ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/97 ಪು. 4-6
  • ಚಂದಾಗಳನ್ನು ನಿರ್ವಹಿಸುವ ವಿಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಚಂದಾಗಳನ್ನು ನಿರ್ವಹಿಸುವ ವಿಧ
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 5/97 ಪು. 4-6

ಚಂದಾಗಳನ್ನು ನಿರ್ವಹಿಸುವ ವಿಧ

(There is no corresponding article in English)

1 ಭಾರತದ ಶಾಖೆಯು, ಲೋಕದ ಸುತ್ತಲೂ 40ಕ್ಕಿಂತಲೂ ಹೆಚ್ಚು ದೇಶಗಳಿಗೆ ಭಾರತೀಯ ಭಾಷೆಗಳಲ್ಲಿನ ಪತ್ರಿಕೆಗಳನ್ನು ಸರಬರಾಯಿ ಮಾಡುತ್ತದೆಂಬುದನ್ನು ಅವಲೋಕಿಸುವುದು ತುಂಬ ಸಂತೋಷಗೊಳಿಸುವಂತಹ ವಿಷಯವಾಗಿದೆ. ಇದಕ್ಕೆ ಕೂಡಿಸಿ, ನಾವು ಭಾರತೀಯ ಭಾಷೆಯ ಚಂದಾಗಳನ್ನು ಬೇರೆ ದೇಶಗಳಿಗೆ ರವಾನಿಸುವಂತೆಯೇ, ಇತರ ಶಾಖೆಗಳು ನಮಗೆ ವಿದೇಶಿ ಭಾಷಾ ಚಂದಾಗಳನ್ನು ಕಳುಹಿಸುತ್ತವೆ. ಹೀಗಿರುವುದರಿಂದ ಭಾರತ, ಬಾಂಗ್ಲಾದೇಶ್‌ ಮತ್ತು ನೇಪಾಲ್‌ನಲ್ಲಿರುವ, ವಿದೇಶಿ ಭಾಷೆಗಳನ್ನು ಮಾತಾಡುವ ವ್ಯಕ್ತಿಗಳು ತಮ್ಮ ಸ್ವಂತ ಭಾಷೆಯಲ್ಲಿ ಚಂದಾಗಳನ್ನು ಪಡೆಯುವಂತೆ ಸಹಾಯ ಮಾಡಲು ನಾವು ಸುಯೋಗವುಳ್ಳವರಾಗಿದ್ದೇವೆ. ಚಂದಾಗಳನ್ನು ಪಡೆದುಕೊಳ್ಳುವುದರಲ್ಲಿ ನೀವು ಮಾಡುವ ಪ್ರಯತ್ನಗಳಿಗಾಗಿ ನಾವು ನಿಮಗೆ ಉಪಕಾರ ಹೇಳುತ್ತೇವೆ, ಮತ್ತು ಈ ವಿಷಯದಲ್ಲಿ ಒಂದು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

2 ಹಾಗಿದ್ದರೂ, ಅಂಚೆ ಇಲಾಖೆಯ ಮೂಲಕ ಪತ್ರಿಕೆಗಳ ಸರಬರಾಯಿಯ ಸಂಬಂಧದಲ್ಲಿ ನಾವು ದೇಶದಾದ್ಯಂತ ಕೆಲವೊಂದು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಹಲವಾರು ಚಂದಾಗಳು ಮತ್ತು ವಿತರಕರ ಪತ್ರಿಕೆಗಳನ್ನು ತಲಪಿಸಲಾಗುತ್ತಿಲ್ಲ; ಕೆಲವನ್ನು ಸೊಸೈಟಿಗೆ, ತಲಪಿಸಲಸಾಧ್ಯವಾದವುಗಳೆಂದು ಹಿಂದಿರುಗಿಸಲಾಗುತ್ತದೆ. ಪ್ರಚಾರಕರು ವಿಷಯಗಳನ್ನು ನಿರ್ವಹಿಸುವುದರಲ್ಲಿ ಹೆಚ್ಚು ಎಚ್ಚರಿಕೆವಹಿಸಿದ್ದಲ್ಲಿ ಮತ್ತು ತಡಮಾಡದಿದ್ದಲ್ಲಿ, ಈ ಸಮಸ್ಯೆಗಳಲ್ಲಿ ಹೆಚ್ಚಿನವುಗಳನ್ನು ದೂರಮಾಡಸಾಧ್ಯವಿತ್ತೆಂದು ಒಂದು ವಿಶ್ಲೇಷಣೆಯು ಪ್ರಕಟಪಡಿಸಿದೆ. ಆದುದರಿಂದ ಹೆಚ್ಚು ಉತ್ತಮವಾದ ಸೇವಾಸೌಲಭ್ಯವನ್ನು ಖಾತ್ರಿಪಡಿಸಲಿಕ್ಕಾಗಿ ಹಾಗೂ ಚಂದಾಗಳನ್ನು ನಿರ್ವಹಿಸುವುದರಲ್ಲಿ ಬೇಡವಾದಂತಹ ಸಮಸ್ಯೆಗಳು ಮತ್ತು ತಡಮಾಡುವಿಕೆಗಳನ್ನು ತೆಗೆದುಹಾಕಲು, ಈ ಮುಂದಿನ ಅಂಶಗಳನ್ನು ಪರಿಗಣಿಸುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

3 ಮುಂದಾಗಿ ಯೋಜಿಸುವುದು, ಉತ್ತಮ ಸೇವಾಸೌಲಭ್ಯದಲ್ಲಿ ಪರಿಣಮಿಸುವುದು. (ಆದಿ. 41:33-36; ಲೂಕ 14:28-30) ಉದಾಹರಣೆಗಾಗಿ, ಆಕ್ಸಿಲಿಯರಿ ಪಯನೀಯರರು ಇರುವಾಗ, ಸಭೆಗಳು ಪತ್ರಿಕೆಗಳಿಗಾಗಿ ವಿಶೇಷ ಆರ್ಡರ್‌ಗಳನ್ನು ಮಾಡಬೇಕಾಗಬಹುದು. ಎಷ್ಟು ಮಂದಿ ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುತ್ತಾರೆಂಬುದನ್ನು ನೋಡಲು ಕೊನೆ ಗಳಿಗೆಯ ತನಕ ಕಾಯುವ ಬದಲಿಗೆ, ಆ ಸೇವೆಯಲ್ಲಿ ಪಾಲಿಗರಾಗುವರೆಂದು ನಿರೀಕ್ಷಿಸಲಾಗುವ ಅಂದಾಜಿನ ಸಂಖ್ಯೆಯ ಮೇಲೆ ಆಧರಿಸಿ ಬೇಗನೆ ವಿಶೇಷ ಆರ್ಡರ್‌ಗಳನ್ನು ಮಾಡುವುದು ವಿವೇಕಯುತ. ನೀವು ವಿನಂತಿಸುವ ಎಲ್ಲಾ ಪತ್ರಿಕೆಗಳನ್ನು ನಾವು ನಿಮಗೆ ಒದಗಿಸಲು ಬಯಸುವುದಾದರೂ, ವಿನಂತಿಸಲ್ಪಟ್ಟಿರುವ ಸಂಚಿಕೆಯನ್ನು ನಾವು ಮುದ್ರಿಸಿದ ನಂತರ ಪಡೆಯಲಾಗುವ ವಿಶೇಷ ಆರ್ಡರ್‌ಗಳನ್ನು ಪೂರೈಸುವುದು ಅಸಾಧ್ಯ. ನೀವು ಪಡೆಯಲು ಬಯಸುವ ಸಂಚಿಕೆಯ ತಾರೀಖಿನ 60 ದಿನಗಳ ಮುಂಚೆಯೇ ನಿಮ್ಮ ವಿಶೇಷ ಆರ್ಡರ್‌ಗಳು ಸೊಸೈಟಿಗೆ ತಲಪಬೇಕೆಂಬುದನ್ನು ದಯವಿಟ್ಟು ಗಮನಿಸಿರಿ. ಆದಾಗಲೂ, ಈಗ ಇರುವಂತಹ ಒಂದು ಆರ್ಡರ್‌ನಲ್ಲಿ ಅಥವಾ ಒಂದು ಟಪಾಲಿನ ವಿಳಾಸದಲ್ಲಿನ ಯಾವುದೇ ಬದಲಾವಣೆಯು 45 ದಿನಗಳೊಳಗೆ ಕಾರ್ಯಗತವಾಗುವುದು.

4 ನಿಷ್ಕೃಷ್ಟತೆ, ಸ್ಪಷ್ಟವಾದ ಬರಹ ಮತ್ತು ಪೂರ್ಣತೆಯು, ಯಾವುದೇ ಟಪಾಲಿನ ಸರಿಯಾದ ಬಟವಾಡೆಗೆ ಕೀಲಿಕೈಗಳಾಗಿವೆ. ನೀವು ಒಂದು ಚಂದಾ ಸ್ಲಿಪ್‌ ಅನ್ನು ಅಥವಾ ವಿತರಕರ ಪತ್ರಿಕೆಗಳಿಗಾಗಿ ಟಪಾಲಿನ ವಿಳಾಸವನ್ನು ತುಂಬಿಸುತ್ತಿರುವಲ್ಲಿ, ನಿಮ್ಮ ಕ್ಷೇತ್ರದಲ್ಲಿರುವ ಸ್ಥಳಗಳ ಹೆಸರುಗಳೊಂದಿಗೆ ಪರಿಚಿತರಾಗಿರದ ಒಬ್ಬ ವ್ಯಕ್ತಿಯು ಅದನ್ನು ಸರಿಯಾಗಿ ಓದಿ, ತಿಳಿದುಕೊಳ್ಳುವ ಅಗತ್ಯವಿದೆಯೆಂಬುದನ್ನು ದಯವಿಟ್ಟು ನೆನಪಿನಲ್ಲಿಡಿರಿ. ಆದುದರಿಂದ, ಅವಶ್ಯವಿರುವ ಎಲ್ಲಾ ಮಾಹಿತಿಯು ಸರಿಯಾದ ಅನುಕ್ರಮದಲ್ಲಿ ಒದಗಿಸಲ್ಪಟ್ಟಿದೆ ಮತ್ತು ಸ್ಪಷ್ಟವಾಗಿ ಹಾಗೂ ನಿಷ್ಕೃಷ್ಟ ಅಕ್ಷರ ಸಂಯೋಜನೆಯೊಂದಿಗೆ ಬರೆಯಲ್ಪಟ್ಟಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿರಿ. ಒಂದು ನಗರದ ಅಥವಾ ಅಂಚೆ ಕಛೇರಿಯ ಹೆಸರು ಅಥವಾ ಪಿನ್‌ ಕೋಡ್‌ನ ಸಂಕ್ಷಿಪ್ತ ನಾಮವು ಕೊಡಲ್ಪಡಬಾರದು. ಮಾಹಿತಿಯ ಪ್ರತಿಯೊಂದು ಭಾಗವನ್ನು, ಒಂದು ಅಲ್ಪವಿರಾಮದೊಂದಿಗೆ ಪ್ರತ್ಯೇಕಿಸಿರಿ ಮತ್ತು ಪ್ರತಿಯೊಂದು ಶಬ್ದದ ನಂತರ ಒಂದು ಜಾಗವನ್ನು ಬಿಡಿರಿ. ನಿಷ್ಕೃಷ್ಟವಲ್ಲದ ಅಥವಾ ಅಪೂರ್ಣವಾದ ಮಾಹಿತಿಯು ಬಟವಾಡೆಯನ್ನು ತಡಮಾಡುವುದು ಅಥವಾ ತಡೆಗಟ್ಟುವುದು. ಚಂದಾಗಳ ವಿಷಯದಲ್ಲಾದರೊ, ನೀವೇನನ್ನು ಬರೆದಿದ್ದೀರೊ ಅದನ್ನು ಚಂದಾದಾರನು ಪರೀಕ್ಷಿಸಿ ನೋಡುವಂತೆ ಕೇಳಿಕೊಳ್ಳುವುದು ಯಾವಾಗಲೂ ವಿವೇಕಯುತ. ವಿತರಕರ ಪತ್ರಿಕೆಗಳಿಗಾಗಿರುವ ಅಂಚೆ ವಿಳಾಸವು, ಪತ್ರಿಕೆಗಳನ್ನು ತಲಪಿಸಲು ಅಂಚೆಯವನಿಗೆ ಅನುಕೂಲಕರವಾಗಿರುವ ಒಂದು ಸ್ಥಳವಾಗಿರಬೇಕು.

5 ಇತ್ತೀಚಿನ ಸರ್ವಿಸ್‌ ಫಾರ್ಮ್‌ಗಳನ್ನು ಬಳಸಿರಿ. ಫಾರ್ಮ್‌ಗಳು, ಕೆಲಸದ ನಿರ್ವಹಣೆಯನ್ನು ಸುಲಭ ಹಾಗೂ ಕ್ಷಿಪ್ರಗೊಳಿಸಲಿಕ್ಕಾಗಿವೆ. ಉದಾಹರಣೆಗಾಗಿ, ಡಿಸ್ಟ್ರಿಬ್ಯೂಟರ್ಸ್‌ ಆರ್ಡರ್‌ (M-AB-202) ಫಾರ್ಮ್‌ ಅನ್ನು ಬಳಸುತ್ತಾ ನೀವು ವಿತರಕರ ಪತ್ರಿಕೆಗಳಿಗಾಗಿ ಒಂದು ಹೊಸ ಆರ್ಡರನ್ನು ಕೊಡಸಾಧ್ಯವಿದೆ ಅಥವಾ ಈಗ ಇರುವಂತಹ ಒಂದು ಆರ್ಡರನ್ನು ಹೆಚ್ಚಿಸಸಾಧ್ಯವಿದೆ, ಕಡಿಮೆಗೊಳಿಸಸಾಧ್ಯವಿದೆ ಅಥವಾ ರದ್ದುಗೊಳಿಸಸಾಧ್ಯವಿದೆ ಇಲ್ಲವೇ ವಿಶೇಷ ಆರ್ಡರ್‌ಗಳನ್ನು ಮಾಡಸಾಧ್ಯವಿದೆ. ಆದುದರಿಂದ, ಸೊಸೈಟಿಗೆ ಪತ್ರಗಳನ್ನು ಬರೆಯುವ ಬದಲಿಗೆ, ಈ ಉದ್ದೇಶಕ್ಕಾಗಿ ಒದಗಿಸಲ್ಪಟ್ಟಿರುವ ಸರ್ವಿಸ್‌ ಫಾರ್ಮ್‌ ಅನ್ನು ದಯವಿಟ್ಟು ಬಳಸಿರಿ. ಚಂದಾ ನವೀಕರಣಗಳಿಗಾಗಿ, ಎಕ್ಸ್‌ಪೈರಿಂಗ್‌ ಸಬ್ಸ್‌ಕ್ರಿಪ್‌ಷನ್‌ (M-19/M-191) ಸ್ಲಿಪ್‌ಗಳನ್ನು ಬಳಸಲು ದಯವಿಟ್ಟು ಪ್ರಯತ್ನಿಸಿರಿ. ಅವು ಲಭ್ಯವಿರದಿರುವಲ್ಲಿ, ನೀವು ಚಂದಾದಾರನ ವಿಳಾಸದ ಲೇಬಲನ್ನು (ಸುತ್ತುಹಾಳೆಯಿಂದ ತೆಗೆದದ್ದು), ಒಂದು ಹೊಸ ಚಂದಾ ಸ್ಲಿಪ್‌ ಅಥವಾ ಒಂದು ರಿನ್ಯೂವಲ್‌ ಫಾರ್ಮ್‌ಗೆ (M-5/M-105) ಜೋಡಿಸಿ ಸೊಸೈಟಿಗೆ ಕಳುಹಿಸಬಹುದು. ಸಬ್ಸ್‌ಕ್ರಿಪ್‌ಷನ್‌ ಚೇಂಜ್‌ ಆಫ್‌ ಅಡ್ರೆಸ್‌ (M-205) ಫಾರ್ಮನ್ನು ಬಳಸುತ್ತಾ, ಚಂದಾ ವಿಳಾಸದಲ್ಲಿನ ಬದಲಾವಣೆಗಳು, ಆರು ವಾರಗಳ ಮುಂಚೆಯೇ ವರದಿಸಲ್ಪಡಬೇಕು. ಬದಲಾವಣೆಗಳನ್ನು ಮಾಡುವಾಗ, ಯಾವಾಗಲೂ ಹಳೆಯ ಹಾಗೂ ಹೊಸ ವಿಳಾಸಗಳನ್ನು ನಮಗೆ ಕೊಡಿರಿ. ಪತ್ರಿಕೆಯ ಸುತ್ತುಹಾಳೆಯಿಂದ ತೆಗೆಯಲ್ಪಟ್ಟ ಹಳೆಯ ವಿಳಾಸದ ಲೇಬಲನ್ನು ನೀವು ಜೋಡಿಸಲು ಸಾಧ್ಯವಿರುವುದಾದರೆ ಅದು ತುಂಬ ಸಹಾಯಕಾರಿಯಾಗಿರುವುದು. ಸ್ಥಳಿಕ ಅಂಚೆ ಕಛೇರಿಗೆ ವಿಳಾಸದಲ್ಲಿನ ಯಾವುದೇ ಬದಲಾವಣೆಯನ್ನು ತಿಳಿಸಲು ಅಥವಾ ಆ ಬದಲಾವಣೆಯು ಕಾರ್ಯರೂಪಕ್ಕೆ ಬರುವ ತನಕ, ಪತ್ರಿಕೆಗಳನ್ನು ಅಂಚೆ ಕಛೇರಿಯಿಂದ ತೆಗೆದುಕೊಳ್ಳಲು ನಿರ್ದಿಷ್ಟ ಏರ್ಪಾಡುಗಳನ್ನು ಮಾಡುವಂತೆ ಚಂದಾದಾರನಿಗೆ ಕೇಳಿಕೊಳ್ಳಿರಿ. ತದ್ರೀತಿಯಲ್ಲಿ, ತಮ್ಮ ವಿತರಕರ ಪತ್ರಿಕೆಯ ಟಪಾಲಿನ ವಿಳಾಸದಲ್ಲಿ ಒಂದು ಬದಲಾವಣೆಯಿರುವಾಗ, ಅದು ಕಾರ್ಯರೂಪಕ್ಕೆ ಬರುವ ತನಕ, ಸಭೆಗಳು ತಮ್ಮ ಪತ್ರಿಕೆಗಳನ್ನು ಹಳೆಯ ವಿಳಾಸದಿಂದ ಅಥವಾ ಅಂಚೆ ಕಛೇರಿಯಿಂದ ತರಲು ಏರ್ಪಾಡುಗಳನ್ನು ಮಾಡುವಂತೆ ನಿರೀಕ್ಷಿಸಲಾಗುತ್ತದೆ.

6 ಚಂದಾಗಳನ್ನು ಮತ್ತು ಸೊಸೈಟಿಯಿಂದ ಬರುವ ವಿಚಾರಣಾ ಪತ್ರಗಳನ್ನು ನಿರ್ವಹಿಸುವುದರಲ್ಲಿ ತಡಮಾಡಬೇಡಿರಿ. ಚಂದಾಗಳನ್ನು ಪಡೆದುಕೊಂಡ ನಂತರ ನಡೆಯುವ ಮುಂದಿನ ಕೂಟದಲ್ಲೇ, ಸಭೆಯಲ್ಲಿ ನೇಮಿಸಲ್ಪಟ್ಟಿರುವವನಿಗೆ ಅವುಗಳು ಕೊಡಲ್ಪಡಬೇಕು. ಪ್ರತಿ ವಾರ ಸೆಕ್ರಿಟರಿಯು, ಪಡೆಯಲಾಗಿರುವ ಎಲ್ಲಾ ಚಂದಾಗಳನ್ನು—ಕೇವಲ ಒಂದೇ ಆದರೂ—ಸರಿಯಾಗಿ ತುಂಬಿಸಲ್ಪಟ್ಟಿರುವ ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ (M-AB-203) ಫಾರ್ಮ್‌ ಜೊತೆಯಲ್ಲಿ ಅಂಚೆ ಮೂಲಕ ಸೊಸೈಟಿಗೆ ಕಳುಹಿಸಬೇಕು. ಮಾಸಿಕ ಹಣ ರವಾನೆಯೊಂದಿಗೆ ಕಳುಹಿಸಲಿಕ್ಕಾಗಿ ಚಂದಾಗಳನ್ನು ತಡೆದುಹಿಡಿಯಬಾರದು. ನೀವು ಸೊಸೈಟಿಗೆ ಏನನ್ನು ಕಳುಹಿಸುತ್ತೀರೊ ಅದರ ಒಂದು ಪ್ರತಿಯನ್ನು ಯಾವಾಗಲೂ ನಿಮ್ಮಲ್ಲಿಟ್ಟುಕೊಳ್ಳಿರಿ. ಚಂದಾದಾರರಿಗೆ ತಮ್ಮ ಪತ್ರಿಕೆಗಳು ಬರುತ್ತಿವೆಯೆಂಬುದನ್ನು ಖಚಿತಪಡಿಸಲು, ಪ್ರಚಾರಕರು ಯಾವಾಗಲೂ ಪುನಃ ಸಂದರ್ಶಿಸಬೇಕು. ಸಾಮಾನ್ಯವಾಗಿ, ಚಂದಾದಾರರು ತಮ್ಮ ಚಂದಾದ ಪ್ರಥಮ ಸಂಚಿಕೆಯನ್ನು, ಸೊಸೈಟಿಯು ಚಂದಾ ಸ್ಲಿಪ್‌ಗಳನ್ನು ಪಡೆದ ತಾರೀಖಿನಂದಿನಿಂದ ಆರು ವಾರಗಳೊಳಗೆ ಪಡೆಯತಕ್ಕದ್ದು. ವೆರಿಫಿಕೇಷನ್‌ ನೋಟೀಸ್‌ (M-232), ಎಕ್ಸ್‌ಪೈರಿಂಗ್‌ ಸಬ್ಸ್‌ಕ್ರಿಪ್‌ಷನ್‌ (M-91 ಅಥವಾ M-191) ಫಾರ್ಮ್‌, ಅನ್‌ಡಿಲಿವರೆಬಲ್‌ ಸಬ್ಸ್‌ಕ್ರಿಪ್‌ಷನ್‌ ಫಾಲೋ-ಅಪ್‌ (M-210) ಫಾರ್ಮ್‌ ಮತ್ತು ಮುಂತಾದ ಯಾವುದೇ ನೋಟೀಸನ್ನು ನೀವು ಸೊಸೈಟಿಯಿಂದ ಪಡೆಯುವಲ್ಲಿ ದಯವಿಟ್ಟು ತ್ವರಿತವಾಗಿ ಕಾರ್ಯವೆಸಗಿರಿ. ತಲಪಿಸಲಸಾಧ್ಯವಾದ ಒಂದು ಚಂದಾವನ್ನು ನೀವು ಪತ್ತೆಹಚ್ಚುವಾಗ, ಪತ್ರಿಕೆಯ ಸಾಗಣೆಯಲ್ಲಿ ಇರಬಹುದಾದ ಸಂಭಾವ್ಯ ತಡೆಯ ಕುರಿತಾಗಿ ಚಂದಾದಾರನಿಗೆ ತಿಳಿಸತಕ್ಕದ್ದು. ಆದಾಗಲೂ, ಸೊಸೈಟಿಯು, ನಿಮ್ಮ ಹೇಳಿಕೆಗಳೊಂದಿಗೆ ಅನ್‌ಡಿಲಿವರೆಬಲ್‌ ಸಬ್ಸ್‌ಕ್ರಿಪ್‌ಷನ್‌ ಫಾಲೋ-ಅಪ್‌ ಸ್ಲಿಪ್‌ ಅನ್ನು ಪಡೆದ ಕೂಡಲೇ ಅದರ ಸಾಗಣೆಯು ಪುನಃ ಆರಂಭಿಸಲ್ಪಡುವುದು.

7 ವಿತರಕರ ಪತ್ರಿಕೆ ಅಥವಾ ಚಂದಾಗಳ ರವಾನೆಯಲ್ಲಿರುವ ಅಕ್ರಮತೆಗಳನ್ನು ತಡವಿಲ್ಲದೆ ವರದಿಸಿರಿ. ವಿತರಕರ ಪತ್ರಿಕೆಗಳಲ್ಲಿ ಯಾವುದೇ ಸಂಚಿಕೆಯನ್ನು, ಅದರ ತಾರೀಖಿನ ಸಮಯದ ತನಕ ಪಡೆಯದಿರುವಲ್ಲಿ, ಎಲ್ಲಾ ವಿವರಗಳನ್ನು ಒದಗಿಸುತ್ತಾ ದಯವಿಟ್ಟು ಸೊಸೈಟಿಗೆ ಬರೆಯಿರಿ. ವರದಿಸುವುದರಲ್ಲಿ ನೀವು ತಡಮಾಡದಿದ್ದಲ್ಲಿ, ನೀವೇನನ್ನು ಕಳೆದುಕೊಂಡಿದ್ದೀರೊ ಅದನ್ನು ಸೊಸೈಟಿಯು ಸ್ಥಾನಭರ್ತಿಮಾಡಬಹುದು. ಒಂದು ಚಂದಾವನ್ನು ಪಡೆಯಲಾಗದಿರುವಲ್ಲಿ, ಮತ್ತು ಅದು ಸೊಸೈಟಿಗೆ ಕಳುಹಿಸಲ್ಪಟ್ಟು ಎಂಟು ವಾರಗಳಿಗಿಂತಲೂ ಹೆಚ್ಚು ಸಮಯ ದಾಟಿಹೋಗಿರುವಲ್ಲಿ, ಅದು ಸಭೆಯ ಮೂಲಕ ವರದಿಸಲ್ಪಡಬೇಕು. ಅದು ಕಳೆದ ಎರಡು ಮಾಸಿಕ ಸ್ಟೇಟ್‌ಮಂಟ್‌ಗಳಲ್ಲಿನ ಲೆಕ್ಕಕ್ಕೆ ಸೇರಿಸಲ್ಪಟ್ಟಿರದಿದ್ದಲ್ಲಿ, ಆಗ ಸೆಕ್ರಿಟರಿಯು, ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ ಫಾರ್ಮ್‌ನ ಒಂದು ಪ್ರತಿ ಹಾಗೂ ಸಂಬಂಧಪಟ್ಟ ಎಲ್ಲಾ ಚಂದಾ ಸ್ಲಿಪ್‌ಗಳ ನಕಲು ಪ್ರತಿಗಳನ್ನು, ಒಂದು ವಿವರಣಾ ಪತ್ರದೊಂದಿಗೆ ಪುನಃ ಅಂಚೆ ಮೂಲಕ ಕಳುಹಿಸಬೇಕು. ಆದರೆ, ಅದು ಒಂದು ಮಾಸಿಕ ಸ್ಟೇಟ್‌ಮೆಂಟ್‌ನಲ್ಲಿನ ಲೆಕ್ಕಕ್ಕೆ ಸೇರಿಸಲ್ಪಟ್ಟಿರುವಲ್ಲಿ, ಕೇವಲ ಸಂಬಂಧಪಟ್ಟ ಚಂದಾ ಸ್ಲಿಪ್‌ಗಳ ಒಂದು ಪ್ರತಿಯನ್ನು ಕಳುಹಿಸಿರಿ. ಇದರೊಂದಿಗೆ, ಚಂದಾ(ಗಳನ್ನು)ವನ್ನು ಲೆಕ್ಕಕ್ಕೆ ಸೇರಿಸಲಾಗಿದೆ ಆದರೆ ಅವು ಬರುತ್ತಿಲ್ಲವೆಂಬುದನ್ನು ವಿವರಿಸುವ ಒಂದು ವಿವರಣಾ ಪತ್ರವನ್ನು ಕಳುಹಿಸಿರಿ. ಒಂದು ಸ್ಟೇಟ್‌ಮೆಂಟ್‌ನಲ್ಲಿ ಈಗಾಗಲೇ ಲೆಕ್ಕಕ್ಕೆ ಸೇರಿಸಲಾಗಿರುವ ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ (M-AB-203) ಫಾರ್ಮ್‌ನ ಪ್ರತಿಗಳನ್ನು ದಯವಿಟ್ಟು ಕಳುಹಿಸಬೇಡಿರಿ.

8 ಸ್ಥಳಿಕ ಅಂಚೆ ಅಧಿಕಾರಿಗಳೊಂದಿಗೆ ಒಂದು ಒಳ್ಳೆಯ ಸಂಬಂಧವು, ಪತ್ರಿಕೆಗಳ ಸರಿಯಾದ ಬಟವಾಡೆಯಲ್ಲಿ ಒಂದು ಅತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅವರಿಗೆ ನಮ್ಮ ಹೆಚ್ಚು ಉತ್ತಮ ಪರಿಚಯವಾಗುವುದು, ನಮ್ಮ ಕುರಿತಾಗಿ ಮತ್ತು ನಮ್ಮ ಪತ್ರಿಕೆಗಳ ಕುರಿತಾಗಿ ಅವರಿಗಿರಬಹುದಾದ ಯಾವುದೇ ಪೂರ್ವಾಗ್ರಹವನ್ನು ತೆಗೆದುಹಾಕಸಾಧ್ಯವಿದೆ. ಅವರು ನಮ್ಮ ಪರವಾಗಿ ಸಲ್ಲಿಸುವ ಅತ್ಯಾವಶ್ಯಕ ಸೇವೆಗಾಗಿ ಗಣ್ಯತೆಯ ಅಭಿವ್ಯಕ್ತಿಗಳು ಉತ್ತಮ ಫಲಿತಾಂಶಗಳನ್ನು ತರಬಲ್ಲವು. (ನ್ಯಾಯಾ. 8:1-3) ಸಭೆಯಲ್ಲಿನ ಅನುಭವಿ ಸಹೋದರರು (ಮತ್ತು ಸಹೋದರಿಯರು), ಆಗಾಗ್ಗೆ ಸ್ಥಳಿಕ ಅಂಚೆ ಅಧಿಕಾರಿಗಳಿಗೆ ಸ್ನೇಹಮಯ ಭೇಟಿಗಳನ್ನು ಮಾಡುವಂತೆ ಏರ್ಪಡಿಸುವುದು ಒಳ್ಳೆಯದು. ಅಂಚೆಯವರ ಮತ್ತು ಇತರ ಅಧಿಕಾರಿಗಳ ಮನೆಗಳಲ್ಲಿ ಸ್ನೇಹಮಯ ಚರ್ಚೆಗಳನ್ನು ನಡಿಸುವುದು, ಅವರೊಂದಿಗೆ ಒಳ್ಳೆಯ ಸಂಬಂಧಗಳನ್ನು ಕಟ್ಟಲು ಸಹಾಯ ಮಾಡಸಾಧ್ಯವಿದೆ. ಸಹಕಾರಿಗಳಾಗಿರುವುದು, ಆಯ್ದ ಅಂಚೆ ಕಛೇರಿಗಳಿಗೆ ಕೊಡುಗೆ ಚಂದಾಗಳನ್ನು ನೀಡುವುದು ಮತ್ತು ಬಕ್ಷೀಸುಗಳನ್ನು ಕೊಡುವುದು, ಸಂಬಂಧಗಳನ್ನು ಉತ್ತಮಗೊಳಿಸಲಿಕ್ಕೋಸ್ಕರ ನೀವು ಮಾಡುವಂತೆ ಪರಿಗಣಿಸಸಾಧ್ಯವಿರುವ ಇತರ ಸಂಗತಿಗಳಾಗಿವೆ.

9 ಎಂದೂ ವಾದಶೀಲರಾಗಿರಬೇಡಿರಿ. ನಿಮ್ಮ ಅಂಚೆಯವನು ನಿಮ್ಮ ಟಪಾಲನ್ನು ಸರಿಯಾದ ಸಮಯದಲ್ಲಿ ತಲಪಿಸಲು ತಪ್ಪುವುದಾದರೂ, ಅವನಿಗೆ ಅನೇಕ ಸಮಸ್ಯೆಗಳನ್ನು ಮತ್ತು ಅನನುಕೂಲತೆಗಳನ್ನು ಎದುರಿಸಲಿಕ್ಕಿವೆಯೆಂಬುದನ್ನು ಅರಿಯುತ್ತಾ, ಅವನ ಕಡೆಗೆ ದಯಾಪರ ಪ್ರವೃತ್ತಿಯುಳ್ಳವರಾಗಿರಿ. (ಯಾಕೋ. 3:13) ನಿಮ್ಮ ಟಪಾಲನ್ನು—ವಿಶೇಷವಾಗಿ ಭಾರವಾದ ವಸ್ತುಗಳು ಇರುವಾಗ—ವಿಲೇವಾರಿ ಮಾಡುವುದರಲ್ಲಿ ಸ್ಥಳಿಕ ಅಂಚೆ ಕಛೇರಿಯೊಂದಿಗೆ ಸಹಕರಿಸಿರಿ. ಅಂತಹ ವಿದ್ಯಮಾನಗಳಲ್ಲಿ, ಅಂಚೆಯವನು ನಿಮ್ಮ ಟಪಾಲನ್ನು—ವಿಶೇಷವಾಗಿ ಪತ್ರಿಕೆಗಳ ಕಟ್ಟುಗಳನ್ನು—ನಿಮ್ಮ ಮನೆಬಾಗಿಲಿಗೆ ತಲಪಿಸುವಂತೆ ನಿರೀಕ್ಷಿಸುವ ಬದಲಿಗೆ, ಯಾರಾದರೊಬ್ಬರು ಅಂಚೆ ಕಛೇರಿಯಿಂದ ಅವುಗಳನ್ನು ಕ್ರಮವಾಗಿ ತೆಗೆದುಕೊಂಡು ಬರುವಂತೆ ನೀವು ಏರ್ಪಡಿಸಲು ಸಾಧ್ಯವಿರುವುದಾದರೆ ಹೆಚ್ಚು ಉತ್ತಮವಾಗಿರಬಹುದು. ಆದರೆ, ನಿಮ್ಮ ಟಪಾಲಿನ ಆಗಮನದ ಕುರಿತಾಗಿ ನಿಮಗೆ ತಿಳಿಸುವಂತೆ ನೀವು ಅಂಚೆಯವನಿಗೆ ವಿನಂತಿಸಿಕೊಳ್ಳಬಹುದು.

10 ಅಂಚೆ ಅಧಿಕಾರಿಗಳನ್ನು ಸೇರಿಸಿ, ಸಾರ್ವಜನಿಕ ಸೇವಕರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಾವು ಜಾಗರೂಕರೂ ಜಾಣ್ಮೆಯುಳ್ಳವರೂ ಆಗಿರುವಂತೆ ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ. (ಮತ್ತಾ. 10:16) ಚಂದಾಗಳಿಗೆ ಏನು ಆಗುತ್ತದೊ ಅದು, ಸ್ಥಳಿಕ ಸಭೆಯ ಹಾಗೂ ಸೊಸೈಟಿಯ ಖ್ಯಾತಿ ಮತ್ತು ಹೆಚ್ಚು ಪ್ರಾಮುಖ್ಯವಾಗಿ ದೇವರ ಹೆಸರಿನ ಮೇಲೆ ಪ್ರಭಾವವನ್ನು ಬೀರುತ್ತದೆ. (1 ಸಮು. 16:7ಬಿ) ಆದುದರಿಂದ, ಹೆಚ್ಚು ಉತ್ತಮವಾದ ಅಂಚೆ ಸೇವಾಸೌಲಭ್ಯವನ್ನು ಪಡೆಯಲಾಗುವಂತೆ ನೀವು ಸ್ಥಳಿಕವಾಗಿ ಏನನ್ನು ಮಾಡಸಾಧ್ಯವಿದೆಯೆಂಬುದರ ಕುರಿತಾಗಿ ಆಲೋಚಿಸುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ನೀವು ಸೊಸೈಟಿಯ ನಿರ್ದೇಶನಗಳನ್ನು ಪಾಲಿಸಿದಂತೆ ಮತ್ತು ಸ್ಥಳಿಕ ಅಂಚೆ ಅಧಿಕಾರಿಗಳೊಂದಿಗೆ ಸಹಕರಿಸಿದಂತೆ ನಿಮಗಾಗಿ ಒಳ್ಳೆಯ ಸೇವಾಸೌಲಭ್ಯವನ್ನು ಖಾತ್ರಿಪಡಿಸಿಕೊಳ್ಳುವಿರೆಂಬ ಭರವಸೆ ನಮಗಿದೆ.

[ಪುಟ 6ರಲ್ಲಿರುವಚೌಕ]

ಹೆಚ್ಚು ಉತ್ತಮವಾದ ಸೇವಾಸೌಲಭ್ಯವನ್ನು ಖಾತ್ರಿಪಡಿಸಿಕೊಳ್ಳಲು ನೀವು ಮಾಡಬಲ್ಲ ವಿಷಯ

(ಎ) ಚಂದಾ ಸ್ಲಿಪ್‌ಗಳನ್ನು ತುಂಬಿಸುವಾಗ, ಅವಶ್ಯವಿರುವ ಎಲ್ಲಾ ಮಾಹಿತಿಯು, ನಿಷ್ಕೃಷ್ಟವಾಗಿದೆ, ಸ್ಪಷ್ಟವಾಗಿ ಬರೆಯಲ್ಪಟ್ಟಿದೆ ಮತ್ತು ಸರಿಯಾದ ಅನುಕ್ರಮದಲ್ಲಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿರಿ. ವಿಳಾಸದಲ್ಲಿನ ಮಾಹಿತಿಯ ಪ್ರತಿಯೊಂದು ಭಾಗವನ್ನು ಪ್ರತ್ಯೇಕಿಸಲು ಅಲ್ಪವಿರಾಮಗಳನ್ನು ಉಪಯೋಗಿಸಿರಿ. ನೀವೇನನ್ನು ತುಂಬಿಸಿದ್ದೀರೊ ಅದನ್ನು ಚಂದಾದಾರನು ಪರೀಕ್ಷಿಸುವಂತೆ ಅವನನ್ನು ಕೇಳಿಕೊಳ್ಳುವುದು ವಿವೇಕಯುತ.

(ಬಿ) ಚಂದಾದಾರನ ಹೆಸರಿನ ಮುಂಚೆ ಶ್ರೀ., ಶ್ರೀಮತಿ, ಕು., ಅಥವಾ ಡಾ., ಮುಂತಾದ ಒಕ್ಕಣೆಯ ಪದಗಳು ಬರಬಹುದು, ಆದರೆ ಸಾಮಾನ್ಯವಾಗಿ ಒಂದು ಅಂತ್ಯಪ್ರತ್ಯಯದ ಆವಶ್ಯಕತೆಯಿಲ್ಲ.

(ಸಿ) ಅಂಚೆ ಕಛೇರಿ ಮತ್ತು ನಗರದ ಹೆಸರು—ರಾಜಧಾನಿ ನಗರಗಳದ್ದೂ—ಪೂರ್ಣವಾಗಿ ಬರೆಯಲ್ಪಡತಕ್ಕದ್ದು, ಸಂಕ್ಷಿಪ್ತನಾಮಗಳನ್ನು ಬಳಸಬೇಡಿರಿ. ಪಿನ್‌ ಕೋಡ್‌ ಏನೆಂದು ನಿಮಗೆ ಗೊತ್ತಿರದಿರುವಲ್ಲಿ, ಅದಕ್ಕಾಗಿ ಕೊಡಲ್ಪಟ್ಟಿರುವ ಜಾಗದಲ್ಲಿ ಒಂದು ಗೆರೆಯನ್ನು ಎಳೆಯಿರಿ.

(ಡಿ) ತೋರಿಸಲ್ಪಡುವ ಸಭೆಯ ಅಂಕೆಯು, ಚಂದಾದಾರನು ಯಾವ ಸಭೆಯ ಟೆರಿಟೊರಿಯಲ್ಲಿ ವಾಸಿಸುತ್ತಿದ್ದಾನೊ ಆ ಸಭೆಯ ಅಂಕೆಯಾಗಿರತಕ್ಕದ್ದು. ಅವನು ನಿಮ್ಮ ಸಭೆಯ ಟೆರಿಟೊರಿಯ ಹೊರಗೆ ವಾಸಿಸುತ್ತಿರುವಲ್ಲಿ ಮತ್ತು ನಿಮಗೆ ಅವನು ಯಾವ ಸಭೆಯ ಟೆರಿಟೊರಿಯಲ್ಲಿದ್ದಾನೊ ಆ ಸಭೆಯ ಅಂಕೆಯು ಗೊತ್ತಿರದಿರುವಲ್ಲಿ, ಅದಕ್ಕಾಗಿ ಒದಗಿಸಲ್ಪಟ್ಟಿರುವ ಜಾಗದಲ್ಲಿ ದಯವಿಟ್ಟು ಒಂದು ಗೆರೆಯನ್ನು ಎಳೆಯಿರಿ.

(ಈ) ಕೊಡುಗೆ ಚಂದಾಗಳನ್ನು, ಸ್ಲಿಪ್‌ನ ಮೇಲೆ ಬಲಬದಿಯಲ್ಲಿರುವ ರೇಖಾಚೌಕದಲ್ಲಿ ಹಾಗೆಂದು ಗುರುತಿಸಬೇಕು. ಚಂದಾವನ್ನು ಪಡೆಯುತ್ತಿರುವ ವ್ಯಕ್ತಿಯ ಕುರಿತಾದ ಮಾಹಿತಿಗಾಗಿ ಒದಗಿಸಲ್ಪಟ್ಟಿರುವ ಜಾಗದಲ್ಲಿ, ಆ ಕೊಡುಗೆಯನ್ನು ಕೊಡುತ್ತಿರುವ ವ್ಯಕ್ತಿಯ ಹೆಸರು ಮತ್ತು ಸ್ಥಳವು ತೋರಿಸಲ್ಪಟ್ಟಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ.

(ಎಫ್‌) ಭಾಷೆಯನ್ನು—ಅವು ಇಂಗ್ಲಿಷ್‌ ಚಂದಾಗಳಾಗಿರುವುದಾದರೂ—ಪೂರ್ತಿಯಾಗಿ ಬರೆಯಬೇಕು. ಅಂಧ ಲಿಪಿ (ಬ್ರೇಲ್‌) ಚಂದಾಕ್ಕಾಗಿ, ಅದನ್ನು ಆ ಭಾಷೆಯೊಂದಿಗೇ ಬರೆಯಿರಿ. (ಉದಾಹರಣೆ: “ಬ್ರೇಲ್‌-ಇಂಗ್ಲಿಷ್‌.”) ಸದ್ಯದಲ್ಲಿ, ಅಂಧ ಲಿಪಿ ಪ್ರಕಾಶನಗಳು ಯಾವುದೇ ಭಾರತೀಯ ಭಾಷೆಯಲ್ಲಿ ಲಭ್ಯವಿಲ್ಲ.

(ಜಿ) ಒಂದು ಸ್ಥಳಿಕ ಚಂದಾದ ಕಾಲಾವಧಿಯು, ಕಡಿಮೆಯೆಂದರೆ 12 ಸಂಚಿಕೆಗಳು ಮತ್ತು ಹೆಚ್ಚೆಂದರೆ 5 ವರ್ಷಗಳದ್ದು ಆಗಿದೆ. ಆದರೆ ಯಾವುದೇ ಏರ್‌ ಮೇಲ್‌ ಚಂದಾವನ್ನು, ಒಂದು ವರ್ಷಕ್ಕಿಂತ ಹೆಚ್ಚು ಸಮಯಕ್ಕಾಗಿ ಮಾಡಬಾರದು.

(ಏಚ್‌) ನವೀಕರಣಗಳು: ನವೀಕರಣಗಳಿಗಾಗಿ ದಯವಿಟ್ಟು ಎಕ್ಸ್‌ಪೈರಿಂಗ್‌ ಸಬ್ಸ್‌ಕ್ರಿಪ್‌ಷನ್‌ ಸ್ಲಿಪ್‌ (M-91 ಮತ್ತು M-191)ಗಳನ್ನು ಉಪಯೋಗಿಸಿರಿ. ಅವು ಲಭ್ಯವಿರದಿರುವಲ್ಲಿ, ಒಂದು ರಿನ್ಯೂವಲ್‌ ಫಾರ್ಮ್‌ (M-5/M-105) ಅಥವಾ ಹೊಸ ಸ್ಲಿಪ್‌ಗಳನ್ನು ಉಪಯೋಗಿಸಿರಿ. ಆ ವಿದ್ಯಮಾನದಲ್ಲಿ, ಚಂದಾದಾರನು ಪಡೆದಿರುವ ಪತ್ರಿಕೆಗಳಲ್ಲಿ ಒಂದರ ಸುತ್ತುಹಾಳೆಯಿಂದ ತೆಗೆಯಲ್ಪಟ್ಟ ವಿಳಾಸದ ಲೇಬಲನ್ನು ನೀವು ಜೋಡಿಸಲು ಸಾಧ್ಯವಿರುವಲ್ಲಿ ಒಳ್ಳೇದಾಗಿರುವುದು.

(ಐ) ದೊಡ್ಡಕ್ಷರದ ಮುದ್ರಣವು ಕೆಲವೊಂದು ಭಾಷೆಗಳಲ್ಲಿ (ಭಾರತೀಯ ಭಾಷೆಗಳಲ್ಲಿಲ್ಲ) ಲಭ್ಯವಿದೆ. ಅದನ್ನು ಕಾವಲಿನಬುರುಜು ಪತ್ರಿಕೆಯ ಪುಟ 2ರಲ್ಲಿ ತೋರಿಸಲಾಗಿದೆ. ಅದರಲ್ಲಿ ಕೇವಲ ಅಭ್ಯಾಸದ ಲೇಖನಗಳು ಇರುತ್ತವೆ.

(ಜೆ) ದರಗಳು: ಸದ್ಯದ ಚಂದಾ ದರಗಳನ್ನು ಪತ್ರಿಕೆಗಳಲ್ಲಿ ತೋರಿಸಲಾಗಿದೆ. ಪಯನೀಯರ್‌ ದರಗಳನ್ನು ಮತ್ತು ಅಂಧ ಲಿಪಿ ಚಂದಾಗಳ ದರವನ್ನು—ಒಂದುವೇಳೆ ನಮ್ಮ ರಾಜ್ಯದ ಸೇವೆಯಲ್ಲಿನ ಒಂದು ಪ್ರಕಟನೆಯಲ್ಲಿ ಮುಂಚೆಯೇ ತಿಳಿಸಲ್ಪಟ್ಟಿಲ್ಲವಾದರೆ—ಇತ್ತೀಚಿನ ವಾಚ್‌ಟವರ್‌ ಪಬ್ಲಿಕೇಷನ್ಸ್‌ ಕಾಸ್ಟ್‌ ಲಿಸ್ಟ್‌ನಿಂದ ಪಡೆಯಸಾಧ್ಯವಿದೆ. ಸಬ್ಸ್‌ಕ್ರಿಪ್‌ಷನ್‌ ಸ್ಲಿಪ್‌ನಲ್ಲಿ ತೋರಿಸಲ್ಪಟ್ಟಿರುವ ಮೊತ್ತವು, ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ ಫಾರ್ಮ್‌ನಲ್ಲಿ ತೋರಿಸಲ್ಪಟ್ಟಿರುವ ಮೊತ್ತದೊಂದಿಗೆ ತಾಳೆಯಾಗುತ್ತದೆಂಬುದನ್ನು ಸೆಕ್ರಿಟರಿಯು ಖಚಿತಪಡಿಸಿಕೊಳ್ಳಬೇಕು.

(ಕೆ) ಅರಬೀಯದ ಕೊಲ್ಲಿ ದೇಶಗಳನ್ನು ಬಿಟ್ಟು, ಬೇರೆ ಯಾವುದೇ ಹೊರಗಿನ ದೇಶಕ್ಕೆ ಭಾರತದಿಂದ ಕಳುಹಿಸಲ್ಪಡುವ ಪತ್ರಿಕೆಗಳಿಗೆ ಸದ್ಯದ ಏರ್‌ ಮೇಲ್‌ ಚಂದಾ ದರವು, ಸಾಧಾರಣವಾದ ಚಂದಾ ದರಕ್ಕೆ ಕೂಡಿಸಿ ಪ್ರತಿಯೊಂದು ಟಪಾಲಿಗೆ ರೂ. 9.00 ಆಗಿದೆ. ಕೊಲ್ಲಿ ದೇಶಗಳಿಗಾಗಿರುವ ಎಲ್ಲಾ ಚಂದಾಗಳನ್ನು ಫಸ್ಟ್‌ ಕ್ಲಾಸ್‌ ಮೇಲ್‌ನಿಂದ ಕಳುಹಿಸಲಾಗುತ್ತದೆ ಮತ್ತು ಪ್ರತಿ ಟಪಾಲಿನ ಅಂಚೆ ವೆಚ್ಚವು ರೂ. 11.00 ಆಗಿದೆ. ಇತರ ದೇಶಗಳಲ್ಲಿ ಮುದ್ರಿಸಲ್ಪಡುವ ಪತ್ರಿಕೆಗಳ ಇತ್ತೀಚಿನ ಏರ್‌ ಮೇಲ್‌ ದರದ ಕುರಿತಾಗಿ ದಯವಿಟ್ಟು ಸೊಸೈಟಿಗೆ ಕೇಳಿನೋಡಿರಿ.

(ಎಲ್‌) ಪ್ರಚಾರಕರ ವೈಯಕ್ತಿಕ ಚಂದಾಗಳನ್ನು ಸೇರಿಸಿ, ಎಲ್ಲಾ ಚಂದಾಗಳನ್ನು, ಸ್ಥಳಿಕ ಸಭೆಯ ಮೂಲಕ ಕಳುಹಿಸಿರಿ. ತದ್ರೀತಿಯಲ್ಲಿ, ಸೊಸೈಟಿಯೊಂದಿಗೆ ಯಾವುದೇ ವಿಷಯವನ್ನು ವಿಚಾರಿಸಲು ಇರುವಲ್ಲಿ, ದಯವಿಟ್ಟು ಅದನ್ನು ಸಭೆಯ ಮೂಲಕ ಹಾಗೆ ಮಾಡಿರಿ. ಚಂದಾಗಳನ್ನು ಪಡೆದ ನಂತರ ನಡೆಯುವ ಮುಂದಿನ ಕೂಟದಲ್ಲಿ ಚಂದಾಗಳನ್ನು ನಿರ್ವಹಿಸಲು ನೇಮಿಸಲ್ಪಟ್ಟವನಿಗೆ ಎಲ್ಲಾ ಚಂದಾ ಸ್ಲಿಪ್‌ಗಳ ದ್ವಿಪ್ರತಿಗಳನ್ನು ಕೊಟ್ಟುಬಿಡಿರಿ. ಪ್ರತಿ ವಾರ ಸೆಕ್ರಿಟರಿಯು, ಪಡೆಯಲಾಗಿರುವ ಎಲ್ಲಾ ಚಂದಾಗಳನ್ನು—ಕೇವಲ ಒಂದಿದ್ದರೂ—ಸರಿಯಾಗಿ ತುಂಬಿಸಲಾಗಿರುವ ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ (M-AB-203) ಫಾರ್ಮ್‌ನೊಂದಿಗೆ ಸೊಸೈಟಿಗೆ ಅಂಚೆ ಮೂಲಕ ರವಾನಿಸಬೇಕು. ಮಾಸಿಕ ಹಣ ರವಾನೆಯೊಂದಿಗೆ ಕಳುಹಿಸಲಿಕ್ಕಾಗಿ ಯಾವುದೇ ಚಂದಾವನ್ನು ತಡೆದುಹಿಡಿಯಬಾರದು.

(ಎಮ್‌) ಚಂದಾದಾರರಿಗೆ ತಮ್ಮ ಪತ್ರಿಕೆಗಳು ಬರುತ್ತಿವೆಯೆಂಬುದನ್ನು ಖಚಿತಪಡಿಸಿಕೊಳ್ಳಲು ಅವರನ್ನು ಪುನಃ ಸಂದರ್ಶಿಸಿರಿ. ಚಂದಾ ಸ್ಲಿಪ್‌(ಗಳು) ಸೊಸೈಟಿಗೆ ತಲಪಿರುವ ಸಮಯದಿಂದ ಹಿಡಿದು, ಚಂದಾದಾರನು ಪತ್ರಿಕೆ(ಗಳ) ತನ್ನ ಪ್ರಥಮ ಪ್ರತಿಯನ್ನು ಪಡೆಯಲು ಸುಮಾರು ಆರು ವಾರಗಳು ತಗಲಸಾಧ್ಯವಿದೆ.

(ಎನ್‌) ಸ್ಲಿಪ್‌ಗಳು ಸೊಸೈಟಿಗೆ ಅಂಚೆ ಮೂಲಕ ಕಳುಹಿಸಲ್ಪಟ್ಟ ಎಂಟು ವಾರಗಳಿಗಿಂತಲೂ ಹೆಚ್ಚು ಸಮಯದ ನಂತರ ಬರದಿರುವಂತಹ ಚಂದಾಗಳ ಕುರಿತಾಗಿ ಸಭೆಯ ಮೂಲಕ ವರದಿಸತಕ್ಕದ್ದು. ಹಿಂದಿನ ಎರಡು ಮಾಸಿಕ ಸ್ಟೇಟ್‌ಮೆಂಟ್‌ಗಳಲ್ಲಿ ಲೆಕ್ಕಕ್ಕೆ ಸೇರಿಸಲ್ಪಟ್ಟಿರದಿದ್ದಲ್ಲಿ, ಆಗ ಸೆಕ್ರಿಟರಿಯು, ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ನ ಒಂದು ಪ್ರತಿಯನ್ನು ಹಾಗೂ ಎಲ್ಲಾ ಸಂಬಂಧಪಟ್ಟ ಚಂದಾ ಸ್ಲಿಪ್‌ಗಳ ನಕಲು ಪ್ರತಿಗಳನ್ನು, ಒಂದು ವಿವರಣಾ ಪತ್ರದೊಂದಿಗೆ ಪುನಃ ಅಂಚೆ ಮೂಲಕ ಕಳುಹಿಸಬೇಕು. ಒಂದು ಮಾಸಿಕ ಸ್ಟೇಟ್‌ಮೆಂಟ್‌ನಲ್ಲಿನ ಲೆಕ್ಕಕ್ಕೆ ಸೇರಿಸಲ್ಪಟ್ಟಿರುವಲ್ಲಿ, ಕೇವಲ ಸಂಬಂಧಿತ ಚಂದಾ ಸ್ಲಿಪ್‌ಗಳ ಒಂದು ಪ್ರತಿಯನ್ನು ಕಳುಹಿಸಿರಿ. ಅದರೊಂದಿಗೆ, ಆ ಚಂದಾಗಳನ್ನು ಲೆಕ್ಕಕ್ಕೆ ಸೇರಿಸಲಾಗಿದೆ ಆದರೆ ಅವು ಇನ್ನೂ ಬರುತ್ತಿಲ್ಲವೆಂದು ವಿವರಿಸುವ ಒಂದು ವಿವರಣಾ ಪತ್ರವನ್ನು ಕಳುಹಿಸಿರಿ. ಒಂದು ಸ್ಟೇಟ್‌ಮೆಂಟ್‌ನಲ್ಲಿ ಈಗಾಗಲೇ ಲೆಕ್ಕಕ್ಕೆ ಸೇರಿಸಲಾಗಿರುವ ವೀಕ್ಲಿ ಸಬ್ಸ್‌ಕ್ರಿಪ್‌ಷನ್ಸ್‌ ಫಾರ್ಮ್‌ಗಳ ಪ್ರತಿಗಳನ್ನು ದಯವಿಟ್ಟು ಕಳುಹಿಸಬೇಡಿರಿ.

(ಓ) ವಿಳಾಸದ ಬದಲಾವಣೆಗಳನ್ನು, ಸಾಧ್ಯವಿರುವಲ್ಲಿ ಆರು ವಾರಗಳ ಮುಂಚೆಯೇ, ಹೊಸ ಮತ್ತು ಹಳೆಯ ವಿಳಾಸಗಳೆರಡನ್ನೂ ಒದಗಿಸುತ್ತಾ, ಸಬ್ಸ್‌ಕ್ರಿಪ್‌ಷನ್‌ ಚೇಂಜ್‌ ಆಫ್‌ ಅಡ್ರೆಸ್‌ ಫಾರ್ಮ್‌ (M-205) ಅನ್ನು ಉಪಯೋಗಿಸುತ್ತಾ ವರದಿಸತಕ್ಕದ್ದು. ಸಾಧ್ಯವಿರುವಲ್ಲಿ, ಚಂದಾದಾರನ ಹಳೆಯ ವಿಳಾಸವನ್ನು ಸೂಚಿಸುವ ಒಂದು ವಿಳಾಸದ ಲೇಬಲನ್ನು ದಯವಿಟ್ಟು ಜೋಡಿಸಿರಿ. ಚಂದಾದಾರರು, ವಿಳಾಸದ ಬದಲಾವಣೆಯ ಕುರಿತಾಗಿ ಸ್ಥಳಿಕ ಅಂಚೆ ಅಧಿಕಾರಿಗಳಿಗೆ ತಿಳಿಸುವಂತೆ ಮತ್ತು/ಅಥವಾ ಆ ಬದಲಾವಣೆಯು ಕಾರ್ಯರೂಪಕ್ಕೆ ಬರುವ ತನಕ ಅವನು ತನ್ನ ಪತ್ರಿಕೆಗಳನ್ನು ಹಳೆಯ ವಿಳಾಸದಿಂದ ತೆಗೆದುಕೊಂಡು ಹೋಗುವಂತೆ ಕೇಳಿಕೊಳ್ಳಿರಿ.

(ಪಿ) “ಅನ್‌ಡಿಲಿವರೇಬಲ್‌ ಸಬ್ಸ್‌ಕ್ರಿಪ್‌ಷನ್‌ ಫಾಲೋ-ಅಪ್‌” ಸ್ಲಿಪ್‌ಗಳು, ಆ ಚಂದಾವನ್ನು ಪಡೆದವನು, ವಿಷಯಗಳನ್ನು ಸರಿಪಡಿಸಲಿಕ್ಕಾಗಿ ಚಂದಾದಾರನನ್ನು ಸಂದರ್ಶಿಸಲಾಗುವಂತೆ ಅವನಿಗೆ ಕೊಡಲ್ಪಡತಕ್ಕದ್ದು. ಸೊಸೈಟಿಯಿಂದ ಬರುವ ಆ ರೀತಿಯ ಯಾವುದೇ ವಿಚಾರಣೆಗಳನ್ನು ನಿರ್ವಹಿಸುವುದರಲ್ಲಿ ತಡಮಾಡಬೇಡಿರಿ.

(ಕ್ಯೂ) ಅಂಚೆ ಅಧಿಕಾರಿಗಳೊಂದಿಗೆ—ಅವರು ನಿಮ್ಮ ಟಪಾಲನ್ನು ಸರಿಯಾದ ಸಮಯದಲ್ಲಿ ತಲಪಿಸಲು ತಪ್ಪುವಾಗಲೂ—ದಯಾಪರರೂ, ಸಹಕಾರಿಗಳೂ ಆಗಿರಿ. ಇದು ಅವರನ್ನು ಒಂದು ಒಳ್ಳೆಯ ಮನಃಸ್ಥಿತಿಯಲ್ಲಿಡುವುದು ಮತ್ತು ಅವರಿಗಿರಬಹುದಾದ ಯಾವುದೇ ಪೂರ್ವಾಗ್ರಹವನ್ನು ತೆಗೆದುಹಾಕುವುದು.

ನೀವು ಈ ಸೂಚನೆಗಳನ್ನು ಜಾಗರೂಕತೆಯಿಂದ ಪಾಲಿಸಿದಂತೆ, ಚಂದಾಗಳ ನಿರ್ವಹಣೆಯನ್ನು ತಡಗೊಳಿಸುವಂತಹ ಸಮಸ್ಯೆಗಳಲ್ಲಿ ಹೆಚ್ಚಿನವು ತೆಗೆದುಹಾಕಲ್ಪಡುವವು ಎಂಬ ಭರವಸೆ ನಮಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ