ಸಭಾ ಪುಸ್ತಕಭ್ಯಾಸದ ಏರ್ಪಾಡು
ಭಾಗ 5: ಸೇವಾ ಮೇಲ್ವಿಚಾರಕನ ಸಂದರ್ಶನ
1 ಸೇವಾ ಮೇಲ್ವಿಚಾರಕನು ಒಬ್ಬ ಸುವಾರ್ತಿಕನೂ ಮತ್ತು ಅಧ್ಯಾಪಕನೂ ಆಗಿರತಕ್ಕದ್ದು. ಅದರ ನೇಮಿತ ಕ್ಷೇತ್ರದಲ್ಲಿ ಸುವಾರ್ತೆಯನ್ನು ಸಾರುವ ಮತ್ತು ಕಲಿಸುವ ಅದರ ಜವಾಬ್ದಾರಿಕೆಯನ್ನು ಪೂರೈಸಲು ಸಭೆಗೆ ಸಹಾಯ ಕೊಡುವದರಲ್ಲಿ ಒಂದು ಪ್ರಮುಖ ಪಾತ್ರವನ್ನು ಅವನು ಆಡುತ್ತಾನೆ. (ಮಾರ್ಕ 13:10) ಅವನ ಜವಾಬ್ದಾರಿಕೆಯನ್ನು ಗಂಭೀರವಾಗಿ ಅವನು ತೆಗೆದುಕೊಳ್ಳುವಾಗ ಮತ್ತು ಪ್ರತಿಯೊಬ್ಬರೂ ಸಹಕಾರ ನೀಡುವಾಗ, ಪ್ರಚಾರಕರು ಸುವಾರ್ತೆಯನ್ನು ನೀಡುವದರಲ್ಲಿ ಅಧಿಕ ನಿಪುಣತೆಯನ್ನು ಬೆಳೆಸುವರು ಮತ್ತು ಅಲ್ಲಿ ಹೆಚ್ಚು ಸಮಗ್ರವಾಗಿ ಕಾರ್ಯಕ್ಷೇತ್ರವನ್ನು ಆವರಿಸಲಾಗುವದು.
2 ಕ್ಷೇತ್ರ ಶುಶ್ರೂಷೆಯಲ್ಲಿ ಅಧಿಕ ಕಾರ್ಯಚಟುವಟಿಕೆಯನ್ನು ಪ್ರಚೋದಿಸಲು ಸೇವಾ ಮೇಲ್ವಿಚಾರಕನು ಕೇಂದ್ರೀಕರಿಸುವನು. ಇದು ಪ್ರಾಥಮಿಕವಾಗಿ ಸಭಾ ಪುಸ್ತಕ ಅಭ್ಯಾಸದ ಮೂಲಕ ಪೂರೈಸಲ್ಪಡುವದು. ಸಾಮಾನ್ಯವಾಗಿ, ಸೇವಾ ಮೇಲ್ವಿಚಾರಕನು ಒಂದು ಪುಸ್ತಕ ಅಭ್ಯಾಸವನ್ನು ನಡಿಸಲು ನೇಮಿಸಲ್ಪಡುತ್ತಾನೆ, ಆದರೆ ತಿಂಗಳಿಗೊಮ್ನೆ ಅವನು ಬೇರೆ ಗುಂಪಿಗೆ ಸಂದರ್ಶನವನ್ನೀಯುವಾಗ, ಅವನ ಸಹಾಯಕನು ಅವನ ಸ್ಥಾನದಲ್ಲಿ ಅಭ್ಯಾಸನಡಿಸಬಹುದು.—km. 11⁄81 ಪು.1, 7.
3 ಸಂದರ್ಶನಕ್ಕಾಗಿ ತಯಾರಿ: ಈ ಸಂದರ್ಶನದ ವಾರದ ಮೊದಲು, ಸೇವಾ ಮೇಲ್ವಿಚಾರಕನು ಆ ಗುಂಪಿನೊಂದಿಗೆ ಜತೆಗೂಡುವವರ ಸಭಾ ಪ್ರಚಾರಕ ರೆಕಾರ್ಡುಗಳನ್ನು ಪರೀಕ್ಷಿಸಬೇಕು. ಚಾಲಕನೊಂದಿಗೆ ಭೇಟಿಯಾಗಲು ಕೂಡ ಅವನು ಏರ್ಪಾಡು ಮಾಡತಕ್ಕದ್ದು ಮತ್ತು ಆ ಗುಂಪಿಗೆ ನೇಮಕವಾದ ಪ್ರಚಾರಕರ ಚಟುವಟಿಕೆಯನ್ನು ಪುನರಾವಲೋಕಿಸಬೇಕು. ಸೇವೆಗೆ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಯಾ ದಾಖಲೆಯ ಕಾರ್ಡುಗಳಲ್ಲಿ ವ್ಯಕ್ತವಾಗದ ಆವಶ್ಯಕತೆಗಳನ್ನು ಸೇವಾ ಮೇಲ್ವಿಚಾರಕನಿಗೆ ಚಾಲಕನು ತಿಳಿಯಪಡಿಸಬಹುದು. ಅಭ್ಯಾಸವು ಕೇವಲ 45 ನಿಮಿಶಗಳ ದೀರ್ಘದ್ದಾಗಿರಬೇಕೆಂದು ಅಭ್ಯಾಸ ಚಾಲಕನಿಗೆ ನೆನಪಿಸತಕ್ಕದ್ದು, ಆ ಮೂಲಕ ಸೇವಾ ಮೇಲ್ವಿಚಾರಕನಿಂದ 15 ನಿಮಿಶಗಳ ಸೇವಾ ಭಾಷಣ ಕೊಡಲು ಸಮಯವೊದಗುತ್ತದೆ.
4 ಶುಶ್ರೂಷೆಯ ಕಡೆಗೆ ಹೆಚ್ಚಿನ ಗಣ್ಯತೆಯು ಪ್ರವರ್ಧಿಸುವಂತೆ ಈ ಭಾಷಣದ ಧ್ಯೇಯವಾಗಿರುತ್ತದೆ. ಶುಶ್ರೂಷೆಯ ಯಾವುದೇ ಒಂದು ವಿಭಾಗದಲ್ಲಿ ಪ್ರಚಾರಕರಿಗೆ ಸಹಾಯದ ಜರೂರಿಯಿರುವದಾದರೆ, ಸೇವಾ ಮೇಲ್ವಿಚಾರಕನು ಪ್ರಗತಿಗಾಗಿ ವ್ಯಾವಹಾರಿಕ ಸಲಹೆಗಳನ್ನು ಕೊಡತಕ್ಕದ್ದು. ಅವನ ಹೇಳಿಕೆಗಳು ನಿರ್ಧಾರಾತ್ಮಕವಾಗಿರತಕ್ಕದ್ದು ಮತ್ತು ಪ್ರೋತ್ಸಾಹಕವಾಗಿರತಕ್ಕದ್ದೇ ಹೊರತು ನಕಾರಾತ್ಮಕ ಹೇಳಿಕೆಗಳಿಂದ ಯಾರೇ ಒಬ್ಬನನ್ನು ಪೇಚಾಟಕ್ಕೀಡುಮಾಡುವ ಯಾ ನಿರುತ್ಸಾಹಗೊಳಿಸುವದ್ದಾಗಿರಕೂಡದು. ಇದು ಅವನ ಸಂದರ್ಶನದ ಉದ್ದೇಶವನ್ನೇ ಸೋಲಿಸುತ್ತದೆ. ಎಲ್ಲರೂ ಪ್ರಗತಿ ಮಾಡುವಂತೆ ಅವನ ಭಾಷಣವು ಪ್ರೋತ್ಸಾಹಿಸತಕ್ಕದ್ದು.
5 ಅವನ ಕಾರ್ಯತಖ್ತೆಯು ಅನುಮತಿಸುವಷ್ಟರ ಮಟ್ಟಿಗೆ ಸೇವಾ ಮೇಲ್ವಿಚಾರಕನು ಆದಷ್ಟು ಹೆಚ್ಚು ಸಹೋದರ, ಸಹೋದರಿಯರಿಗೆ ವೈಯಕಿಕ್ತ ಸಹಾಯ ನೀಡಲು ಪ್ರಯತ್ನಿಸುವನು. ಸೇವೆಯಲ್ಲಿ ಬೇರೆ ಬೇರೆಯವರೊಡನೆ ಕೆಲಸಮಾಡಲು ಅವನು ನೇಮಕಗಳನ್ನು ಮಾಡಸಾಧ್ಯವಿದೆ. ಮನೆಯಿಂದ ಮನೆಗೆ ಪ್ರಚಾರಕರೊಂದಿಗೆ ಕೆಲಸ ಮಾಡುವಾಗ, ಅವರ ನೀಡುವಿಕೆಗಳನ್ನು ಪ್ರಗತಿಗೊಳಿಸುವ ಒಂದೆರಡು ಸಹಾಯಕಾರಿ ಸಲಹೆಗಳನ್ನು ಅವನು ನೀಡಬಹುದು. ಇದನ್ನು ಅವನು ಠೀಕಿಸುವ ರೀತಿಯಲ್ಲಿ ಮಾಡದೇ, ಸಹಾಯಕಾರಿಯಾಗಬೇಕೆಂಬ ಯಥಾರ್ಥವಾದ ಬಯಕೆಯಿಂದ ಇರಬೇಕು. ಪ್ರಚಾರಕರುಗಳೊಂದಿಗೆ ಪುನಃ ಸಂದರ್ಶನ ಮತ್ತು ಬೈಬಲ್ ಅಭ್ಯಾಸಗಳಲ್ಲಿ ಅವನು ಜತೆಯಾಗಿ ಹೋಗಬಹುದು. ಗುಂಪಿನಲ್ಲಿ ಯಾರಿಗಾದರೂ ವೈಯಕಿಕ್ತ ಸಹಾಯ ಬೇಕೆಂದು ಗೋಚರಿಸಿದರೆ, ಆ ವಾರದಲ್ಲಿ ಅವರಿಗೆ ಸಹಾಯ ಮಾಡಲು ಅವನು ಕುರೀಪಾಲನಾ ಕರೇಯೊಂದನ್ನು ಮಾಡಬಹುದು. ಅದರ ನಂತರ, ಕೊಡಲ್ಪಟ್ಟ ಸಲಹೆಗಳನ್ನು ಚಾಲಕನಿಗೆ ತಿಳಿಸಬಹುದು. ಈ ಬೆಚ್ಚಗೆನ, ವೈಯಕಿಕ್ತ ಗಮನವು, ಅವರ ಕ್ಷೇತ್ರಸೇವೆಯಲ್ಲಿ ಸ್ವಲ್ಪ ನಿಧಾನಿಸಿದವರಿಗೆ ಒಂದು ಉತ್ತೇಜಕವಾಗಿರುತ್ತದೆ.
6 ಸೇವೆಗಾಗಿ ಸೇರುವದು: ಆ ವಾರದ ಕ್ಷೇತ್ರ ಸೇವೆಗಾಗಿ ಕೂಟಗಳನ್ನು ಸೇವಾ ಮೇಲ್ವಿಚಾರಕನು ನಡಿಸತಕ್ಕದ್ದು. ಕೇವಲ ಕೆಲವರೇ ಇರುವದಾದರೂ, ನೇಮಿತ ಸಮಯದಲ್ಲಿ ಅವು ಆರಂಭಗೊಳ್ಳಬೇಕು. ಕೂಟವು 10ರಿಂದ 15 ನಿಮಿಷಗಳಿಗಿಂತ ಹೆಚ್ಚು ಉದ್ದವಾಗಿರಕೂಡದು. ದಿನದ ಶಾಸ್ತ್ರವಚನದ ಪರಿಗಣನೆಯು ಐಚ್ಛಿಕವಾದದ್ದು. ಗುಂಪು ಕಳುಹಿಸಲ್ಪಡುವ ಮೊದಲು, ಎಲ್ಲಿ ಮತ್ತು ಯಾರು ಯಾರೊಂದಿಗೆ ಕೆಲಸಮಾಡುವರು ಎಂದು ಪ್ರತಿಯೊಬ್ಬನಿಗೆ ಗೊತ್ತಿರಬೇಕು. (1 ಕೊರಿಂ. 14:33, 40) ತಡಮಾಡದೇ ಪ್ರತಿಯೊಬ್ಬನು ಕ್ಷೇತ್ರ ಸೇವೆಗೆ ಹೋಗುವಂತೆ ಸೇವಾ ಮೇಲ್ವಿಚಾರಕನು ಹುರಿದುಂಬಿಸತಕ್ಕದ್ದು.
7 ಪುಸ್ತಕ ಅಭ್ಯಾಸ ಗುಂಪುಗಳಿಗೆ ಸೇವಾ ಮೇಲ್ವಿಚಾರಕನ ಕ್ರಮದ ಸಂದರ್ಶನಗಳು ಸಭೆಗೆ ನಿಜವಾಗಿಯೂ ಒಂದು ಆಶೀರ್ವಾದವಾಗಿರಬಲ್ಲವು. ಅವನು ಸಂದರ್ಶಿಸುವಾಗ, ನಮ್ಮಲ್ಲಿ ಪ್ರತಿಯೊಬ್ಬನು ಅವನೊಂದಿಗೆ ಸಹಕರಿಸುವದರಿಂದ, ನಮ್ಮ ಶುಶ್ರೂಷೆಯು ಕ್ರಮಬದ್ಧವಾದದ್ದೂ, ಪರಿಣಾಮಕಾರಿಯಾದದ್ದೂ ಆಗುವದು. ಹೆಚ್ಚಾಗಿ, ಅವನು ತನ್ನ ಕೆಲಸದಿಂದ ಆನಂದವನ್ನು ಪಡೆಯುವನು. (ಇಬ್ರಿ. 13:17) ಕುರೀಗಳಂಥವರು ಒಟ್ಟುಗೂಡಿಸಲ್ಪಡುವರು, ಮತ್ತು ಆಲಿಸುವ ಎಲ್ಲರಿಗೂ ಸಾರಲಿರುವ ನಮ್ಮ ನಿಯೋಗವನ್ನು ನಾವು ಪೂರೈಸುತ್ತಲಿದ್ದೇವೆ ಎಂದು ತಿಳಿಯುವ ಆನಂದವು ನಮ್ಮದಾಗುವದು.—ಯೆಶಾ. 61:1, 2; ಯೆಹೆ. 9:11; ಯೋಹಾನ. 17:26.