ರಾಜ್ಯ ವಾರ್ತೆ ನಂ. 35ಕ್ಕೆ ವ್ಯಾಪಕ ವಿತರಣೆಯನ್ನು ನೀಡಿರಿ
1 ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳು ನಮಗೆಲ್ಲರಿಗೂ ಕಾರ್ಯಮಗ್ನ ತಿಂಗಳುಗಳಾಗಿರುವುವು. ಅಕ್ಟೋಬರ್ ತಿಂಗಳಿನ ಪ್ರಥಮ 11 ದಿವಸಗಳ ಅವಧಿಯಲ್ಲಿ, ನಾವು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಿಗೆ ಚಂದಾಗಳನ್ನು ನೀಡಲಿರುವೆವು. ಅನಂತರ ಅಕ್ಟೋಬರ್ 12ರ ಆದಿತ್ಯವಾರದಿಂದ, ನವೆಂಬರ್ 16ರ ಆದಿತ್ಯವಾರದ ವರೆಗೆ ನಾವು ರಾಜ್ಯ ವಾರ್ತೆ ನಂ. 35ರ ಲೋಕವ್ಯಾಪಕ ವಿತರಣೆಯಲ್ಲಿ ಜೊತೆಗೂಡುವೆವು. ನಾವಿರುವ ಸ್ಥಳದಲ್ಲಿ ವಾಸಿಸುವ ಜನರೆಲ್ಲರಿಗೆ ಪ್ರಾಮುಖ್ಯವಾದೊಂದು ಸಂದೇಶವನ್ನು ಕೊಂಡೊಯ್ಯುವುದು ನಮ್ಮ ಸುಯೋಗವಾಗಿರುವುದು. ಇದು “ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಎಂಬ ಪ್ರಶ್ನೆಗೆ ಉತ್ತರವಾಗಿದೆ. ಈ ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ, ನಾವು ರಾಜ್ಯ ವಾರ್ತೆ ನಂ. 35ನ್ನು ವಾರದದಿನಗಳಲ್ಲಿ ವಿತರಿಸುವೆವು. ವಾರಾಂತ್ಯಗಳಲ್ಲಿ, ರಾಜ್ಯ ವಾರ್ತೆಯ ನೀಡುವಿಕೆಗೆ ಕೂಡಿಕೆಯಾಗಿ, ನಾವು ಪತ್ರಿಕೆಗಳ ಪ್ರಸ್ತುತ ಸಂಚಿಕೆಗಳನ್ನು ನೀಡಿ, ಚಂದಾಗಳನ್ನು ಮಾಡುವಂತೆ ಕೇಳುವೆವು.
2 ಯಾರು ಪಾಲ್ಗೊಳ್ಳಬಹುದು? ಎಂದಿನಂತೆ ಹಿರಿಯರು ಕಾರ್ಯದ ಮುಂಭಾಗದಲ್ಲಿರುವರು. ಪ್ರತಿಯೊಬ್ಬರೂ ರಾಜ್ಯ ವಾರ್ತೆಯನ್ನು ವಿತರಿಸುವುದರಲ್ಲಿ ಆನಂದಿಸುತ್ತಾರೆ ಹಾಗೂ ಆ ಕಾರ್ಯಾಚರಣೆಯ ಒಂದು ಅಥವಾ ಎರಡೂ ತಿಂಗಳುಗಳ ಅವಧಿಯಲ್ಲಿ ಅತ್ಯಧಿಕ ಪ್ರಚಾರಕರು ಆಕ್ಸಿಲಿಯರಿ ಪಯನೀಯರರಾಗಿ ಹೆಸರನ್ನು ನಮೂದಿಸಿಕೊಳ್ಳುವರು ಎಂಬುದರಲ್ಲಿ ಸಂದೇಹವಿಲ್ಲ. ಇತರ ಪ್ರಚಾರಕರು ಸಾಮಾನ್ಯವಾಗಿ ಶುಶ್ರೂಷೆಯಲ್ಲಿ ವ್ಯಯಿಸುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ವ್ಯಯಿಸಲು ಬಯಸುವರು.
3 ಜ್ಞಾನ ಪುಸ್ತಕದ ತನ್ನ ಅಭ್ಯಾಸದಲ್ಲಿ ಒಳ್ಳೆಯ ಪ್ರಗತಿಯನ್ನು ಮಾಡಿರುವ ಹಾಗೂ ಕ್ಷೇತ್ರ ಸೇವೆಯಲ್ಲಿ ಒಳಗೂಡಲು ಶೀಘ್ರದಲ್ಲಿಯೇ ಅರ್ಹನಾಗುವ ಒಬ್ಬ ಬೈಬಲ್ ವಿದ್ಯಾರ್ಥಿಯು ನಿಮಗಿದ್ದಾನೋ? ಪ್ರಾಯಶಃ ಅವನು ರಾಜ್ಯ ವಾರ್ತೆ ಕಾರ್ಯಾಚರಣೆಯಲ್ಲಿ ಒಳಗೂಡಲಿಕ್ಕಾಗಿ ಸಾಕಷ್ಟು ಬೇಗನೇ ಒಬ್ಬ ಅಸ್ನಾನಿತ ಪ್ರಚಾರಕನಾಗಸಾಧ್ಯವಿದೆ. ಆ ಕಿರುಹೊತ್ತಗೆಯನ್ನು ಪ್ರಸ್ತುತಪಡಿಸಲು ಒಂದು ಸರಳ ನಿರೂಪಣೆಯು ತಾನೇ ಅಗತ್ಯವಾಗಿರುತ್ತದೆ. ಉದಾಹರಣೆಗೆ, ಒಬ್ಬನು ಹೀಗೆ ಹೇಳಬಹುದು: “ಈ ಸಂದೇಶವು ಎಷ್ಟೊಂದು ಪ್ರಾಮುಖ್ಯವಾಗಿದೆಯೆಂದರೆ, ಇದು ಈ ತಿಂಗಳು 169 ಭಾಷೆಗಳಲ್ಲಿ ಲೋಕವ್ಯಾಪಕವಾಗಿ ವಿತರಿಸಲ್ಪಡುತ್ತಿದೆ. ನೀವು ನಿಮ್ಮ ವೈಯಕ್ತಿಕ ಪ್ರತಿಯನ್ನು ಪಡೆದುಕೊಳ್ಳುವಂತೆ ನಾನು ಇಚ್ಛಿಸುತ್ತೇನೆ.” ಈ ಚೋದಕ ಕಾರ್ಯದಲ್ಲಿ ಎಳೆಯ ಮಕ್ಕಳೂ ಒಂದು ಅರ್ಥಭರಿತ ಪಾಲನ್ನು ಪಡೆದುಕೊಳ್ಳಸಾಧ್ಯವಿದೆ.
4 ರಾಜ್ಯ ವಾರ್ತೆ ನಂ. 35ರ ವಿತರಣೆಯಲ್ಲಿ ತಮ್ಮ ಗುಂಪಿನ ಪ್ರತಿಯೊಬ್ಬ ಸದಸ್ಯನು ಒಂದು ಸಂಪೂರ್ಣ ಪಾಲನ್ನು ಹೊಂದಿರುವಂತೆ ಪುಸ್ತಕ ಅಭ್ಯಾಸ ಚಾಲಕರು ಉತ್ತೇಜಿಸಬೇಕು. ಅಕ್ರಿಯರಾಗಿ ಪರಿಣಮಿಸಿರುವ ಆದರೆ ಬೇಕಾಗಿರುವ ಉತ್ತೇಜನವನ್ನು ಪಡೆದುಕೊಳ್ಳುವಲ್ಲಿ ಕ್ಷೇತ್ರ ಸೇವೆಯಲ್ಲಿ ಪುನಃ ಕ್ರಿಯಾಶೀಲರಾಗಬಹುದಾದ ಪ್ರಚಾರಕರೂ ಇರಬಹುದು. ಶುಶ್ರೂಷೆಯ ಈ ವೈಶಿಷ್ಟ್ಯದಲ್ಲಿ ಅನುಭವಸ್ಥ ಪ್ರಚಾರಕರನ್ನು ಜೊತೆಗೂಡುವಂತೆ ಇವರಿಗೆ ಸಹಾಯನೀಡಲು ಏನು ಮಾಡಸಾಧ್ಯವಿದೆ ಎಂಬುದನ್ನು ನೋಡಲಿಕ್ಕಾಗಿ, ಕಾರ್ಯಾಚರಣೆಯ ಮುಂಚೆಯೇ ಹಿರಿಯರು ಇವರಲ್ಲಿ ಪ್ರತಿಯೊಬ್ಬರನ್ನು ಭೇಟಿಮಾಡತಕ್ಕದ್ದು.
5 ನಾವು ಯಾವಾಗ ಕ್ಷೇತ್ರ ಸೇವೆಗಾಗಿ ಒಟ್ಟುಗೂಡಬಹುದು? ಈ ಎಲ್ಲ ಚಟುವಟಿಕೆಯು ಅನುಕೂಲಕರವೂ ಪ್ರಾಯೋಗಿಕವೂ ಆದ ಗುಂಪು ಸಾಕ್ಷಿಕಾರ್ಯ ಏರ್ಪಾಡುಗಳಿಗೆ ಕರೆಕೊಡುವುದು. ಸಾಧ್ಯವಿರುವಲ್ಲೆಲ್ಲ, ಪ್ರತಿಯೊಂದು ವಾರದದಿನಕ್ಕೆ, ವಾರಾಂತ್ಯಗಳಂದು ಹಾಗೂ ಸಂಜೆಗಳಲ್ಲಿ ಕ್ಷೇತ್ರ ಸೇವೆಗಾಗಿ ಕೂಟಗಳು ಸಂಘಟಿಸಲ್ಪಡಬೇಕು. ಪ್ರಚಾರಕರು ಹಾಗೂ ಪಯನೀಯರರು ಸಾಕ್ಷಿಕಾರ್ಯದ ಅವಧಿಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಶಕ್ತರನ್ನಾಗಿ ಮಾಡುವ ಸಮಯಗಳಲ್ಲಿ ಅವು ನಡೆಸಲ್ಪಡಬೇಕು. ಶಾಲಾ ವಿದ್ಯಾರ್ಥಿಗಳ, ಪಾಳಿ ಕೆಲಸಗಾರರ ಹಾಗೂ ಇತರರ ಪ್ರಯೋಜನಕ್ಕಾಗಿ ಮುಸ್ಸಂಜೆಗಳಲ್ಲಿ ಒಟ್ಟುಗೂಡಲಿಕ್ಕೆ ಸಹ ಏರ್ಪಾಡುಗಳನ್ನು ಮಾಡಬಹುದು. ಕಾರ್ಯದಲ್ಲಿ ಪ್ರತಿಯೊಬ್ಬರೂ ಸಂಪೂರ್ಣ ಪಾಲನ್ನು ತೆಗೆದುಕೊಳ್ಳಸಾಧ್ಯವಾಗುವಂತೆ, ಸಾಕಷ್ಟು ಮನೆಮನೆಯ ಹಾಗೂ ವ್ಯಾಪಾರ ಟೆರಿಟೊರಿಯಿದೆ ಎಂಬುದನ್ನು ಸೇವಾ ಮೇಲ್ವಿಚಾರಕನು ಖಚಿತಪಡಿಸಿಕೊಳ್ಳಬೇಕು. ಕ್ಷೇತ್ರವೊಂದರಲ್ಲಿ ಅನೇಕ ಪ್ರಚಾರಕರಿರುವಲ್ಲಿ, ಕೊಡಲ್ಪಟ್ಟ ಟೆರಿಟೊರಿಯ ವಿಭಾಗದಲ್ಲಿ ಎಷ್ಟು ಜನರು ಕೆಲಸಮಾಡಬೇಕು ಎಂಬುದರ ಕುರಿತಾಗಿ ಅವರು ವಿವೇಚನೆಯುಳ್ಳವರಾಗಿರಬೇಕು.
6 ಮನೆಗಳಲ್ಲಿರದವರ ಕುರಿತಾಗಿ ಏನು? ರಾಜ್ಯ ವಾರ್ತೆ ನಂ. 35ನ್ನು ಅವರು ಏಕೆ ಓದಬೇಕೆಂಬುದನ್ನು ವಿವರಿಸಲು ಸಾಧ್ಯವಾದಷ್ಟು ಹೆಚ್ಚು ಮನೆಯವರ ಹತ್ತಿರ ನಾವು ವೈಯಕ್ತಿಕವಾಗಿ ಮಾತಾಡಲು ಬಯಸುತ್ತೇವೆ. ಆದುದರಿಂದ ನೀವು ಸಂದರ್ಶಿಸುವಾಗ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ, ವಿಳಾಸವನ್ನು ಬರೆದುಕೊಂಡು, ದಿನದ ಬೇರೆ ಸಮಯದಲ್ಲಿ ಪುನಃ ಸಂದರ್ಶಿಸಿರಿ. ಕಾರ್ಯಾಚರಣೆಯ ಕೊನೆಯ ವಾರದ ಸಮಯದಷ್ಟಕ್ಕೆ ಈ ಮನೆಯವರನ್ನು ಸಂಪರ್ಕಿಸಲು ನಿಮ್ಮ ಪ್ರಯತ್ನಗಳು ಇನ್ನೂ ಅಸಫಲವಾಗಿರುವಲ್ಲಿ, ಹಾದುಹೋಗುವವರ ಕಣ್ಣಿಗೆ ಕಾಣಿಸದ ಸ್ಥಳದಲ್ಲಿ ಬಾಗಿಲ ಹತ್ತಿರ ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ನೀವು ಬಿಟ್ಟುಬರಬಹುದು. ನಿವಾಸಸ್ಥಾನಗಳಲ್ಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬಹುದಾದ ವ್ಯಕ್ತಿಗಳಿಗೆ ರಾಜ್ಯ ವಾರ್ತೆಯನ್ನು ಕೊಡಲು ಎಚ್ಚರವಾಗಿರ್ರಿ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕಾರ್ಯಾಚರಣೆಯ ಅವಧಿಯಲ್ಲಿ ಆವರಿಸಲ್ಪಡಸಾಧ್ಯವಿರುವ ಟೆರಿಟೊರಿಗಿಂತ ಹೆಚ್ಚಿನ ಟೆರಿಟೊರಿಯಲ್ಲಿ ಕೆಲಸಮಾಡುತ್ತಿರುವಾಗ, ಪ್ರಥಮ ಸಂದರ್ಶನದಲ್ಲಿಯೇ ಮನೆಯಲ್ಲಿರದವರ ಸ್ಥಳದಲ್ಲಿ ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ಬಿಟ್ಟುಬರಬಹುದು.
7 ನಮ್ಮ ಹೇತುವೇನು? ನವೆಂಬರ್ 16ರಂದು ಕಾರ್ಯಾಚರಣೆಯು ಅಂತ್ಯಗೊಳ್ಳುವ ಮುಂಚೆ ಸಭೆಗಳು ತಮ್ಮ ಎಲ್ಲ ಟೆರಿಟೊರಿಯನ್ನು ಆವರಿಸಲಿಕ್ಕಾಗಿ ರಾಜ್ಯ ವಾರ್ತೆಯ ಇಡೀ ಸರಬರಾಯಿಯನ್ನು ಉಪಯೋಗಿಸಿಕೊಳ್ಳಲು ಶ್ರಮಿಸಬೇಕು. ನಿಮ್ಮ ಸಭಾ ಟೆರಿಟೊರಿ ನೇಮಕವು ತೀರ ದೊಡ್ಡದ್ದಾಗಿರುವಲ್ಲಿ ಹಾಗೂ ಒಬ್ಬ ಸಹಭಾಗಿಯೊಂದಿಗೆ ಕೆಲಸಮಾಡುವುದಕ್ಕಿಂತಲೂ ನೀವೊಬ್ಬರೇ ಕೆಲಸಮಾಡುವುದು ಸುರಕ್ಷಿತವಾಗಿರುವಲ್ಲಿ, ಹಾಗೇ ಮಾಡುವುದು ಪ್ರಾಯೋಗಿಕವೆಂದು ನೀವು ಕಂಡುಕೊಳ್ಳಬಹುದು. ಇದು ಸುವಾರ್ತೆಯೊಂದಿಗೆ ಆದಷ್ಟು ಹೆಚ್ಚು ಅರ್ಹರನ್ನು ತಲಪಲಿಕ್ಕೆ ನಿಮ್ಮನ್ನು ಶಕ್ತರನ್ನಾಗಿ ಮಾಡುವುದು. (ಮತ್ತಾ. 10:11) ಬ್ರೀಫ್ಕೇಸನ್ನು ಉಪಯೋಗಿಸುವುದಕ್ಕಿಂತ ಕೆಲವೊಂದು ಕಿರುಹೊತ್ತಗೆಗಳನ್ನು ಕೈಯಲ್ಲಿ ಹಾಗೂ ಬೈಬಲನ್ನು ನಿಮ್ಮ ಪಾಕೆಟ್ ಅಥವಾ ಪರ್ಸಿನಲ್ಲಿ ಇಟ್ಟುಕೊಳ್ಳುವುದು ಪ್ರಯೋಜನಕಾರಿಯಾಗಿರಬಹುದು. ಆಸಕ್ತಿಯನ್ನು ತೋರಿಸುವವರ ಬಗ್ಗೆ ಒಂದು ಒಳ್ಳೆಯ ರೆಕಾರ್ಡನ್ನು ಇಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿರಿ.
8 ನೀವು ಪ್ರಾರಂಭಿಸಲು ಸಿದ್ಧರಾಗಿದ್ದೀರೋ? ಸಭೆಗೆ ಎಷ್ಟು ಹೆಚ್ಚಿನ ಪತ್ರಿಕೆಗಳು ಅಗತ್ಯವಿರುವುದು ಎಂಬುದನ್ನು ಹಿರಿಯರು ಮೊದಲೇ ತಿಳಿದುಕೊಳ್ಳಬೇಕು ಹಾಗೂ ಅದಕ್ಕನುಸಾರ ಆರ್ಡರ್ ಮಾಡಬೇಕು. ಪ್ರತಿಯೊಂದು ಸಭೆಗೆ ಸರಕು ರವಾನಿಸಲ್ಪಡುತ್ತಿರುವ ಕಾರಣ ರಾಜ್ಯ ವಾರ್ತೆ ನಂ. 35ನ್ನು ಆರ್ಡರ್ ಮಾಡುವ ಅಗತ್ಯವಿಲ್ಲ. ವಿಶೇಷ, ಕ್ರಮದ, ಹಾಗೂ ಆಕ್ಸಿಲಿಯರಿ ಪಯನೀಯರರಿಗೆ ವಿತರಿಸಲಿಕ್ಕಾಗಿ ಪ್ರತಿಯೊಬ್ಬರಿಗೆ 200 ಪ್ರತಿಗಳು ಹಾಗೂ ಸಭಾ ಪ್ರಚಾರಕರಿಗೆ ಪ್ರತಿಯೊಬ್ಬರಿಗೆ 40 ಪ್ರತಿಗಳು ಗೊತ್ತುಪಡಿಸಲ್ಪಡುವುವು. ನಮಗಾಗಿ ನಮ್ಮ ಕೆಲಸವು ನಿರ್ಧರಿಸಲ್ಪಟ್ಟಿದೆ. ಈ ಆನಂದಮಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನೀವು ಕಾತುರರಾಗಿದ್ದೀರೋ? ನೀವು ಕಾತುರರಾಗಿದ್ದೀರಿ ಎಂಬುದರಲ್ಲಿ ಸಂದೇಹವೇ ಇಲ್ಲ. ರಾಜ್ಯ ವಾರ್ತೆ ನಂ. 35ರಲ್ಲಿರುವ ಪ್ರಾಮುಖ್ಯ ಬೈಬಲಾಧಾರಿತ ಸಂದೇಶಕ್ಕೆ ಸಾಧ್ಯವಿರುವ ಅತಿ ವ್ಯಾಪಕ ವಿತರಣೆಯನ್ನು ನಾವು ಕೊಡೋಣ!