ಸುನಡತೆಯ ಮೂಲಕ ಸಾಕ್ಷಿನೀಡುವುದು
1 ಇಂದಿನ ಸ್ವೇಚ್ಛಾಚಾರಭರಿತ ಲೋಕದಲ್ಲಿ, ಅನೇಕ ಯುವ ಜನರು ಮುಂದಾಲೋಚನೆಯಿಲ್ಲದೆ ತಮ್ಮ ಜೀವಿತಗಳನ್ನು, ಅಮಲೌಷಧಗಳು, ಅನೈತಿಕತೆ, ಪ್ರತಿಭಟನೆ, ಮತ್ತು ಹಿಂಸಾಚಾರದಲ್ಲಿ ಹಾಳುಮಾಡುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕ್ರೈಸ್ತ ಸಭೆಯಲ್ಲಿರುವ ಒಳ್ಳೆಯ ಯುವ ಜನರ ಆದರ್ಶಪ್ರಾಯ ನಡತೆಯು, ನೋಡಲು ಉಲ್ಲಾಸಕರವಾಗಿದ್ದು, ನಿಶ್ಚಯವಾಗಿಯೂ ಯೆಹೋವನ ದೃಷ್ಟಿಯಲ್ಲಿ ಸೊಬಗಿನ ಸಂಗತಿಯಾಗಿದೆ. ಇತರರನ್ನು ಸತ್ಯಕ್ಕೆ ಆಕರ್ಷಿಸಬಹುದಾದ ಶಕ್ತಿಶಾಲಿ ಸಾಕ್ಷಿಯಂತೆ ಅದು ಕಾರ್ಯನಡಿಸುತ್ತದೆ.—1 ಪೇತ್ರ 2:12.
2 ಕ್ರೈಸ್ತ ಯುವ ಜನರ ಸುನಡತೆಯು, ನೋಡುವವರ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರಿದೆ ಎಂದು ಅನೇಕ ಅನುಭವಗಳು ತೋರಿಸುತ್ತವೆ. ಶಾಲಾ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯಾಗಿದ್ದ ಒಬ್ಬ ಯುವ ಸಾಕ್ಷಿಯ ಕುರಿತು ಮಾತನಾಡುತ್ತಾ, ಈ ಹುಡುಗಿಯ ದೇವರಾದ ಯೆಹೋವನೇ ಸತ್ಯ ದೇವರೆಂದು ಇಡೀ ತರಗತಿಗೇ ಹೇಳಿದಳು. ಆ ಹುಡುಗಿಯ ನಡತೆ ಯಾವಾಗಲೂ ಗೌರವಪೂರ್ಣವಾಗಿ ಇದ್ದುದರಿಂದಲೇ ಅವಳು ಹೀಗೆ ಹೇಳಿದಳು. ಮತ್ತೊಬ್ಬ ಶಿಕ್ಷಕಿಯು ಸೊಸೈಟಿಗೆ ಹೀಗೆ ಬರೆದು ತಿಳಿಸಿದಳು: “ನಿಮ್ಮ ಧರ್ಮದಲ್ಲಿರುವ ಒಳ್ಳೆಯ ಯುವ ಜನರಿಗಾಗಿ ನಿಮ್ಮನ್ನು ಪ್ರಶಂಸಿಸಲು ನಾನು ಬಯಸುತ್ತೇನೆ. . . . ನಿಮ್ಮ ಯುವ ಜನರು ನಿಜವಾಗಿಯೂ ಒಂದು ಮಾದರಿಯಾಗಿದ್ದಾರೆ. ತಮ್ಮ ಹಿರಿಯರನ್ನು ಅವರು ಗೌರವಿಸುತ್ತಾರೆ, ಸುಸಂಸ್ಕೃತ
ರಾಗಿದ್ದಾರೆ, ಮತ್ತು ಸಭ್ಯ ರೀತಿಯಲ್ಲಿ ಉಡುಪು ಧರಿಸುತ್ತಾರೆ. ಮತ್ತು ತಮ್ಮ ಬೈಬಲುಗಳ ಕುರಿತಾದ ಎಂತಹ ಜ್ಞಾನ ಅವರಲ್ಲಿದೆ! ಧರ್ಮವೆಂದರೆ ಹಾಗಿರಬೇಕು!”
3 ಮತ್ತೊಬ್ಬ ಶಾಲಾ ಶಿಕ್ಷಕಿಯು ತನ್ನ ತರಗತಿಯಲ್ಲಿದ್ದ ಏಳು ವರ್ಷ ಪ್ರಾಯದ ಸಾಕ್ಷಿಯ ಉತ್ತಮ ನಡತೆಯಿಂದ ಪ್ರಭಾವಿತಳಾದಳು. ಹುಡುಗನ ದೀನ ಹಾಗೂ ಮನೋಹರವಾದ ವ್ಯಕ್ತಿತ್ವದಿಂದ ಸೆಳೆಯಲ್ಪಟ್ಟಳು. ಇತರ ಹುಡುಗರಿಗೆ ಹೋಲಿಸುವಾಗ ಇದು ತೀರ ಭಿನ್ನವಾಗಿತ್ತು. ತನ್ನ ಧಾರ್ಮಿಕ ನಂಬಿಕೆಗಳ ಕಡೆಗೆ—ತಾನು ಏನನ್ನು ನಂಬಿದನೋ ಅದರಿಂದಾಗಿ ಬೇರೆಯಾಗಿರಲು ನಾಚಿಕೊಳ್ಳದೆ—ಅವನಿಗಿದ್ದ ಗಂಭೀರವಾದ ಮನೋಭಾವದಿಂದ ಅವಳು ಪ್ರಭಾವಿತಳಾದಳು. ಅವನ ಮನಸ್ಸಾಕ್ಷಿಯು ತರಬೇತಿಗೊಳಿಸಲ್ಪಟ್ಟಿದ್ದು, ಅವನು “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ಅರಿಯಶಕ್ತನಾಗಿದುದ್ದನ್ನು ಅವಳು ನೋಡಸಾಧ್ಯವಿತ್ತು. (ಇಬ್ರಿ. 5:14) ಕಟ್ಟಕಡೆಗೆ ಆ ಹುಡುಗನ ತಾಯಿಯು ಆ ಶಿಕ್ಷಕಿಯನ್ನು ಭೇಟಿಯಾಗಿ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದಳು. ಸಕಾಲದಲ್ಲಿ ಆ ಶಿಕ್ಷಕಿಯು ದೀಕ್ಷಾಸ್ನಾನ ಪಡೆದು, ತರುವಾಯ ಕ್ರಮದ ಪಯನೀಯರ್ ಆದಳು!
4 ಯೌವನಸ್ಥನೊಬ್ಬನು ತನ್ನ ಶಾಲೆಯಲ್ಲಿದ್ದ ಒಬ್ಬ ಸಾಕ್ಷಿಯ ಸುನಡತೆಯಿಂದ ಪ್ರಭಾವಿತನಾದನು. ಅವಳು ನಿಜವಾಗಿಯೂ ಭಿನ್ನಳಾಗಿದ್ದಳು—ಬಹಳ ಸುಸಂಸ್ಕೃತ
ಳೂ, ಅಭ್ಯಾಸಶೀಲಳೂ, ಉಡುಪಿನಲ್ಲಿ ಸದಾ ಸಭ್ಯತೆಯನ್ನು ತೋರಿಸುವವಳೂ ಆಗಿದ್ದಳೂ. ಮತ್ತು ಇತರ ಹುಡುಗಿಯರಂತೆ ಅವಳೆಂದೂ ಹುಡುಗರೊಂದಿಗೆ ಪ್ರಣಯಚೇಷ್ಟೆ ನಡೆಸಲಿಲ್ಲ. ಅವಳು ಬೈಬಲ್ ತತ್ವಗಳಿಗನುಸಾರ ಜೀವಿಸುತ್ತಿದ್ದಳೆಂಬುದನ್ನು ಅವನು ನೋಡಸಾಧ್ಯವಿತ್ತು. ಅವಳ ಧಾರ್ಮಿಕ ನಂಬಿಕೆಗಳ ಕುರಿತು ಆ ಯೌವನಸ್ಥನು ಪ್ರಶ್ನೆಗಳನ್ನು ಕೇಳಿದನು ಮತ್ತು ತಾನು ಕಲಿತುಕೊಂಡ ವಿಷಯಗಳಿಂದ ಪ್ರಭಾವಿತನಾದನು. ಅವನು ಅಭ್ಯಾಸವನ್ನು ಆರಂಭಿಸಿ, ಬೇಗನೆ ದೀಕ್ಷಾಸ್ನಾನ ಪಡೆದುಕೊಂಡು, ಕಟ್ಟಕಡೆಗೆ ಪಯನೀಯರ್ ಶುಶ್ರೂಷೆಯಲ್ಲಿ ಮತ್ತು ಬೆತೆಲ್ ಸೇವೆಯಲ್ಲಿ ಭಾಗವಹಿಸಿದನು.
5 ಇತರರಿಗೆ ಉತ್ತಮ ಸಾಕ್ಷಿಯನ್ನು ನೀಡಬಯಸುವ ಯುವ ಕ್ರೈಸ್ತ ವ್ಯಕ್ತಿ ನೀವಾಗಿರುವಲ್ಲಿ, ಪ್ರತಿಯೊಂದು ವಿಷಯದಲ್ಲಿ ನಿಮ್ಮ ನಡತೆಯ ಕುರಿತು ಎಚ್ಚರವಹಿಸಿರಿ. ಲೋಕದ ಸ್ವೇಚ್ಛಾಚಾರಿ ಮನೋಭಾವಗಳು, ದೃಷ್ಟಿಕೋನಗಳು, ಇಲ್ಲವೆ ಜೀವನ ಶೈಲಿಗಳನ್ನು ಅಂಗೀಕರಿಸುವವರಾಗುವ ಮೂಲಕ ನಿಮ್ಮ ಜಾಗರೂಕತೆಯನ್ನು ಕಳೆದುಕೊಳ್ಳಬೇಡಿ. ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವಾಗ ಮತ್ತು ಸಭಾ ಕೂಟಗಳಲ್ಲಿ ಇರುವಾಗ ಮಾತ್ರ ನಿಮ್ಮ ಮಾತುಕತೆ, ಉಡುಪು, ಮತ್ತು ಕೇಶಾಲಂಕಾರದ ವಿಷಯದಲ್ಲಿ ಉನ್ನತವಾದ ಮಾದರಿಯನ್ನಿಡದೆ, ಶಾಲೆಯಲ್ಲಿರುವಾಗ ಮತ್ತು ಮನೋರಂಜನೆಯಲ್ಲಿ ತೊಡಗಿರುವಾಗಲೂ ಉನ್ನತವಾದ ಮಾದರಿಯನ್ನಿಡಿರಿ. (1 ತಿಮೊ. 4:12) ನಿಮ್ಮ ಸುನಡತೆಯ ಮುಖಾಂತರ ನೀವು ‘ನಿಮ್ಮ ಬೆಳಕನ್ನು ಪ್ರಕಾಶಿಸುತ್ತಾ’ ಇರುವುದರಿಂದ, ಯಾರಾದರೊಬ್ಬರು ಸತ್ಯದಲ್ಲಿ ಆಸಕ್ತಿವಹಿಸಿದಾಗ, ನಿಮಗೆ ನಿಜವಾದ ಆನಂದವು ದೊರೆಯುವುದು.—ಮತ್ತಾ. 5:16.