ಫೆಬ್ರವರಿಗಾಗಿ ಸೇವಾ ಕೂಟಗಳು
ಫೆಬ್ರವರಿ 2ರಿಂದ ಆರಂಭವಾಗುವ ವಾರ
ಸಂಗೀತ 166 (15)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ಯೆಹೋವನ ಸಾಕ್ಷಿಗಳು—ನಿಜ ಸೌವಾರ್ತಿಕರು.” ಪ್ರಶ್ನೋತ್ತರಗಳು. ಸೆಪ್ಟೆಂಬರ್ 1, 1992ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ 19ನೆಯ ಪುಟದಲ್ಲಿರುವ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.
20 ನಿ: “ದಾಹಪಡುತ್ತಿರುವ ಸಕಲರಿಗೆ ಒಂದು ಆಮಂತ್ರಣವನ್ನು ನೀಡಿರಿ.” ಈ ಲೇಖನವನ್ನು ಪುನರ್ವಿಮರ್ಶಿಸಿ, ಸೂಚಿಸಲ್ಪಟ್ಟ ನಿರೂಪಣೆಗಳು ಆಸಕ್ತಿಯನ್ನು ಕೆರಳಿಸಲು ಮತ್ತು ಕೇಳುಗರನ್ನು ಪ್ರಚೋದಿಸಲು ಹೇಗೆ ವಿನ್ಯಾಸಿಸಲ್ಪಟ್ಟಿವೆ ಎಂಬುದನ್ನು ತೋರಿಸಿರಿ. ಒಬ್ಬ ವಯಸ್ಕನು 2-3 ಅಥವಾ 4-5ನೆಯ ಪ್ಯಾರಗ್ರಾಫ್ಗಳನ್ನು ಮತ್ತು ಒಬ್ಬ ಯೌವನಸ್ಥನು 6ನೆಯ ಪ್ಯಾರಗ್ರಾಫನ್ನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ.
ಸಂಗೀತ 208 (8) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 9ರಿಂದ ಆರಂಭವಾಗುವ ವಾರ
ಸಂಗೀತ 96 (6)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ”ವನ್ನು ಪುನರ್ವಿಮರ್ಶಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಸಕಲ ಭಾಷೆಗಳು ಮತ್ತು ಧರ್ಮಗಳ ಜನರಿಗೆ ಸಾಕ್ಷಿನೀಡುವುದು.” (1-8ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. ನಿಮ್ಮ ಟೆರಿಟೊರಿಯಲ್ಲಿ ಸ್ಥಳಿಕ ಭಾಷೆಯಲ್ಲದೆ ಇನ್ನಾವ ಭಾಷೆಗಳು ಮಾತಾಡಲ್ಪಡುತ್ತವೆಂಬುದನ್ನು ಪಟ್ಟಿಮಾಡಿ, ಆ ಭಾಷೆಗಳಲ್ಲಿ ಯಾವ ಸಾಹಿತ್ಯವು ಸಭೆಯ ಸ್ಟಾಕ್ನಲ್ಲಿದೆ ಎಂಬುದನ್ನು ತಿಳಿಸಿರಿ. 8ನೆಯ ಪ್ಯಾರಗ್ರಾಫ್ನಲ್ಲಿ ವರ್ಣಿಸಲ್ಪಟ್ಟಂತೆ, ಸಕಲ ಜನಾಂಗಗಳಿಗೆ ಸುವಾರ್ತೆ (ಇಂಗ್ಲಿಷ್) ಪುಸ್ತಿಕೆಯ ಬಳಕೆಯನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 220 (29) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 16ರಿಂದ ಆರಂಭವಾಗುವ ವಾರ
ಸಂಗೀತ 75 (22)
5 ನಿ: ಸ್ಥಳಿಕ ತಿಳಿಸುವಿಕೆಗಳು.
12 ನಿ: ನೀವು ಸಭಾ ಕೂಟಗಳಿಗೆ ಹಾಜರಾಗಬೇಕಾದ ಕಾರಣ. ಆಗಸ್ಟ್ 15, 1993ರ ಕಾವಲಿನಬುರುಜು ಪತ್ರಿಕೆಯ 8-11ನೆಯ ಪುಟಗಳಲ್ಲಿರುವ ಮುಖ್ಯಾಂಶಗಳನ್ನು ಹಿರಿಯನು ಚರ್ಚಿಸುತ್ತಾನೆ ಮತ್ತು ಎಲ್ಲ ಕೂಟಗಳಲ್ಲಿ ಕ್ರಮವಾದ ಹಾಜರಿಯ ಮಹತ್ವವನ್ನು ಒತ್ತಿಹೇಳುತ್ತಾನೆ.
18 ನಿ: “ಸಕಲ ಭಾಷೆಗಳು ಮತ್ತು ಧರ್ಮಗಳ ಜನರಿಗೆ ಸಾಕ್ಷಿನೀಡುವುದು.” (9-24ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. ಒಬ್ಬ ಹಿಂದೂ, ಒಬ್ಬ ಮುಸ್ಲಿಮ್, ಮತ್ತು ಒಬ್ಬ ಬೌದ್ಧ ಇಲ್ಲವೆ ಯೆಹೂದಿಗೆ ಆರಂಭದ ಸಾಕ್ಷಿಯನ್ನು—ಸ್ಥಳಿಕವಾಗಿ ಯಾವುದು ಹೆಚ್ಚು ಪ್ರಚಲಿತವಾಗಿದೆಯೊ ಅದನ್ನು—ಕೊಡುವ ವಿಧವನ್ನು, ಅನುಭವಸ್ಥ ಪ್ರಚಾರಕರು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ.
10 ನಿ: “ಯೆಹೋವನು ನನ್ನ ಸಹಾಯಕನು.” ಹಿರಿಯನಿಂದ ಹುರಿದುಂಬಿಸುವಂತಹದ್ದೂ ಉತ್ತೇಜನದಾಯಕವೂ ಆದ ಭಾಷಣ.
ಸಂಗೀತ 15 (2) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 23ರಿಂದ ಆರಂಭವಾಗುವ ವಾರ
ಸಂಗೀತ 4 (29)
10 ನಿ: ಸ್ಥಳಿಕ ತಿಳಿಸುವಿಕೆಗಳು. ಮಾರ್ಚ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಮಾರ್ಚ್ 1996ರ ನಮ್ಮ ರಾಜ್ಯದ ಸೇವೆಯಲ್ಲಿನ 4ನೆಯ ಪುಟದಿಂದ ತೆಗೆಯಲ್ಪಟ್ಟ ಅಂಶಗಳನ್ನು ಉಪಯೋಗಿಸುತ್ತಾ, ಜ್ಞಾನ ಪುಸ್ತಕವನ್ನು ಪ್ರಸ್ತುತಪಡಿಸಲು ಒಂದೆರಡು ವಿಚಾರಗಳನ್ನು ತಿಳಿಯಪಡಿಸಿರಿ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯನ್ನು ಒತ್ತಿಹೇಳಿರಿ.
15 ನಿ: “ಅದು ಫಲಿತಾಂಶಗಳನ್ನು ತರುವಲ್ಲಿ, ಅದನ್ನು ಉಪಯೋಗಿಸಿರಿ!” ಪ್ರಶ್ನೋತ್ತರಗಳು. ನಿರೂಪಣೆಗಳ ಸರಳತೆ ಹಾಗೂ ಅವುಗಳಿಂದ ಬರುವ ಫಲಿತಾಂಶಗಳ ಕಾರಣ ಆ ನಿರೂಪಣೆಗಳನ್ನು ಉಪಯೋಗಿಸುತ್ತಾ ಇರುವುದರ ಕುರಿತು ಸಂಕ್ಷಿಪ್ತವಾಗಿ ಹೇಳಿಕೆ ನೀಡುವಂತೆ, ಸಭಿಕರಿಂದ ಒಂದಿಬ್ಬರು ಅನುಭವಸ್ಥ ಪ್ರಚಾರಕರನ್ನು ಕೇಳಿಕೊಳ್ಳಿರಿ. ಅನಂತರ, ನಮ್ಮ ರಾಜ್ಯದ ಸೇವೆಯಲ್ಲಿ ಇತ್ತೀಚೆಗೆ ಸೂಚಿಸಲ್ಪಟ್ಟಿರುವ ಹಾಗೂ ಪರಿಣಾಮಕಾರಿಯಾಗಿ ರುಜುವಾಗಿರುವ ಪ್ರಸ್ತಾವನೆಗಳನ್ನು ಕೆಲವರು ಉಲ್ಲೇಖಿಸುವಂತೆ ಏರ್ಪಡಿಸಿರಿ.
20 ನಿ: ನಿಮ್ಮ ನಿರೂಪಣೆಗಳನ್ನು ಪ್ರ್ಯಾಕ್ಟಿಸ್ ಮಾಡಿರಿ. ಸ್ಕೂಲ್ ಗೈಡ್ಬುಕ್, 98-9ನೆಯ ಪುಟಗಳು, 8-9ನೆಯ ಪ್ಯಾರಗ್ರಾಫ್ಗಳ ಮೇಲಾಧಾರಿತ ಚಿಕ್ಕ ಭಾಷಣ. ನಮ್ಮ ನಿರೂಪಣೆಗಳನ್ನು ವಿಶ್ಲೇಷಿಸುವ ಮತ್ತು ಹೆಚ್ಚು ಪರಿಣಾಮಕಾರಿಯಾಗುವ ವಿಧಗಳಿಗಾಗಿ ಹುಡುಕುವ ಅಗತ್ಯವನ್ನು ಒತ್ತಿಹೇಳಿರಿ. ಇಬ್ಬರು ಸಹೋದರಿಯರು, ಒಂದು ಮನೆಯಲ್ಲಿ ತಾವು ಮಾಡಿದ ವಿಷಯವನ್ನು ವಿಶ್ಲೇಷಿಸಿ, ತಾವು ಹೇಗೆ ಸುಧಾರಣೆ ಮಾಡಸಾಧ್ಯವೆಂಬುದನ್ನು ಚರ್ಚಿಸುವುದನ್ನು ಪ್ರತ್ಯಕ್ಷಾಭಿನಯಿಸಿರಿ. ಪರಸ್ಪರ ಸಹಾಯಕಾರಿ ಸೂಚನೆಗಳನ್ನು ಕೊಟ್ಟುಕೊಳ್ಳುತ್ತಾ, ತಾವು ಮುಂದಿನ ಬಾರಿ ಉಪಯೋಗಿಸಲು ಯೋಜಿಸುವ ಒಂದು ನಿರೂಪಣೆಯನ್ನು ಪ್ರಯತ್ನಿಸಿನೋಡಲಿಕ್ಕಾಗಿ ಅವರು ಒಂದು ಸಂಕ್ಷಿಪ್ತ ಪ್ರ್ಯಾಕ್ಟಿಸನ್ನೂ ಮಾಡುತ್ತಾರೆ. ಎಲ್ಲರೂ ತಮ್ಮ ನಿರೂಪಣೆಗಳನ್ನು ವಿಶ್ಲೇಷಿಸಿ, ಪ್ರ್ಯಾಕ್ಟಿಸ್ ಮಾಡುವಂತೆ ಉತ್ತೇಜಿಸುತ್ತಾ ಅಧ್ಯಕ್ಷನು ಸಮಾಪ್ತಿಗೊಳಿಸುತ್ತಾನೆ.
ಸಂಗೀತ 103 (11) ಮತ್ತು ಸಮಾಪ್ತಿಯ ಪ್ರಾರ್ಥನೆ.