸಿ, “ಬೈಬಲನ್ನು ಪರಿಗಣಿಸಲಿಕ್ಕಾಗಿರುವ ಕಾರಣಗಳು” ಎಂಬ ವಿಷಯದಲ್ಲಿ ನಾಲ್ಕು ಕಾರಣಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ.) 3-6ನೆಯ ಪ್ಯಾರಗ್ರಾಫ್ಗಳಲ್ಲಿ ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ಸಮರ್ಥ ಪ್ರಚಾರಕರು ಪ್ರತ್ಯಕ್ಷಾಭಿನಯಿಸಲಿ. (1) ಎಬ್ಬಿಸಲ್ಪಟ್ಟ ಪ್ರಶ್ನೆಗಳು ಆಸಕ್ತಿಯನ್ನು ಕೆರಳಿಸಲು ಸಹಾಯ ಮಾಡಿರುವ ವಿಧ, (2) ಉಪಯೋಗಿಸಲ್ಪಟ್ಟ ವಚನಗಳು ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ಹೇಗೆ ಹೊಂದಿಕೊಳ್ಳುತ್ತವೆ, (3) ಪುನರ್ಭೇಟಿಯು ಆರಂಭದ ಚರ್ಚೆಯನ್ನು ತರ್ಕಸಮ್ಮತವಾಗಿ ಮುಂದುವರಿಸಿದ ವಿಧ, ಮತ್ತು (4) ಒಂದು ಅಭ್ಯಾಸದ ನೀಡುವಿಕೆಯು ಮಾಡಲ್ಪಟ್ಟ ವಿಧದ ಕುರಿತಾಗಿ ಸಭಿಕರು ಹೇಳಿಕೆಯನ್ನೀಯುವಂತೆ ಅವರನ್ನು ಆಮಂತ್ರಿಸಿರಿ.
ಸಂಗೀತ 75 (21) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 9ರಿಂದ ಆರಂಭವಾಗುವ ವಾರ
ಸಂಗೀತ 100 (59)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ವೃದ್ಧ ವ್ಯಕ್ತಿಗಳಿಗೆ ಸೇವೆಯಲ್ಲಿ ಭಾಗವಹಿಸುವಂತೆ ಸಹಾಯ ಮಾಡುವುದು. ಅನೇಕ ನಂಬಿಗಸ್ತ ವೃದ್ಧ ಪ್ರಚಾರಕರಿಗೆ, ಸಾರುವ ಕಾರ್ಯದಲ್ಲಿ ಸಭೆಯೊಂದಿಗೆ ಭಾಗವಹಿಸಲು ಒಂದು ತೀವ್ರವಾದ ಬಯಕೆಯಿದೆ, ಅದರೆ ವಯಸ್ಸು ಮತ್ತು ನ್ಯೂನ ಆರೋಗ್ಯದ ಕಾರಣದಿಂದಾಗಿ ಅವರಿಗೆ ಶಾರೀರಿಕ ಮಿತಿಗಳಿವೆ. ನಮ್ಮ ಸೇವಾ ಗುಂಪಿನಲ್ಲಿ ಅವರನ್ನು ಸೇರಿಸಿಕೊಳ್ಳಲಾಗುವಂತೆ, ನಾವು ಅವರಿಗೆ ಪರಿಗಣನೆಯನ್ನು ತೋರಿಸಸಾಧ್ಯವಿರುವ ಮಾರ್ಗಗಳಿವೆ: ಸಂಚಾರ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಿರೆಂದು ಹೇಳಿರಿ; ಹತ್ತಲಿಕ್ಕಾಗಿ ಕಡಿಮೆ ಮೆಟ್ಟಿಲುಗಳಿರುವ ಮನೆಗಳಲ್ಲಿ ಅವರು ಸೇವೆಮಾಡುವಂತೆ ಏರ್ಪಡಿಸಿರಿ; ಅವರ ಪುನರ್ಭೇಟಿಗಳಿಗೆ ಅವರನ್ನು ಕರೆದುಕೊಂಡು ಹೋಗುವಿರೆಂದು ಹೇಳಿರಿ; ಅವರಿಗೆ ಮುಂದುವರಿಸಸಾಧ್ಯವಿಲ್ಲವೆಂದು ಅನಿಸುವಾಗ, ನೀವು ಅವರನ್ನು ಮನೆಗೆ ಕರೆದುಕೊಂಡು ಹೋಗುವಿರೆಂದು ಅವರಿಗೆ ತಿಳಿಸಿರಿ. ಅವರಿಗೆ ನೀಡಲ್ಪಡುವ ಸಹಾಯಕ್ಕಾಗಿ ವೃದ್ಧ ವ್ಯಕ್ತಿಗಳು ಆಭಾರಿಗಳಾಗಿದ್ದಾರೆ. ಅಂತಹ ಪರಿಗಣನೆಯನ್ನು ನೀವು ಸ್ಥಳಿಕವಾಗಿ ತೋರಿಸಬಲ್ಲ ಇತರ ಮಾರ್ಗಗಳನ್ನು ಉಲ್ಲೇಖಿಸಿರಿ. ಫೆಬ್ರವರಿ 1, 1986ರ ವಾಚ್ಟವರ್ ಪತ್ರಿಕೆಯ, 28-9ನೆಯ ಪುಟಗಳಲ್ಲಿರುವ “ನಾವು ವೃದ್ಧ ವ್ಯಕ್ತಿಗಳನ್ನು ಗಣ್ಯಮಾಡುತ್ತೇವೆ!” ಎಂಬ ಲೇಖನದಲ್ಲಿನ ಮುಖ್ಯ ವಿಷಯಗಳನ್ನು ಪುನರ್ವಿಮರ್ಶಿಸಿರಿ.
20 ನಿ: “ಬೈಬಲು ನಿರೀಕ್ಷೆ ಮತ್ತು ಮಾರ್ಗದರ್ಶನೆಯನ್ನು ಒದಗಿಸುತ್ತದೆ.” (7-9ನೆಯ ಪ್ಯಾರಗ್ರಾಫ್ಗಳು) ಮೇ 1, 1993ರ ವಾಚ್ಟವರ್ ಪತ್ರಿಕೆಯ 3ನೆಯ ಪುಟದಲ್ಲಿರುವ “ಮಾರ್ಗದರ್ಶನೆಗಾಗಿರುವ ಒಂದು ಅಗತ್ಯ” ಎಂಬ ವಿಷಯದ ಕುರಿತು ಹೇಳಿಕೆನೀಡಿರಿ. ಹೆಚ್ಚು ಉನ್ನತವಾದ ಒಂದು ಮೂಲ—ದೇವರು—ನಿಂದ ಸಹಾಯವನ್ನು ಕೋರುವ ಪ್ರಾಮುಖ್ಯವನ್ನು ನಮ್ಮ ನಿರೂಪಣೆಗಳು ಏಕೆ ಒತ್ತಿಹೇಳಬೇಕೆಂಬುದನ್ನು ವಿವರಿಸಿರಿ. 7-8ನೆಯ ಪ್ಯಾರಗ್ರಾಫ್ಗಳಲ್ಲಿರುವ ನಿರೂಪಣೆಗಳನ್ನು ಪ್ರಚಾರಕನೊಬ್ಬನು ಪ್ರತ್ಯಕ್ಷಾಭಿನಯಿಸಲಿ. ಯಾವಾಗಲೂ ನಮ್ಮ ಗುರಿಯು ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವುದಾಗಿರತಕ್ಕದ್ದೆಂಬುದನ್ನು ಒತ್ತಿಹೇಳಿರಿ.
ಸಂಗೀತ 197 (57) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 16ರಿಂದ ಆರಂಭವಾಗುವ ವಾರ
ಸಂಗೀತ 209 (11)
10 ನಿ: ಸ್ಥಳಿಕ ತಿಳಿಸುವಿಕೆಗಳು. ಹಬ್ಬದ ಶುಭಾಶಯಗಳಿಗೆ ಜಾಣ್ಮೆಯಿಂದ ಪ್ರತಿಕ್ರಿಯಿಸುವ ವಿಧದ ಕುರಿತಾಗಿ ಕೆಲವು ಸಲಹೆಗಳನ್ನು ನೀಡಿರಿ. ಡಿಸೆಂಬರ್ 25ಕ್ಕಾಗಿ ವಿಶೇಷ ಕ್ಷೇತ್ರ ಸೇವಾ ಏರ್ಪಾಡುಗಳ ಕುರಿತಾಗಿ ತಿಳಿಸಿರಿ.
15 ನಿ: “ಸಿದ್ಧಮನಸ್ಸಿನಿಂದ ನಮ್ಮನ್ನು ನೀಡಿಕೊಳ್ಳುವುದು.” ಪ್ರಶ್ನೋತ್ತರಗಳು. ಮೇ 1, 1984ರ ವಾಚ್ಟವರ್ ಪತ್ರಿಕೆಯ 22ನೆಯ ಪುಟದಿಂದ ಹೇಳಿಕೆಗಳನ್ನು ಸೇರಿಸಿರಿ.
20 ನಿ: “ದೇವರು ಕೊಡುವ ಅಭಿವೃದ್ಧಿಯಲ್ಲಿ ಉಲ್ಲಾಸಿಸುವುದು.” ಹಿರಿಯನಿಂದ ಉತ್ಸಾಹಭರಿತ ಭಾಷಣ. ಇತ್ತೀಚಿನ ವರ್ಷಪುಸ್ತಕಗಳಲ್ಲಿ (ಇಂಗ್ಲಿಷ್) ಕೊಡಲ್ಪಟ್ಟಿರುವಂತೆ, ಪ್ರತಿನಿಧಿಸಲ್ಪಟ್ಟಿರುವ ದೇಶಗಳಲ್ಲಿನ ಅನುಭವಗಳು ಅಥವಾ ಅವುಗಳ ಅಭಿವೃದ್ಧಿಯ ಪುರಾವೆಯನ್ನು ಉದ್ಧರಿಸಿರಿ.
ಸಂಗೀತ 41 (22) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 23ರಿಂದ ಆರಂಭವಾಗುವ ವಾರ
ಸಂಗೀತ 93 (48)
10 ನಿ: ಸ್ಥಳಿಕ ತಿಳಿಸುವಿಕೆಗಳು. ಈ ವಾರದಲ್ಲಿ ಸೇವೆಯಲ್ಲಿ ಉಪಯೋಗಿಸಬಹುದಾದ ಪ್ರಚಲಿತ ಪತ್ರಿಕೆಗಳಲ್ಲಿನ ಕೆಲವು ಆಸಕ್ತಿಕರ ವಿಷಯಗಳನ್ನು ತೋರಿಸಿರಿ. ಜನವರಿ 1ಕ್ಕಾಗಿರುವ ವಿಶೇಷ ಕ್ಷೇತ್ರ ಸೇವಾ ಏರ್ಪಾಡುಗಳ ಕುರಿತಾಗಿ ತಿಳಿಸಿರಿ.
15 ನಿ: ಸ್ಥಳಿಕ ಅಗತ್ಯಗಳು. ಅಥವಾ ಹಿರಿಯನೊಬ್ಬನು ಜುಲೈ 15, 1996ರ ಕಾವಲಿನಬುರುಜು ಪತ್ರಿಕೆಯ 24-5ನೆಯ ಪುಟಗಳಿಂದ “ನಿವೃತ್ತಿ—ದೇವಪ್ರಭುತ್ವ ಚಟುವಟಿಕೆಗೆ ಒಂದು ತೆರೆದ ಅವಕಾಶವೊ?” ಎಂಬ ಲೇಖನದ ಮೇಲೆ ಒಂದು ಭಾಷಣವನ್ನು ಕೊಡುತ್ತಾನೆ.—ಒಳನೋಟ (ಇಂಗ್ಲಿಷ್) ಪುಸ್ತಕದ, 2ನೆಯ ಸಂಪುಟ, ಪುಟ 794, 2-3ನೆಯ ಪ್ಯಾರಗ್ರಾಫ್ಗಳನ್ನು ನೋಡಿರಿ.
20 ನಿ: “ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ದಾಖಲಾತಿ.” ಶಾಲಾ ಮೇಲ್ವಿಚಾರಕನಿಂದ ಭಾಷಣ. ಸ್ಥಳಿಕ ದಾಖಲಾಗುವಿಕೆಯ ಅಂಕಿಸಂಖ್ಯೆಗಳನ್ನು ಕೊಡಿರಿ, ಮತ್ತು ಸಾಧ್ಯವಿರುವವರೆಲ್ಲರೂ ದಾಖಲಾಗುವಂತೆ ಉತ್ತೇಜಿಸಿರಿ. “1997ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್”ನಲ್ಲಿ ವಿದ್ಯಾರ್ಥಿ ನೇಮಕಗಳಿಗಾಗಿ ಒದಗಿಸಲ್ಪಟ್ಟಿರುವ ಸೂಚನೆಗಳನ್ನು ಪುನರ್ವಿಮರ್ಶಿಸಿರಿ.
ಸಂಗೀತ 166 (90) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 30ರಿಂದ ಆರಂಭವಾಗುವ ವಾರ
ಸಂಗೀತ 223 (81)
10 ನಿ: ಸ್ಥಳಿಕ ತಿಳಿಸುವಿಕೆಗಳು. ಹೊಸ ವರ್ಷಕ್ಕಾಗಿ ನಿಮ್ಮ ಸಭೆಯು ಕೂಟದ ಸಮಯಗಳನ್ನು ಬದಲಾಯಿಸುತ್ತಿರುವುದಾದರೆ, ಬೇಕಾದ ಅಳವಡಿಸುವಿಕೆಗಳನ್ನು ಮಾಡಲು ಉತ್ತೇಜಿಸುತ್ತಾ, ಅದರ ಹೊಸ ಸಮಯಗಳಲ್ಲಿ ಸಭೆಯೊಂದಿಗೆ ಕ್ರಮವಾದ ಹಾಜರಿಯನ್ನು ಕಾಪಾಡಿಕೊಂಡು ಹೋಗುವಂತೆ ದಯಾಪರವಾದ ಪ್ರೋತ್ಸಾಹವನ್ನು ಕೊಡಿರಿ. ಅಥವಾ ಸಭಾ ಪುಸ್ತಕ ಅಭ್ಯಾಸವನ್ನು ಸೇರಿಸಿ, ಎಲ್ಲಾ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಸಾಮಾನ್ಯವಾದ ಪ್ರೋತ್ಸಾಹವನ್ನು ಕೊಡಿರಿ.
15 ನಿ: ಸಾಕ್ಷಿ ನೀಡಲಿಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು. ಸ್ಕೂಲ್ ಗೈಡ್ಬುಕ್ನ 80-2ನೆಯ ಪುಟಗಳು, 11-16ನೆಯ ಪ್ಯಾರಗ್ರಾಫ್ಗಳನ್ನು ಉಪಯೋಗಿಸುತ್ತಾ, ಅಪರಿಚಿತರೊಂದಿಗೆ ಸಂಭಾಷಣೆಗಳನ್ನು ಆರಂಭಿಸುವ ವಿಧದ ಕುರಿತಾದ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಮುಂಗಡ ತಯಾರಿಯು ಹೆಚ್ಚು ಉತ್ತಮವಾದ ಫಲಿತಾಂಶಗಳನ್ನು ಪಡೆಯುವಂತೆ ಹೇಗೆ ಸಹಾಯ ಮಾಡುತ್ತದೆಂಬುದನ್ನು ತೋರಿಸಿರಿ. ಆಸಕ್ತಿಯನ್ನು ತೋರಿಸುವವರ ಒಂದು ರೆಕಾರ್ಡನ್ನು ಇಡುವಂತೆ ಮತ್ತು ಅಂತಹವರನ್ನು ಅನಂತರ ಯಾರಾದರೊಬ್ಬರು ಸಂಪರ್ಕಿಸಲು ಏರ್ಪಡಿಸುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.
20 ನಿ: ಜನವರಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ವಿಶೇಷ ದರದಲ್ಲಿ ನೀಡಲಿಕ್ಕಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಹಳೆಯ 192 ಪುಟದ ಯಾವುದೇ ಪುಸ್ತಕವು. ಸ್ಥಳಿಕವಾಗಿ ಯಾವುದೇ ಪುಸ್ತಕದ ಸ್ಟಾಕ್ ಇಲ್ಲದಿದ್ದಲ್ಲಿ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕವನ್ನು ಉಪಯೋಗಿಸಿರಿ. ಯಾವ ಪುಸ್ತಕಗಳು ಸಭೆಯ ಸ್ಟಾಕ್ನಲ್ಲಿವೆಯೆಂಬುದನ್ನು ತೋರಿಸಿರಿ. ನಿಮ್ಮ ಟೆರಿಟೊರಿಯಲ್ಲಿ ಉಪಯೋಗಿಸಲಿಕ್ಕಾಗಿ ಪರಿಣಾಮಕಾರಿಯಾಗಿರಬಹುದಾದ ಎರಡು ಅಥವಾ ಮೂರು ಪುಸ್ತಕಗಳನ್ನು ಆರಿಸಿಕೊಳ್ಳಿರಿ. ರೀಸನಿಂಗ್ ಪುಸ್ತಕದ 9-14ನೆಯ ಪುಟಗಳನ್ನು ಉಪಯೋಗಿಸುತ್ತಾ, ಪ್ರತಿಯೊಂದು ಪುಸ್ತಕಕ್ಕೆ ಸೂಕ್ತವಾಗಿರುವ ಪೀಠಿಕೆಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 137 (105) ಮತ್ತು ಸಮಾಪ್ತಿಯ ಪ್ರಾರ್ಥನೆ.