ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಾ ಇರಿ
ಹೊಸ ಸರಳೀಕೃತ ಸಾಹಿತ್ಯ ವಿತರಣಾ ಏರ್ಪಾಡಿಗೆ ಮಾಡಲಾದ ಬದಲಾವಣೆಯೊಂದಿಗೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಅಂಚೆ ಚಂದಾಗಳನ್ನು ಕ್ರಮೇಣ ನಿಲ್ಲಿಸುವ ನಿರ್ಧಾರವನ್ನು ಮಾಡಲಾಗಿದೆ. ನಾವು ಮತ್ತು ನಾವು ಯಾರಿಗೆ ಸಾರುತ್ತೇವೋ ಅವರು ಒಂದು ಸಂಚಿಕೆಯನ್ನೂ ತಪ್ಪಿಸಿಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಈಗ ಅತ್ಯಧಿಕ ಪ್ರಯತ್ನದ ಅಗತ್ಯವಿದೆ.
ವೈಯಕ್ತಿಕ ಪ್ರತಿಗಳು: ನಿಮ್ಮ ವೈಯಕ್ತಿಕ ಚಂದಾವು ಮುಗಿದುಹೋದಾಗ, ಮ್ಯಾಗಸಿನ್ ಕೌಂಟರ್ನಲ್ಲಿ ನಿಮ್ಮ ಸದ್ಯದ ಆರ್ಡರ್ ಅನ್ನು ಹೆಚ್ಚಿಸಿರಿ. ಕುಟುಂಬದ ಎಲ್ಲ ಸದಸ್ಯರೂ ತಮ್ಮ ಸ್ವಂತ ಪ್ರತಿಯನ್ನು ಪಡೆಯಸಾಧ್ಯವಾಗುವಂತೆ ಹೆತ್ತವರು ಸಾಕಷ್ಟು ಪತ್ರಿಕೆಗಳನ್ನು ಆರ್ಡರ್ ಮಾಡಬೇಕು. ನಿಮ್ಮ ವೈಯಕ್ತಿಕ ಪ್ರತಿಯ ಮೇಲೆ ನಿಮ್ಮ ಹೆಸರನ್ನು ಬರೆದುಕೊಳ್ಳುವುದು, ಆಕಸ್ಮಿಕವಾಗಿ ಅದು ಕ್ಷೇತ್ರ ಸೇವೆಯಲ್ಲಿ ನೀಡಲ್ಪಡದಿರುವುದನ್ನು ಖಚಿತಪಡಿಸುವುದು. ಪತ್ರಿಕೆಗಳ ಸರಬರಾಯಿಯು ಬಂದು ಮುಟ್ಟಿದಾಗ, ಅವುಗಳನ್ನು ನೋಡಿಕೊಳ್ಳುವ ಸಹೋದರರು ಆ ಕೂಡಲೆ ರಾಜ್ಯ ಸಭಾಗೃಹದಲ್ಲಿ ಪ್ರತಿಯೊಂದು ಸಂಚಿಕೆಯನ್ನು ಲಭ್ಯಗೊಳಿಸುವರು.
ಪತ್ರಿಕಾ ಮಾರ್ಗಗಳು: ಪ್ರತಿಯೊಂದು ಸಂಚಿಕೆಯನ್ನು ಪಡೆದುಕೊಳ್ಳಲು ಬಯಸುವಂಥ ಎಲ್ಲ ಆಸಕ್ತರೊಂದಿಗೆ ಒಂದು ಪತ್ರಿಕಾ ಮಾರ್ಗವನ್ನು ಸ್ಥಾಪಿಸಲಿಕ್ಕಾಗಿ ಪ್ರಚಾರಕರು ಪರಿಶ್ರಮಿಸತಕ್ಕದ್ದು. ಅಂಥವರ ಬಳಿಗೆ ಹೋಗಿ ಪತ್ರಿಕೆಗಳನ್ನು ವೈಯಕ್ತಿಕವಾಗಿ ನೀಡುವುದು, ತೋರಿಸಲ್ಪಡುವ ಆಸಕ್ತಿಯನ್ನು ಬೆಳೆಸಲು ಹಾಗೂ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನಮಗೆ ಅವಕಾಶಗಳನ್ನು ಒದಗಿಸುವುದು.—ಅಕ್ಟೋಬರ್ 1998ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟವನ್ನು ನೋಡಿ.
ವಿಶೇಷ ಅಗತ್ಯವಿರುವವರಿಗೆ: ಒಬ್ಬ ವ್ಯಕ್ತಿಯು ಯಥಾರ್ಥವಾದ ಆಸಕ್ತಿಯನ್ನು ತೋರಿಸುತ್ತಿದ್ದು, ನೇಮಿಸಲ್ಪಡದಿರುವಂಥ ಒಂದು ಟೆರಿಟೊರಿಯಲ್ಲಿ ವಾಸಿಸುತ್ತಿರುವಲ್ಲಿ, ಅಂಥ ವ್ಯಕ್ತಿಯು ಅಂಚೆ ಚಂದಾ ಮೂಲಕ ಪತ್ರಿಕೆಗಳನ್ನು ಪಡೆದುಕೊಳ್ಳುವ ವಿನಾಯಿತಿಯನ್ನು ಮಾಡಸಾಧ್ಯವಿದೆ. ಒಬ್ಬ ವ್ಯಕ್ತಿಯು ಸಭೆಯ ಟೆರಿಟೊರಿಯಲ್ಲಿ ವಾಸಿಸುತ್ತಿದ್ದು, ಪತ್ರಿಕೆಗಳನ್ನು ಪಡೆದುಕೊಳ್ಳುವುದರಲ್ಲಿ ನಿಜವಾಗಿಯೂ ಆಸಕ್ತನಾಗಿರುವುದಾದರೂ, ಪತ್ರಿಕಾ ಮಾರ್ಗದ ಮೂಲಕ ಅವನನ್ನು ತಲಪಲು ಅಸಾಧ್ಯವಾಗಿರುವಲ್ಲಿ, ಈ ವಿಷಯದ ಕುರಿತು ಸಭಾ ಸೇವಾ ಕಮಿಟಿಯೊಂದಿಗೆ ಚರ್ಚಿಸಿರಿ. ಅವರು ಒಪ್ಪಿಕೊಳ್ಳುವಲ್ಲಿ, ಆ ಆಸಕ್ತ ವ್ಯಕ್ತಿಗಾಗಿ ಒಂದು ಚಂದಾವನ್ನು ವಿನಂತಿಸಿಕೊಳ್ಳಸಾಧ್ಯವಿದೆ. ಈ ಉದ್ದೇಶಕ್ಕಾಗಿ (M-1 ಮತ್ತು M-101) ಸ್ಟ್ಯಾಂಡರ್ಡ್ ಚಂದಾ ಫಾರ್ಮ್ಗಳನ್ನು ಉಪಯೋಗಿಸಸಾಧ್ಯವಿದೆ.
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮೂಲಕ ರಾಜ್ಯದ ಕುರಿತು ಪ್ರಕಟಿಸಲು ನಾವು ಮಾಡುವ ಎಲ್ಲ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುತ್ತಾ ಹೋಗುವನು ಎಂಬ ವಿಷಯದಲ್ಲಿ ನಾವು ದೃಢನಿಶ್ಚಿತರಾಗಿರಸಾಧ್ಯವಿದೆ.