ಪ್ರಕಟನೆಗಳು
◼ ಆಗಸ್ಟ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಈ ಕೆಳಗೆ ತಿಳಿಸಲ್ಪಟ್ಟಿರುವ ಯಾವುದೇ 32-ಪುಟದ ಬ್ರೋಷರುಗಳನ್ನು ಉಪಯೋಗಿಸಬಹುದು: ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರಲಿರುವ ಸರಕಾರ (ಇಂಗ್ಲಿಷ್), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್), ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್) ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯು ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು. ನವೆಂಬರ್: ರಾಜ್ಯ ವಾರ್ತೆಗಳು ನಂ. 36, “ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ” ಎಂಬುದರ ವಿತರಣೆ. ಸಭೆಗಳು ತಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರಿಗೂ ರಾಜ್ಯ ವಾರ್ತೆ ನಂ. 36ನ್ನು ನೀಡಿದ ಬಳಿಕ, ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ನೀಡಬಹುದು. ಈ ಬ್ರೋಷರ್ ಅಥವಾ ಪುಸ್ತಕವು ಜನರ ಬಳಿ ಈಗಾಗಲೇ ಇರುವುದಾದರೆ, ಸದಾ ಜೀವಿಸಬಲ್ಲಿರಿ ಅಥವಾ ಸೃಷ್ಟಿ (ಇಂಗ್ಲಿಷ್) ಪುಸ್ತಕವನ್ನು ಕೊಡಬಹುದು.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಸೆಪ್ಟೆಂಬರ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯನ್ನು ಓದಿದ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಇಸವಿ 2001ರ ಸೇವಾ ವರ್ಷದಲ್ಲಿ ಉಪಯೋಗಿಸಲಿಕ್ಕಾಗಿ ಸಾಕಷ್ಟು ಫಾರ್ಮ್‌ಗಳನ್ನು ಪ್ರತಿ ಸಭೆಗೆ ಕಳುಹಿಸಲಾಗುತ್ತಿದೆ. ದಯವಿಟ್ಟು ಈ ಫಾರ್ಮ್‌ಗಳನ್ನು ಜಾಗರೂಕತೆಯಿಂದ ಉಪಯೋಗಿಸಿ. ಅವುಗಳು ಯಾವ ಉದ್ದೇಶಕ್ಕಾಗಿ ಕಳುಹಿಸಲ್ಪಟ್ಟಿವೆಯೋ ಅದಕ್ಕಾಗಿಯೇ ಬಳಸಿರಿ.
◼ ಸ್ಟಾಕಿನಲ್ಲಿರುವ ಎಲ್ಲ ಸಾಹಿತ್ಯ ಹಾಗೂ ಪತ್ರಿಕೆಗಳ ವಾರ್ಷಿಕ ಇನ್ವೆಂಟರಿಯನ್ನು ಆಗಸ್ಟ್ 31, 2000ಕ್ಕೆ ಮುಂಚೆ ಮಾಡಬೇಕು. ಈ ಇನ್ವೆಂಟರಿಯು ಲಿಟರೇಚರ್ ಸಂಯೋಜಕನಿಂದ ಮಾಸಿಕವಾಗಿ ಮಾಡುವ ಲೆಕ್ಕದಂತೆಯೇ ಇರುವುದು. ಮತ್ತು ಮೊತ್ತಗಳನ್ನು ಲಿಟರೇಚರ್ ಇನ್ವೆಂಟರಿ ಫಾರ್ಮ್ (S(d)-18)ನಲ್ಲಿ ಬರೆಯಬೇಕು. ಸಾಹಿತ್ಯದ ಗುಂಪಿನಲ್ಲಿರುವ ಪ್ರತಿಯೊಂದು ಸಭೆಯ ಪತ್ರಿಕಾ ಸೇವಕರಿಂದ, ಒಟ್ಟಿನಲ್ಲಿ ಎಷ್ಟು ಪತ್ರಿಕೆಗಳಿವೆ ಎಂಬುದನ್ನು ಕೇಳಿ ತಿಳಿದುಕೊಳ್ಳಬಹುದು. ಸಹಯೋಜನೆಯನ್ನು ಮಾಡುವ ಪ್ರತಿಯೊಂದು ಸಭೆಯು ಮೂರು (S(d)-18) ಲಿಟರೇಚರ್ ಇನ್ವೆಂಟರಿ ಫಾರ್ಮುಗಳನ್ನು ಪಡೆದುಕೊಳ್ಳುವವು. ದಯವಿಟ್ಟು ಮೂಲ ಪ್ರತಿಯನ್ನು ಸೆಪ್ಟೆಂಬರ್ 6ನೆಯ ತಾರೀಖಿನೊಳಗೆ ಸೊಸೈಟಿಗೆ ಅಂಚೆಯ ಮೂಲಕ ಕಳುಹಿಸಿಕೊಡಿ. ಒಂದು ನಕಲಿ ಪ್ರತಿಯನ್ನು ನಿಮ್ಮ ಫೈಲ್‌ಗಳಿಗಾಗಿ ಇಟ್ಟುಕೊಳ್ಳಿ. ಮೂರನೆಯ ಪ್ರತಿಯು ಒಂದು ವರ್ಕ್ ಷೀಟ್ ಆಗಿ ಉಪಯೋಗಿಸಲ್ಪಡಬಹುದು. ಸಹಯೋಜಕ ಸಭೆಯ ಸೆಕ್ರಿಟರಿಯು ಇನ್ವೆಂಟರಿಯನ್ನು ಪರಿಶೀಲಿಸುವನು. ಸಹಯೋಜಕ ಸಭೆಯ ಸೆಕ್ರಿಟರಿ ಹಾಗೂ ಅಧ್ಯಕ್ಷ ಮೇಲ್ವಿಚಾರಕರು ಫಾರ್ಮ್‌ನ ಮೇಲೆ ಸಹಿಹಾಕುವರು.
◼ ಆಗಸ್ಟ್ 24, 2000ದಿಂದ ಆಗಸ್ಟ್ 31ರ 2000ದ ವರೆಗೆ, ಲೋನಾವ್ಲ ಬೆತೆಲಿನ ಸ್ಟಾಕಿನಲ್ಲಿರುವ ಎಲ್ಲ ಸಾಹಿತ್ಯದ ಲೆಕ್ಕವನ್ನು ಸೊಸೈಟಿಯು ತೆಗೆದುಕೊಳ್ಳಲಿರುವುದು. ಇದರಿಂದಾಗಿ ಯಾವುದೇ ಸಭೆಯ ಸಾಹಿತ್ಯ ವಿನಂತಿಯನ್ನು ಆ ಸಮಯದಲ್ಲಿ ಕಳುಹಿಸಿಕೊಡಲಾಗುವುದಿಲ್ಲ.