ಸೇವಾ ಕೂಟದ ಶೆಡ್ಯೂಲ್
ಮೇ 14ರಿಂದ ಆರಂಭವಾಗುವ ವಾರ
ಗೀತೆ 22 (130)
6 ನಿ: ಸ್ಥಳಿಕ ಪ್ರಕಟನೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
9 ನಿ: “ಭವಿಷ್ಯತ್ತಿಗೆ ನಿಮ್ಮ ಆತ್ಮಿಕ ಗುರಿಗಳಾವುವು?” ಒಬ್ಬ ಹಿರಿಯನು ಅಥವಾ ಅರ್ಹನಾದ ಶುಶ್ರೂಷಾ ಸೇವಕನು, ನಮ್ಮ ಶುಶ್ರೂಷೆ ಪುಸ್ತಕದ 116-18ನೆಯ ಪುಟಗಳಲ್ಲಿರುವ ಪ್ರಾಯೋಗಿಕ ಸಲಹೆಗಳನ್ನು ಚರ್ಚಿಸುತ್ತಾನೆ. ಕೊಡಲ್ಪಟ್ಟಿರುವ ಸಹಾಯಕರ ಮಾಹಿತಿಯು, ಒಬ್ಬ ಹದಿವಯಸ್ಕ ಪ್ರಚಾರಕನಿಗೆ, ಒಬ್ಬ ವಿವಾಹಿತ ದಂಪತಿಗೆ ಹಾಗೂ ನಿವೃತ್ತಿಯಾಗುವ ವಯಸ್ಸಿನ ಒಬ್ಬ ಸಹೋದರನಿಗೆ, ತಮ್ಮ ಶುಶ್ರೂಷೆಯನ್ನು ಹೆಚ್ಚಿಸುವಂತಹ ಮಾರ್ಗಗಳ ಬಗ್ಗೆ ಅವರು ತಿಳಿದುಕೊಳ್ಳಲು ಹೇಗೆ ನೆರವು ನೀಡುತ್ತದೆ ಎಂಬುದನ್ನು ತೋರಿಸಿರಿ.
10 ನಿ: ಪ್ರಶ್ನಾ ರೇಖಾಚೌಕ. ಒಬ್ಬ ಹಿರಿಯನಿಂದ ಭಾಷಣ.
20 ನಿ: “ನಿಮ್ಮ ರೂಢಿಯೇನು?”a ಕೂಟಗಳಿಗಾಗಿ ತೋರಿಸಬೇಕಾದ ಗಣ್ಯತೆಯ ಬಗ್ಗೆ ಒತ್ತಿಹೇಳಿರಿ ಮತ್ತು ಕೂಟಗಳಿಗೆ ತಪ್ಪಿಸಿಕೊಳ್ಳುವ ರೂಢಿಯನ್ನು ದೂರಮಾಡುವ ಆವಶ್ಯಕತೆಯ ಕುರಿತು ತಿಳಿಸಿ. ಈ ಭಾಗವನ್ನು ನಿರ್ವಹಿಸುವ ಸಹೋದರನು, ಸಭೆಯಲ್ಲಿ ವಾರದ ಮಧ್ಯದ ಕೂಟದ ಹಾಜರಿಯು ಎಷ್ಟಿದೆಯೆಂಬ ಮಾಹಿತಿಯನ್ನು ಒಳಗೂಡಿಸಸಾಧ್ಯವಿದೆ.
ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 21ರಿಂದ ಆರಂಭವಾಗುವ ವಾರ
ಗೀತೆ 22 (130)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
17 ನಿ: “ನಿಮ್ಮ ರಾಜ್ಯ ಸಭಾಗೃಹವನ್ನು ನೀವು ಗೌರವಿಸುತ್ತೀರೋ?”b ಒಬ್ಬ ಹಿರಿಯನು ಈ ಭಾಗವನ್ನು ನಿರ್ವಹಿಸಬೇಕು. ಈ ಲೇಖನದಲ್ಲಿರುವ ಸ್ಥಳಿಕವಾಗಿ ಅನ್ವಯಿಸುವ ವಿಷಯಗಳನ್ನು ಎತ್ತಿಹೇಳಬೇಕು. ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿಯೂ ಆಕರ್ಷಕವಾಗಿಯೂ ಇಟ್ಟುಕೊಳ್ಳಲಿಕ್ಕಾಗಿ ನಾವೆಲ್ಲರೂ ನಮ್ಮಿಂದಾದುದೆಲ್ಲವನ್ನೂ ಏಕೆ ಮಾಡಬೇಕು ಎಂಬುದರ ಕಾರಣವನ್ನು ಒತ್ತಿಹೇಳಿರಿ. ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿ ಹಾಗೂ ಸುಸ್ಥಿತಿಯಲ್ಲಿರಿಸಲಿಕ್ಕಾಗಿ ಮಾಡಲ್ಪಟ್ಟಿರುವ ಸ್ಥಳಿಕ ಏರ್ಪಾಡುಗಳ ಬಗ್ಗೆ ಸಭೆಗೆ ತಿಳಿಸಿರಿ.—1999ರ ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ರೇಖಾಚೌಕವನ್ನು ನೋಡಿರಿ.
18 ನಿ: “ಉದಾರತೆ ಸಂತೋಷವನ್ನು ತರುತ್ತದೆ.” 2000, ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಯ 28-31ನೆಯ ಪುಟಗಳಲ್ಲಿರುವ ವಿಷಯದ ಬಗ್ಗೆ ಒಬ್ಬ ಹಿರಿಯನಿಂದ ಭಾಷಣ. ಉದಾರ ಮನೋಭಾವವಿರುವವರು ಹೇಗೆ ಆಶೀರ್ವದಿಸಲ್ಪಡುತ್ತಾರೆ ಎಂಬುದನ್ನು ವಿವರಿಸಿರಿ. (ಜ್ಞಾನೋ. 11:24ಎ) ಲೋಕವ್ಯಾಪಕ ಕೆಲಸವನ್ನು ಬೆಂಬಲಿಸುವುದರಲ್ಲಿ ಸಭೆಯು ತೋರಿಸುತ್ತಿರುವ ಉದಾರತೆಗಾಗಿ ಸಭೆಯವರನ್ನು ಪ್ರಶಂಸಿಸಿರಿ.
ಗೀತೆ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 28ರಿಂದ ಆರಂಭವಾಗುವ ವಾರ
ಗೀತೆ 26 (212)
13 ನಿ: ಸ್ಥಳಿಕ ಪ್ರಕಟನೆಗಳು. ಮೇ ತಿಂಗಳಿನ ಕ್ಷೇತ್ರ ಸೇವಾ ವರದಿಯನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿ. “ಚಂದಾ ನವೀಕರಣದ ಸರಳೀಕೃತ ಏರ್ಪಾಡು” ಎಂಬ ಲೇಖನವನ್ನು ಪುನರ್ವಿಮರ್ಶಿಸಿ. ಕೆಲವು ಚಂದಾದಾರರು, ತಮ್ಮ ಚಂದಾಗಳು ಮುಗಿದ ನಂತರವೂ ಪತ್ರಿಕೆಗಳನ್ನು ಪಡೆದುಕೊಳ್ಳುವುದರಲ್ಲಿ ನಿಜವಾದ ಆಸಕ್ತಿಯನ್ನು ತೋರಿಸುತ್ತಾರೆ. ಇಂತಹ ಚಂದಾದಾರರಿಗೆ ಸಹಾಯಮಾಡಲಿಕ್ಕಾಗಿ ಪತ್ರಿಕಾ ಮಾರ್ಗಗಳನ್ನು ಆರಂಭಿಸುವಂತೆ ಎಲ್ಲ ಪ್ರಚಾರಕರನ್ನು ಉತ್ತೇಜಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
17 ನಿ: “ದೇವರ ವಾಕ್ಯವು . . . ಕಾರ್ಯಸಾಧಕವಾದದ್ದು.”c ಸಂಕ್ಷಿಪ್ತವಾದ ನಿರೂಪಣೆಗಳು ಹೇಗೆ ದೇವರ ವಾಕ್ಯದ ಕಡೆಗೆ ಗಮನವನ್ನು ಕೇಂದ್ರೀಕರಿಸಬಲ್ಲವು ಎಂಬುದನ್ನು ತೋರಿಸುತ್ತಾ, ಚೆನ್ನಾಗಿ ತಯಾರಿಸಲ್ಪಟ್ಟಿರುವ ಎರಡು ಪ್ರತ್ಯಕ್ಷಾಭಿನಯಗಳನ್ನು ಒಳಗೂಡಿಸಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 4ರಿಂದ ಆರಂಭವಾಗುವ ವಾರ
ಗೀತೆ 6 (45)
12 ನಿ: ಸ್ಥಳಿಕ ಪ್ರಕಟನೆಗಳು ಮತ್ತು ಕ್ಷೇತ್ರ ಸೇವೆಯ ಅನುಭವಗಳು.
15 ನಿ: “ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಿರಿ.”d 4ನೆಯ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, 1996, ಸೆಪ್ಟೆಂಬರ್ 15ರ ಕಾವಲಿನಬುರುಜು ಪತ್ರಿಕೆಯ ಪುಟ 19, ಪ್ಯಾರ 10ರಿಂದ ತೆಗೆದ ಉದಾಹರಣೆಯನ್ನು ಒಳಗೂಡಿಸಿ, ತಮ್ಮ ಶುಶ್ರೂಷೆಯನ್ನು ಹೆಚ್ಚಿಸಲಿಕ್ಕಾಗಿ ಕೆಲವರು ಏನು ಮಾಡುತ್ತಿದ್ದಾರೆ ಎಂಬುದನ್ನು ತೋರಿಸಿರಿ.
18 ನಿ: “ನಮ್ಮ ಟೆರಿಟೊರಿಯಲ್ಲಿ ನಾವು ಅನೇಕಬಾರಿ ಸೇವೆಮಾಡಿದ್ದೇವೆ!”e ಈ ಭಾಗವನ್ನು ಸೇವಾ ಮೇಲ್ವಿಚಾರಕನು ನಿರ್ವಹಿಸತಕ್ಕದ್ದು. (ಒಂದೇ ಟೆರಿಟೊರಿಯಲ್ಲಿ ಅನೇಕಬಾರಿ ಸೇವೆಮಾಡುವಂಥ ಸಭೆಗಳು, 1998ರ ಏಪ್ರಿಲ್ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ “ಪತ್ರಿಕೆಗಳು ರಾಜ್ಯವನ್ನು ಘೋಷಿಸುತ್ತವೆ” ಎಂಬ ಲೇಖನವನ್ನು ಪುನರ್ವಿಮರ್ಶಿಸಸಾಧ್ಯವಿದೆ.) ಟೆರಿಟೊರಿಯಲ್ಲಿ ಸೇವೆಮಾಡುವಾಗ, ಇನ್ನೂ ಹೆಚ್ಚು ಪೂರ್ಣವಾದ ರೀತಿಯಲ್ಲಿ ಕ್ಷೇತ್ರವನ್ನು ಆವರಿಸಲು ಸ್ಥಳಿಕವಾಗಿ ಏನು ಮಾಡಸಾಧ್ಯವಿದೆ ಎಂಬುದರ ಕುರಿತು ಚರ್ಚಿಸಿರಿ. 1997 ಯಿಯರ್‌ಬುಕ್‌ನ 204ನೆಯ ಪುಟದಲ್ಲಿ ಹಾಗೂ 1996, ಫೆಬ್ರವರಿ 15ರ ಕಾವಲಿನಬುರುಜು ಪತ್ರಿಕೆಯ 26ನೆಯ ಪುಟದಲ್ಲಿ ಕೊಡಲ್ಪಟ್ಟಿರುವ ಅನುಭವಗಳನ್ನು ತಿಳಿಸಿರಿ. ಮನೆಯಿಂದ ಮನೆಯ ರೆಕಾರ್ಡ್‌ನಲ್ಲಿ ಸರಿಯಾಗಿ ವಿವರಗಳನ್ನು ಬರೆದುಕೊಳ್ಳುವುದು, ಮನೆಯಲ್ಲಿ ಸಿಗದವರನ್ನು ಭೇಟಿಯಾಗಲು ಪ್ರಯತ್ನಿಸುವುದು ಮತ್ತು ತಪ್ಪದೇ ಪುನರ್ಭೇಟಿಯನ್ನು ಮಾಡುವುದರ ಮಹತ್ವವನ್ನು ಒತ್ತಿಹೇಳಿರಿ.
ಗೀತೆ 17 (187) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.