ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/00 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2000 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಆಗಸ್ಟ್‌ 14ರಿಂದ ಆರಂಭವಾಗುವ ವಾರ
  • ಆಗಸ್ಟ್‌ 21ರಿಂದ ಆರಂಭವಾಗುವ ವಾರ
  • ಆಗಸ್ಟ್‌ 28ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 4ರಿಂದ ಆರಂಭವಾಗುವ ವಾರ
2000 ನಮ್ಮ ರಾಜ್ಯದ ಸೇವೆ
km 8/00 ಪು. 2

ಸೇವಾ ಕೂಟದ ಶೆಡ್ಯೂಲ್‌

ಆಗಸ್ಟ್‌ 14ರಿಂದ ಆರಂಭವಾಗುವ ವಾರ

ಸಂಗೀತ 23 (200)

12 ನಿ:ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಮೇ ತಿಂಗಳ ಕ್ಷೇತ್ರ ಸೇವಾ ವರದಿಯ ಕುರಿತು ಸಭೆಗೆ ತಿಳಿಸಿರಿ. ಆಗಸ್ಟ್‌ ತಿಂಗಳಿನಲ್ಲಿ ಕೇವಲ ಎರಡೇ ವಾರಗಳು ಉಳಿದಿರುವುದರಿಂದ, ತಿಂಗಳು ಮುಗಿಯುವುದಕ್ಕೆ ಮುಂಚೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಉತ್ತೇಜನವನ್ನು ನೀಡಿರಿ. ವಾರಾಂತ್ಯದ ಕ್ಷೇತ್ರ ಸೇವೆಯ ಶೆಡ್ಯೂಲಿನ ಬಗ್ಗೆ ಪುನಃ ಒಮ್ಮೆ ಹೇಳಿರಿ.

15 ನಿ:“ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು.” ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ಕೊಡಿರಿ ಮತ್ತು ಅದರ ನಂತರ ಪ್ರಶ್ನೋತ್ತರ ಚರ್ಚೆಯನ್ನು ಮಾಡಿರಿ. ಸಭಾ ಪುಸ್ತಕ ಅಭ್ಯಾಸದ ಚಾಲಕರು ತಮ್ಮ ಗುಂಪುಗಳಿಗಾಗಿ ಕ್ಷೇತ್ರ ಸೇವೆಯನ್ನು ಹೇಗೆ ಏರ್ಪಡಿಸುತ್ತಾರೆ ಮತ್ತು ಭಾಗವಹಿಸುವುದರಲ್ಲಿ ಯಾರಿಗಾದರೂ ವೈಯಕ್ತಿಕ ಸಹಾಯ ಬೇಕಾಗಿರುವುದಾದರೆ ಅವರಿಗೆ ಹೇಗೆ ಗಮನವನ್ನು ಕೊಡುತ್ತಾರೆ ಮತ್ತು ಕ್ರಮವಾಗಿ ವರದಿಯನ್ನು ಹೇಗೆ ಹಾಕುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಹೇಳಿಕೆಗಳನ್ನು ನಮ್ಮ ಶುಶ್ರೂಷೆ ಪುಸ್ತಕದ 44-5ನೆಯ ಪುಟಗಳಿಂದ ತಿಳಿಸಿರಿ.

18 ನಿ:ಶಾಲೆಗೆ ಹೋಗುವುದರಿಂದ ನಿಮಗೆ ಯಾವ ಪ್ರಯೋಜನವಿದೆ? ಐಹಿಕ ಶಿಕ್ಷಣವು ಏಕೆ ಲಾಭದಾಯಕವಾಗಿದೆ ಎಂಬುದರ ಬಗ್ಗೆ ಒಬ್ಬ ತಂದೆಯು ತನ್ನ ಮಕ್ಕಳೊಂದಿಗೆ ಮಾತಾಡುತ್ತಾನೆ. (ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕದ 133-9ನೆಯ ಪುಟಗಳನ್ನು ನೋಡಿರಿ.) ಇಂದಿನ ಸ್ವಚ್ಛಂದದ ಲೋಕದಲ್ಲಿ ಶಾಲೆಗೆ ಹೋಗುವುದು ನಿಜವಾಗಿಯೂ ಒಂದು ದೊಡ್ಡ ಸವಾಲಾಗಿದೆ ಎಂದು ಅನೇಕ ಯುವ ಜನರು ನೆನಸುತ್ತಾರೆ. ಶಾಲೆಗೆ ಹೋಗುವುದರಿಂದ ಸ್ವಲ್ಪವೇ ಪ್ರಯೋಜನವಿದೆ ಎಂದು ತೀರ್ಮಾನಿಸುವುದರಿಂದ ಕೆಲವರಿಗೆ ಬೋರ್‌ಹೊಡೆಯುತ್ತದೆ. ಸಾಕಷ್ಟು ಐಹಿಕ ಶಿಕ್ಷಣವನ್ನು ಪಡೆದುಕೊಳ್ಳುವುದು ಏಕೆ ಬುದ್ಧಿವಂತಿಕೆಯಾಗಿದೆ ಎಂಬುದಕ್ಕೆ ಶಾಸ್ತ್ರೀಯ ತತ್ತ್ವಗಳನ್ನು ಮತ್ತು ಬಲವಾದ ಕಾರಣಗಳನ್ನು ತಂದೆಯು ಪುನರ್ವಿಮರ್ಶಿಸುತ್ತಾನೆ. ಚೆನ್ನಾಗಿ ಓದುವಂತೆ ಮತ್ತು ತರಗತಿಯಲ್ಲಿ ಪಾಠಗಳನ್ನು ಗಮನಕೊಟ್ಟು ಕೇಳಿಸಿಕೊಳ್ಳುವಂತೆ ಅವನು ತನ್ನ ಮಕ್ಕಳಿಗೆ ಉತ್ತೇಜನವನ್ನು ನೀಡುತ್ತಾನೆ.

ಸಂಗೀತ 15 (127) ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 21ರಿಂದ ಆರಂಭವಾಗುವ ವಾರ

ಸಂಗೀತ 16 (143)

10 ನಿ:ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ. “ಪ್ರೀತಿಸ್ವರೂಪನಾದ ದೇವರು ಇಷ್ಟರ ವರೆಗೆ ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ?” (ರೀಸನಿಂಗ್‌ ಪುಸ್ತಕ, 395-6ನೇ ಪುಟಗಳು) ಎಂಬ ಪ್ರಶ್ನೆಗೆ ಹೇಗೆ ಉತ್ತರವನ್ನು ಕೊಡುವುದು ಎಂಬುದರ ಬಗ್ಗೆ ಚೆನ್ನಾಗಿ ಪೂರ್ವತಯಾರಿಯನ್ನು ಮಾಡಿದ ಕ್ಷೇತ್ರ ಸೇವೆಯ ಪ್ರತ್ಯಕ್ಷಾಭಿನಯವನ್ನು ಮಾಡಿರಿ. ಈ ವಾರಾಂತ್ಯದಲ್ಲಿ ಸೇವೆಯಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಉತ್ತೇಜನವನ್ನು ನೀಡಿರಿ.

10 ನಿ:ಸೇವಾ ಮೇಲ್ವಿಚಾರಕನಿಂದ ಭಾಷಣ. 1999ರ ಡಿಸೆಂಬರ್‌ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿರುವ “ನಮ್ಮ ಸಾಹಿತ್ಯವನ್ನು ವಿವೇಕಯುತವಾಗಿ ಉಪಯೋಗಿಸೋಣ” ಎಂಬ ಲೇಖನದಿಂದ ಮುಖ್ಯ ವಿಷಯಗಳನ್ನು ತಿಳಿಸಿರಿ. ಸಾಹಿತ್ಯವನ್ನು ನೀಡುವಾಗ ಒಳ್ಳೆಯ ವಿವೇಚನೆಯನ್ನು ಉಪಯೋಗಿಸುವಂತೆ ಪ್ರಚಾರಕರಿಗೆ ಉತ್ತೇಜನವನ್ನು ನೀಡಿರಿ.

25 ನಿ:“ನೀವು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೀರೋ?” ಪ್ರಶ್ನೋತ್ತರಗಳು.

ಸಂಗೀತ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 28ರಿಂದ ಆರಂಭವಾಗುವ ವಾರ

ಸಂಗೀತ 20 (93)

10 ನಿ:ಸ್ಥಳಿಕ ತಿಳಿಸುವಿಕೆಗಳು. ಆಗಸ್ಟ್‌ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಿಸಿರಿ. ಸೆಪ್ಟೆಂಬರ್‌ 6ರೊಳಗೆ ಎಲ್ಲ ವರದಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಭಾ ಪುಸ್ತಕ ಅಭ್ಯಾಸದ ಚಾಲಕರು ತಮ್ಮ ಗುಂಪಿನ ಪ್ರತಿಯೊಬ್ಬರಿಗೂ ವರದಿಯನ್ನು ಹಾಕುವಂತೆ ಹೇಳಬೇಕು.

15 ನಿ:ಸ್ಥಳಿಕ ಅಗತ್ಯಗಳು.

20 ನಿ:“ಕೂಟಗಳು ಯುವ ಜನರಿಗೆ ಪ್ರಯೋಜನಕಾರಿಯಾಗಿವೆ.” ಒಬ್ಬ ಹಿರಿಯನಿಂದ ಪ್ರಶ್ನೋತ್ತರ ಚರ್ಚೆ. ಪ್ಯಾರಗ್ರಾಫ್‌ 8ನ್ನು ಚರ್ಚಿಸುವಾಗ, ಕೂಟಗಳಲ್ಲಿ ಒಳ್ಳೆಯ ಏಕಾಗ್ರತೆಯನ್ನು ಮತ್ತು ಗಮನವನ್ನು ಹೆಚ್ಚಿಸುವ ಕೆಲವೊಂದು ಪ್ರಾಯೋಗಿಕ ವಿಷಯಗಳನ್ನು ಹೇಳಿರಿ. (ಎಚ್ಚರ! 1998, ಸೆಪ್ಟೆಂಬರ್‌ 8ರ ಪುಟಗಳು 19-20ನ್ನು ನೋಡಿರಿ.) ಎಲ್ಲ ಕೂಟಗಳಿಗೆ ತಮ್ಮ ಮಕ್ಕಳು ಕ್ರಮವಾಗಿ ಹಾಜರಾಗುವಂತೆ ಮಾಡುವುದರಲ್ಲಿ ಹೆತ್ತವರು ಕಟ್ಟುನಿಟ್ಟಿನವರಾಗಿರುವಂತೆ ಉತ್ತೇಜಿಸಿರಿ.—ಕಾವಲಿನಬುರುಜು 1997, ಸೆಪ್ಟೆಂಬರ್‌ 1ರ ಪುಟ 25ನ್ನು ನೋಡಿರಿ.

ಸಂಗೀತ 8 (53) ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 4ರಿಂದ ಆರಂಭವಾಗುವ ವಾರ

ಸಂಗೀತ 9 (37)

15 ನಿ:ಸ್ಥಳಿಕ ತಿಳಿಸುವಿಕೆಗಳು. ಪ್ರಶ್ನಾ ರೇಖಾಚೌಕ. ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಪಡೆದುಕೊಂಡ ಅನುಭವಗಳನ್ನು ಪ್ರಚಾರಕರು ಹೇಳಲಿ. ನಮ್ಮ ಶುಶ್ರೂಷೆ ಪುಸ್ತಕದ 93-94 ಪುಟಗಳನ್ನು ಉಪಯೋಗಿಸಿರಿ ಮತ್ತು ನಮ್ಮ ಶುಶ್ರೂಷೆಯ ಈ ಕ್ಷೇತ್ರದಲ್ಲಿ ಪಾಲ್ಗೊಳ್ಳುವುದರ ಮೌಲ್ಯವನ್ನು ಒತ್ತಿಹೇಳಿರಿ.

10 ನಿ:ನಮ್ಮ ಸಮಯವು ವಿಶೇಷವಾದದ್ದಾಗಿದೆ. ಕಾವಲಿನಬುರುಜು 1996, ನವೆಂಬರ್‌ 15ರ ಪುಟಗಳು 22-3ರ ಮೇಲಾಧಾರಿಸಿ ಹಿರಿಯನಿಂದ ಭಾಷಣ.

20 ನಿ:“ನೀವು ಸಹಿಸಿಕೊಳ್ಳುತ್ತಿದ್ದೀರೋ?” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಕ್ರೈಸ್ತ ಶುಶ್ರೂಷೆಯಲ್ಲಿ ಸಹನೆಯನ್ನು ತೋರಿಸಿರುವುದರಿಂದ ತಾವು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದೇವೆ ಎಂಬುದರ ಬಗ್ಗೆ ಚಿಂತನೆ ಮಾಡಿ ನೋಡುವಂತೆ ಎಲ್ಲರಿಗೂ ಉತ್ತೇಜಿಸಿರಿ. ಯಾವುದಾದರೂ ಬಲಹೀನತೆಗಳು ಕಂಡುಬರುವಲ್ಲಿ, ನಮ್ಮ ಆತ್ಮಿಕತೆಯನ್ನು ನಾವು ಬಲಪಡಿಸಿಕೊಳ್ಳುವ ಅಗತ್ಯವಿರುತ್ತದೆ. ಕಾವಲಿನಬುರುಜು 1999, ಅಕ್ಟೋಬರ್‌ 1ನೇ ಸಂಚಿಕೆಯ 20-1ನೇ ಪುಟಗಳಲ್ಲಿರುವ 17-21ರ ವರೆಗಿನ ಪ್ಯಾರಗ್ರಾಫ್‌ಗಳಿಂದ ಹೇಳಿಕೆಗಳನ್ನು ನೀಡಿರಿ. ಸುಮಾರು ವರ್ಷಗಳಿಂದ ನಂಬಿಗಸ್ತಿಕೆಯಿಂದ ಸಹಿಸಿಕೊಂಡಿರುವ ಇಬ್ಬರು ಇಲ್ಲವೇ ಮೂವರು ಪ್ರಚಾರಕರು, ಪಟ್ಟುಬಿಡದೆ ಮುಂದುವರಿಸುವುದಕ್ಕೆ ತಾವು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಲಿ.

ಸಂಗೀತ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ