ಭಾರತೀಯ ಭಾಷೆಗಳಲ್ಲಿ ಉಪಯೋಗಿಸಲ್ಪಡುವ ಪ್ರಾಣ ಎಂಬ ಪದ
ಭಾರತೀಯ ಭಾಷೆಂಯ ಬರಹಗಾರರು ಅಥವಾ ಭಾಷಣಕರ್ತರು ಅಮರತ್ವದ ಬೋಧನೆಯನ್ನು ಉಲ್ಲೇಖಿಸುವಾಗ, ಅವರ ನಂಬಿಕೆಗನುಸಾರ, ವ್ಯಕ್ತಿಯೊಬ್ಬನಲ್ಲಿ ಸಾಯದೇ ಇರುವ ಭಾಗಕ್ಕೆ ಸೂಚಿಸಲು, ಅವರು ಯಾವಾಗಲೂ ಆತ್ಮ ಎಂಬ ಪದವನ್ನು ಉಪಯೋಗಿಸುತ್ತಾರೆ. ಆದರೆ ಕ್ರೈಸ್ತಪ್ರಪಂಚದ ಬೈಬಲ್ ಭಾಷಾಂತರಗಳಲ್ಲಿ ನ್ಯೂಮಾ (ಇಂಗ್ಲಿಷ್: ಸ್ಪಿರಿಟ್) ಎಂಬ ಗ್ರೀಕ್ ಪದವನ್ನು ಭಾಷಾಂತರಿಸಲಿಕ್ಕಾಗಿ ಈ ಪದವನ್ನೇ ಉಪಯೋಗಿಸಲಾಗಿದೆ. ಕೆಲವೊಮ್ಮೆ ಅವರು ಹಿಬ್ರೂ ಪದವಾದ ನೆಫೆತ್ (ಇಂಗ್ಲಿಷ್: ಸೋಲ್) ಅನ್ನು ಪ್ರಾಣ ಎಂದು ಭಾಷಾಂತರಿಸಿದ್ದಾರೆ. ಮನುಷ್ಯನು ಒಂದು ಪ್ರಾಣ (ಹಿಬ್ರೂ: ನೆಫೆಶ್) “ಆಗಿದ್ದಾನೆ” ಎಂಬುದನ್ನು ತಿಳಿದಿದ್ದು, ಅವನಿಗೆ, ಒಂದು ಆತ್ಮ ಅಥವಾ ಅವನಲ್ಲಿ ಒಂದು ಅಮರ ಭಾಗವಿದೆ ಎಂಬುದಾಗಿ ಇನ್ನೂ ಭಾವಿಸುವುದು ಸ್ವಭಾವಿಕವೇ.
ಮರಣದ ಆನಂತರ ದೇಹವನ್ನು ಬಿಟ್ಟು, ಬದುಕಿ ಉಳಿಯುವ ಯಾವುದೋ ಒಂದು ಅಮರ ಭಾಗ ಮನುಷ್ಯನಲ್ಲಿ ಇಲ್ಲವೆಂಬ ಬೈಬಲ್ ಸತ್ಯವನ್ನು ಸ್ಪಷ್ಟವಾಗಿ ಎತ್ತಿತೋರಿಸಲಿಕ್ಕಾಗಿ, ಮರಣಾನಂತರದ ಜೀವಿತದ ಕಲ್ಪನೆಯ ಬಗ್ಗೆ ಚರ್ಚಿಸಿರುವ, ನಮ್ಮ ದೇಶೀಯ ಪ್ರಕಾಶನಗಳಲ್ಲಿ ಕೆಲವೊಂದು ಭಾಗಗಳನ್ನು ನಾವು ಸರಿಹೊಂದಿಸಬೇಕಾಯಿತು. ಇದರ ಒಂದು ಉದಾಹರಣೆಯನ್ನು ಜುಲೈ 1, 1998ರ ಕಾವಲಿನಬುರುಜು ಪತ್ರಿಕೆಯ ಮೂರು ಅಭ್ಯಾಸ ಲೇಖನಗಳಲ್ಲಿ ನೋಡಸಾಧ್ಯವಿದೆ.