ಮೇಗಾಗಿ ಸೇವಾ ಕೂಟಗಳು
ಮೇ 5ರಿಂದ ಆರಂಭವಾಗುವ ವಾರ
ಸಂಗೀತ 130 (22)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
12 ನಿ: “ಯೇಸುವನ್ನು ನಿರಂತರವಾಗಿ ಹಿಂಬಾಲಿಸಿರಿ.” ಪ್ರಶ್ನೋತ್ತರಗಳು. ಜೂನ್ 1, 1993ರ ಕಾವಲಿನಬುರುಜು ಪತ್ರಿಕೆಯ 12ನೆಯ ಪುಟದಿಂದ ಅನುಭವಗಳನ್ನು ಸೇರಿಸಿರಿ.
23 ನಿ: “ಕಂಡುಕೊಳ್ಳಲ್ಪಟ್ಟಿರುವ ಎಲ್ಲಾ ಆಸಕ್ತಿಗಾಗಿ ಯಥಾರ್ಥವಾದ ಚಿಂತೆಯನ್ನು ತೋರಿಸಿರಿ.” ಸಭಿಕರೊಂದಿಗೆ ಚರ್ಚೆ. ಎಲ್ಲಾ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವನ್ನು ಒತ್ತಿಹೇಳಿರಿ. ಸಾರ್ವಜನಿಕ ಸ್ಥಳಗಳಲ್ಲಿ ನಾವು ಭೇಟಿಮಾಡಿರುವ ಜನರಿಗೆ ಇನ್ನೂ ಹೆಚ್ಚು ಸಾಕ್ಷಿಯನ್ನು ನೀಡಲು ಸಾಧ್ಯವಾಗುವಂತೆ, ಅವರ ಮನೆಯ ವಿಳಾಸವನ್ನು ವಿನಂತಿಸಿಕೊಳ್ಳುವ ಕೆಲವು ಜಾಣ್ಮೆಯ ವಿಧಗಳನ್ನು ಸೂಚಿಸಿರಿ. 6-9ನೆಯ ಪ್ಯಾರಗ್ರಾಫ್‌ಗಳಲ್ಲಿ ಕೊಡಲ್ಪಟ್ಟಿರುವ ನಿರೂಪಣೆಗಳಲ್ಲಿ ಎರಡನ್ನು ಸಮರ್ಥ ಪ್ರಚಾರಕರು ಪ್ರತ್ಯಕ್ಷಾಭಿನಯಿಸಲಿ. ಮಾರ್ಚ್ 1997ರ ನಮ್ಮ ರಾಜ್ಯದ ಸೇವೆಯ ಪುರವಣಿಯ 3ನೇ ಪುಟದಲ್ಲಿರುವ “ಪುನರ್ಭೇಟಿಗಳನ್ನು ಮಾಡುವುದರಲ್ಲಿ ಸಫಲರಾಗುವ ವಿಧ” ಎಂಬ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ. ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಪ್ರತಿ ವಾರ ಸ್ವಲ್ಪ ಸಮಯವನ್ನು ಬದಿಗಿರಿಸಲು ಎಲ್ಲರನ್ನು ಉತ್ತೇಜಿಸಿರಿ.
ಸಂಗೀತ 151 (18) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 12ರಿಂದ ಆರಂಭವಾಗುವ ವಾರ
ಸಂಗೀತ 133 (3)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
12 ನಿ: ಪ್ರಶ್ನಾ ರೇಖಾಚೌಕ. ಒಬ್ಬ ಹಿರಿಯನಿಂದ ಭಾಷಣ.
23 ನಿ: “ಕಿರುಹೊತ್ತಗೆಗಳನ್ನು ಉಪಯೋಗಿಸುವ ಮೂಲಕ ನಿಮ್ಮ ಬೆಳಕನ್ನು ಪ್ರಕಾಶಿಸಿರಿ.” ಪ್ರಶ್ನೋತ್ತರಗಳು. 6 ಮತ್ತು 7ನೆಯ ಪ್ಯಾರಗ್ರಾಫ್‌ಗಳಲ್ಲಿರುವ ಸಂಭಾಷಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಎಲ್ಲಾ ಸಮಯಗಳಲ್ಲಿ ತಮ್ಮೊಂದಿಗೆ ಹಲವಾರು ಭಾಷೆಗಳ ಕಿರುಹೊತ್ತಗೆಗಳನ್ನು ಒಯ್ಯಲು ಪ್ರಚಾರಕರನ್ನು ಉತ್ತೇಜಿಸಿರಿ ಮತ್ತು ಸಭೆಯಲ್ಲಿ ಯಾವ ಕಿರುಹೊತ್ತಗೆಗಳು ಲಭ್ಯ ಇವೆಯೆಂಬುದನ್ನು ತಿಳಿಸಿರಿ.
ಸಂಗೀತ 162 (18) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 19ರಿಂದ ಆರಂಭವಾಗುವ ವಾರ
ಸಂಗೀತ 139 (16)
7 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “ಪ್ರಗತಿಪರ ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುವುದು.” ಸಮರ್ಥ ಸಹೋದರನು, ಅಭ್ಯಾಸಗಳನ್ನು ಚೆನ್ನಾಗಿ ನಡಿಸುತ್ತಿರುವ ಒಬ್ಬ ಅಥವಾ ಇಬ್ಬರು ಪ್ರಚಾರಕರೊಂದಿಗೆ ಲೇಖನವನ್ನು ಚರ್ಚಿಸುತ್ತಾನೆ. ಜ್ಞಾನ ಪುಸ್ತಕದ ಭಾಗಗಳನ್ನು ಉದಾಹರಣೆಗಳಾಗಿ ಉಪಯೋಗಿಸುತ್ತಾ, ಅಭ್ಯಾಸವನ್ನು ಒಂದು ಸ್ಥಿರವಾದ ಗತಿಯಲ್ಲಿ ಮುಂದುವರಿಸುತ್ತಾ ಇರುವಂತೆ ಅವರಿಗೆ ಸಹಾಯ ಮಾಡುವ ಮತ್ತು ವಿದ್ಯಾರ್ಥಿಯು ನಿಜವಾಗಿಯೂ ಏನನ್ನು ಕಲಿಯುತ್ತಿದ್ದಾನೆಂಬುದನ್ನು ವಿವೇಚಿಸುವಂತೆ ಅವರನ್ನು ಅನುಮತಿಸುವ ಕಲಿಸುವಿಕೆಯ ವಿಧಾನಗಳನ್ನು ಅವರು ತಿಳಿಸುತ್ತಾರೆ.—ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ 5, 8, 12 ಮತ್ತು 21ನೆಯ ಪ್ಯಾರಗ್ರಾಫ್‌ಗಳನ್ನು ನೋಡಿರಿ.
18 ನಿ: “ಚಂದಾಗಳನ್ನು ನಿರ್ವಹಿಸುವ ವಿಧ.” ಪ್ರಶ್ನೋತ್ತರಗಳು. “ಹೆಚ್ಚು ಉತ್ತಮವಾದ ಸೇವಾ ಸೌಕರ್ಯವನ್ನು ಖಾತ್ರಿಪಡಿಸಲು ನೀವು ಮಾಡಬಲ್ಲ ವಿಷಯ” ಎಂಬ ರೇಖಾಚೌಕದಲ್ಲಿರುವ ಅನ್ವಯಯೋಗ್ಯ ಅಂಶಗಳನ್ನು ಪುನರ್ವಿಮರ್ಶಿಸಿರಿ. ನಿಷ್ಕೃಷ್ಟತೆ, ನೀಟುಗಾರಿಕೆ, ಮತ್ತು ತಡಮಾಡದಿರುವಿಕೆಯನ್ನು ಉತ್ತೇಜಿಸಿರಿ. ಚಂದಾಗಳನ್ನು ಪಡೆಯುವಾಗ, ವಿಚಾರಿಸಿ ನೋಡಲಿಕ್ಕಾಗಿ ಸುಲಭವಾಗಿ ಸಿಗುವ ಸ್ಥಳದಲ್ಲಿ ಈ ಪುರವಣಿಯನ್ನು ಇಟ್ಟುಕೊಳ್ಳಲು ಪ್ರಚಾರಕರಿಗೆ ಸಲಹೆನೀಡಿರಿ.
ಸಂಗೀತ 165 (20) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 26ರಿಂದ ಆರಂಭವಾಗುವ ವಾರ
ಸಂಗೀತ 148 (6)
15 ನಿ: ಸ್ಥಳಿಕ ತಿಳಿಸುವಿಕೆಗಳು. ಜೂನ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಜ್ಞಾನ ಪುಸ್ತಕವನ್ನು ಉಪಯೋಗಿಸುತ್ತಾ, 10-11 ಪುಟಗಳಲ್ಲಿರುವ 17-19 ಪ್ಯಾರಗ್ರಾಫ್‌ಗಳಲ್ಲಿನ ವಿಚಾರಗಳನ್ನು, ಒಂದು ಸಂಕ್ಷಿಪ್ತ ನಿರೂಪಣೆಯನ್ನು ತಯಾರಿಸಲು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಎಲ್ಲರನ್ನು ಉತ್ತೇಜಿಸಿರಿ. ಆಸಕ್ತ ವ್ಯಕ್ತಿಗಳು ಕ್ಷಿಪ್ರವಾಗಿ ಪ್ರಗತಿಯನ್ನು ಮಾಡುವಂತೆ ಸಹಾಯ ಮಾಡುವ ಅಗತ್ಯವನ್ನು ಒತ್ತಿಹೇಳಿರಿ.—ಜನವರಿ 15, 1996ರ ಕಾವಲಿನಬುರುಜು, 13-14 ಪುಟಗಳನ್ನು ನೋಡಿರಿ.
12 ನಿ: “ನಾವು ಏಕೆ ಹಿಂದಿರುಗಿ ಹೋಗುತ್ತಾ ಇರುತ್ತೇವೆ?” ಪ್ರಶ್ನೋತ್ತರಗಳು. ಘೋಷಕರು (ಇಂಗ್ಲಿಷ್) ಪುಸ್ತಕದಲ್ಲಿ ಪುಟ 570ರಲ್ಲಿರುವ ಅಂಶಗಳನ್ನು ಸೇರಿಸಿರಿ.
18 ನಿ: ಸ್ಥಳಿಕ ಅಗತ್ಯಗಳು. ಸಭೆಯ ಒಂದು ಆತ್ಮಿಕ ಅಗತ್ಯವನ್ನು ಸಂಬೋಧಿಸುತ್ತಾ, ಒಬ್ಬ ಹಿರಿಯನಿಂದ ಭಾಷಣ ಅಥವಾ ಇಬ್ಬರು ಹಿರಿಯರಿಂದ ಒಂದು ಚರ್ಚೆ. ಅಭಿವೃದ್ಧಿಗಾಗಿ ಶಾಸ್ತ್ರೀಯ ಬುದ್ಧಿವಾದ ಮತ್ತು ವ್ಯಾವಹಾರಿಕ ಸಲಹೆಗಳನ್ನು ಕೊಡಿರಿ.
ಸಂಗೀತ 174 (22) ಮತ್ತು ಸಮಾಪ್ತಿಯ ಪ್ರಾರ್ಥನೆ.