ಅಕ್ಟೋಬರ್ಗಾಗಿ ಸೇವಾ ಕೂಟಗಳು
ಸೂಚನೆ: ಬರಲಿರುವ ತಿಂಗಳುಗಳ ಪ್ರತಿಯೊಂದು ವಾರಕ್ಕಾಗಿ ಸೇವಾ ಕೂಟವನ್ನು ನಮ್ಮ ರಾಜ್ಯದ ಸೇವೆಯು ಶೆಡ್ಯೂಲ್ ಮಾಡುವುದು, ಆದರೆ “ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಜಿಲ್ಲಾ ಅಧಿವೇಶನವನ್ನು ಹಾಜರಾಗಲಿಕ್ಕಾಗಿ ಹಾಗೂ ಅನಂತರ ಮುಂದಿನ ವಾರದ ಸೇವಾ ಕೂಟದಲ್ಲಿ ಕಾರ್ಯಕ್ರಮದ ಮುಖ್ಯಾಂಶಗಳ 30 ನಿಮಿಷ ಪುನರ್ವಿಮರ್ಶೆಗಾಗಿ ಅನುಮತಿಸಲಿಕ್ಕೆ ಬೇಕಾದ ಹೊಂದಾಣಿಕೆಗಳನ್ನು ಸಭೆಗಳು ಮಾಡಿಕೊಳ್ಳಬಹುದು. ಜಿಲ್ಲಾ ಅಧಿವೇಶನ ಕಾರ್ಯಕ್ರಮದ ಅನುದಿನದ ಪುನರ್ವಿಮರ್ಶೆಯನ್ನು, ಎದ್ದುಕಾಣುವ ಅಂಶಗಳ ಮೇಲೆ ಕೇಂದ್ರೀಕರಿಸಲು ಸಮರ್ಥರಾಗಿರುವ ಇಬ್ಬರು ಅಥವಾ ಮೂವರು ಅರ್ಹ ಸಹೋದರರಿಗೆ ಮುಂದಾಗಿಯೇ ನೇಮಿಸಬೇಕು. ಚೆನ್ನಾಗಿ ತಯಾರಿಸಿದ ಈ ಪುನರ್ವಿಮರ್ಶೆಯು ವೈಯಕ್ತಿಕ ಅನ್ವಯಕ್ಕಾಗಿ ಹಾಗೂ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಮುಖ್ಯ ಅಂಶಗಳನ್ನು ಸಭೆಯು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುವುದು. ಸಭಿಕರಿಂದ ಹೇಳಿಕೆಗಳು ಹಾಗೂ ಹೇಳಲ್ಪಟ್ಟ ಅನುಭವಗಳು ಸಂಕ್ಷಿಪ್ತವೂ ವಿಷಯಕ್ಕೆ ಸಂಬಂಧಪಟ್ಟದ್ದೂ ಆಗಿರತಕ್ಕದ್ದು.
ಅಕ್ಟೋಬರ್ 6ರಿಂದ ಆರಂಭವಾಗುವ ವಾರ
ಸಂಗೀತ 39 (4)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಪ್ರಶ್ನೋತ್ತರಗಳು. ರಾಜ್ಯ ವಾರ್ತೆ ನಂ. 35ರ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. ಈ ವಿಷಯದಿಂದ ಟೆರಿಟೊರಿಯಲ್ಲಿರುವ ಜನರು ಏಕೆ ಪ್ರಯೋಜನಪಡೆದುಕೊಳ್ಳುವರು ಎಂಬುದರ ಕಾರಣಗಳನ್ನು ಹೇಳಿರಿ. ಅದರ ವಿತರಣೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಹಾಗೂ ಕಂಡುಕೊಳ್ಳಲ್ಪಟ್ಟ ಆಸಕ್ತ ವ್ಯಕ್ತಿಗಳೆಲ್ಲರನ್ನು ಪುನರ್ಭೇಟಿ ಮಾಡುವುದರಲ್ಲಿ ಶ್ರದ್ಧಾಪೂರ್ವಕರಾಗಿರಲು ಈಗ ಯೋಜನೆಗಳನ್ನು ಮಾಡುವ ಅಗತ್ಯವನ್ನು ಒತ್ತಿಹೇಳಿರಿ.
20 ನಿ: “ರಾಜ್ಯ ವಾರ್ತೆ ನಂ. 35ಕ್ಕೆ ವ್ಯಾಪಕ ವಿತರಣೆಯನ್ನು ನೀಡಿರಿ.” ಸೇವಾ ಮೇಲ್ವಿಚಾರಕನಿಂದ ಆರಂಭದ ಭಾಷಣ. 5-8 ಪ್ಯಾರಗ್ರಾಫ್ಗಳನ್ನು ಪ್ರಶ್ನೋತ್ತರಗಳ ಮೂಲಕ ಆವರಿಸಿರಿ. ವಿಸ್ತರಿಸಲ್ಪಟ್ಟ ಚಟುವಟಿಕೆಗಾಗಿರುವ ಸ್ಥಳಿಕ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ. ಆದಷ್ಟು ಹೆಚ್ಚು ಟೆರಿಟೊರಿಯು ಆವರಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿರುವ ವಿಧಗಳನ್ನು ಚರ್ಚಿಸಿರಿ. ಬಸ್ ನಿಲ್ದಾಣಗಳಲ್ಲಿ, ಸಣ್ಣಪುಟ್ಟ ವ್ಯಾಪಾರಸ್ಥಳಗಳಲ್ಲಿ, ವಾಹನನಿಲುಗಡೆಯ ಜಾಗಗಳಲ್ಲಿ ಹಾಗೂ ಬೇರೆ ಸ್ಥಳಗಳಲ್ಲಿರುವ ಜನರಿಗೆ ಸಾಕ್ಷಿಯನ್ನು ನೀಡುತ್ತಿರುವಾಗ ಪ್ರಚಾರಕರು ರಾಜ್ಯ ವಾರ್ತೆ ನಂ. 35ನ್ನು ಉಪಯೋಗಿಸಸಾಧ್ಯವಿದೆ. ಸಾರುವ ಕೆಲಸವನ್ನು ಪ್ರಾರಂಭಿಸಲು ಬಯಸುವ ಹೊಸ ವ್ಯಕ್ತಿಗಳಿಗೆ ನೆರವನ್ನು ನೀಡುವ ವಿಧದ ಕುರಿತು ಸಲಹೆಗಳನ್ನು ನೀಡಿರಿ. ಎಪ್ರಿಲ್ 1995ರ ನಮ್ಮ ರಾಜ್ಯದ ಸೇವೆಯ ಪುರವಣಿ, ಪ್ಯಾರಗ್ರಾಫ್ 11ರಿಂದ ಮಾಹಿತಿಯನ್ನು ಸೇರಿಸಿರಿ. ಕೆಲವು ಟೆರಿಟೊರಿಗಳಲ್ಲಿ ರಾಜ್ಯ ವಾರ್ತೆಯನ್ನು ವಿತರಿಸುವಾಗ ಒಂಟಿಯಾಗಿ ಕೆಲಸಮಾಡಲು ಹಾಗೂ ಬ್ರೀಫ್ಕೇಸ್ ಅನ್ನು ತೆಗೆದುಕೊಂಡುಹೋಗದೆ ಇರುವುದು ಪ್ರಯೋಜನಕಾರಿಯಾಗಿರಬಹುದು. ಎರಡು ಅಥವಾ ಮೂರು ಸಂಕ್ಷಿಪ್ತ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 126 (3) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 13ರಿಂದ ಆರಂಭವಾಗುವ ವಾರ
ಸಂಗೀತ 41 (6)
12 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳ ಪ್ರಸ್ತುತ ಸಂಚಿಕೆಗಳಲ್ಲಿರುವ ಸಂಭಾಷಣೆಯ ಅಂಶಗಳನ್ನು ಪುನರ್ವಿಮರ್ಶಿಸಿರಿ. ವಾರಾಂತ್ಯದ ಚಟುವಟಿಕೆಯ ಅವಧಿಯಲ್ಲಿ ರಾಜ್ಯ ವಾರ್ತೆ ನಂ. 35ರೊಂದಿಗೆ ಪತ್ರಿಕೆಗಳು ಹಾಗೂ ಚಂದಾಗಳು ವೈಶಿಷ್ಟ್ಯಗೊಳಿಸಲ್ಪಡಲಿರುವುದನ್ನು ಎಲ್ಲರಿಗೂ ಜ್ಞಾಪಿಸಿರಿ. ನಾವು ಆಸಕ್ತ ಜನರೆಲ್ಲರನ್ನೂ ಪುನರ್ಭೇಟಿ ಮಾಡಬೇಕು.
15 ನಿ: ಸ್ಥಳಿಕ ಅಗತ್ಯಗಳು.
18 ನಿ: “ನಿರಾಸಕ್ತಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?” ಇಬ್ಬರು ಹಿರಿಯರ ನಡುವೆ ಚರ್ಚೆ. 1974 ಜುಲೈ 15ರ ವಾಚ್ಟವರ್, ಪುಟಗಳು 445-6, “ಹೌ ಯು ಕ್ಯಾನ್ ಅಟ್ಯಾಕ್ ಆ್ಯಪತಿ” ಉಪಶೀರ್ಷಿಕೆಯ ಕೆಳಗಿರುವ ವಿಷಯದ ಮೇಲೆ ಹೇಳಿಕೆಗಳನ್ನು ಸೇರಿಸಿರಿ.
ಸಂಗೀತ 130 (22) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 20ರಿಂದ ಆರಂಭವಾಗುವ ವಾರ
ಸಂಗೀತ 42 (21)
15 ನಿ: ಸ್ಥಳಿಕ ತಿಳಿಸುವಿಕೆಗಳು. “ರಾಜ್ಯ ವಾರ್ತೆಯ ಭೌಗೋಲಿಕ ವಿತರಣೆ” ಬಗ್ಗೆ, 1996 ಯಿಯರ್ಬುಕ್ 6-8ನೆಯ ಪುಟಗಳಿಂದ ಕೆಲವು ಅನುಭವಗಳನ್ನು ಪುನರ್ವಿಮರ್ಶಿಸಿರಿ. ಹಿಂದಿನ ರಾಜ್ಯ ವಾರ್ತೆಯ ವಿತರಣೆಯಲ್ಲಿ ಪ್ರಚಾರಕರು ಹಾಕಿದ ವ್ಯಕ್ತಿಗತ ಪ್ರಯತ್ನವನ್ನು ಎತ್ತಿತೋರಿಸಿರಿ. ರಾಜ್ಯ ವಾರ್ತೆ ನಂ. 35ನ್ನು ವಿತರಿಸುವುದರಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಎಲ್ಲರನ್ನೂ ಉತ್ತೇಜಿಸಿರಿ.
15 ನಿ: “ನಾನು ದೀಕ್ಷಾಸ್ನಾನ ಪಡಕೊಳ್ಳಬೇಕೋ?” 1993, ಜನವರಿ 1ರ ಕಾವಲಿನಬುರುಜು, 24-7ನೆಯ ಪುಟಗಳ ಮೇಲೆ ಆಧಾರಿಸಿ, ದೀಕ್ಷಾಸ್ನಾನದ ಕಡೆಗೆ ಪ್ರಗತಿಹೊಂದುವಂತೆ ಎಲ್ಲ ಅಸ್ನಾತ ಪ್ರಚಾರಕರಿಗೆ ಉತ್ತೇಜಿಸುತ್ತಾ, ಹಿರಿಯನಿಂದ ಉತ್ಸಾಹಪೂರ್ವಕ ಭಾಷಣ. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಪ್ರಚಾರಕರನ್ನಾಗಿ ಮಾಡಲು ಅನಂತರ ಎಳೆಯ ವಯಸ್ಸಿನಲ್ಲೇ ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ತೋರಿಸುತ್ತಾ, 1994, ಅಕ್ಟೋಬರ್ 1ರ ಕಾವಲಿನಬುರುಜು, 26-30ನೆಯ ಪುಟಗಳಿಂದ ಹೇಳಿಕೆಗಳನ್ನು ಸೇರಿಸಿರಿ.
15 ನಿ: “ನೀವು ಒಬ್ಬ ಪೂರ್ಣಸಮಯದ ಸಾಕ್ಷಿಯಾಗಿದ್ದೀರೋ?” ಹಿರಿಯನೊಬ್ಬನಿಂದ ಭಾಷಣ.
ಸಂಗೀತ 133 (3) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 27ರಿಂದ ಆರಂಭವಾಗುವ ವಾರ
ಸಂಗೀತ 43 (4)
12 ನಿ: ಸ್ಥಳಿಕ ತಿಳಿಸುವಿಕೆಗಳು. ರಾಜ್ಯ ವಾರ್ತೆ ನಂ. 35ರ ವಿತರಣೆಯ ಪ್ರಗತಿಯನ್ನು ಪುನರ್ವಿಮರ್ಶಿಸಿರಿ. ಉತ್ತೇಜನದಾಯಕ ಅನುಭವಗಳನ್ನು ಹೇಳಲು ಸಭಿಕರನ್ನು ಆಮಂತ್ರಿಸಿರಿ. ಇಷ್ಟರ ವರೆಗೆ ಎಷ್ಟು ಟೆರಿಟೊರಿಯು ಪೂರ್ಣಗೊಳಿಸಲ್ಪಟ್ಟಿದೆ ಹಾಗೂ ನವೆಂಬರ್ 16ರಷ್ಟಕ್ಕೆ ಇನ್ನೂ ಎಷ್ಟು ಟೆರಿಟೊರಿಯು ಆವರಿಸಲ್ಪಡಸಾಧ್ಯವಿದೆ ಎಂಬುದರ ಕುರಿತಾಗಿ ಹೇಳಿರಿ. ರಾಜ್ಯ ವಾರ್ತೆಯ ಸರಬರಾಯಿ ಮುಗಿದುಹೋದ ನಂತರ, ತಿಂಗಳಿನ ಉಳಿದ ಭಾಗದ ಅವಧಿಯಲ್ಲಿ ನಾವು ಜ್ಞಾನ ಪುಸ್ತಕವನ್ನು ನೀಡುವೆವು. ರಾಜ್ಯ ವಾರ್ತೆಗೆ ಒಳ್ಳೆಯ ಪ್ರತಿಕ್ರಿಯೆಯಿದ್ದ ಕಡೆ ಪುನರ್ಭೇಟಿಗಳಲ್ಲಿ ಅಭ್ಯಾಸಗಳನ್ನು ಪ್ರಾರಂಭಿಸುವ ಗುರಿಯನ್ನು ಒತ್ತಿಹೇಳಿರಿ.
15 ನಿ: ಹತಾಶೆಯ ನಡುವೆಯೂ ನಿರೀಕ್ಷೆಯನ್ನು ಕಂಡುಕೊಳ್ಳುವ ವಿಧ. 1997, ಮೇ 15ರ ಕಾವಲಿನಬುರುಜು 22-5ನೆಯ ಪುಟಗಳ ಮೇಲೆ ಆಧಾರಿಸಿ ಹಿರಿಯನಿಂದ ಭಾಷಣ.
18 ನಿ: ನಿಮ್ಮ ಬೆಳಕು ಪ್ರಕಾಶಿಸಲಿ. ನಮ್ಮ ಶುಶ್ರೂಷೆ ಪುಸ್ತಕ, 84-8ನೆಯ ಪುಟಗಳ ಮೇಲೆ ಭಾಷಣ ಹಾಗೂ ಚರ್ಚೆ. ಈ ಮುಂದಿನ ಪ್ರಶ್ನೆಗಳ ಮೇಲೆ ಪ್ರಚಾರಕರು ನಿರ್ದಿಷ್ಟ ಹೇಳಿಕೆಗಳನ್ನು ಮಾಡುವಂತೆ ಮುಂದಾಗಿಯೇ ಏರ್ಪಡಿಸಿರಿ: (1) ಯೆಹೋವನ ಸಾಕ್ಷಿಗಳು ಮನೆಯಿಂದ ಮನೆಗೆ ಏಕೆ ಸಾರುತ್ತಾರೆ? (2) ಪ್ರಥಮ ಶತಮಾನದಲ್ಲಿ ಈ ವಿಧಾನವು ಎಷ್ಟರ ಮಟ್ಟಿಗೆ ಉಪಯೋಗಿಸಲ್ಪಟ್ಟಿತು? (3) ಇಂದು ಮನೆಯಿಂದ ಮನೆಗೆ ಸಾರುತ್ತಾ ಹೋಗುತ್ತಿರುವುದಕ್ಕೆ ಒಂದು ತುರ್ತಿನ ಅಗತ್ಯವಿದೆ ಏಕೆ? (4) ಕ್ರಮವಾಗಿ ಪಾಲ್ಗೊಳ್ಳಲು ಯಾವ ಸಂದರ್ಭಗಳು ನಮಗೆ ಕಷ್ಟಕರವನ್ನಾಗಿ ಮಾಡಬಹುದು? (5) ಪಟ್ಟುಹಿಡಿದು ಮುಂದುವರಿಯಲಿಕ್ಕಾಗಿ ನಾವು ಸಹಾಯವನ್ನು ಹೇಗೆ ಪಡದುಕೊಳ್ಳಬಲ್ಲೆವು? (6) ನಮ್ಮ ಬೆಳಕನ್ನು ಪ್ರಕಾಶಿಸುವ ಮೂಲಕ ನಾವು ಹೇಗೆ ಆಶೀರ್ವದಿಸಲ್ಪಡುತ್ತೇವೆ? (7) ಜನರನ್ನು ಸಂಪರ್ಕಿಸುವುದರಲ್ಲಿ ಹೆಚ್ಚು ಸಫಲರಾಗಲು ನಾವು ಏನನ್ನು ಮಾಡಸಾಧ್ಯವಿದೆ? ಅಂಗಡಿಯಿಂದ ಅಂಗಡಿಗೆ ಅಥವಾ ಬೀದಿ ಸಾಕ್ಷಿಕಾರ್ಯವನ್ನು ಮಾಡುತ್ತಿರುವಾಗ ಆನಂದಿಸಿದ ಉತ್ತೇಜನದಾಯಕ ಅನುಭವಗಳನ್ನು ಮೂವರು ಅಥವಾ ನಾಲ್ಕು ಪ್ರಚಾರಕರು ಹೇಳುವುದರ ಮೂಲಕ ದೃಷ್ಟಾಂತಿಸಿರಿ.
ಸಂಗೀತ 136 (26) ಮತ್ತು ಸಮಾಪ್ತಿಯ ಪ್ರಾರ್ಥನೆ.