ಯುವ ಜನರೇ—ನಿಮ್ಮ ಆತ್ಮಿಕ ಗುರಿಗಳು ಏನಾಗಿವೆ?
1 ಸಂತೋಷವನ್ನು ತರುವುದರಲ್ಲಿ, ಅರ್ಥಪೂರ್ಣ ಕೆಲಸ ಮತ್ತು ತಲಪಸಾಧ್ಯವಿರುವ ಗುರಿಗಳು ಎಷ್ಟು ಪ್ರಾಮುಖ್ಯವಾಗಿವೆಯೆಂಬುದು ಯೆಹೋವನಿಗೆ ತಿಳಿದಿದೆ. (ಆದಿಕಾಂಡ 1:28; 2:15, 19ನ್ನು ನೋಡಿರಿ.) ಇಂದು, ಯೆಹೋವನು ತನ್ನ ಜನರಿಗೆ ಸಾರುವ ಮತ್ತು ಕಲಿಸುವ ನೇಮಕವನ್ನು ಕೊಟ್ಟಿದ್ದಾನೆ. ಪ್ರಮೋದವನದಲ್ಲಿ ನಿತ್ಯಜೀವವನ್ನು ಪಡೆಯುವ ಕಟ್ಟಕಡೆಯ ಗುರಿಯೂ ನಮಗಿದೆ. ಅಷ್ಟರ ವರೆಗೆ, ನಮ್ಮ ಶಕ್ತಿಗಳನ್ನು ಮತ್ತು ಸಂಪನ್ಮೂಲಗಳನ್ನು ತಪ್ಪಾದ ಮಾರ್ಗದಲ್ಲಿ ವಿನಿಯೋಗಿಸುವುದರಿಂದ ನಾವು ದೂರವಿರಬೇಕಾದರೆ, ನಾವು ಪ್ರಗತಿಪರ ಆತ್ಮಿಕ ಗುರಿಗಳನ್ನು ಇಡುವ ಅಗತ್ಯವಿದೆ.—1 ಕೊರಿಂ. 9:26.
2 ಯುವ ಜನರಿಗಾಗಿ ವಾಸ್ತವಿಕ ಗುರಿಗಳು: ಯುವ ಜನರು, ತಮ್ಮ ವ್ಯಕ್ತಿಗತ ಸಾಮರ್ಥ್ಯಗಳಿಗನುಸಾರ ತಮ್ಮ ಕೈಗೆಟುಕುವಂತಹ ದೇವಪ್ರಭುತ್ವ ಗುರಿಗಳನ್ನಿಡತಕ್ಕದ್ದು. (1 ತಿಮೊ. 4:15) ತೀರ ಎಳೆಯರಾದ ಕೆಲವು ಮಕ್ಕಳು, ಓದಲು ಕಲಿಯುವ ಮುಂಚೆಯೇ ಬೈಬಲ್ ಪುಸ್ತಕಗಳನ್ನು ಬಾಯಿಪಾಠಮಾಡುವ ಗುರಿಯನ್ನು ಸಾಧಿಸಿದ್ದಾರೆ. ಕುಟುಂಬ ಅಭ್ಯಾಸದ ಮೂಲಕ ಮಕ್ಕಳು, ಅರ್ಥಪೂರ್ಣ ಉತ್ತರಗಳನ್ನು ಹೇಳುವ ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಮೂದಿಸಿಕೊಳ್ಳುವ ಗುರಿಗಳನ್ನು ತಲಪಸಾಧ್ಯವಾಗುವಂತೆ, ಕೂಟಗಳಿಗೆ ತಯಾರಿಸಲು ಕಲಿಯುತ್ತಾರೆ. ಮಕ್ಕಳು ತಮ್ಮ ಹೆತ್ತವರೊಂದಿಗೆ ಕ್ಷೇತ್ರ ಸೇವೆಯಲ್ಲಿ ಜೊತೆಗೂಡುವಾಗ, ಅವರು ಅಸ್ನಾನಿತ ಪ್ರಚಾರಕರಾಗುವ ಗುರಿಯ ಕಡೆಗೆ ಪ್ರಗತಿಮಾಡಿದಂತೆ, ಸಾಕ್ಷಿಯನ್ನು ಕೊಡುವುದರಲ್ಲಿ ಒಂದು ಪಾತ್ರವನ್ನು ವಹಿಸಲು ಕಲಿಯುತ್ತಾರೆ. ಹೆತ್ತವರು ತಮ್ಮ ಎಳೆಯ ಮಕ್ಕಳ ಮುಂದೆ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಗುರಿಯನ್ನು ಇಡಬೇಕು.
3 ನೀವು ಒಬ್ಬ ಹದಿವಯಸ್ಕರಾಗಿರುವಲ್ಲಿ, ನಿಮ್ಮ ಆತ್ಮಿಕ ಗುರಿಗಳಲ್ಲಿ ಏನು ಸೇರಿದೆ? ಜೀವಿತದಲ್ಲಿ ನಿಜವಾಗಿ ಪ್ರಾಮುಖ್ಯವಾಗಿರುವ ಗುರಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ, “ಈಗ ನಿಮ್ಮ ಮಹಾ ಸೃಷ್ಟಿಕರ್ತನನ್ನು ಜ್ಞಾಪಿಸಿಕೊಳ್ಳಿರಿ” (NW). (ಪ್ರಸಂ. 12:1; ಕೀರ್ತ. 71:17) ನಿಮಗೆ ಶಾಲೆಯಿಂದ ಬಿಡುವು ಇರುವ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಏಕೆ ಮಾಡಬಾರದು? ಒಬ್ಬ ಕ್ರಮದ ಪಯನೀಯರರೋಪಾದಿ ಶುಶ್ರೂಷೆಯನ್ನು ಪೂರ್ಣ ಸಮಯಕ್ಕಾಗಿ ಆರಂಭಿಸುವುದರ ಕುರಿತಾಗಿ ನೀವು ಯೋಚಿಸಿದ್ದೀರೊ? ನಿಮ್ಮ ಕ್ಷೇತ್ರದಲ್ಲಿ ಅಥವಾ ಬೇರೆಲ್ಲಿಯಾದರೂ ಇರುವ ವಿದೇಶಿ ಭಾಷಾ ಗುಂಪಿಗೆ ಅಥವಾ ಸಭೆಗೆ ನೆರವು ನೀಡಲು ಸಾಧ್ಯವಾಗುವಂತೆ ಒಂದು ಹೊಸ ಭಾಷೆಯನ್ನು ಕಲಿಯುವುದರ ಕುರಿತಾಗಿ ಏನು? ಈಗ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿರುವ ಅಥವಾ ಸಂಚರಣ ಮೇಲ್ವಿಚಾರಕರಾಗಿ ಇಲ್ಲವೆ ಮಿಷನೆರಿಗಳಾಗಿ ಸೇವೆಸಲ್ಲಿಸುತ್ತಿರುವವರಲ್ಲಿ ಅನೇಕರು, ಇನ್ನೂ ಶಾಲೆಯಲ್ಲಿ ಇರುವಾಗಲೇ ವಿಶೇಷ ಪೂರ್ಣ ಸಮಯದ ಸೇವೆಯನ್ನು ತಮ್ಮ ಗುರಿಯನ್ನಾಗಿ ಇಟ್ಟರು. ನೀವೂ ಅದನ್ನೇ ಏಕೆ ಮಾಡಬಾರದು?
4 ಎಳೆಯ ಪ್ರಾಯದಲ್ಲಿರುವಾಗಲೇ, ಯೇಸುವಿನ ಮಾದರಿಯನ್ನು ಅನುಕರಿಸಲು ಶ್ರಮಿಸಿರಿ. 12ರ ಎಳೆಯ ಪ್ರಾಯದಲ್ಲೂ, ಅವನು ಆತ್ಮಿಕ ವಿಷಯಗಳ ಕುರಿತು ಮುಕ್ತವಾಗಿ ಮಾತಾಡಿದನು. (ಲೂಕ 2:42-49, 52) ವೈಯಕ್ತಿಕ ಅಧ್ಯಯನವನ್ನು ಮಾಡಲು, ಬೈಬಲನ್ನು ದಿನನಿತ್ಯವೂ ಓದಲು, ಮತ್ತು ಕೂಟಗಳಲ್ಲಿ ಹಾಗೂ ಸೇವೆಯಲ್ಲಿ ಪ್ರೌಢ ಕ್ರೈಸ್ತರೊಂದಿಗೆ ಕ್ರಮವಾಗಿ ಸಹವಾಸಿಸಲು ನಿಮಗಾಗಿಯೇ ಉಪಯುಕ್ತ ಗುರಿಗಳನ್ನು ಇಡುವುದು, ಯೇಸು ಮಾಡಿದಂತೆ ದೇವರ ರಾಜ್ಯದ ಕುರಿತಾಗಿ ಇತರರಿಗೆ ಕಲಿಸಲು ಬೇಕಾದ ಕೌಶಲವನ್ನು ಪಡೆದುಕೊಳ್ಳಲು ನಿಮಗೆ ಸಹಾಯ ಮಾಡುವುದು.