ಕಂಡುಕೊಳ್ಳಲ್ಪಟ್ಟಿರುವ ಎಲ್ಲಾ ಆಸಕ್ತಿಗಾಗಿ ಯಥಾರ್ಥವಾದ ಚಿಂತೆಯನ್ನು ತೋರಿಸಿರಿ
1 ಲೋಕವ್ಯಾಪಕವಾದ ರಾಜ್ಯ ಘೋಷಣೆಯು ಬೇಗನೆ ಒಂದು ಮುಕ್ತಾಯಕ್ಕೆ ಬರುವುದು. ಅದರ ನಂತರ, “ದೇವರನ್ನರಿಯದ” ಎಲ್ಲರೂ ನಾಶನವನ್ನು ಅನುಭವಿಸುವರು. (2 ಥೆಸ. 1:7-9) ಹೀಗೆ, ಇತರರ ಜೀವಗಳಿಗಾಗಿ ಯಥಾರ್ಥವಾದ ಚಿಂತೆಯು, ಸಾಧ್ಯವಿರುವಷ್ಟು ಹೆಚ್ಚು ಜನರನ್ನು ರಾಜ್ಯ ಸಂದೇಶದೊಂದಿಗೆ ತಲಪುವಂತೆ ಯೆಹೋವನ ಜನರನ್ನು ಪ್ರಚೋದಿಸುತ್ತಿದೆ.—ಚೆಫ. 2:3.
2 ಪ್ರತಿ ತಿಂಗಳು, “ಒಳ್ಳೆಯ ಶುಭವರ್ತಮಾನವನ್ನು” ಕೇಳಲು ಬಯಸುವವರನ್ನು ಹುಡುಕುವುದರಲ್ಲಿ ಕೋಟಿಗಟ್ಟಲೆ ತಾಸುಗಳು ವ್ಯಯಿಸಲ್ಪಡುತ್ತಿವೆ. (ಯೆಶಾ. 52:7) ಪ್ರಚಲಿತ ಸಾಹಿತ್ಯ ನೀಡಿಕೆಗೆ ಪ್ರತಿಕ್ರಿಯೆಯಲ್ಲಿ, ಅನೇಕರು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಚಂದಾಗಳನ್ನು ಅಥವಾ ಅವುಗಳ ಪ್ರತಿಗಳನ್ನು ಅಥವಾ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಸ್ವೀಕರಿಸಿದ್ದಾರೆ. ಈ ಜನರ ಕಡೆಗಿರುವ ಯಥಾರ್ಥವಾದ ಚಿಂತೆಯು, ಕಂಡುಕೊಳ್ಳಲ್ಪಟ್ಟಿರುವ ಎಲ್ಲಾ ಆಸಕ್ತಿಯನ್ನು ವಿಕಸಿಸಲು ನಮ್ಮ ಪ್ರಯತ್ನವನ್ನು ಮುಂದುವರಿಸುತ್ತಾ ಹೋಗುವಂತೆ ನಮ್ಮನ್ನು ಪ್ರೇರಿಸಬೇಕು.—ಜ್ಞಾನೋ. 3:27.
3 ನಿಷ್ಕೃಷ್ಟ ದಾಖಲೆಗಳನ್ನು ಇಡಿರಿ: ಆಸಕ್ತಿ ಮತ್ತು ಕೊಡಿಕೆಗಳ ಕುರಿತಾಗಿ ಒಂದು ಪೂರ್ಣ ಮತ್ತು ನಿಷ್ಕೃಷ್ಟ ದಾಖಲೆಯನ್ನು ನೀವು ಇಡುವಲ್ಲಿ ಹೆಚ್ಚು ಪೂರೈಸಲ್ಪಡುವುದು. ಮನೆಯವನ ಹೆಸರು ಮತ್ತು ವಿಳಾಸ, ನೀವು ಸಂದರ್ಶಿಸಿದ ದಿನ ಮತ್ತು ಸಮಯ, ನೀಡಲ್ಪಟ್ಟಿರುವ ಸಾಹಿತ್ಯ, ಮತ್ತು ಚರ್ಚಿಸಲ್ಪಟ್ಟ ವಿಷಯದಂತಹ ಮಾಹಿತಿಯು, ನೀವು ಹಿಂದಿರುಗಿ ಹೋಗುವಾಗ ಹೆಚ್ಚು ಪರಿಣಾಮಕಾರಿಯಾಗಿರುವಂತೆ ನಿಮಗೆ ಸಹಾಯ ಮಾಡುವುದು. ಅಲ್ಲದೆ, ನಿಮ್ಮ ಆರಂಭದ ಸಂಭಾಷಣೆಯಲ್ಲಿ ಮನೆಯವನಿಂದ ಮಾಡಲ್ಪಟ್ಟ ಕೆಲವು ಹೇಳಿಕೆಗಳನ್ನು ನೀವು ಬರೆದಿಡುವಲ್ಲಿ, ಪುನರ್ಭೇಟಿಯಲ್ಲಿ ಆ ಚರ್ಚೆಯನ್ನು ಮುಂದುವರಿಸುವಾಗ ನೀವು ಅವುಗಳಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಸೂಚಿಸಿ ಮಾತಾಡಲು ಶಕ್ತರಾಗಬಹುದು.
4 ಪುನರ್ಭೇಟಿಗಳನ್ನು ಮಾಡುವುದರಲ್ಲಿ ತಡಮಾಡಬೇಡಿರಿ: ಕಳೆದ ತಿಂಗಳು ನಿಮ್ಮಿಂದ ಸಾಹಿತ್ಯವನ್ನು ಸ್ವೀಕರಿಸಿದವರಲ್ಲಿ, ಎಷ್ಟು ಮಂದಿಯನ್ನು ನೀವು ಪುನಃ ಭೇಟಿ ಮಾಡಲು ಪ್ರಯತ್ನಿಸಿದ್ದೀರಿ? ಮುಂದೆ ಯಾವ ಸಂಪರ್ಕವೂ ಇಲ್ಲದೆ ವಾರಗಳು ದಾಟಿಹೋಗಿವೆಯೊ? ಆ ಸಂಭಾಷಣೆಯು ಅವರ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರಾಗಿರುವಂತೆ, ಅವರ ನಿತ್ಯ ಹಿತಕ್ಕಾಗಿ ಯಥಾರ್ಥವಾದ ಚಿಂತೆಯು, ನೀವು ಸಾಧ್ಯವಿರುವಷ್ಟು ಬೇಗನೆ—ಕೆಲವೇ ದಿನಗಳೊಳಗೆ ಹೋಗುವುದು ಹೆಚ್ಚು ಇಷ್ಟಕರ—ಹಿಂದಿರುಗುವಂತೆ ನಿಮ್ಮನ್ನು ಪ್ರಚೋದಿಸಬೇಕು.. ಅವರ ಆಸಕ್ತಿಯನ್ನು ಮುಂದುವರಿಸಲು ತಡಮಾಡದೆ ಹಿಂದಿರುಗುವ ಮೂಲಕ, ಸೈತಾನನು “ಬಂದು ಅವರಲ್ಲಿ ಬಿತ್ತಿದ ವಾಕ್ಯವನ್ನು ತೆಗೆದುಬಿಡು”ವ ಮುಂಚೆ ನೀವು ಅವನ ಪ್ರಯತ್ನಗಳನ್ನು ತಡೆಗಟ್ಟಲು ಶಕ್ತರಾಗಬಹುದು.—ಮಾರ್ಕ 4:15.
5 ತಯಾರಿಯು ಅತ್ಯಾವಶ್ಯಕ: ಪುನರ್ಭೇಟಿಗಳನ್ನು ಮಾಡುವುದರಲ್ಲಿನ ನಿಮ್ಮ ಪರಿಣಾಮಕಾರತೆಯು, ನೀವು ಎಷ್ಟು ಚೆನ್ನಾಗಿ ತಯಾರಿಸುತ್ತೀರೊ ಅದರೊಂದಿಗೆ ನೇರವಾಗಿ ಸಂಬಂಧಿಸುತ್ತದೆ. ಹೋಗುವ ಮುಂಚೆ ನಿಮ್ಮ ಪ್ರಸ್ತಾವನೆಯನ್ನು ಯೋಜಿಸಿರಿ. ಎಪ್ರಿಲ್ 1997ರ ನಮ್ಮ ರಾಜ್ಯದ ಸೇವೆಯ ಹಿಂದಿನ ಪುಟವು, ನೀವು ಚಂದಾಗಳನ್ನು ಅಥವಾ ಅಪೇಕ್ಷಿಸು ಬ್ರೋಷರನ್ನು ನೀಡುವಾಗ, ಒಳ್ಳೆಯ ಯಶಸ್ಸಿನೊಂದಿಗೆ ಉಪಯೋಗಿಸಬಹುದಾದ ಹಲವಾರು ನಿರೂಪಣೆಗಳನ್ನು ಒದಗಿಸುತ್ತದೆ. ನೀವು ಹಿಂದಿರುಗಿ ಹೋಗುವಾಗ ಅವರೊಂದಿಗೆ ಹಂಚಿಕೊಳ್ಳಲಿಕ್ಕಾಗಿ, ಮನಸ್ಸಿನಲ್ಲಿ ಕೆಲವೊಂದು ವಿಚಾರಗಳನ್ನಿಡುವುದು ಮುಂದಿನ ವಿಷಯವಾಗಿದೆ. ನೀವು ಆಸಕ್ತಿಯನ್ನು ಮುಂದುವರಿಸಲು ಹೋಗುವಾಗ ಏನನ್ನು ಹೇಳಸಾಧ್ಯವಿದೆ? ಒಂದು ಬೈಬಲ್ ಅಭ್ಯಾಸವನ್ನು ಹೇಗೆ ಆರಂಭಿಸಸಾಧ್ಯವಿದೆ?
6 ಭೂಮಿಯನ್ನು ಶುಚಿಗೊಳಿಸಿ, ಅದನ್ನು ಜೀವಿಸಲು ಒಂದು ಉತ್ತಮ ಸ್ಥಳವನ್ನಾಗಿ ಮಾಡಲು ಏನನ್ನು ಮಾಡಬೇಕಾಗುವುದು ಎಂಬುದರ ಕುರಿತಾದ ಒಂದು ಚರ್ಚೆಯನ್ನು ಮುಂದುವರಿಸಿಕೊಂಡು ಹೋಗುವಾಗ, ನೀವು ಹೀಗೆ ಹೇಳಬಹುದು:
◼ “ನನ್ನ ಹಿಂದಿನ ಭೇಟಿಯಲ್ಲಿ, ಭೂಮಿಯನ್ನು ಒಂದು ಶಾಂತಿಪೂರ್ಣ ಪ್ರಮೋದವನವಾಗಿ ಪರಿವರ್ತಿಸುವ ಮುಂಚೆ ತೀಕ್ಷ್ಣವಾದ ಹೆಜ್ಜೆಗಳು ತೆಗೆದುಕೊಳ್ಳಲ್ಪಡಬೇಕೆಂಬ ವಿಷಯದಲ್ಲಿ ನಾವು ಸಮ್ಮತಿಸಿದೆವು. ಈ ಕೆಲಸವನ್ನು ಪೂರೈಸಲು ಏನು ಅಗತ್ಯವಾಗಿದೆಯೊ ಅದನ್ನು ಮನುಷ್ಯರು ಹೊಂದಿದ್ದಾರೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ಮಾನವನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಾಗ ಏನು ಫಲಿಸುವುದೆಂಬುದನ್ನು ದಯವಿಟ್ಟು ಗಮನಿಸಿರಿ.” ಯೆಶಾಯ 35:1ನ್ನು ಓದಿರಿ. ಅನಂತರ, ದೇವರು ಏನನ್ನು ಪೂರೈಸುವನೆಂಬುದನ್ನು ತೋರಿಸಲು, ಜ್ಞಾನ ಪುಸ್ತಕದಲ್ಲಿ 1ನೆಯ ಅಧ್ಯಾಯಕ್ಕೆ ತಿರುಗಿಸಿ, 11-16 ಪ್ಯಾರಗ್ರಾಫ್ಗಳ ಆಯ್ದ ಭಾಗಗಳನ್ನು ಉಪಯೋಗಿಸಿರಿ. ಈ ಪುಸ್ತಕವನ್ನು ಉಪಯೋಗಿಸುತ್ತಾ ಒಂದು ಬೈಬಲ್ ಅಭ್ಯಾಸವನ್ನು ನೀಡುವುದರ ಮೂಲಕ ಆಸಕ್ತಿಯನ್ನು ವಿಕಸಿಸಿರಿ.
7 ನೀವು ಆರಂಭದ ಭೇಟಿಯಲ್ಲಿ, ದೇವರ ರಾಜ್ಯದ ಕುರಿತಾಗಿ ಚರ್ಚಿಸಿ, “ಅಪೇಕ್ಷಿಸು” ಬ್ರೋಷರನ್ನು ನೀಡಿರುವಲ್ಲಿ, ನೀವು ಹಿಂದಿರುಗಿ ಹೋಗುವಾಗ ಈ ರೀತಿಯಲ್ಲಿ ಹೇಳಸಾಧ್ಯವಿದೆ:
◼ “ಹೋದ ಸಲ ನಾವು ಮಾತಾಡಿದಾಗ, ದೇವರ ರಾಜ್ಯವು ಇಡೀ ಭೂಮಿಯನ್ನು ಆಳಲಿರುವ ಒಂದು ನೈಜ ಸರಕಾರವಾಗಿರುವುದಾಗಿ ನಾವು ಗುರುತಿಸಿದೆವು. ಕ್ರಿಸ್ತ ಯೇಸು ಅದರ ಪ್ರಭುವಾಗಿರುವನೆಂದು ಬೈಬಲ್ ತೋರಿಸುತ್ತದೆ. ಈ ರೀತಿಯ ಸರಕಾರ ಮತ್ತು ನಾಯಕನನ್ನು ಪಡೆದಿರುವ ಪ್ರಯೋಜನಗಳನ್ನು ನೀವು ನೋಡಬಲ್ಲಿರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅಪೇಕ್ಷಿಸು ಬ್ರೋಷರನ್ನು ಪಾಠ 6ಕ್ಕೆ ತೆರೆಯಿರಿ. 6-7 ಪ್ಯಾರಗ್ರಾಫ್ಗಳಲ್ಲಿರುವ ಆಯ್ದ ವಿಷಯಗಳನ್ನು ಮತ್ತು 13ನೆಯ ಪುಟದಲ್ಲಿರುವ ಚಿತ್ರವನ್ನು ಉಪಯೋಗಿಸುತ್ತಾ, ದೇವರ ರಾಜ್ಯವು ಭವಿಷ್ಯತ್ತಿನಲ್ಲಿ ಮಾನವಕುಲಕ್ಕಾಗಿ ಏನನ್ನು ಮಾಡಲಿದೆಯೆಂಬುದನ್ನು ತೋರಿಸಿರಿ. ದಾನಿಯೇಲ 2:44ನ್ನು ಓದಿರಿ, ಮತ್ತು ಸೂಕ್ತವಾಗಿರುವಲ್ಲಿ, ಜ್ಞಾನ ಪುಸ್ತಕವನ್ನು ಪರಿಚಯಿಸಿ ಒಂದು ಬೈಬಲ್ ಅಭ್ಯಾಸವನ್ನು ನೀಡಿರಿ.
8 ಲೋಕದ ಧರ್ಮಗಳು ಮಾನವತ್ವಕ್ಕಾಗಿ ಸಮಸ್ಯೆಗಳನ್ನು ಸೃಷ್ಟಿಸಿವೆಯೆಂಬುದನ್ನು ಅಂಗೀಕರಿಸಿರುವ ಒಬ್ಬ ವ್ಯಕ್ತಿಯನ್ನು ನೀವು ಕಂಡುಕೊಂಡಿರುವಲ್ಲಿ, ಪುನರ್ಭೇಟಿಯ ಸಮಯದಲ್ಲಿ ನೀವು ಇದನ್ನು ಕೇಳಬಹುದು:
◼ “ಯಾವ ಧರ್ಮಕ್ಕೆ ದೇವರ ಮೆಚ್ಚಿಕೆಯಿದೆಯೆಂಬುದನ್ನು ನಾವು ಹೇಗೆ ತಿಳಿದುಕೊಳ್ಳಬಲ್ಲವೆಂದು ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಈ ಬ್ರೋಷರ್, ಸತ್ಯ ಧರ್ಮದ ಗುರುತುಗಳನ್ನು ಕೊಡುತ್ತದೆ.” ಪಾಠ 13ಕ್ಕೆ ತಿರುಗಿಸಿರಿ, ಮತ್ತು 3-7 ಪ್ಯಾರಗ್ರಾಫ್ಗಳಲ್ಲಿ ಓರೆಅಕ್ಷರದಲ್ಲಿರುವ ಐದು ವಿಷಯಗಳನ್ನು ಎತ್ತಿಹೇಳಿರಿ. ಹೀಗೆ ಹೇಳುತ್ತಾ ನೀವು ಮುಂದುವರಿಸಬಲ್ಲಿರಿ: “ಸತ್ಯ ಧರ್ಮವನ್ನು ಕಂಡುಕೊಳ್ಳುವುದಕ್ಕೆ ಕೂಡಿಸಿ, ದೇವರು ವ್ಯಕ್ತಿಗತವಾಗಿ ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ನಾವು ಕಂಡುಕೊಳ್ಳಬೇಕು.” ಯೋಹಾನ 4:23, 24ನ್ನು ಓದಿರಿ. ಇದನ್ನು ಮುಂದಕ್ಕೆ ಚರ್ಚಿಸಲು ಸಿದ್ಧರಿದ್ದೀರೆಂದು ಹೇಳಿರಿ. ಬ್ರೋಷರಿನಲ್ಲಿ ಪಾಠ 1ಕ್ಕೆ ತಿರುಗಿಸಿರಿ, ಮತ್ತು ನಾವು ಹೇಗೆ ಅಭ್ಯಾಸ ಮಾಡುತ್ತೇವೆಂಬುದನ್ನು ಮಾಡಿತೋರಿಸಿ.
9 ಕುಟುಂಬ ಸಂತೋಷದ ಕುರಿತಾದ ಒಂದು ಚರ್ಚೆಯನ್ನು ಮುಂದುವರಿಸಲು ನೀವು ಹಿಂದಿರುಗುವಾಗ, ಈ ಮುಂದಿನ ವಿಷಯಕ್ಕೆ ಹೋಲುವಂತಹ ಒಂದು ವಿಷಯವನ್ನು ನೀವು ಹೇಳಸಾಧ್ಯವಿದೆ:
◼ “ನಾವು ಪ್ರಥಮ ಸಲ ಭೇಟಿಯಾದಾಗ, ನಾನು ನಿಮ್ಮೊಂದಿಗೆ ಕುಟುಂಬ ಸಂತೋಷದ ರಹಸ್ಯವನ್ನು ಹಂಚಿದೆ. ಅದು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸಲಹೆಯನ್ನು ಅನ್ವಯಿಸುವುದೇ ಆಗಿದೆ. ಒಂದು ಆಧುನಿಕ ಕುಟುಂಬದ ಅಗತ್ಯಗಳೊಂದಿಗೆ ವ್ಯವಹರಿಸುವ ವಿಷಯದಲ್ಲಿ, ಬೈಬಲ್ ಹಳೆಯಕಾಲದ್ದಾಗಿದೆಯೊ ಅಥವಾ ಸದ್ಯೋಚಿತವಾದದ್ದಾಗಿದೆಯೊ? ನೀವೇನು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಜ್ಞಾನ ಪುಸ್ತಕವನ್ನು ಪ್ರಸ್ತುತಪಡಿಸಿರಿ. ಅಧ್ಯಾಯ 2ಕ್ಕೆ ತಿರುಗಿಸಿ, 13ನೆಯ ಪ್ಯಾರಗ್ರಾಫ್ನಲ್ಲಿರುವ ಉಲ್ಲೇಖವನ್ನು ಓದಿರಿ. 3ನೆಯ ಪ್ಯಾರಗ್ರಾಫ್ನಲ್ಲಿರುವ ವಿಷಯಗಳನ್ನು ಉಪಯೋಗಿಸುತ್ತಾ, ಒಂದು ಕುಟುಂಬ ಬೈಬಲ್ ಅಭ್ಯಾಸವನ್ನು ನೀಡಿರಿ.
10 ನಿಷ್ಕೃಷ್ಟ ದಾಖಲೆಗಳನ್ನು ಇಡುವ ಮೂಲಕ, ಅತ್ಯಾವಶ್ಯಕವಾದ ತಯಾರಿಯನ್ನು ಮಾಡುವ ಮೂಲಕ, ಮತ್ತು ಅವರ ಆಸಕ್ತಿಯನ್ನು ಮುಂದುವರಿಸಲು ತಡಮಾಡದೆ ಹಿಂದಿರುಗುವ ಮೂಲಕ, ಅವರನ್ನು ರಕ್ಷಣೆಯ ಮಾರ್ಗಕ್ಕೆ ಆಕರ್ಷಿಸುವಂತಹ ರೀತಿಯ ನೆರೆಯವರ ಪ್ರೀತಿಯನ್ನು ನಾವು ಪ್ರದರ್ಶಿಸಸಾಧ್ಯವಿದೆ.—ಮತ್ತಾ. 22:39; ಗಲಾ. 6:10.