ನೀವು ಒಬ್ಬ ಪೂರ್ಣಸಮಯದ ಸಾಕ್ಷಿಯಾಗಿದ್ದೀರೋ?
1 ಈ ಪ್ರಶ್ನೆಗೆ ನೀವು ಹೌದು ಎಂಬುದಾಗಿ ಉತ್ತರಿಸುವಿರೋ? ಯೆಹೋವನ ಸಮರ್ಪಿತ ಸೇವಕರೆಲ್ಲರೂ ಪೂರ್ಣಸಮಯದ ಶುಶ್ರೂಷೆಯಲ್ಲಿ ನಮೂದಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ನಾವೆಲ್ಲರೂ ಆತನ ಪೂರ್ಣಸಮಯದ ಸಾಕ್ಷಿಗಳಾಗಿ ನಮ್ಮನ್ನು ದೃಷ್ಟಿಸಿಕೊಳ್ಳಬೇಕೆಂಬುದನ್ನು ಅಪೇಕ್ಷಿಸುವುದು ಸಮಂಜಸವಾಗಿರುವುದಿಲ್ಲವೋ? ನಿಶ್ಚಯವಾಗಿಯೂ ನಾವು ಹಾಗೇ ದೃಷ್ಟಿಸಿಕೊಳ್ಳತಕ್ಕದ್ದು.
2 ಒಬ್ಬ ಅಂಶಕಾಲಿಕ ಕ್ರೈಸ್ತನಾಗಿರಲು ಸಾಧ್ಯವಿಲ್ಲ. ಯೇಸು ತನ್ನ ತಂದೆಯ ಕುರಿತಾಗಿ ಹೇಳಿದ್ದು: “ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡು”ತ್ತೇನೆ. (ಯೋಹಾ. 8:29) ಅದೇ ರೀತಿಯಲ್ಲಿ ನೆನಸಿದ ಪೌಲನು “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” ಎಂದು ನಮ್ಮನ್ನು ಪ್ರಚೋದಿಸಿದನು. (1 ಕೊರಿಂ. 10:31) ಆದುದರಿಂದ ಏನೇ ಆಗಲಿ, ನಾವೆಲ್ಲರೂ ನಮ್ಮನ್ನು ಯೆಹೋವನ ಪೂರ್ಣಸಮಯದ ಸಾಕ್ಷಿಗಳಾಗಿ ಎಣಿಸಿಕೊಳ್ಳಬೇಕು. ಈ ರೀತಿಯಲ್ಲಿನ ನಮ್ಮ ಆಲೋಚನೆಯು, ನಾವು ಬೆನ್ನಟ್ಟುವ ಪ್ರತಿಯೊಂದು ಚಟುವಟಿಕೆಯಲ್ಲಿ ಒಳ್ಳೆಯದನ್ನು ಮಾಡುವುದಕ್ಕೆ ನಮ್ಮನ್ನು ಪ್ರಭಾವಿಸುವುದು.
3 ರುಜುವಾತನ್ನು ಪರಿಗಣಿಸಿರಿ: ನಮ್ಮ ತೋರಿಕೆ, ನುಡಿ ಮತ್ತು ನಡತೆ ನಾವು ನಿಜವಾಗಿಯೂ ಯೆಹೋವನ ಸಾಕ್ಷಿಗಳಾಗಿದ್ದೇವೆ ಎಂಬುದನ್ನು ಇತರ ಜನರಿಗೆ ತೋರಿಸಬಲ್ಲದು. ನಾವು ಕ್ಷೇತ್ರ ಸೇವೆಯಲ್ಲಿ ಒಳಗೂಡಿರುವಾಗ ಅಥವಾ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರುವಾಗ ಮರ್ಯಾದೆಯುಳ್ಳ ತೋರಿಕೆ, ಹಿತಕರ ನುಡಿ ಹಾಗೂ ಯೋಗ್ಯ ನಡತೆಯ ಅಗತ್ಯದ ಪ್ರಜ್ಞೆಯುಳ್ಳವರಾಗಿದ್ದೇವೆ. ಆದರೂ ನಾವು ಶಾಲೆಗೆ ಹೋಗುತ್ತಿರಲಿ, ಐಹಿಕ ಉದ್ಯೋಗವೊಂದರಲ್ಲಿ ಕೆಲಸಮಾಡುತ್ತಿರಲಿ ಇಲ್ಲವೇ ಆಟಪಾಟದಲ್ಲಿ ಭಾಗವಹಿಸುತ್ತಿರಲಿ, ನಮ್ಮ ಕುರಿತಾಗಿರುವ ಪ್ರತಿಯೊಂದು ವಿಷಯವೂ ನಾವು ಯೆಹೋವನ ನೀತಿಯುಳ್ಳ ಮಟ್ಟಗಳಿಗನುಸಾರ ಜೀವಿಸುತ್ತೇವೆ ಎಂಬ ರುಜುವಾತನ್ನು ನೀಡಬೇಕು.
4 ಯೇಸು ಹೇಳಿದ್ದು: “ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾ. 5:14-16) ಇದು ನಾವು ಮಾಡುವ ಪ್ರತಿಯೊಂದು ವಿಷಯದಲ್ಲೂ ಹಾಗೂ ಎಲ್ಲ ಸಮಯಗಳಲ್ಲಿಯೂ ಸತ್ಯವಾಗಿರಬೇಕು. ನಾವು ಎಲ್ಲಿದ್ದೇವೆ ಅಥವಾ ನಾವು ಏನು ಮಾಡುತ್ತಿದ್ದೇವೆ ಎಂಬ ಕಾರಣಕ್ಕಾಗಿ ಸಾಕ್ಷಿಯೊಂದನ್ನು ಕೊಡಲು ಮನಸ್ಸಿಲ್ಲದವರಾಗಿ ನಮ್ಮನ್ನು ಕಂಡುಕೊಳ್ಳುವುದಾದರೆ, ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳುವ ಅಗತ್ಯವಿದೆ, ‘ನಾನು ಯೆಹೋವನನ್ನು ಅಂಶಕಾಲಿಕವಾಗಿ ಸೇವಿಸುತ್ತಿದ್ದೇನೋ ಇಲ್ಲವೇ ಪೂರ್ಣಸಮಯ ಸೇವಿಸುತ್ತಿದ್ದೇನೋ?’ ದೇವರ ರಾಜ್ಯದ ಸುವಾರ್ತೆಯ ಕುರಿತಾಗಿ ಇತರರೊಂದಿಗೆ ಮಾತಾಡಲಿಕ್ಕಿರುವ ಅವಕಾಶವನ್ನು ನಾವೆಂದೂ ಬಿಟ್ಟುಬಿಡದಂತಾಗಲಿ.
5 “ನೀವು ಒಬ್ಬ ಪೂರ್ಣಸಮಯದ ಸಾಕ್ಷಿಯಾಗಿದ್ದೀರೋ?” ಎಂಬ ಪ್ರಶ್ನೆಗೆ, ನಾವು “ಹೌದು!” ಎಂಬ ಮಾರ್ದನಿಸುವಿಕೆಯೊಂದಿಗೆ ಉತ್ತರಿಸಸಾಧ್ಯವಾಗುವಾಗ ಯೆಹೋವನನ್ನು ಸನ್ಮಾನಿಸುತ್ತೇವೆ ಹಾಗೂ ಪ್ರಸನ್ನಗೊಳಿಸುತ್ತೇವೆ ಎಂಬುದು ಜ್ಞಾಪಕದಲ್ಲಿರಲಿ.