ಪ್ರಶ್ನಾ ರೇಖಾಚೌಕ
◼ ಸಭೆಯೊಂದು ರಾಜ್ಯ ಸಭಾಗೃಹದಲ್ಲಿ ಟೆರಿಟೊರಿಯ ಸಂಪೂರ್ಣ ಮ್ಯಾಪ್ ಅನ್ನು ಇಡಬೇಕೋ?
ಹೌದು, ಟೆರಿಟೊರಿಯ ಸಂಪೂರ್ಣ ಮ್ಯಾಪ್ ಅನ್ನು ಫ್ರೇಮ್ ಮಾಡಿ, ರಾಜ್ಯ ಸಭಾಗೃಹದ ಗೋಡೆಯ ಮೇಲೆ ನೇತುಹಾಕಬೇಕು. ಆ ಮ್ಯಾಪ್ ಅನ್ನು ಇನ್‌ಫರ್ಮೇಷನ್ ಬೋರ್ಡಿನ ಮೇಲೆ ಹಾಕಬಾರದು. ಸಭೆಯೊಂದರ ನೇಮಿಸಲ್ಪಟ್ಟ ಟೆರಿಟೊರಿಯ ಇಡೀ ಬೌಂಡ್ರಿಯನ್ನು ಅದು ತೋರಿಸಬೇಕು. ಹಾಗೂ ಪ್ರತಿಯೊಂದು ಟೆರಿಟೊರಿಯ ಬೌಂಡ್ರಿಗಳಿಗೆ ಸಂಖ್ಯೆಯನ್ನು ಕೂಡ ಅದರಲ್ಲಿ ಸೂಚಿಸಿರಬೇಕು. ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿರುವ ಎಲ್ಲ ಸಭೆಗಳ ಟೆರಿಟೊರಿ ಬೌಂಡ್ರಿಗಳನ್ನು ಅದರಲ್ಲಿ ತೋರಿಸತಕ್ಕದ್ದು. ಇದು, ತಾವು ಯಾವ ಸಭೆಯ ಟೆರಿಟೊರಿಯಲ್ಲಿ ವಾಸಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಪ್ರಚಾರಕರಿಗೂ ಮತ್ತು ಹೊಸದಾಗಿ ಬರುತ್ತಿರುವ ಆಸಕ್ತ ಜನರಿಗೂ ಸಹಾಯಕಾರಿಯಾಗಿರುವುದು. ಮ್ಯಾಪಿನ ಮೇಲೆ ಸಭೆಯ ಪುಸ್ತಕ ಅಭ್ಯಾಸದ ಸ್ಥಳವನ್ನು ತೋರಿಸುವುದರಿಂದ, ನೇಮಿಸಲ್ಪಟ್ಟಿರುವ ಪುಸ್ತಕ ಅಭ್ಯಾಸದ ಸ್ಥಳವನ್ನು ಕಂಡುಕೊಳ್ಳಲು ಅದು ಸಹಾಯಮಾಡುವುದು. ಮ್ಯಾಪ್‌ನಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಬೇಕಾಗಿರುವಲ್ಲಿ, ಅದನ್ನು ಮಾಡತಕ್ಕದ್ದು.
ಸಾಧ್ಯವಾದರೆ, ವೈಯಕ್ತಿಕವಾಗಿ ಟೆರಿಟೊರಿಯನ್ನು ಆರಿಸಿಕೊಳ್ಳುವುದು ಒಳ್ಳೆಯದಾಗಿರುವುದು ಎಂಬುದನ್ನು ಇಂತಹ ಮ್ಯಾಪ್ ಎಲ್ಲ ಪ್ರಚಾರಕರಿಗೆ ಜ್ಞಾಪಕಹುಟ್ಟಿಸುತ್ತದೆ. ತಮ್ಮ ಮನೆಯ ಹತ್ತಿರವೇ ಇರುವ ಒಂದು ಟೆರಿಟೊರಿಯನ್ನು ಆರಿಸಿಕೊಳ್ಳಲು ಇಷ್ಟಪಡುವವರಿಗೆ ಇದು ಇನ್ನೂ ಹೆಚ್ಚು ಸಹಾಯಕಾರಿಯಾಗಿರುತ್ತದೆ. ಇದು ಕೆಲವೊಮ್ಮೆ ಸೇವೆಗಾಗಿ ಕೂಡುವ ಕೂಟಗಳಲ್ಲಿ ಸಮಯವನ್ನು ಉಳಿಸಬಹುದು. ಏಕೆಂದರೆ, ಈ ಮ್ಯಾಪ್‌ನಿಂದಾಗಿ ಗುಂಪಿನ ಚಾಲಕನು ಹೆಚ್ಚು ಸಮಯವನ್ನು ವ್ಯಯಿಸದೇ ಪ್ರಚಾರಕರನ್ನು ಇಂತಿಂಥ ಜಾಗಕ್ಕೆ ಬೇಗನೇ ನೇಮಿಸಲು ಶಕ್ತನಾಗಿರುತ್ತಾನೆ.
ನೇಮಿತ ಟೆರಿಟೊರಿಯಲ್ಲಿ ಎಲ್ಲರಿಗೂ ರಾಜ್ಯದ ಸಂದೇಶವನ್ನು ಪ್ರಚಾರಮಾಡುವುದರಲ್ಲಿ ಸಭೆಯು ಸಂಘಟಿತವಾಗಿದೆ ಎಂಬುದನ್ನು ಸಹ ಈ ಮ್ಯಾಪ್ ತೋರಿಸುತ್ತದೆ.—ಲೂಕ 9:6.