ಮುಂದಾಳತ್ವವನ್ನು ವಹಿಸುವ ಮೇಲ್ವೀಚಾರಕರು—ದೇವಪ್ರಭುತ್ವ ಶುಶ್ರೂಷಾ ಶಾಲೆ ಮೇಲ್ವಿಚಾರಕ
1 ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮೇಲ್ವಿಚಾರಕನು ಆತ್ಮಿಕವಾಗಿ ಒಬ್ಬ ಪ್ರೌಢ ವ್ಯಕ್ತಿಯಾಗಿದ್ದಾನೆ. ಅವನು ಮಾತುಕತೆಯಲ್ಲಿ ಮತ್ತು ಕಲಿಸುವದರಲ್ಲಿ ತುಂಬ ಪರಿಶ್ರಮಿಸುತ್ತಾನೆ. ಹಾಗೂ ನಮ್ಮಿಂದ ಮರ್ಯಾದೆ ಮತ್ತು ಸಹಕಾರವನ್ನು ಪಡೆದುಕೊಳ್ಳಲು ಅರ್ಹನಾಗಿದ್ದಾನೆ. (1 ತಿಮೊ. 5: 17) ಅವನ ಜವಾಬ್ದಾರಿಗಳೇನಾಗಿವೆ?
2 ರಾಜ್ಯಸಭಾಗೃಹದಲ್ಲಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಲೈಬ್ರರಿಯನ್ನು ಅವನು ನೋಡಿಕೊಳ್ಳುತ್ತಾನೆ. ಆ ಶಾಲೆಯಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಳ್ಳಲು ಅರ್ಹರಾಗಿರುವವರೆಲ್ಲರನ್ನೂ ಉತ್ತೇಜಿಸುವುದರಲ್ಲಿ ಅವನು ತುಂಬ ಆಸಕ್ತಿಯುಳ್ಳವನಾಗಿದ್ದಾನೆ. ಪ್ರತಿಯೊಂದು ಶಾಲೆಯ ಕಾರ್ಯಕ್ರಮಕ್ಕೆ ಕಡಿಮೆ ಪಕ್ಷ ಮೂರು ವಾರಗಳ ಮುಂಚಿತವಾಗಿಯೇ ಒಂದು ಕ್ರಮವಾದ ರೀತಿಯಲ್ಲಿ ನೇಮಕಗಳು ಮಾಡಲ್ಪಡುವಂತೆ, ನಿಷ್ಕೃಷ್ಟ ರೆಕಾರ್ಡ್ ಇಡಲ್ಪಟ್ಟಿದೆಯೆಂಬದನ್ನು ಅವನು ಖಚಿತಪಡಿಸಿಕೊಳ್ಳುತ್ತಾನೆ. ಅವನಿಗೆ ಸಭೆಯ ಒಳ್ಳೆಯ ಪರಿಚಯವಿರಬೇಕು. ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಮತ್ತು ಅವನ ಸಾಮರ್ಥ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ಶಾಲಾ ಶೆಡ್ಯೂಲನ್ನು ಸಿದ್ಧಪಡಿಸುವುದರಲ್ಲಿ ಅವನಿಗೆ ಮತ್ತೊಬ್ಬ ಸಹೋದರನು ಸಹಾಯಮಾಡಬಹುದಾದರೂ, ಭಾಗಗಳನ್ನು ಸರಿಯಾಗಿ ನೇಮಿಸುವುದು ಮೇಲ್ವಿಚಾರಕನ ವೈಯಕ್ತಿಕ ಉಸ್ತುವಾರಿಯನ್ನು ಕೇಳಿಕೊಳ್ಳುತ್ತದೆ.
3 ಶಾಲೆಯಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ ಕಲಿಸಬೇಕಾದರೆ, ಮೇಲ್ವಿಚಾರಕನು ನೇಮಿತ ವಿಷಯವನ್ನು ಚೆನ್ನಾಗಿ ಅಭ್ಯಾಸಮಾಡಿ, ಪ್ರತಿವಾರವೂ ಶ್ರದ್ಧೆಯಿಂದ ತಯಾರಿಸತಕ್ಕದ್ದು. ಇದು ಕಾರ್ಯಕ್ರಮದ ಕುರಿತಾಗಿ ಸಭೆಯು ಉತ್ಸಾಹದಿಂದಿರಲು, ನೇಮಿತ ವಿಷಯವು ನಿಷ್ಕೃಷ್ಟವಾಗಿ ಆವರಿಸಲಾಗುತ್ತಿದೆ ಎಂಬುದನ್ನು ನಿರ್ಧರಿಸಲು, ಮತ್ತು ಲಿಖಿತ ಪುನರ್ವಿವರ್ಶೆಯಲ್ಲಿ ಬರಲಿರುವ ಪ್ರಮುಖ ಅಂಶಗಳನ್ನು ಎತ್ತಿತೋರಿಸಲು ಅವನಿಗೆ ಸಹಾಯಮಾಡುವುದು.
4 ಪ್ರತಿಯೊಂದು ವಿದ್ಯಾರ್ಥಿ ಭಾಷಣದ ಆನಂತರ, ಮೇಲ್ವೀಚಾರಕನು ವಿದ್ಯಾರ್ಥಿಯನ್ನು ಶ್ಲಾಘಿಸುವನು ಮತ್ತು ಒಂದು ನಿರ್ದಿಷ್ಟ ಭಾಷಣದ ಗುಣಮಟ್ಟವು ಏಕೆ ಒಳ್ಳೆಯದಾಗಿತ್ತೆಂಬುದನ್ನು ಅಥವಾ ಅದನ್ನು ಏಕೆ ಉತ್ತಮಗೊಳಿಸುವುದು ಅವಶ್ಯಕದೆಂಬುದನ್ನು ವಿವರಿಸುವನು. ಆದರೆ ಒಬ್ಬ ವಿದ್ಯಾರ್ಥಿಗೆ ಶಾಲಾ ನೇಮಕಗಳನ್ನು ತಯಾರಿಸುವುದಕ್ಕೆ ಇನ್ನೂ ಹೆಚ್ಚಿನ ಕಲಿಸುವಿಕೆಯು ಬೇಕಾಗಿರುವಲ್ಲಿ, ಮೇಲ್ವಚಾರಕನು ಇಲ್ಲವೇ ಅವನಿಂದ ನೇಮಿಸಲ್ಪಟ್ಟವನು ವೈಯಕ್ತಿಕ ಸಹಾಯವನ್ನು ಒದಗಿಸಬಲ್ಲನು.
5 ದೇವಪ್ರಭುತ್ವ ಶುಶ್ರೂಷಾ ಶಾಲೆ ಮೇಲ್ವೀಚಾರಕನ ಮತ್ತು ಅವನ ನಿರ್ದೇಶನದ ಕೆಳಗೆ ಕೆಲಸಮಾಡುವ ಇನ್ನೂ ಬೇರೆ ಸಲಹೆಗಾರರ ಕಠಿನ ಪರಿಶ್ರಮದಿಂದ ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ನಾವು ಶಾಲೆಗೆ ಕ್ರಮವಾಗಿ ಹಾಜರಾಗತಕ್ಕದ್ದು. ನಮಗೆ ನೀಡಲಾಗುವ ಎಲ್ಲ ನೇಮಕಗಳನ್ನು ನಾವು ಮಾಡಬೇಕು ಮತ್ತು ನಮಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ನೀಡಲಾಗುವ ಸಲಹೆಯನ್ನು ಸಹ ನಾವು ಅನ್ವಯಿಸಿಕೊಳ್ಳತಕ್ಕದ್ದು. ಈ ರೀತಿಯಲ್ಲಿ ರಾಜ್ಯದ ಸಂದೇಶವನ್ನು ಸಾರ್ವಜನಿಕವಾಗಿ ಮತ್ತು ಮನೆಯಿಂದ ಮನೆಗೆ ಪ್ರಚುರಪಡಿಸುವುದರಲ್ಲಿ ನಾವು ಹೆಚ್ಚುಹೆಚ್ಚೆಂದಾಗಿ ಅಭಿವೃದ್ಧಿಪಡಿಸುವೆವು.–ಅ, ಕೃ. 20: 20; 1 ತಿಮೊ. 4: 13, 15.