ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/97 ಪು. 6
  • “ಸರಿಯಾದ ಸಮಯದಲ್ಲಿ ಸಹಾಯ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸರಿಯಾದ ಸಮಯದಲ್ಲಿ ಸಹಾಯ”
  • 1997 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಿರಿ
    ಕಾವಲಿನಬುರುಜು—1997
  • ಕುಟುಂಬ ಸಂತೋಷದ ರಹಸ್ಯದಲ್ಲಿ ಇತರರೊಂದಿಗೆ ಪಾಲಿಗರಾಗುವುದು
    1997 ನಮ್ಮ ರಾಜ್ಯದ ಸೇವೆ
  • ಒಂದು ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳುವಂತೆ ಕುಟುಂಬಗಳಿಗೆ ಸಹಾಯಮಾಡುವುದು
    1997 ನಮ್ಮ ರಾಜ್ಯದ ಸೇವೆ
  • ದೇವಭಕ್ತಿಯೊಂದಿಗೆ ತರಬೇತಾಗಲು ಹೊಸ ಹೊರಡಿಸುವಿಕೆಗಳು ನಮಗೆ ನೆರವಾಗುತ್ತವೆ
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1997 ನಮ್ಮ ರಾಜ್ಯದ ಸೇವೆ
km 2/97 ಪು. 6

“ಸರಿಯಾದ ಸಮಯದಲ್ಲಿ ಸಹಾಯ”

1 ನಮಗೆ ಅಗತ್ಯವಿರುವಾಗಲೇ ಸಹಾಯವನ್ನು ಪಡೆಯುವುದು ಎಷ್ಟು ಚೈತನ್ಯದಾಯಕ! (ಇಬ್ರಿ. 4:16) “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನದಲ್ಲಿ, ಸರಿಯಾದ ಸಮಯದಲ್ಲಿ ಸಹಾಯದ ಎರಡು ವಿಶೇಷ ಒದಗಿಸುವಿಕೆಗಳು ನಮಗೆ ಕೊಡಲ್ಪಟ್ಟಾಗ ನಾವು ಉಲ್ಲಾಸಿಸಿದೆವು.

2 ಕುಟುಂಬ ಸಂತೋಷದ ರಹಸ್ಯ ಎಂಬ ಹೊಸ ಪುಸ್ತಕವು, ಸೂಕ್ತವಾದ ಸಮಯದಲ್ಲಿ ಬಂತು. ಸಂತೋಷದ ಕುಟುಂಬ ಜೀವನವನ್ನು ಪ್ರವರ್ಧಿಸುವ ನಾಲ್ಕು ಅತ್ಯಾವಶ್ಯಕ ವಿಷಯಗಳ ಮೇಲೆ ಅದು ಕೇಂದ್ರೀಕರಿಸುತ್ತದೆ: (1) ಸಂಯಮ, (2) ತಲೆತನದ ಅಂಗೀಕಾರ, (3) ಒಳ್ಳೆಯ ಸಂವಾದ, ಮತ್ತು (4) ಪ್ರೀತಿ. ಕುಟುಂಬ ಸಂತೋಷ ಪುಸ್ತಕದಲ್ಲಿ ಪ್ರಸ್ತುತಪಡಿಸಲ್ಪಟ್ಟಿರುವ ಬುದ್ಧಿವಾದವು, ಅದನ್ನು ಅನ್ವಯಿಸುವ ಎಲ್ಲಾ ಕುಟುಂಬಗಳಿಗೆ ದೈವಿಕ ಶಾಂತಿಯನ್ನು ಕಂಡುಕೊಳ್ಳಲು ಸಹಾಯಮಾಡುವುದು. ಹೊಸ ಪುಸ್ತಕವನ್ನು ಜಾಗರೂಕತೆಯಿಂದ ಓದಲು ಮತ್ತು ಒಂದು ಕುಟುಂಬದೋಪಾದಿ ಅದನ್ನು ಜೊತೆಯಾಗಿ ಅಭ್ಯಾಸ ಮಾಡಲು ಸಮಯವನ್ನು ಬದಿಗಿರಿಸಿರಿ. ಮಾರ್ಚ್‌ ತಿಂಗಳಿನಲ್ಲಿ, ಅದನ್ನು ಸಾರ್ವಜನಿಕರಿಗೆ ಪ್ರಥಮ ಸಲ ನೀಡುವಾಗ, ಅದನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ನೀವು ತಯಾರಾಗಿರುವಂತೆ, ಅದರ ವೈಶಿಷ್ಟ್ಯಗಳೊಂದಿಗೆ ಚೆನ್ನಾಗಿ ಪರಿಚಿತರಾಗಿರ್ರಿ.

3 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಹೊಸ ಬ್ರೋಷರ್‌, ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸದ ವೇಗವನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡಲು, ಸರಿಯಾದ ಸಮಯಕ್ಕೆ ಬಂದಿದೆ. ಸೀಮಿತವಾದ ಓದುವ ಸಾಮರ್ಥ್ಯವಿರುವ ಜನರಿಗೆ ಸಹಾಯ ಮಾಡಲು ಅದನ್ನು ವಿಶೇಷವಾಗಿ ಉಪಯೋಗಿಸಬಹುದಾದರೂ, ಅನೇಕ ಅಕ್ಷರಸ್ಥ ವಯಸ್ಕರು ಮತ್ತು ಎಳೆಯ ಮಕ್ಕಳು ಕೂಡ, ಮೂಲಭೂತ ಬೈಬಲ್‌ ಬೋಧನೆಗಳ ಅದರ ಸರಳ ವಿವರಣೆಯಿಂದ ಲಾಭಪಡೆಯುವರು. ಜ್ಞಾನ ಪುಸ್ತಕಕ್ಕೆ ಒಂದು ಮೆಟ್ಟುಗಲ್ಲಾಗಿ ಒಂದು ಅಭ್ಯಾಸವನ್ನು ಆರಂಭಿಸಲು ಬೇಕಾಗಿದ್ದ ಸಂಗತಿಯೇ ಅದಾಗಿರಬಹುದು. ಈ ಒದಗಿಸುವಿಕೆಯು, ಇನ್ನೂ ಹೆಚ್ಚಿನ ಜನರಿಗೆ, ದೇವರು ಏನನ್ನು ಅಪೇಕ್ಷಿಸುತ್ತಾನೊ ಅದನ್ನು ಮಾಡುವ ಮೂಲಕ ತಾವು ಹೇರಳವಾಗಿ ಆಶೀರ್ವದಿಸಲ್ಪಡಸಾಧ್ಯವಿರುವ ವಿಧವನ್ನು ಗಣ್ಯಮಾಡುವಂತೆ ಸಹಾಯಮಾಡುವುದು ನಿಶ್ಚಯ.

4 ‘ನಾನು ಕೊರತೆಪಡೆನು, ನನ್ನ ಪ್ರಾಣವು ಉಜ್ಜೀವಿಸಲ್ಪಟ್ಟು, ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ’ ಎಂದು ಘೋಷಿಸಿದಾಗ, ದಾವೀದನು ನಮ್ಮ ಭಾವಾವೇಶಗಳನ್ನು ಸರಿಯಾಗಿಯೇ ವ್ಯಕ್ತಪಡಿಸಿದನು! (ಕೀರ್ತ. 23:1, 3, 5) ನಿಜ ದೇವರಾದ ಯೆಹೋವನನ್ನು ಅರಿತು, ಆತನ ಸೇವೆಮಾಡಲು ಪ್ರಾಮಾಣಿಕವಾಗಿ ಬಯಸುವ ಇನ್ನೂ ಅನೇಕ ಜನರಿಗೆ, ಈ ಅದ್ಭುತವಾದ ಆತ್ಮಿಕ ಸಹಾಯವನ್ನು ದಾಟಿಸಲು ನಾವು ಆನಂದಪೂರ್ವಕವಾಗಿ ಮುನ್ನೋಡುತ್ತೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ