ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 2000ದ ಮೇ 1ರಿಂದ ಆಗಸ್ಟ್ 21ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಎಫ್ರಾಯೀಮ್ಯರ ವಿಚಾರಹೀನ ಮಾತಿನ ದಾಳಿಗೆ ಗಿದ್ಯೋನನು ಪ್ರತಿಕ್ರಿಯಿಸಿದಂತಹ ರೀತಿಯು, ಅವನ ಮೃದು ಸ್ವಭಾವವನ್ನು ಹಾಗೂ ದೀನಭಾವವನ್ನು ಪ್ರತಿಬಿಂಬಿಸಿತದಲ್ಲದೆ, ಅವರ ಅನುಚಿತ ಟೀಕಾತ್ಮಕ ಮನೋಭಾವವನ್ನು ದೂರಮಾಡಿ, ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮಾಡಿತು. (ನ್ಯಾಯ. 8:1-3) [ವಾರದ ಬೈಬಲ್ ವಾಚನ]
2. ‘ನಾವು . . . ದೇವರನ್ನು ಕಣ್ಣಾರೆ ಕಂಡೆವು’ ಎಂದು ಮಾನೋಹನು ಹೇಳಿದನಾದರೂ, ವಾಸ್ತವದಲ್ಲಿ ಅವನು ಹಾಗೂ ಅವನ ಪತ್ನಿಯು ಕಂಡದ್ದು ಸ್ವತಃ ಯೆಹೋವನನ್ನಲ್ಲ, ಬದಲಾಗಿ ದೇವರ ಪರವಾಗಿ ಮಾತಾಡಲು ದೈಹಿಕವಾಗಿ ಕಾಣಿಸಿಕೊಂಡ ವೈಯಕ್ತಿಕ ವದನಕನನ್ನೇ. (ನ್ಯಾಯ. 13:22, 23) [ವಾರದ ಬೈಬಲ್ ವಾಚನ; w88 5/15 ಪು. 23 ಪ್ಯಾರ. 3ನ್ನು ನೋಡಿರಿ.]
3. ತನ್ನ ಗಂಡನಿಂದ ಸನ್ಮಾನಿಸಲ್ಪಟ್ಟು ಆಳವಾಗಿ ಪ್ರೀತಿಸಲ್ಪಡುತ್ತೇನೆಂಬ ಭಾವನೆಯು ಹೆಂಡತಿಗೆ ಅವಶ್ಯವಿರುವಂತೆಯೇ, ತನ್ನ ಹೆಂಡತಿಯಿಂದ ಗೌರವಿಸಲ್ಪಡುತ್ತೇನೆಂಬ ಅನಿಸಿಕೆಯ ಆವಶ್ಯಕತೆ ಗಂಡನಿಗಿರುತ್ತದೆ. [kl ಪು. 144 ಪ್ಯಾರ. 12]
4. ನಮ್ಮ ಪ್ರಾರ್ಥನೆಗಳಲ್ಲಿ ನಮ್ಮ ಆವಶ್ಯಕತೆಗಳಿಗಾಗಿ ಕೇಳಿಕೊಳ್ಳುವುದಕ್ಕೇ ಆದ್ಯತೆಯ ಅಗ್ರಸ್ಥಾನವಿರಬೇಕು. [kl ಪು. 155 ಪ್ಯಾರ. 13]
5. ನ್ಯಾಯಸ್ಥಾಪಕರು 21:25ನೆಯ ವಚನವು, ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಯಾವ ಮಾರ್ಗದರ್ಶನವನ್ನೂ ಕೊಡದಿದ್ದಂತಹ ಒಂದು ಕಾಲಾವಧಿಯನ್ನು ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w-KA95 6/15 ಪು. 22 ಪ್ಯಾರ. 16ನ್ನು ನೋಡಿರಿ.]
6. ಒಡಂಬಡಿಕೆಯ ಮಂಜೂಷದ ಮೇಲಿದ್ದ ಕೆರೂಬಿಯರ ಆಕೃತಿಗಳು, “ಕೆರೂಬಿಯರ ಮೇಲೆ [ಅಥವಾ, “ಮಧ್ಯದಲ್ಲಿ”] ಆಸೀನನಾಗಿರು”ವವನೆಂದು ಹೇಳಲಾಗುವ ಯೆಹೋವನ ರಾಜಯೋಗ್ಯ ಸಾನ್ನಿಧ್ಯವನ್ನು ಸೂಚಿಸಿತು. (1 ಸಮು. 4:4, NW ಪಾದಟಿಪ್ಪಣಿ.) [ವಾರದ ಬೈಬಲ್ ವಾಚನ; w80 11/1 ಪು. 29 ಪ್ಯಾರ. 2ನ್ನು ನೋಡಿರಿ.]
7. ಒಂದು ಹತಾಶ ಸನ್ನಿವೇಶದ ಕೆಳಗೆ ಸೌಲನ ಸೈನಿಕರು ರಕ್ತವನ್ನು ಸೇವಿಸಿದರೂ ಅವರಿಗೆ ಯಾವ ಶಿಕ್ಷೆಯೂ ಕೊಡಲ್ಪಡದಿದ್ದದ್ದು, ಒಬ್ಬ ವ್ಯಕ್ತಿಯ ಜೀವವನ್ನು ಕಾಪಾಡಲಿಕ್ಕಾಗಿ ದೈವಿಕ ನಿಯಮವನ್ನು ತಾತ್ಕಾಲಿಕವಾಗಿ ಕಡೆಗಣಿಸುವುದಕ್ಕೆ ಸಮರ್ಥನೀಯ ಕಾರಣಗಳಿರಬಹುದು ಎಂಬುದನ್ನು ತೋರಿಸಿತು. (1 ಸಮು. 14:24-35) [ವಾರದ ಬೈಬಲ್ ವಾಚನ; w-KA94 4/15 ಪು. 31 ಪ್ಯಾರ. 7-9 ನ್ನು ನೋಡಿರಿ.]
8. “ಮನವೊಪ್ಪಿಸು” ಎಂಬ ಶಬ್ದವನ್ನು ಕೆಲವರು ಕುತಂತ್ರ ಹಾಗೂ ಜಾಣ್ಮೆಯೊಂದಿಗೆ ಸಂಬಂಧಿಸುತ್ತಾರಾದರೂ, ಮನಗಾಣಿಸುವಂತಹ ಮತ್ತು ಸದೃಢವಾದ, ಅಂದರೆ ತರ್ಕಬದ್ಧವಾದ ವಾದದ ಮೂಲಕ ಮನಸ್ಸನ್ನು ಬದಲಾಯಿಸುವ ಅನಿಸಿಕೆಯನ್ನು ಕೊಡಲಿಕ್ಕಾಗಿ ಅದನ್ನು ಸಕಾರಾತ್ಮಕ ಅರ್ಥದಲ್ಲಿಯೂ ಉಪಯೋಗಿಸಸಾಧ್ಯವಿದೆ. (2 ತಿಮೊ. 3:14, 15) [w-KA98 5/15 ಪು. 21 ಪ್ಯಾರ. 4]
9. “ಜೀವನಿಕ್ಷೇಪ” ಎಂಬುದು, ದೇವರ ರಕ್ಷಣೆ ಹಾಗೂ ಕಾಪಾಡುವಿಕೆಯ ಒದಗಿಸುವಿಕೆಗೆ ಸೂಚಿತವಾಗಿದ್ದು, ಒಂದುವೇಳೆ ದಾವೀದನು ದೇವರ ದೃಷ್ಟಿಯಲ್ಲಿ ರಕ್ತಾಪರಾಧವನ್ನು ಮಾಡದಿದ್ದಲ್ಲಿ ಅದರಿಂದ ಅವನು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿತ್ತು. (1 ಸಮು. 25:29) [ವಾರದ ಬೈಬಲ್ ವಾಚನ; w91 6/15 ಪು. 14 ಪ್ಯಾರ. 3 ನ್ನು ನೋಡಿರಿ.]
10. ಎರಡನೆಯ ಸಮುವೇಲ 7:16ರಲ್ಲಿ ತಿಳಿಸಲ್ಪಟ್ಟಿರುವ ದಾವೀದ ಸಂಬಂಧಿತ ರಾಜ್ಯದೊಡಂಬಡಿಕೆಯು, ಮೆಸ್ಸೀಯನಿಗೆ ನಡೆಸುತ್ತಿದ್ದ ಸಂತತಿಯ ವಂಶಾವಳಿಯನ್ನು ಸಂಕುಚಿತಗೊಳಿಸಿತು ಮತ್ತು ದಾವೀದನ ವಂಶದಲ್ಲಿ ಬರುವ ಒಬ್ಬನು ‘ಶಾಶ್ವತವಾಗಿ’ ಆಳುವನೆಂಬುದಕ್ಕೆ ಅದು ಶಾಸನಬದ್ಧ ಖಾತ್ರಿಯಾಗಿತ್ತು. [ವಾರದ ಬೈಬಲ್ ವಾಚನ; w89 2/1 ಪು. 14 ಪ್ಯಾರ. 21-ಪು. 15 ಪ್ಯಾರ. 22 ನ್ನು ನೋಡಿರಿ.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಕೀರ್ತನೆ 34:18 ಯಾವ ಆಶ್ವಾಸನೆಯನ್ನು ಕೊಡುತ್ತದೆ? [w-KA98 4/1 ಪು. 31 ಪ್ಯಾರ. 2]
12. ಯೋಸೇಫನಿಗೆ ಬಾರ್ನಬ ಎಂಬ ಅಡ್ಡಹೆಸರು ಕೊಡಲ್ಪಟ್ಟಿತ್ತು ಎಂಬ ಸಂಗತಿಯು ಏನನ್ನು ಸೂಚಿಸಿತು? (ಅ. ಕೃತ್ಯಗಳು 4:36) [w-KA98 4/15 ಪು. 20 ಪ್ಯಾರ. 3 ರ ಪಾದಟಿಪ್ಪಣಿ]
13. ಏಲಿಯು ಯೆಹೋವನನ್ನು ಗೌರವಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ಪುತ್ರರನ್ನು ಗೌರವಿಸುತ್ತಾ ಇದ್ದನು ಎಂದು ಬೈಬಲ್ ವೃತ್ತಾಂತವು ಏಕೆ ಹೇಳುತ್ತದೆ? (1 ಸಮು. 2:12, 22-24, 29) [ವಾರದ ಬೈಬಲ್ ವಾಚನ; w-KA96 9/15 ಪು. 13 ಪ್ಯಾರ. 14 ನ್ನು ನೋಡಿರಿ.]
14. ‘ನಾವು ಕೇಳುವುದಕ್ಕಿಂತ ಮೊದಲೇ ನಮಗೆ ಏನು ಅಗತ್ಯವೆಂದು ದೇವರು ಬಲ್ಲವನಾಗಿದ್ದರೆ,’ ನಾವು ಸಹಾಯಕ್ಕಾಗಿ ಆತನಿಗೆ ಏಕೆ ಪ್ರಾರ್ಥಿಸಬೇಕು? [kl ಪು. 151, ಪ್ಯಾರ. 4]
15. ಒಂದನೆಯ ಸಮುವೇಲ 1:1-7ಕ್ಕನುಸಾರ, ಸಮುವೇಲನ ಕುಟುಂಬದಿಂದ ಯಾವ ಎದ್ದುಕಾಣುವಂತಹ ಮಾದರಿಯು ಇಡಲ್ಪಟ್ಟಿತು? [ವಾರದ ಬೈಬಲ್ ವಾಚನ; w-KA98 3/1 ಪು. 16 ಪ್ಯಾರ. 12 ನ್ನು ನೋಡಿರಿ.]
16. ‘ಐಶ್ವರ್ಯದ ಬಲವು ಮೋಸಕರವಾದದ್ದು’ ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ? (ಮತ್ತಾ. 13:22) [w-KA98 5/15 ಪು. 5 ಪ್ಯಾರ. 1]
17. ಹಿರಿಯನಾದ ಯೋನಾತಾನನು, ಯೆಹೋವನ ಅಭಿಷಿಕ್ತ ಸೇವಕನಾಗಿದ್ದ ದಾವೀದನನ್ನು ತಾನು ಅಂಗೀಕರಿಸಿದ್ದೇನೆಂಬುದನ್ನು ಹೇಗೆ ವ್ಯಕ್ತಪಡಿಸಿದನು, ಮತ್ತು ಇಂದು ಇದು ಏನನ್ನು ಪ್ರತಿನಿಧಿಸುತ್ತದೆ? (1 ಸಮು. 18:1, 3, 4) [ವಾರದ ಬೈಬಲ್ ವಾಚನ; w89 1/1 ಪು. 24, 26 ಪ್ಯಾರ. 4, 13 ನ್ನು ನೋಡಿರಿ.]
18. ಯೋಬನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದರೂ, ಅವನು ಪರಿಪೂರ್ಣನಾಗಿದ್ದನೆಂಬುದನ್ನು ಇದು ಅರ್ಥೈಸಲಿಲ್ಲ ಎಂದು ಯೋಬನ ಪುಸ್ತಕವು ಹೇಗೆ ತೋರಿಸುತ್ತದೆ? (ಯೋಬ 1:8) [w-KA98 5/1 ಪು. 31 ಪ್ಯಾರ. 1]
19. “ಕಷ್ಟಪಟ್ಟು ಹೆಣಗಾಡಿರಿ” ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ? (ಲೂಕ 13:24) [w-KA98 6/15 ಪು. 31 ಪ್ಯಾರ. 1, 4]
20. ಎರಡನೆಯ ಸಮುವೇಲ 12:26-28ರಲ್ಲಿ ದಾಖಲಿಸಲ್ಪಟ್ಟಿರುವಂತೆ, ನಾವು ಇತರರೊಂದಿಗೆ ಕೆಲಸಮಾಡುವಾಗ ಯಾವ ಅಮೂಲ್ಯ ಪಾಠವನ್ನು ಹೃದಯಕ್ಕೆ ತೆಗೆದುಕೊಳ್ಳಸಾಧ್ಯವಿದೆ? [ವಾರದ ಬೈಬಲ್ ವಾಚನ; w-KA93 12/1 ಪು. 19 ಪ್ಯಾರ. 19 ನ್ನು ನೋಡಿರಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಕರ್ತವ್ಯ ನಿಷ್ಠೆಯು ವಿವಾಹಕ್ಕೆ _________________________ ಮತ್ತು _________________________ಯನ್ನು ಕೊಡುತ್ತದೆ. [kl ಅಧ್ಯಾ. 141 ಪ್ಯಾರ. 6]
22. ಸಾ.ಶ. ಒಂದನೆಯ ಶತಮಾನದಲ್ಲಿ, ಯೆಹೋವನು _________________________ ಯನ್ನು ಉತ್ಪಾದಿಸಿದನು. ಸಭೆಗಳು ರಚಿಸಲ್ಪಟ್ಟವು, ಮತ್ತು ಅವು ಅಪೊಸ್ತಲರು ಹಾಗೂ ಹಿರೀ ಪುರುಷರಿಂದ ರಚಿತವಾಗಿದ್ದ ಒಂದು _________________________ಯ ನಿರ್ದೇಶನದಲ್ಲಿ ಕೆಲಸ ನಡೆಸಿದವು. (ಅ. ಕೃತ್ಯಗಳು 15:22-31) [kl ಪು. 160 ಪ್ಯಾರ. 3]
23. ಯೆಹೋವ ಎಂಬ ದೈವಿಕ ಹೆಸರಿನ ಅರ್ಥ _________________________ ___________________ ಎಂದಾಗಿದ್ದು, ತನ್ನ _________________________ ನೆರವೇರಿಸುವ ಸಲುವಾಗಿ ಆತನು ಏನಾಗಿ ಪರಿಣಮಿಸುವ ಅಗತ್ಯವಿದೆಯೊ ಅಂತಹ ಯಾವುದೇ ಪಾತ್ರವನ್ನು ಯೆಹೋವನು ಪೂರೈಸಬಲ್ಲನು ಎಂಬುದನ್ನು ಸೂಚಿಸುತ್ತದೆ. [w-KA98 5/1 ಪು. 5 ಪ್ಯಾರ. 3]
24. ಸಭೆಯ ಟೆರಿಟೊರಿಯಲ್ಲಿ ಎಲ್ಲ ತರಹದ ಜನರಿಗೆ ಸುವಾರ್ತೆಯನ್ನು ಸಾರುವುದು, _________________________ವರನ್ನು ಕಂಡುಹಿಡಿಯುವ ಒಂದು ವಿಧವಾಗಿದ್ದು, ನಿಮ್ಮಲ್ಲಿ _________________________ಯಿದೆಯೆಂದು ರುಜುಪಡಿಸುವ ಸತ್ಕಾರ್ಯಗಳಲ್ಲಿ ಒಂದಾಗಿದೆ. [kl ಪು. 175 ಪ್ಯಾರ. 9]
25. ನೆರೆಯವನಾದ ಸಮಾರ್ಯದವನ ಕುರಿತಾದ ಯೇಸುವಿನ ಸಾಮ್ಯವು, ಯಥಾರ್ಥನಾಗಿರುವ ಒಬ್ಬ ವ್ಯಕ್ತಿಯು ದೇವರ _________________________ ವಿಧೇಯನಾಗುತ್ತಾನೆ ಮಾತ್ರವಲ್ಲ, ಆತನ _________________________ ಅನುಕರಿಸುತ್ತಾನೆಂಬುದನ್ನು ತೋರಿಸುತ್ತದೆ. (ಲೂಕ 10:29-37) [w-KA98 7/1 ಪು. 31 ಪ್ಯಾರ. 2]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಪ್ರಾರ್ಥನೆಯು (ಒಂದು ಟೊಳ್ಳು ಸಂಸ್ಕಾರವಾಗಿದೆ, ಏನನ್ನಾದರೂ ಸಂಪಾದಿಸುವ ಬರಿಯ ಒಂದು ಸಾಧನವಾಗಿದೆ, ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಹೊಂದುವ ಸಾಧನವಾಗಿದೆ.) [kl ಪು. 150 ಪ್ಯಾರ. 3]
27. ಇಸ್ರಾಯೇಲ್ ಜನಾಂಗವು ನ್ಯಾಯಸ್ಥಾಪಕರಿಂದ ಆಳಲ್ಪಡುವ ಶಕವು, (ಸಮುವೇಲನು; ದಾವೀದನು; ಸೌಲನು) ಅರಸನಾಗಿ ಅಭಿಷಿಕ್ತನಾದಾಗ ಕೊನೆಗೊಂಡಿತು ಮತ್ತು ತದನಂತರ ಸ್ವಲ್ಪದರಲ್ಲೇ ಅವನು ಯೆಹೋವನ ಸಹಾಯದಿಂದ (ಅಮ್ಮೋನಿಯರನ್ನು; ಮೋವಾಬ್ಯರನ್ನು; ಫಿಲಿಷ್ಟಿಯರನ್ನು) ಸೋಲಿಸಿಬಿಟ್ಟನು. (1 ಸಮು. 11:6, 11) [ವಾರದ ಬೈಬಲ್ ವಾಚನ; w-KA95 12/15 ಪು. 9 ಪ್ಯಾರ. 2-ಪುಟ. 10 ಪ್ಯಾರ. 1 ನ್ನು ನೋಡಿರಿ.]
28. ತಿಮೊಥೆಯನು ಅತ್ಯುತ್ತಮ ಮಿಷನೆರಿಯಾಗಿ ಮತ್ತು ಮೇಲ್ವಿಚಾರಕನಾಗಿ ಪರಿಣಮಿಸುವುದನ್ನು ನೋಡುವ ಹಂತದ ವರೆಗೆ ‘ಪರಿಶುದ್ಧಗ್ರಂಥಗಳಲ್ಲಿನ’ ಶಿಕ್ಷಣವನ್ನು ನೀಡುವುದರಲ್ಲಿ (ಅಪೊಸ್ತಲ ಪೌಲನು; ಅವನ ತಂದೆ; ಅವನ ತಾಯಿ ಮತ್ತು ಅಜ್ಜಿ) ಮುಂದಾಳತ್ವವನ್ನು ವಹಿಸಿದರು. (2 ತಿಮೊ. 3:14, 15; ಫಿಲಿ. 2:19-22) [w-KA98 5/15 ಪು. 8 ಪ್ಯಾರ. 3-ಪು. 9 ಪ್ಯಾರ. 5]
29. ದೀಕ್ಷಾಸ್ನಾನವು (ನಿಮ್ಮ ಆತ್ಮಿಕ ಪ್ರಗತಿಯ ಅಂತ್ಯವಾಗಿದೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ ದೇವರಿಗೆ ಜೀವಾವಧಿ ಸೇವೆಯ ಆರಂಭವನ್ನು ಗುರುತಿಸುತ್ತದೆ, ರಕ್ಷಣೆಯ ಖಾತ್ರಿಯನ್ನು ಕೊಡುತ್ತದೆ.) [kl ಪು. 178 ಪ್ಯಾರ. 17]
30. (ನಿತ್ಯತೆ, ಒಂದು ಸಾವಿರ ವರ್ಷಗಳು, 70 ಅಥವಾ 80 ವರ್ಷಗಳ ಜೀವನಾಯುಷ್ಯ) ಯೆಹೋವ ದೇವರನ್ನು ಪ್ರೀತಿಸುವವರ ಮತ್ತು ಪ್ರಮೋದವನ ಭೂಮಿಯಲ್ಲಿ ಜೀವಿಸುವವರ ಮುಂದೆ ಹರಡಿರುವುದು. [kl ಪು. 190 ಪ್ಯಾರ. 22]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ನ್ಯಾಯ. 11:30, 31; 1 ಸಮು. 15:22; 30:24, 25; 2 ಅರ. 6:15-17; ಯಾಕೋ. 5:11
31. ತನ್ನ ಚಿತ್ತಕ್ಕನುಸಾರ ತನ್ನ ಜನರನ್ನು ಸಂರಕ್ಷಿಸಲಿಕ್ಕಾಗಿ ತಾನು ಸ್ವರ್ಗೀಯ ಸೈನ್ಯಗಳನ್ನು ಉಪಯೋಗಿಸುವೆನೆಂಬ ಆಶ್ವಾಸನೆಯನ್ನು ಯೆಹೋವನು ಕೊಡುತ್ತಾನೆ. [w-KA98 4/15 ಪು. 29 ಪ್ಯಾರ. 5]
32. ಕೆಲವೊಮ್ಮೆ ಸಭಾ ಹಿರಿಯರು ಮಾಡುವ ಒಪ್ಪಂದವು ವೇದನಾಭರಿತವಾದದ್ದು ಹಾಗೂ ತ್ಯಾಗಮಯವಾದದ್ದಾಗಿರುವುದಾದರೂ, ಅವರು ತಮ್ಮ ಒಪ್ಪಂದಕ್ಕನುಸಾರ ನಡೆಯುವ ಜವಾಬ್ದಾರಿಯುಳ್ಳವರಾಗಿದ್ದಾರೆ. [w-KA99 9/15 ಪು. 10 ಪ್ಯಾರ. 3-4]
33. ಪರೀಕ್ಷೆಗಳ ಕೆಳಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ಯೆಹೋವ ದೇವರಿಂದ ದೊಡ್ಡ ಬಹುಮಾನವನ್ನು ಪಡೆದುಕೊಳ್ಳುವಂತೆ ಮಾಡುತ್ತದೆ. [w-KA98 5/1 ಪು. 31 ಪ್ಯಾರ. 4]
34. ದೇವರ ಕಡೆಗಿನ ಯಥಾರ್ಥವಾದ ಪ್ರೀತಿಯು, ಕೇವಲ ಆತನಿಗೆ ಯಜ್ಞಾರ್ಪಣೆಗಳನ್ನು ಅರ್ಪಿಸುವುದನ್ನಲ್ಲ, ಬದಲಾಗಿ ದೈವಿಕ ನಿರ್ದೇಶನಗಳಿಗೆ ವಿಧೇಯತೆ ತೋರಿಸುವುದನ್ನು ಅಗತ್ಯಪಡಿಸುತ್ತದೆ. [ವಾರದ ಬೈಬಲ್ ವಾಚನ; w-KA96 6/15 ಪು. 5 ಪ್ಯಾರ. 1ನ್ನು ನೋಡಿರಿ.]
35. ಇಂದು ತನ್ನ ಸಂಸ್ಥೆಯಲ್ಲಿ ಬೆಂಬಲವನ್ನು ನೀಡುವ ಸ್ಥಾನಗಳಲ್ಲಿರುವ ಜನರಿಗೆ ಯೆಹೋವನು ಆಳವಾದ ಗಣ್ಯತೆಯನ್ನು ತೋರಿಸುತ್ತಾನೆ. [ವಾರದ ಬೈಬಲ್ ವಾಚನ; w86 9/1 ಪು. 28 ಪ್ಯಾರ 4 ನ್ನು ನೋಡಿರಿ.]