ಅದು ಫಲಿತಾಂಶಗಳನ್ನು ತರುವಲ್ಲಿ, ಅದನ್ನು ಉಪಯೋಗಿಸಿರಿ!
1 ನಮ್ಮ ರಾಜ್ಯದ ಸೇವೆಯು, ಶುಶ್ರೂಷೆಯಲ್ಲಿ ಉಪಯೋಗಿಸಲಿಕ್ಕಾಗಿ ವಿವಿಧ ಸೂಚ್ಯ ನಿರೂಪಣೆಗಳನ್ನು ಸತತವಾಗಿ ನಮಗೆ ಒದಗಿಸುತ್ತದೆ. ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ಕೆರಳಿಸುವುದು ಹೇಗೆಂಬುದರ ವಿಷಯದಲ್ಲಿ ಇದು ನಮಗೆ ನವೀನ ಕಲ್ಪನೆಗಳನ್ನು ಕೊಡುತ್ತದೆ. ಪ್ರತಿ ತಿಂಗಳು ಈ ನಿರೂಪಣೆಗಳಲ್ಲಿ ಒಂದು ಇಲ್ಲವೆ ಹೆಚ್ಚನ್ನು ಕಲಿತುಕೊಳ್ಳಲು ನೀವು ಪ್ರಯತ್ನಮಾಡಬಹುದು. ಆದರೆ, ಅವರು ಅವುಗಳಲ್ಲಿ ಒಂದನ್ನು ಕೆಲವೊಂದು ಬಾರಿ ಉಪಯೋಗಿಸುವಷ್ಟರೊಳಗೆ, ನಮ್ಮ ರಾಜ್ಯದ ಸೇವೆಯ ಮತ್ತೊಂದು ಸಂಚಿಕೆಯು ಹೊಸ ನಿರೂಪಣೆಗಳನ್ನು ಒದಗಿಸುತ್ತದೆಂಬುದನ್ನು ಕೆಲವು ಪ್ರಚಾರಕರು ಕಂಡುಕೊಳ್ಳಬಹುದು. ಹಿಂದಿನ ನಿರೂಪಣೆಯಲ್ಲಿ ಪಾರಂಗತರಾಗುವ ಮೊದಲು, ಒಂದು ಹೊಸ ನಿರೂಪಣೆಯನ್ನು ಕಲಿತುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲದಿರಬಹುದೆಂಬುದು ಸ್ಪಷ್ಟ.
2 ನಿಶ್ಚಯವಾಗಿಯೂ ಕ್ಷೇತ್ರ ಸೇವೆಯಲ್ಲಿ ಬಹಳಷ್ಟು ಸಮಯವನ್ನು ವ್ಯಯಿಸುವ ಸಾವಿರಾರು ಪಯನೀಯರರು ಮತ್ತು ಇತರ ಪ್ರಚಾರಕರು ಇದ್ದಾರೆ. ಅಲ್ಲದೆ, ಅನೇಕ ಸಭೆಗಳು ತಮ್ಮ ಇಡೀ ಟೆರಿಟೊರಿಯನ್ನು ಕೆಲವೊಂದು ವಾರಗಳಿಗೊಮ್ಮೆ ಆವರಿಸುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ, ಸಂದೇಶವನ್ನು ಪ್ರಸ್ತುತಪಡಿಸಲು ಹೊಸ ಪ್ರಸ್ತಾವನೆಗಳನ್ನೂ ಕಲ್ಪನೆಗಳನ್ನೂ ಪ್ರಚಾರಕರು ಗಣ್ಯಮಾಡುತ್ತಾರೆ. ಇದು ಅವರ ಕೌಶಲಗಳನ್ನು ವರ್ಧಿಸಲು ಸಹಾಯ ಮಾಡುತ್ತದೆ. ಇದು ಅವರ ಶುಶ್ರೂಷೆಯನ್ನು ಹೆಚ್ಚು ಆಸಕ್ತಿಕರವಾಗಿಯೂ ಫಲಪ್ರದವಾಗಿಯೂ ಮಾಡಿ, ಎದುರಾಗುವ ಪಂಥಾಹ್ವಾನಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
3 ಏನೇ ಆಗಲಿ, ಆಸಕ್ತಿಯನ್ನು ಬೆಳೆಸುವ ವಿಷಯದಲ್ಲಿ ಚೆನ್ನಾಗಿ ಕಾರ್ಯನಡಿಸುವ ಒಂದು ನಿರೂಪಣೆಯನ್ನು ನೀವು ತಯಾರಿಸಿರುವಲ್ಲಿ, ಖಂಡಿತವಾಗಿಯೂ ಅದರ ಉಪಯೋಗವನ್ನು ಮುಂದುವರಿಸಿ! ಫಲಿತಾಂಶಗಳನ್ನು ತರುತ್ತಿರುವ ಒಂದು ಪರಿಣಾಮಕಾರಿ ನಿರೂಪಣೆಯ ಉಪಯೋಗವನ್ನು ನಿಲ್ಲಿಸುವ ಅಗತ್ಯವಿಲ್ಲ. ಅದನ್ನು ಸದ್ಯದ ತಿಂಗಳಿನ ಸಾಹಿತ್ಯ ನೀಡುವಿಕೆಗೆ ಸರಿಹೊಂದಿಸಿರಿ. ನಮ್ಮ ರಾಜ್ಯದ ಸೇವೆಯಲ್ಲಿ ನೀಡಲ್ಪಟ್ಟ ಸಲಹೆಗಳನ್ನು ನೀವು ಪುನರ್ವಿಮರ್ಶಿಸಿದಂತೆ, ನಿಮ್ಮ ನಿರೂಪಣೆಯಲ್ಲಿ ನೀವು ಸೇರಿಸಲು ಬಯಸಬಹುದಾದ ಆಸಕ್ತಿಕರ ಅಂಶಗಳಿಗಾಗಿ ಹುಡುಕಿರಿ.
4 ಹೀಗೆ, ನಮ್ಮ ರಾಜ್ಯದ ಸೇವೆಯ ಹೊಸ ಸಂಚಿಕೆಯು ನಿಮಗೆ ಸಿಗುವಾಗ, ಅದರಲ್ಲಿರುವ ನಿರೂಪಣೆಗಳು ಕೇವಲ ಸಲಹೆಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಅವುಗಳನ್ನು ನೀವು ಉಪಯೋಗಿಸಬಲ್ಲಿರಾದರೆ, ಒಳ್ಳೆಯದು. ಆದರೆ ನಿಮ್ಮ ಟೆರಿಟೊರಿಯಲ್ಲಿ ಫಲಿತಾಂಶಗಳನ್ನು ತರುವ ಒಂದು ನಿರೂಪಣೆಯನ್ನು ನೀವು ಈಗಾಗಲೇ ಕಂಡುಕೊಂಡಿರುವಲ್ಲಿ, ಅದನ್ನೇ ಉಪಯೋಗಿಸಿರಿ! ಉತ್ತಮ ವಿಧದಲ್ಲಿ “ನಿಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು”ವುದು, ಯೋಗ್ಯರನ್ನು ಕಂಡುಹಿಡಿಯುವುದು ಮತ್ತು ಶಿಷ್ಯರಾಗುವಂತೆ ಅವರಿಗೆ ಸಹಾಯ ಮಾಡುವುದೇ ಪ್ರಾಮುಖ್ಯವಾದ ವಿಷಯವಾಗಿದೆ.—2 ತಿಮೊ. 4:5.